Pages

Tuesday, October 30, 2012

ಶಿಬಿರಾರ್ಥಿಯ ಅನುಭವ ಕಥನ


     



RSS ಹತ್ತಿರದಿಂದ ನೋಡಿದವರಿಗೆ ಮಾತ್ರ  ಸಂಘ ಅರ್ಥವಾದೀತು.ಹತ್ತಿರದಿಂದ ನೋಡುವ ವರಗೆ ವಾಸ್ತವಾಂಶಗಳು ತಿಳಿಯಲಾರವು. ರಾಜ್ಯದೆಲ್ಲೆಡೆಯಂತೆ ಹಾಸನಜಿಲ್ಲೆಯ   ಪ್ರಾಥಮಿಕ ಶಿಕ್ಷಾವರ್ಗವು ಹೊಳೇನರಸೀಪುರದಲ್ಲಿ ಅಕ್ಟೋಬರ್ 7 ರಿಂದ  14 ರವರಗೆ ನಡೆಯಿತು.ಜಿಲ್ಲೆಯ ಎಲ್ಲೆಡೆಯಿಂದ ಬಂದಿದ್ದ 179 ಶಿಕ್ಷಾರ್ಥಿಗಳಲ್ಲಿ ಎಂಟನೆಯ ತರಗತಿಯ  ವಿದ್ಯಾರ್ಥಿಗಳಿಂದ ಮೊದಲ್ಗೊಂಡು 70 ವರ್ಷದ ಹಿರಿಯರೂ ಇದ್ದರು. ವಕೀಲರು, ಶಿಕ್ಷಕರು, ವ್ಯಾಪಾರಸ್ಥರು,ಕೃಷಿಕರು...ಇತ್ಯಾದಿಯಾಗಿ ಎಲ್ಲಾ ಕ್ಷೇತ್ರವನ್ನೂ ಪ್ರತಿನಿಧಿಸಿತ್ತು. ಆ ಶಿಬಿರದಲ್ಲಿ ಶಿಬಿರಾಧಿಕಾರಿ ಹೊಣೆ ನನ್ನದಾಗಿತ್ತು. ಒಂದು ವಾರದ ಶಿಕ್ಷಣದ ಅಂತ್ಯದಲ್ಲಿ  ಶಿಬಿರಾರ್ಥಿಗಳಿಂದ ಅನುಭವ ಕಥನವನ್ನು ಕೇಳುವುದೆಂದರೆ ಬಲು ಚೆಂದ. ಒಬ್ಬ ಶಿಕ್ಷಾರ್ಥಿಯ ಅನುಭವ ನೀವೂ ಕೇಳಿ. ನಿಮ್ಮ ಅನಿಸಿಕೆ ತಿಳಿಸಿ.

ವಿಶೇಷ ಮಂತ್ರಾಭ್ಯಾಸ


ಆತ್ಮೀಯ ವೇದಾಭಿಮಾನಿಗಳಲ್ಲಿ ನಮಸ್ಕಾರಗಳು.

             ಕಳೆದ ಆಗಸ್ಟ್ 19 ರಂದು ಆರಂಭವಾದ "ಎಲ್ಲರಿಗಾಗಿ ಸಾಪ್ತಾಹಿಕ ವೇದ ಪಾಠವು"  ಯಶಸ್ವಿಯಾಗಿ ನಡೆಯುತ್ತಿದ್ದು ಪ್ರತ್ಯಕ್ಷವಾಗಿ ಸುಮಾರು 40 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರೆ, ವೆಬ್ ಸೈಟ್ ಮೂಲಕ ಹಲವರು ಮತ್ತು ಸುಮಾರು 40 ವಿದ್ಯಾರ್ಥಿಗಳು ಈ ಮೇಲ್ ಮೂಲಕ ಪಾಠವನ್ನು ತರಿಸಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಮತ್ತು ಚನ್ನರಾಯಪಟ್ಟಣದ ವೇದಾಧ್ಯಾಯೀ ಶ್ರೀ ಪ್ರಸಾದ್ ಅವರು ಪಾಠವನ್ನು ಮಾಡುತ್ತಿದ್ದಾರೆ. ಇದುವರೆವಿಗೆ ...
1. ವಿಶ್ವಾನಿ ದೇವ  [ ಯಜು.30.3 ] ಪಾಠ ಆಗಿದೆ
2. ಪ್ರಣೋದೇವೀ....[ಋಗ್...ಸರಸ್ವತೀ ಸೂಕ್ತದ ಆಯ್ದ ಭಾಗ] ಪಾಠ ಆಗಿದೆ
3. ಶ್ರೀ ಗಣೇಶ ಸೂಕ್ತಮ್ [ಋಗ್.  ಮಂಡಲ-8 ಅಷ್ಟಕ-6  ಸೂಕ್ತ-81] .......ಈಗ ನಡೆಯುತ್ತಿದೆ.

ವೇದ ಪಾಠವನ್ನು ಸರಿಯಾಗಿ ಕಲಿಯಲು ವಾರಕ್ಕೊಂದು ಗಂಟೆ ಏನೇನೂ ಸಾಲದು. ಆದರೆ ವೇದಮಂತ್ರಗಳ ಜೊತೆಗೇ  ವೇದದಲ್ಲಿರುವ ಅನೇಕ ಮಂತ್ರಗಳ ಬಗ್ಗೆ ಆಗಿಂದಾಗ್ಗೆ  ಉಪನ್ಯಾಸಗಳನ್ನು ಯೋಜಿಸುವುದರಿಂದ  ಸ್ವಲ್ಪ ಮಟ್ಟಿಗಾದರೂ ವೇದದ ಅರಿವು ಮೂಡುವುದರಲ್ಲಿ ಸಂದೇಹವಿಲ್ಲ. 
ಇದುವರಗೆ ಕಲಿತಿರುವ ಮಂತ್ರಗಳನ್ನು  ಉಚ್ಚರಿಸುವಾಗ ಆಗುವ ಸ್ವರದಲ್ಲಿನ ದೋಷಗಳನ್ನು ತಿದ್ದಿ  ಸಾಮೂಹಿಕವಾಗಿ ಅಭ್ಯಾಸ ಮಾಡಲು  ನಾವೆಲ್ಲಾ ವೇದ ವಿದ್ಯಾರ್ಥಿಗಳು ಒಂದು ಭಾನುವಾರ 5-6 ಗಂಟೆಗಳ ಕಾಲ ಒಟ್ಟಿಗೆ  ಸೇರಬೇಕೆಂಬ  ಸಲಹೆಯು     ಹಲವರಿಂದ  ಬಂದಿದೆ. ದಿನಾಂಕ 11.11.2012 ಭಾನುವಾರ    ಅಥವಾ ಎಲ್ಲರಿಗೂ ಅನುಕೂಲ ವಾಗುವ ಒಂದು ದಿನ  ಹಾಸನದ ಈಶಾವಾಸ್ಯಮ್ ನಲ್ಲಿ  ಅಥವಾ  ರಾಮನಾಥಪುರ ದಂತಹ ನದೀ ತೀರದಲ್ಲಿ  5-6 ಗಂಟೆಗಳ ಕಾಲ ಒಟ್ಟಿಗೆ ಅಭ್ಯಾಸ ಮಾಡಿದರೆ ಮಂತ್ರ ಪಾಠವನ್ನು ಮುಂದುವರೆಸಿಕೊಂಡು ಹೋಗಲು ಸುಲಭವಾಗುತ್ತದೆ,. ಎಂಬ ಅಭಿಪ್ರಾಯವಿದೆ. ನವಂಬರ್ ನಲ್ಲಾದರೆ ದಿನಾಂಕ  11 ಅಥವಾ 18 , ಡಿಸೆಂಬರ್ ನಲ್ಲಿ ಯಾವುದೇ ಭಾನುವಾರವೂ ಆಗಬಹುದು. ನಿಮ್ಮ  ಸಲಹೆಯನ್ನು vedasudhe@gmail.com ಗೆ  ಮೇಲ್ ಮಾಡಿ. ಹೆಚ್ಚು ಜನರಿಗೆ ಅನುಕೂಲ ವಾಗುವ ಸ್ಥಳ /ದಿನವನ್ನು ಅಂತಿಮವಾಗಿ ನಿರ್ಧರಿಸೋಣ.ಈ ಮೇಲ್ ನಲ್ಲಿ  ಪಾಠವನ್ನು ತರಿಸಿಕೊಳ್ಳುತ್ತಿರುವವರು ಹೀಗಾದರೂ ವರ್ಷಕ್ಕೊಮ್ಮೆ ಅಥವಾ ಎರಡು ಭಾರಿ ಪ್ರತ್ಯಕ್ಷ ಪಾಠದಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲವೇ? 
ಈ ಮೇಲ್ ನಲ್ಲಿ ಯಾರಿಗೆ ಪಾಠ ತಲುಪಿಲ್ಲ ಅವರು  ಮೇಲ್ ಮಾಡಿದರೆ ಪಾಠವನ್ನು ಕಳಿಸಿಕೊಡಲಾಗುತ್ತದೆ. ಪಾಠ ತರಿಸಿಕೊಂಡವರು ಕಲಿಯಿಯುತ್ತಿದ್ದೀರಿ, ತಾನೇ?
ಗಣೇಶ ಸೂಕ್ತಮ್ ಮಂತ್ರ ಪಾಠ ಮುಗಿದ ಮೇಲೆ ಶ್ರೀ ವಿಶ್ವನಾಥ ಶರ್ಮರು ಅರ್ಥವನ್ನು ತಿಳಿಸುವರು.
ನಮಸ್ಕಾರಗಳೊದನೆ
-ಹರಿಹರಪುರ ಶ್ರೀಧರ್
ಸಂಪಾದಕ, ವೇದಸುಧೆ/ವೇದ ಭಾರತೀ