ಶ್ರೀ ಸುಧಾಕರ ಶರ್ಮರಿಗೆ ಮತ್ತು ಶ್ರೀ ಶ್ರೀಧರ್ ರವರಿಗೆ ನಮಸ್ಕಾರಗಳು.
ನನ್ನ ಒಂದೆರಡು ಪ್ರಶ್ನೆಗಳು:
ಬಲಿವೈಶ್ವದೇವ ಯಜ್ಞ
1. ಈಗಿನ ಯಾಂತ್ರಿಕ ಯುಗದಲ್ಲಿ ನೀವು ಹೇಳಿದಂತೆ ಸಮಾಧಾನವಾಗಿ ಟಿವಿ ನೋಡದೆ, ಪೇಪರ್ ಓದದೆ, ಇನ್ನೊಬ್ಬರ ಜೊತೆ ಮಾತಾಡದೆ ಊಟ ಮಾಡುವುದು ಕಷ್ಟ. ಅದರಲ್ಲೂ ನಾವು ಹೊರಗೆ ಹೋಟೆಲ್ ಮುಂತಾದ ಕಡೆಗಳಲ್ಲಿ ತಿನ್ನುವಾಗ ನಿಂತುಕೊಂಡೆ ತಿನ್ನಬೇಕಾಗುತ್ತದೆ. ಅದೂ ಮಸಾಲೆದೋಸೆ ಇತ್ಯಾದಿ,....., ಹಾಗೆ ತಿನ್ನುವಾಗ (ಅಂದರೆ ಒಂದೆರಡು ಅನ್ನದ ಅಗಳು ತಿನ್ನುವ ಬದಲು), " ಪ್ರಾಣಾಯ ಸ್ವಾಹ....................... " ಮಂತ್ರ ಹೇಳಿಕೊಂಡು ತಿಂದಾಗ ಏನಾದರೂ ತೊಂದರೆಯಾಗುತ್ತದೆಯೇ?
2. ಹಿಂದೆ ವೇದಗಳ ಕಾಲದಲ್ಲಿ ಆಹಾರ, ನೀರು, ಗಾಳಿ ಇತ್ಯಾದಿಗಳು ಕಲಬೆರಿಕೆಯಾಗಿರಲಿಲ್ಲ, ಹಾಗಾಗಿ ಅವರು ತಿನ್ನುವ ಆಹಾರವನ್ನು 'ಪ್ರಾಣಾಯ ಸ್ವಾಹ..................' ಎಂದು ತಿನ್ನುತ್ತಿದ್ದರು, ಆದರೆ ಈಗ ನಾವು ತಿನ್ನುವ ಆಹಾರ, ನೀರು, ಗಾಳಿ ಇತ್ಯಾದಿಗಳು ವಿಷಮಯವಾಗಿದೆ, ಹಾಗಾಗಿ ನಾವು 'ಪ್ರಾಣಾಯ ಸ್ವಾಹ..........' ಎಂದಾಗ ಅದರಿಂದ ಏನಾದರೂ Negative effect ಇದೆಯೇ? (ಅಂದರೆ ನನ್ನ ಆಭಿಪ್ರಾಯ "ಹಿಂದೆ ವೇದಗಳ ಕಾಲದಲ್ಲಿ ಜನರು ತಾವು 'ಪ್ರಾಣಾಯಸ್ವಾಹ...... 'ಹೇಳಿ ಸೇವಿಸಿದ 'ಶುದ್ಧ' ಆಹಾರ ಅಮೃತವಾಗುತ್ತಿತ್ತು, ಈಗ ನಾವು ತಿನ್ನುವ 'ಕಲಬೆರಿಕೆ' ಆಹಾರದಲ್ಲಿ ವಿಷ ತುಂಬಿರುವುದರಿಂದ ಈ 'ಪ್ರಾಣಾಯಸ್ವಾಹ........ ' ಹೇಳದೆ ಇದ್ದರೆ, ಶರೀರ ವಿಷವನ್ನು ಸಾಧ್ಯವಾದಷ್ಟು ಹೊರಗೆ ಕಳುಹಿಸುತ್ತದೆ, ಈ ಮಂತ್ರ ಹೇಳಿ ತಿಂದರೆ ಅನ್ನದಲ್ಲಿರುವ ವಿಷ ದೇಹವನ್ನು ವ್ಯಾಪಿಸುತ್ತದೆ." ಈ ನನ್ನ ಅಭಿಪ್ರಾಯ ಸರಿಯೇ?)
ವಂದನೆಗಳೊಂದಿಗೆ
ಜಿ.ಎ.ಸ್. ಶ್ರೀನಾಥ