Pages

Wednesday, November 9, 2011

"ಈಶಾವಾಸ್ಯಮ್" ಗೃಹಪ್ರವೇಶ

" ಈಶಾವಾಸ್ಯಂ " ಗೃಹಪ್ರವೇಶದ ಚಿತ್ರಗಳನ್ನು ವೇದಸುಧೆಯಲ್ಲಿ ಪ್ರಕಟಿಸುವುದು ಉಚಿತವೆ? ಹೀಗೆ ನಾಲ್ಕೈದು ದಿನಗಳಿಂದ ಯೋಚಿಸುತ್ತಿದ್ದೆ. ಕೊನೆಗೊಮ್ಮೆ ಗಟ್ಟಿ ನಿರ್ಧಾರಕ್ಕೆ ಬಂದೆ." ಪ್ರಕಟಿಸಬೇಕು" .ಕಾರಣ ನನ್ನ ವಾಸ್ತವ್ಯದ  ಜೊತೆ ಜೊತೆಗೆ ಸಮಾಜಕ್ಕಾಗಿಯೂ ಸ್ವಲ್ಪ ಚಿಂತನೆ ನನ್ನ ಯೋಜನೆಯಲ್ಲಿರ ಬೇಕಾದರೆ ,ಪ್ರಕಟಿಸುವುದು ತಪ್ಪಾಗುವುದಿಲ್ಲ.ಸರಿ ಪ್ರಕಟಿಸುವ ನಿರ್ಧಾರ ಮಾಡಿದೆ.
ಈಶಾವಾಸ್ಯಮ್ ನಲ್ಲಿ ಏನೇನಿದೆ?
* ಸತ್ಸಂಗ ಕ್ಕಾಗಿಯೇ ಸುಮಾರು ೮೦ ಜನರು ಕುಳಿತುಕೊಳ್ಳಲು ಅನುಕೂಲವಾಗಿರುವ ಸಭಾಂಗಣ.
* ಉಪನ್ಯಾಸಕಾರಿಗೆ ವಿಶ್ರಾಂತಿ ಕೊಠಡಿ
*ಸಭಾಂಗಣದಲ್ಲಿ ಶಾಶ್ವತ ಧ್ವನಿ ವರ್ಧಕ
* ಅನಿವಾರ್ಯವಾದವರಿಗೆ ಖುರ್ಚಿ
* ಶೌಚಾಲಯ
*ಅಡಿಗೆ ಸಿದ್ಧಪಡಿಸಲು ಪ್ರತ್ಯೇಕ ವ್ಯವಸ್ಥೆ
*ತಡೆರಹಿತ ವಿದ್ಯುತ್
ಉದ್ಧೇ ಶಿತ ಕಾರ್ಯ ಕ್ರಮಗಳು 
*ವರ್ಷದಲ್ಲಿ ಹತ್ತಾರು ಅಧ್ಯಾತ್ಮ ಶಿಬಿರಗಳು
*ಮಾಸಿಕ ಸತ್ಸಂಗ
*ನಿತ್ಯ ಅಗ್ನಿಹೋತ್ರ \ಧ್ಯಾನ\ಪ್ರಾಣಾಯಾಮ ಅಭ್ಯಾಸ 
-------------------------------------------------------
ಕಳೆದ ಎರಡರಂದು ನಮ್ಮ ಮನೆ ವು ಸಾಂಗವಾಗಿ ನೆರವೇರಿತು. ಮುದ್ರಿತ ಆಮಂತ್ರಣವಿಲ್ಲದ ,ಕೇವಲ ಈ ಮೇಲ್ ಮತ್ತು ದೂರವಾಣಿಯ ಮೂಲಕ ಮಾಡಿದ ಮನವಿಗೆ ಸ್ನೇಹಿತರು ಮತ್ತು ಬಂಧುಗಳು ಬಂದು ಶುಭ ಕೋರಿದರು.ವರ್ಕಿಂಗ್ ಡೇ ಆದ್ದರಿಂದ ಹಲವರಿಗೆ ಬರಲಾಗಲಿಲ್ಲ. ಆದರೂ ಭಾವನಾತ್ಮಕ ವಾತಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನನ್ನ ಹಲವು ವರ್ಷಗಳ ಕನಸಾದ " ಸತ್ಸಂಗ ಸಭಾಂಗಣ" ತುಂಬಿತ್ತು. ನನ್ನ ಜೀವನದಲ್ಲಿ ನನ್ನನ್ನು ಕೈ ಹಿಡಿದು ನಡೆಸಿದವರನ್ನು ಸ್ಮರಿಸುವ ಕಾರ್ಯಕ್ರಮ " ಸಮಾಜ ಸ್ಮರಣೆ "  ಹಲವರಿಗೆ ಸಂತಸ ನೀಡಿತು. ನನ್ನ ಅಧ್ಯಾತ್ಮ ಕ್ಷೇತ್ರದಲ್ಲಿ ಮಾರ್ಗದರ್ಶಿಗಳಾಗಿರುವ ಬೆಂಗಳೂರಿನ ಭವತಾರಿಣಿ ಆಶ್ರಮದ ಮಾತಾಜಿ ವಿವೇಕಮಯೀ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ  ಕಾರ್ಯಕ್ರಮದಲ್ಲಿ  ರಾ. ಸ್ವ.ಸಂಘದ  ಹಿರಿಯ ಪ್ರಚರಕರೂ " ಕುಟುಂಬ ಪ್ರಭೋದನ್"  ಪರಿವಾರದ ಅಖಿಲ ಭಾರತ ಪ್ರಮುಖರೂ ಆದ ಮಾನ್ಯ ಶ್ರೀ ಸು.ರಾಮಣ್ಣ  ನವರು ಉಪಸ್ಥಿತರಿದ್ದು  ನಮ್ಮನ್ನು ಹಾರೈಸಿದರು. ನಮ್ಮ ಕುಟುಂಬದ ಹಿರಿಯರೂ ಅಂದೇ 86 ನೇ ವರ್ಷಕ್ಕೆ ಕಾಲಿಟ್ಟ ಶ್ರೀ ಹೆಚ್.ಆರ್. ಶ್ರೀಕಂಠಯ್ಯನವರು ಸಭೆಯ ಅಧ್ಯಕ್ಷತೆ ವಹಿಸಿದ್ದು ಹಲವರಿಗೆ  ವಿಶೇಷ ವೆನಿಸಿತು.ಸಭೆಯಲ್ಲಿ ಉಪಷ್ಟಿತರಿದ್ದ ನನ್ನ ಗುರುಗಳಾದ ಶ್ರೀ ಹನುಮೇ ಗೌಡರನ್ನೂ, ನನಗೆ ತುತ್ತಿಕ್ಕಿ ಬೆಳಸಿದ ನೂರಾರು ಅನ್ನದಾತರ ಪರವಾಗಿ ಶ್ರೀ ಬೆಳವಾಡಿ ಕೃಷ್ಣ ಮೂರ್ತಿಗಳನ್ನೂ, ಸಮಾಜದಲ್ಲಿ ನನ್ನನ್ನು  ತಿದ್ದಿ ತೀಡಿ ಬೆಳಸಿದ ಶ್ರೀ ಸು.ರಾಮಣ್ಣ ನವರನ್ನೂ ಗೌರವಿಸಲಾಯ್ತು. ನನ್ನ ಕನಸಿನ ಮನೆ " ಈಶಾವಾಸ್ಯಮ್" ನಿರ್ಮಾಣದಲ್ಲಿ ಹಗಲಿರುಳು ದುಡಿದ ಕಾರ್ಮಿಕ ವರ್ಗವನ್ನೂ, ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ  ಅಕ್ಕ ಪಕ್ಕದ ಮನೆಯವರನ್ನೂ ಸಹ ಗೌರವಿಸಲಾಯ್ತು. ಮಿತ್ರ ಚಿನ್ನಪ್ಪ ಸೆರೆ ಹಿಡಿದಿರುವ ಕೆಲವು ದೃಶ್ಯಗಳು ಇಲ್ಲಿವೆ.
ಶ್ರೀಮತಿ ಲಲಿತಾ ರಮೇಶ್  ಹಾಡಿದ್ದು " ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ"

ವೇದಿಕೆಯಲ್ಲಿ ಮಾನ್ಯ ಶ್ರೀ ಸು.ರಾಮಣ್ಣ,ಶ್ರೀ ಹೆಚ್.ಆರ್.ಶ್ರೀಕಂಠಯ್ಯಮತ್ತು ಮಾತಾಜಿ ವಿವೇಕ ಮಯೀ  

ಶ್ರೀ ಸು.ರಾಮಣ್ಣ ನವರಿಂದ ನಮ್ಮ ಮನೆ ಹೇಗಿರ ಬೇಕು? ಮಾರ್ಗದರ್ಶನ ಕೈ ಹಿಡಿದು ನಡೆಸಿದವರಿಗೆ ಗೌರವಾರ್ಪಣೆ 

ಪೂಜ್ಯ ಗುರುಗಳಿಗೆ ಗೌರವಾರ್ಪಣೆ 

ತುತ್ತಿಕ್ಕಿ ಬೆಳಸಿದ ಬೆಳವಾಡಿ ಕೃಷ್ಣಮೂರ್ತಿಗಳು 
 ಆದಿ
ಕಟ್ಟಡ ನಿರ್ಮಿಸಿಕೊಟ್ಟ ಶ್ರೀ ದ್ಯಾವಪ್ಪ 


ಮರಳು ಇಟ್ಟಿಗೆ ಹೊತ್ತ ಸಂದೀಪ 


ಕುಟುಂಬದ ಹಿರಿಯರಾದ ಶ್ರೀಕಂಠಯ್ಯ 

ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾಗ ತಾತ್ಕಾಲಿಕ ಉದ್ಯೋಗ ಕೊಡಿಸಿದ ಭಾವ ಕೃಷ್ಣ ಮೂರ್ತಿ 


ಹೊಳೆ ನರಸೀಪುರ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಪೂಜ್ಯ ಅಧ್ವಯಾ ನಂದೇಂದ್ರ ಸರಸ್ವತೀ 
ಶ್ರೀ ಅನಂತನಾರಾಯಣ ರಿಂದ ಕಾರ್ಯಕ್ರಮ  ನಿರ್ವಹಣೆ