Pages

Saturday, October 6, 2012

ವೇದಸುಧೆಡಾಟ್ ಕಾಮ್

ವೇದಸುಧೆಯ ಆತ್ಮೀಯ ಬಂಧುಗಳೇ,
ದಿನಾಂಕ 30.9.2012 ಭಾನುವಾರ ಹಾಸನದಲ್ಲಿ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರೊಡನೆ ಮುಕ್ತ ಸಂವಾದವು ಅತ್ಯಂತ ಯಶಸ್ವಿಯಾಗಿ ಮುಗಿದು ಅದರ ಆಡಿಯೋ ವೀಡಿಯೋ ವರದಿಗಳು ಸಿದ್ಧವಾಗಿವೆ. vedasudhe.com ತಾಣದಲ್ಲಿ ನೇರವಾಗಿ ಆಡಿಯೋ ಅಪ್ ಲೋಡ್ ಸೌಲಭ್ಯವಿರುವುದರಿಂದ  ಆ ತಾಣದಲ್ಲಿ ಈಗಾಗಲೆ ಬಹುಪಾಲು ಆಡಿಯೋ ಕ್ಲಿಪ್ ಗಳನ್ನು ಪ್ರಕಟಿಸಲಾಗಿದೆ. ಇನ್ನು ವೀಡಿಯೋ ಕ್ಲಿಪ್ ಗಳನ್ನು vedasudhe.com ತಾಣದಲ್ಲಿ    ಇಂದಿನಿಂದ ನಿತ್ಯುವೂ ಒಂದು ಕ್ಲಿಪ್  ಪ್ರಕಟಿಸಲಾಗುವುದು.ಇಂದಿನಿಂದ ಒಂದು ವಾರದಕಾಲ ನಾನು ಕೇಂದ್ರ ಸ್ಥಾನದಲ್ಲಿರದ ಕಾರಣ ಒಂದು ವಾರದ ಎಲ್ಲಾ ಕ್ಲಿಪ್ ಗಳನ್ನೂ  ವೇದಸುಧೆಡಾಟ್ ಕಾಮ್ ತಾಣದಲ್ಲಿ ಶೆಡ್ಯೂಲ್ ಮಾಡಲಾಗಿದೆ. ಈ ಸೌಲಭ್ಯಗಳು  ಬ್ಲಾಗ್ ನಲ್ಲಿರದ ಕಾರಣ ಇನ್ನು ಒಂದುವಾರ ನನ್ನ ಕಡೆಯಿಂದ ಇಲ್ಲಿ ಯಾವ ಲೇಖನಗಲಾಗಲೀ ಆಡಿಯೋ ವೀಡಿಯೋ ಕ್ಲಿಪ್ ಗಲಾಗಲೀ ಪ್ರಕಟವಾಗುವುದಿಲ್ಲ. ದಯಮಾಡಿ ಎಲ್ಲರೂ ವೇದಸುಧೆ ಡಾಟ್ ಕಾಮ್ ತಾಣಕ್ಕೆ ಭೇಟಿಕೊಡಬೇ ಕಾಗಿ ವಿನಂತಿಸುವೆ.

ಮಿತ್ರ ಮಹೇಶ್ ಪ್ರಸಾದ್ ರವರನ್ನು ವೇದಸುಧೆ ಮರೆತಿದೆ ಎಂದು ಭಾವಿಸಿ ನೆನಪು ಮಾಡಿ ಮೇಲ್ ಮಾಡಿದ್ದಾರೆ. ವೆಬ್ ಸೈಟ್ ಮೂಲಕ ಮಂತ್ರ ಕಲಿಯುತ್ತಿರುವವರ ಸಾಲಿನಲ್ಲಿ ಮಹೇಶ್ ಪ್ರಸಾದರೂ ಸೇರಿದ್ದಾರೆಂಬುದು ವೇದಸುಧೆಗೆ ಸಂತಸದ ವಿಷಯ. ಇನ್ನೂ ನೂರಾರು ಜನರಿಗೆ ಶ್ರೀಯುತರ ಪತ್ರ ಪ್ರೇರಣೆ ನೀಡಲಿ, ಎಂಬುದಕ್ಕಾಗಿ ಇಲ್ಲಿ ಪ್ರಕಟಿಸಲಾಗಿದೆ. ದಿನಾಂಕ 30.9.2012 ರಂದು ಶ್ರೀ ಸುಧಾಕರಶರ್ಮರೊಡನೆ ನಡೆದ ಮುಕ್ತಸಂವಾದ ಕಾರ್ಯಕ್ರಮದ ನಂತರ ವೇದಪಾಠಕ್ಕೆ  ಹೊಸದಾಗಿ ಸೇರುತ್ತಿರುವವರ ಸಂಖ್ಯೆ ಹೆಚ್ಚಿದೆ. ಆಕಾರಣದಿಂದ ಹೊಸಬರನ್ನು ಎಲ್ಲರೊಡನೆ ಕರೆದುಕೊಂದು ಹೋಗಬೇಕಾದ್ದರಿಂದ ಇನ್ನು ಎರಡು ಮೂರು ಪಾಠಗಳು ಪುನಾರವರ್ತನೆಯಾಗುತ್ತವೆ.ಶ್ರೀ ಸುಧಾಕರಶರ್ಮರೊಡನೆ ನಡೆದ  ಮುಕ್ತಸಂವಾದ  ವೀಡಿಯೋ  ವನ್ನು      ಹಳೆಯ ವಿದ್ಯಾರ್ಥಿಗಳು ದಿನಕ್ಕೆ ಹತ್ತು ನಿಮಿಷ ನೋಡಬೇಕೆಂದು ವೇದಸುಧೆಯು ಬಯಸುತ್ತದೆ. ಕಾರಣ  ಇದೂ ಕೂಡ ವಿಶೇಷ ವೇದಪಾಠವೇ ಆಗಿದೆ.ಮುಕ್ತ ಸಂವಾದದ ಪೂರ್ಣ ವೀಡಿಯೋ ಕ್ಲಿಪ್ ಗಳು ಹಂತ ಹಂತವಾಗಿ ನಿತ್ಯವೂ ಪ್ರಕಟ ಗೊಳ್ಳುತ್ತವೆ. ನಿಮಗೆ ಎದುರಾಗುವ ಸಂದೇಹಗಳನ್ನು    ವೇದಸುಧೆಗೆ ಬರೆದರೆ ಶ್ರೀ ಸುಧಾಕರಶರ್ಮರು ಉತ್ತರಿಸುವರು.
--------------------------------------------------------------
ಮಾನ್ಯ ಶ್ರೀಧರ್ ಅವರೇ,

ನನ್ನ ಹೆಸರು ತಮಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಹಾಸನದಲ್ಲಿ ನಡೆದ ವೇದಸುಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ನಾನು. ಇತ್ತೀಚೆಗೆ ಕಾರ್ಯನಿಮಿತ್ತ ಅಷ್ಟೊಂದು ಬಿಡುವಿಲ್ಲದಿದ್ದರಿಂದ ವೇದಸುಧೆ ಕಡೆಗೆ ಗಮನ ಕಡಿಮೆಯಾಗಿತ್ತು. ಆದರೆ ನಮ್ಮ ವೇದದ ಚಿಂತನೆಗಳು ನನ್ನನ್ನು ಸುಮ್ಮನೆ ಬಿಡುತ್ತವೆಯೇ? ಹಾಗಾಗಿ ವೇದಸುಧೆ ಮೇಲೆ ಹೀಗೆಯೇ ಕಣ್ಣಾಡಿಸುತ್ತಿದ್ದಾಗ ವೇದಪಾಠ ಕಣ್ಣಿಗೆ ಬಿತ್ತು. ಹಾಗಾಗಿ ಅಲ್ಲಿ ಲಭ್ಯವಿದ್ದ ಪಾಠಗಳನ್ನೆಲ್ಲ ಕೇಳಿ ಒಂದು ಬಾರಿ ಅವರ ಜೊತೆ ಕಲಿತೆ (ಅದೂ ಈಗ ತಾನೇ ಮುಗಿಸಿದೆ). ಇದನ್ನು ಇನ್ನೂ ಕೂಡ ಮುಂದುವರೆಸಬೇಕೆಂದು ಅಪೇಕ್ಷೆ. ಅದಕ್ಕಾಗಿ ಮೇಲ್ ಮೂಲಕ ಪಾಠ ಕೇಳುವವರ ಲಿಸ್ಟ್ ಗೆ ನನ್ನನ್ನೂ ಸೇರಿಸಿ. ವೇದಸುಧೆಯಲ್ಲೇ ಪಾಠ ಗಳು ಲಭ್ಯವಿದ್ದರೂ ಕೆಲವೊಂದು ಬಾರಿ ಕೆಲವು ಪಾಠಗಳು ಬಿಟ್ಟು ಹೋಗಿವೆಯೋ ಅಂತ ಅನಿಸಿದ್ದಿದೆ (ಈ ವರೆಗೆ ಎರಡು ಮಂತ್ರ ದ ಪಾಠಗಳು ಮಾತ್ರ ಸಿಕ್ಕಿತು ನನಗೆ. ಈವರೆಗಿನ ಆರು ತರಗತಿಗಳಲ್ಲಿ ಎರಡು ಮಂತ್ರಗಳು ಮಾತ್ರ ಆಗಿವೆ ಅಂತ ಅಂದುಕೊಂಡಿದ್ದೇನೆ). ಹಾಗಾಗಿ ನಿಮ್ಮ ಮೇಲ್ ಲಿಸ್ಟ್ ಗೆ ನನ್ನನ್ನೂ ಸೇರಿಸಿದರೆ ಸಂಶಯಗಳು ಪರಿಹಾರವಾದೀತು.

ವೇದಸುಧೆ ಆರಂಭವಾದಾಗಿನಿಂದ ವೇದ ಪಾಠ ಕ್ಕಾಗಿ ಕಾಯುತ್ತಿದ್ದೆ ನಾನು. ಅದು ಈಗ ಕೈಗೂಡಿದೆ. ಅದಕ್ಕಾಗಿ ವೇದಸುಧೆ ಬಳಗಕ್ಕೆ ಅನಂತ ವಂದನೆಗಳು.

--
ಧನ್ಯವಾದಗಳೊಂದಿಗೆ,
ಮಹೇಶ ಪ್ರಸಾದ ನೀರ್ಕಜೆ

ಮುಕ್ತ ಸಂವಾದ-1

ದಿನಾಂಕ 30.9.2012 ಭಾನುವಾರ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರೊಡನೆ ಹಾಸನದಲ್ಲಿ ನಡೆದ ಮುಕ್ತ ಸಂವಾದದಲ್ಲಿ ಶ್ರೀ ಶರ್ಮರ ಪ್ರಾಸ್ತಾವಿಕ ನುಡಿಗಳು ಭಾಗ-1