Pages

Saturday, November 13, 2010

Be happy and make others Happy


Laughing with happiness is like praying to God. 
Making others laugh is like receiving the blessings 
from God. Lets be happy and make others Happy.  

ಯೋಚಿಸಲೊ೦ದಿಷ್ಟು...೧೭

೧.ವ್ಯಕ್ತಿಗಳೊ೦ದಿಗೆ ಹೆಚ್ಚೆಚ್ಚು ಬೆರೆತ೦ತೆಲ್ಲಾ ಅವರ ಆ೦ತರ್ಯದ ಅನುಭವವಾಗುತ್ತಾ ಹೋಗುತ್ತದೆ ಹಾಗೆಯೇ ಅವರ ಗುಣಗಳೂ ಕೂಡ. ಅವರಲ್ಲಿನ ಕೆಟ್ಟ ಯಾ ಒಳ್ಳೆಯ ಗುಣಗಳ ಅರಿವಾದ೦ತೆ, ಅವುಗಳನ್ನು ನಾವು ಹೇಗೆ ಕಾಣುತ್ತೇವೆ೦ಬುದರ ಮೇಲೆಯೇ ನಮ್ಮ ನಡುವಿನ ಮಿತೃತ್ವ ಉಳಿಯುವುದು ಯಾ ಅಳಿಯುವುದು ನಿರ್ಧಾರವಾಗುತ್ತದೆ!

೨.ಪ್ರೇಮವು ಸ೦ಪೂರ್ಣ ಜಗದ ಮು೦ದೆ ನಮ್ಮನ್ನು ಬಲಿಷ್ಟನನ್ನಾಗಿ ಬೆಳೆಸಿದರೆ,ನಾವು ನಿಜವಾಗಿಯೂ ಪ್ರೀತಿಸುವವರ ಮು೦ದೆ ನಮ್ಮನ್ನು ದುರ್ಬಲರನ್ನಾಗಿ ಪರಿವರ್ತಿಸುತ್ತದೆ!

೩.ಸ೦ತಸವೆನ್ನುವುದು ಒ೦ದು ಸುಗ೦ಧವಿದ್ದ೦ತೆ!ನಾವು ಸುಗ೦ಧದ ಎರಡು ಹನಿಗಳನ್ನು ನಮ್ಮ ದೇಹದ ಮೇಲೆ ಹಾಕಿಕೊಳ್ಳದೆ ಹೇಗೆ ಅದರ ಸುವಾಸನೆಯು ಬೇರೊಬ್ಬರು ಅರಿಯಲು ಸಾಧ್ಯವಿಲ್ಲವೋ ಹಾಗೆಯೇ ನಾವು ಸ೦ತಸದಿ೦ದಿರದೆ ಇನ್ನೊಬ್ಬರನ್ನು ಸ೦ತಸದಿ೦ದಿಡಲು ಸಾಧ್ಯವಿಲ್ಲ!

೪.ಬದಲಾಯಿಸಲು ಸಾಧ್ಯವಿರದಿದ್ದನ್ನು ಹಾಗೆಯೇ ಒಪ್ಪಿಕೊಳ್ಳೋಣ ಹಾಗೂ ಬದಲಾಯಿಸಲು ಸಾಧ್ಯವಾಗುವ೦ಥಹವನ್ನು ಬದಲಾಯಿಸಲು ಮನಸ್ಸು ಮಾಡೋಣ.

೫.ಹೆಚ್ಚು ನೋವಿನಲ್ಲಿಯೂ,ನಾವು ಸ೦ತಸದಿ೦ದಿದ್ದೇವೆ ಎ೦ದು ಎಲ್ಲರೆದುರು ನಟಿಸುತ್ತಿರುವಾಗ,ಆತ್ಮೀಯರೂ “ನಾವು ಸ೦ತೋಷವಾಗಿದ್ದೇವೆ“ ಎ೦ದೇ ತಿಳಿದುಕೊ೦ಡಾಗ ಅದುವೇ ಜೀವನದಲ್ಲಿನ ಅತ್ಯ೦ತ ನೋವಿನ ಕ್ಷಣ!,

೬. ನಾವು ಆಯ್ದುಕೊ೦ಡ ಸಹವಾಸಿಗಳು ಹಾಗೂ ಸಹವಾಸವೇ ಬೇಡವೆ೦ದು ಬಿಟ್ಟ ಗು೦ಪು, ಈ ಈರ್ವರಿ೦ದಲೂ ನಮ್ಮ ನಡತೆಯ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ!

೭.ಮುಳುಗುತ್ತಿದ್ದ ವ್ಯಕ್ತಿಯೊಬ್ಬನನ್ನು ಕೈಹಿಡಿದು ದಡ ಸೇರಿಸಿದ ನ೦ತರ,ನಾವೇ ಅವರನ್ನು ಬೀಳಿಸಿದೆವೆ೦ದು ಅವರಿ೦ದ ನಿ೦ದಿಸಲ್ಪಡುವುದೂ ಜೀವನದ ವಿಪರ್ಯಾಸಗಳಲ್ಲೊ೦ದು!

೮. ಯಾವುದೇ ವಿಷಯ ಯಾ ವಿಚಾರದಲ್ಲಿ ವಿಭಿನ್ನವಾಗಿ ಚಿ೦ತಿಸುವುದೇ ನಮ್ಮಲ್ಲಿನ ನಿಜವಾದ ಚಿ೦ತನಾ ಶಕ್ತಿಯ ಬಲವನ್ನು ಎತ್ತಿ ತೋರಿಸುತ್ತದೆ!

೯. ವರ್ತಮಾನದಲ್ಲಿನ ಪರಿಸ್ಥಿತಿಯನ್ನು ನೋಡಿ ಯಾವುದೇ ವ್ಯಕ್ತಿಯನ್ನು ಅಳೆಯುವುದು ಬಲು ದೊಡ್ಡ ಮೂರ್ಖತನವಾದೀತು! ಏಕೆ೦ದರೆ ಮೌಲ್ಯವಿಲ್ಲದ ಕಲ್ಲೊ೦ದು ಕಾಲದ ಹೊಡೆತಕ್ಕೆ ಸಿಕ್ಕು ವಜ್ರವೂ ಆಗುತ್ತದೆ!

೧೦. ತಪ್ಪು ಮಾಡಿದವರನ್ನು ಕ್ಷಮಿಸುವುದು ಹೇಗೆ “ದೊಡ್ಡತನ“ ಎನ್ನಿಸಿಕೊಳ್ಳುವುದೋ ಹಾಗೆಯೇ “ಮತ್ತೆ೦ದೂ ಆತ ತಪ್ಪನ್ನೇ ಮಾಡುವುದಿಲ್ಲ“ ಎ೦ಬ ಅವನ ಮೇಲಿನ ನಮ್ಮ ಭರವಸೆಯೂ ಅಷ್ಟೇ “ಮೂರ್ಖತನ“ ಎನ್ನಿಸಿಕೊಳ್ಳುತ್ತದೆ!

೧೧. ನಮಗೇ ಆಸಕ್ತಿಯಿರದಿದ್ದರೆ ಜಗತ್ತಿನ ಯಾವೊ೦ದು ವಿಚಾರವೂ ಆಸಕ್ತಿಯಿ೦ದ ಕೂಡಿದೆ ಎ೦ದು ಅನಿಸುವುದಿಲ್ಲ!

೧೨.ನಮ್ಮ ನಾಳಿನ“ಯೋಜನೆ“ಗಳೇ ಭವಿಷ್ಯವಲ್ಲ!ಭವಿಷ್ಯವೆ೦ದರೆ ನಾವು ವರ್ತಮಾನದಲ್ಲಿ ಬರೆದ “ಪರೀಕ್ಷೆ“ಗಳ ಫಲಿತಾ೦ಶ! ಮಾಡಿದ ಕಾರ್ಯಗಳ ಫಲ!

೧೩.ಅತ್ಯ೦ತ ಯಶಸ್ವಿಯಾಗಲು ಜೀವನದಲ್ಲಿ ನಮಗೆ ಯಾರಾದರೂ ಶತ್ರುಗಳು ಮತ್ತು ನಮ್ಮ ವಿರುಧ್ಧ ಸ್ಪರ್ಧಿಸುವವರು ಇರಲೇಬೇಕು!

೧೪. ನಮ್ಮಲ್ಲಿನ ಅಹ೦ಕಾರವನ್ನು ತ್ಯಜಿಸಿದರೆ, ನಾವು ಎಲ್ಲರನ್ನೂ ಜಯಿಸಬಹುದು!

೧೫. ನಾವು ಸಮಾಜಕ್ಕೆ ನೀಡಿರಬಹುದಾದ ಕೊಡುಗೆಗಳ ಮೂಲಕವೇ ನಮ್ಮ ಯೋಗ್ಯತೆಯನ್ನು ಅಳೆಯಲಾಗುತ್ತದೆ!

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -7

ವೇದ ಸುಧೆಯ ಅಭಿಮಾನಿಗಳೇ ,
ಶ್ರೀ ಕವಿನಾಗರಾಜರು ಪ್ರಸ್ತುತಪಡಿಸುತ್ತಿರುವ  ಶ್ರೀ ಪಂಡಿತ ಸುಧಾಕರ ಚತುರ್ವೇದಿಗಳ ವೇದೋಕ್ತ ಜೀವನ ಪಥ ಪುಸ್ತಕದಿಂದ ಆಯ್ದ  ಎಲ್ಲಾ ಭಾಗಗಳನ್ನು  ಇನ್ನು ಮುಂದೆ  "ವೇದಪಥ" ಪುಟದಲ್ಲಿ  ನೀವು ಓದಬಹುದು.
-ಶ್ರೀಧರ್
ನಿರ್ವಾಹಕ

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -7


ಋಗ್ವೇದವು:
ವಿಶ್ವಕರ್ಮಾ ವಿಮನಾ ಅದ್ವಿಹಾಯಾ (ಋಕ್. 10.82.2)
ಮನೋಬಂದನವಿಲ್ಲದ, ಸರ್ವವ್ಯಾಪಕ ಪ್ರಭುವೇ ಸೃಷ್ಟಕರ್ತನು ಎನ್ನುತ್ತಲಿದೆ. ಅವನೇ ಸ್ಥಿತಿಗೂ, ಪಾಲನೆಗೂ ಕಾರಣನು.
ಯಜುರ್ವೇದವು:

ಯೇನ ದ್ಯೌರುಗ್ರಾ ಪೃಥಿವೀ ಚ ಧೃಢಾ ಯೇನ ಸ್ವ ಸ್ತಭಿತಂ ಯೇನ ನಾಕಃ|
ಯೋ ಅಂತರಿಕ್ಷೇ ರಜಸೋ ವಿಮಾನಃ ಕಸ್ಮೈ ದೇವಾಯ ಹವಿಷಾ ವಿಧೇಮ|| (ಯಜು. 32.6)
ಎನ್ನುತ್ತಲಿದೆ.
[ಯೇನ] ಯಾವನಿಂದ [ಉಗ್ರಾ ದ್ಯೌಃ ಪೃಥವೀ ಚ ಧೃಢಾ] ಉಗ್ರವಾದ ದ್ಯುಲೋಕವೂ, ಪೃಥಿವಿಯೂ ಧೃಢವಾಗಿದೆಯೋ [ಯೇನ ಸ್ವ ಸ್ತಭಿತಂ] ಯಾವನಿಂದ ಆನಂದಮಯ ಮೋಕ್ಷವು ಧೃಢೀಕೃತವಾಗಿದೆಯೋ [ಯೇನ ನಾಕಃ] ಯಾವನಿಂದ ಸುಖಮಯ ಇರುವಿಕೆ ಧೃಢವಾಗಿದೆಯೋ [ಯಃ ಅಂತರಿಕ್ಷೇ ರಜಸಃ] ಯಾವನು ಅಂತರಿಕ್ಷದಲ್ಲಿಯೂ ಲೋಕ ರಚಿಸಿ [ವಿಮಾನಃ] ವಿಶೇಷ ಮಾನಾರ್ಹನಾಗಿದ್ದಾನೋ [ಕಸ್ಮೈ ದೇವಾಃ] ಆ ಆನಂದಮಯ ದೇವನಿಗೆ [ಹವಿಷಾ ವಿಧೇಮ] ಸಚ್ಚಾರಿತ್ರದಿಂದ ವಿನೀತರಾಗೋಣ-
ಎಂದು ಹೇಳುತ್ತಲಿದೆ. ಅವನೇ ಪ್ರಳಯ ಕರ್ತೃವೂ ಆಗಿದ್ದಾನೆ.
ಋಗ್ವೇದವು :
ಯ ಏಕ ಇಚ್ಚ್ಯಾವಯತಿ ಪ್ರ ಭೂಮಾ ರಾಜಾ ಕೃಷ್ಟೀನಾಂ ಪುರುಹೂತ ಇಂದ್ರಃ|| (ಋಕ್. 4.17.5)
[ಯಃ ಏಕ ಇತ್] ಯಾವನೊಬ್ಬನೇ [ಪ್ರ ಭೂಮಾ] ಈ ವಿಸ್ತೃತ ಬ್ರಹ್ಮಾಂಡವನ್ನು [ಚ್ಯಾವಯತಿ] ಲಯಗೊಳಿಸುತ್ತಾನೋ, ಅವನು [ಕೃಷ್ಟೀನಾಂ ರಾಜಾ] ಪ್ರಜೆಗಳೆಲ್ಲರಿಗೂ ರಾಜನಾದ [ಪುರುಹೂತಃ ಇಂದ್ರಃ] ಬಹುಸ್ತುತ್ಯನಾದ ಸರ್ವಶಕ್ತಿಮಾನ್ ಪ್ರಭುವಾಗಿದ್ದಾನೆ -
ಎಂದು ಹೇಳುತ್ತಲಿದೆ.

" ನಿಮಗೂ ಗೊತ್ತಾಗೋಲ್ಲ ಬಿಡಿ ಅಂಕಲ್"

 ನನ್ನ ಮಿತ್ರನೊನ್ನ ನಿದ್ದಾನೆ., ಅವನ ಮೊಬೈಲ್ ಗೆ ಫೋನ್ ಮಾಡಿ ಮಿತ್ರನೊಬ್ಬನ ಫೋನ್ ನಂಬರ್ ಕೇಳಿದರೆ " ಅವನ ನಂಬರ್ ನನ್ನ ಮೊಬೈಲ್ ನಲ್ಲಿದೆ, ನನಗೆ ನೋಡಲು ಗೊತ್ತಾಗುವುದಿಲ್ಲ , ಸ್ವಲ್ಪ ನಿಧಾನಿಸು ,ನನ್ನ ಮೊಮ್ಮಗ[ಅವನಿಗೆ ೫ ವರ್ಷ] ನಿಗೆ ಕೊಡ್ತೀನಿ" ಅಂತಾ ಪಕ್ಕದಲ್ಲಿರುವ ಮಗುವಿಗೆ ಕೊಡ್ತಾನೆ. ಮಗು ಮಾತು ಶುರು ಮಾಡುತ್ತೆ" ಏನ್ ಅಂಕಲ್ ನಿಮಗೆ ಯಾವ ಅಂಕಲ್ ಫೋನ್ ನಂಬರ್ ಬೇಕು, ನಮ್ಮ ತಾತನಿಗೆ ಏನೂ ಗೊತ್ತಾಗುಲ್ಲ, ನಮ್ಮಪ್ಪನೇ ವಾಸಿ [ಈ ಚೋಟ ಅವನಿಗಿಂತ ವಾಸಿ] ಅಂತಾ ಹೆಸರು ಕೇಳಿ ನಂಬರ್ ಹುಡುಕಿ ಹೇಳುತ್ತೆ "  ನೈನ್ ಡಬ್ಬಲ್ ಫೋರ್ ಯೈಟ್ ಡಬ್ಬಲ್ ನೈನ್ ಯೈಟ್ ಝೀರೋ ವನ್ ಫೈವ್" ಕೇಳ್ತಾ? ಒಂದ್ಸಲ ಹೇಳಿ ನೋಡೋಣ. ನಾನೇನಾದರೂ ತಪ್ಪು ಹೇಳಿದರೆ " ನಿಮಗೂ ಗೊತ್ತಾಗೋಲ್ಲ ಬಿಡಿ ಅಂಕಲ್" ಅಂದೇ ಅನ್ನುತ್ತೆ. ಇದು ಯುವ ಪೀಳಿಗೆ ಕಾಲ ಅಂತಾಲೂ ಹೇಳುವುದಕ್ಕಾಗುಲ್ಲ. ಮಕ್ಕಳ ಕಾಲ ಅನ್ ಬಹುದೇನೋ .ಯಾಕೆ ಇಷ್ಟೆಲ್ಲಾ ಹೇಳಿದೆ ಅಂದ್ರ, ವೇದಸುಧೆಗೆ ಒಬ್ಬ ಯುವ ಮಿತ್ರ ಸಿಕ್ಕಿದ್ದಾನೆ,ನಾನು  ಈ ಒಂಬತ್ತು ತಿಂಗಳು ಹೆಣಗಾಡಿ ತಾಂತ್ರಿಕ ನೈಪುಣ್ಯತೆ ಇಲ್ಲದೆ ಒದ್ದಾಡುತ್ತಿದ್ದರೆ, ಈತ ಏನು ಕೇಳಿದರೂ ಪಟ್ ಅಂತಾ ಪರಿಹಾರ ಹೇಳಿಬಿಡ್ತಾನೆ.[ನನ್ನ ಮಗನಿಗಿಂತ ಚಿಕ್ಕವನಾದುದರಿಂದ ಏಕವಚನವನ್ನು ಬಳಸಿದ್ದೇನೆ, ತಪ್ಪಾಗಿ ಭಾವಿಸಬಾರದೆಂದು ವಿನಂತಿಸುವೆ]  ಫೀಡರ್ ಬರ್ನರ್ ವಿಚಾರ ಕೇಳಿದೆ. ಇಲ್ಲಿ ಕೊಂಡಿ ಕೊಟ್ಟಿದ್ದಾನೆ. ಅದರ ಮೂಲಕ ಇಣುಕಿ ನಮ್ಮ "ಪ್ರಸನ್ನನ " ಪರಿಚಯ  ಚೆನ್ನಾಗಿ ಆಗುತ್ತೆ.
http://prasannakannada.blogspot.com/2010/09/email-subscription.html

ದಾರಿ ದೀಪಗಳು

A few people are like street lights. They may not join us and reduce the distance, but they light up our path and make our journey easier.