Pages

Friday, July 6, 2012

ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳ ಭೇಟಿ

         




ಯೇಗ ದಾಗೆಲ್ಲಾ ಐತೆ ಪುಸ್ತಕದಿಂದ ಪ್ರೇರಣೆ ಪಡೆದಿರುವ  ಓದುಗ ಬಂಧುಗಳೇ,   ಅವಧೂತರಾದ  ಮುಕುಂದೂರು ಸ್ವಾಮಿಗಳ ಬಗ್ಗೆ  ಹೆಚ್ಚು ತಿಳಿದುಕೊಳ್ಳುವ ಕಾತುರ, ಅವರ ವಿಚಾರದ ಪ್ರಚಾರ ಮಾಡುವ ಉದ್ಧೇಶದಿಂದ  ನಾವು ಕೆಲವು ಮಿತ್ರರು ನಮ್ಮ  ಹುಡುಕಾಟ ಆರಂಭಿಸಿದ್ದೇವೆ. ಮೊದಲನೆಯ  ಹಂತವಾಗಿ ಅರಸೀಕೆರೆ ಸಮೀಪದ  ಆಶ್ರಮಕ್ಕೆ ಭೇಟಿಕೊಟ್ಟು ಕೆಲವರನ್ನು ಮಾತನಾಡಿಸಿರುವ ಬಗ್ಗೆ ಈಗಾಗಲೆ ವರದಿಮಾಡಲಾಗಿದೆ. ಮುಂದಿನ ಹೆಜ್ಜೆಯಾಗಿ ಮುಕುಂದೂರು ಸ್ವಾಮಿಗಳನ್ನು ಬಹಳ ಹತ್ತಿರದಿಂದ ಬಲ್ಲವರೂ,  ಅವರ ಬಗ್ಗೆ  " ಯೇಗ ದಾಗೆಲ್ಲಾ ಐತೆ"  ಪುಸ್ತಕವನ್ನು ಬರೆದು ನಮ್ಮಲ್ಲಿ  ಪ್ರೇರಣೆ ನೀಡಿರುವ ವಯೋ ವೃದ್ಧರಾದ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನು ಭೇಟಿಮಾಡಲು ಉದ್ಧೇಶಿಸಲಾಗಿದೆ. ಪೂಜ್ಯರನ್ನು ಭೇಟಿ ಮಾಡಲು ದೂರವಾಣಿ ಮೂಲಕ ವಿನಂತಿಸಿ ಅನುಮತಿ ಪಡೆಯಲಾಗಿದೆ. ಪೂಜ್ಯರನ್ನು  ಭೇಟಿಮಾಡಬಯಸುವವರು ನಮ್ಮೊಡನೆ     ಸೇರಬಹುದು.

ಭೇಟಿಯ ಸಮಯ:  8.7.2012 ಭಾನುವಾರ  ಸಂಜೆ 5.00 ಗಂಟೆಗೆ  ಅವರ ಮನೆಯಲ್ಲಿ.

ವಿಳಾಸ:

ಶ್ರೀ ರವಿಬೆಳಗೆರೆಯವರ ನಿವಾಸ
ಶೃತಿ ಬೇಕರಿ ಹತ್ತಿರ
24ನೇ ಕ್ರಾಸ್
ಕೆ.ಆರ್.ರಸ್ತೆ
ಬೆಂಗಳೂರು

ಸಂಪರ್ಕಿಸಲು ನನ್ನ ಮೊಬೈಲ್ ನಂಬರ್: 9663572406
--



ಮಾನುಶ್ಯೇ ಕದಲಿ ಸ್ತಂಭೆ....


ಮಾನುಶ್ಯೇ ಕದಲಿ ಸ್ತಂಭೆ ನಿ:ಸ್ಸಾರೆ ಸಾರ ಮಾರ್ಗಣಂ|
ಯಃ ಕರೋತಿ ಸ ಸಂಮೂಡ್ಹೋಜಲಬುದ್ಭುದ ಸಂನಿಭೆ ||

ಮಾನವ ಜೀ ವನ ಅನ್ನುವುದು ಬಾಳೆಯ ಕಂಬದಂತೆ ನಿಸ್ಸಾರವಾದದ್ದು ನೀರಿನ ಮೇಲಿನ ಗುಳ್ಳೆಯನ್ತಿರುವ ಮಾನವ ಜೀವನದಲ್ಲಿ ಏನೋ ಮಹತ್ತರ ವಾಗಿದ್ದು ಇದೆ ಎಂದು ಭಾವಿಸುವುದೇ ತಪ್ಪು ಹಾಗೆ ಹುಡುಕುವವನು ಮೂರ್ಖ

ಯಥಾ ಮಧು ಸಮಾಧತ್ತೆ .....


ಯಥಾ ಮಧು ಸಮಾಧತ್ತೆ ರಕ್ಷನ್ ಪುಷ್ಪಾಣಿ ಷತ್ಪದಃ|
ತದ್ವರ್ತ್ಹಾನ್ ಮನುಷ್ಯೇಭ್ಯಃ ಆದದ್ಯಾದವಿಹಂಸಯಾ ||

ದುಂಬಿಯೊಂದು ಹೇಗೆ ಹೂವಿಗೆ ಹೂವಿನ ಅಂದಕ್ಕೆ ವಾಸನೆಗೆ ಬಣ್ಣಕ್ಕೆ ಹಾನಿಯಾಗದಂತೆ ಮಕರಂದವನ್ನು ಹೀರಿಕೊಳ್ಳುತ್ತದೆ ಹಾಗೆಯೇ ಮನುಷ್ಯನಾದವನು ಇನ್ನೊಬ್ಬರನ್ನು ಹಿಮ್ಸಿಸದೆ ಹಣವನ್ನು ಸಂಪಾದಿಸಬೇಕು. ಉಪಕಾರ ಮಾಡುವುದು ಕಷ್ಟವಾದರೂ ಅಪಕಾರವನ್ನಾದರು ಮಾಡಬಾರದು

ಅಂಜಲಿಸ್ಥಾನಿ ಪುಷ್ಪಾಣಿ .....


ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ |
ಅಹೋ ಸುಮನಸಾಂ ಪ್ರೀತಿರ್ವಾ ಮದಕ್ಷಿನಯೋಹ್ ಸಮಾ ||

ಕಯ್ಯಲ್ಲಿನ ಬೊಗಸೆಯಲ್ಲಿನ ಹೂವುಗಳು ಯಾವುದೇ ಎರಡೂ ಕೈಗಳನ್ನು ಯಾವುದೇ ಪಕ್ಷಪಾತವಿಲ್ಲದೆ ಹೇಗೆ   ಸುವಾಸನೆ ಗೊಳಿಸುವುವೋ, ಅದೇ ರೀತಿಯಲ್ಲಿ ಒಳ್ಳೆಯ ಮನಸ್ಸುಳ್ಳವರು ಯಾವುದೇ ಬೇಧ ಮಾಡದೆ ಒಳ್ಳೆಯವರನ್ನು ಕೆಟ್ಟವರನ್ನು ಒಂದೇ ಮನಸ್ಸಿನಿಂದ ಪ್ರೀತಿಸುವರು