Pages

Thursday, February 16, 2012

ಗುರೂಜಿ ಜನ್ಮದಿನ ಸ್ಮರಣೆ

ಅವಧಾನಿಗಳಿಂದ ಉಪನ್ಯಾಸ !

ಅವಧಾನಿಗಳಿಂದ ಉಪನ್ಯಾಸ !

ಭಾರತೀಯ ಸಂಸ್ಕೃತಿಯ ಬಗ್ಗೆ ಮೂರು ದಿನಗಳ ಸಂಜೆಯಲ್ಲಿ ಅವಧಾನಿಗಳಿಂದ ಉಪನ್ಯಾಸ ರಸದೌತಣ: ಬೆಂಗಳೂರು ನಗರ ನಿವಾಸಿಗಳು, ಅಲ್ಲದೇ ಬೇರೇ ಊರಲ್ಲಿರುವ ಆಸಕ್ತರು-ಅವಕಾಶ ಇರುವವರು ಉಪನ್ಯಾಸ ಕೇಳಬಹುದಾಗಿದೆ.
ಗುದ್ದಾಟ ಗಂಧದೊಡನೆ ಆದರೆ ಗಂಧ ಸಿಗದಿದ್ದರೆ ಗಂಧದ ಗಾಳಿಯಲ್ಲಿರುವ ಗಂಧವಾದರೂ ಸಿಕ್ಕೀತು ಎಂಬುದು ಅನಿಸಿಕೆ. ಜ್ಞಾನದಾಹಿಗಳಿಗೆ ಅಪೂರ್ವ ಸುಸಂಧಿ ಇದೆಂದರೆ ತಪ್ಪಾಗಲಿಕ್ಕಿಲ್ಲ. ವೇದಸುಧೆ ಬಳಗ ಇದರ ಪ್ರಯೋಜನ ಪಡೆಯಲೆಂಬ ಅಭಿಲಾಷೆಯಿಂದ ಇಲ್ಲಿ ಆಮಂತ್ರಣವನ್ನು ಪ್ರಕಟಿಸಿದ್ದೇನೆ.


[ಚಿತ್ರದಮೇಲೆ ಕ್ಲಿಕ್ಕಿಸಿ ಹಿಗ್ಗಿಸಿ ಓದಬಹುದಾಗಿದೆ ]

ಸ್ವಾಗತ ಮತ್ತು ಧನ್ಯವಾದಗಳೊಂದಿಗೆ ವಿ.ಆರ್.ಭಟ್

ಮಂಕು ತಿಮ್ಮನ ಕಗ್ಗ - ರಸಧಾರೆ -1


ನಮಸ್ಕಾರ,
ಶ್ರೀ ಹರಿಹರಪುರಶ್ರೀಧರ್ ಅವರ ಪ್ರೀತಿಯ ಆಹ್ವಾನದ ಮೇರೆಗೆ ನನಗೆ ಇಲ್ಲಿ ಬರೆಯುವ ಸೌಭಾಗ್ಯ ದೊರೆತದ್ದು ಪೂರ್ವ ಸುಕೃತವೆ ಸರಿ. ಪರಮಾತ್ಮನ ದಯೆಯಿಂದ ಜ್ಞಾನ ಪಡೆಯಬೇಕೆಂಬ ಉತ್ಕಟಾಕಾಂಕ್ಷೆಯ ಫಲ ಸ್ವರೂಪವೇ ಈ ಕಗ್ಗಗಳ ವಿವರಣೆಯ ಸರಮಾಲೆ. ಮಾನ್ಯ ಡಿ.ವಿ.ಜಿ ಯವರ ಕಗ್ಗಗಳಿಗೆ ವಿವರಣೆ ಕೊಡುವುದು ನನ್ನ೦ತಹ ಪಮರಾತಿಪಾಮರನಿಗೆ ಒಂದು ದುಸ್ಸಾಹಸವೇ ಸರಿ. ಆದರೂ ಜ್ಞಾನಾಕಾಂಕ್ಷಿಯಾಗಿ  ಈ ಕೆಲಸ ಮಾಡುತ್ತಿದ್ದೇನೆ. ವಾಚಕರು ಸಹೃದಯದಿಂದ, ನನ್ನ ತಪ್ಪುಗಳನ್ನು ತಿದ್ದಿ ಸರಿಮಾರ್ಗದಲ್ಲಿ ನನ್ನನ್ನು ಕೊಂಡು ಹೋಗಬೇಕೆಂದು ದಾಸನ ಕಳಕಳಿಯ ಮನವಿ. ಇಂದಿನಿಂದ ಪ್ರತಿನಿತ್ಯ ಒಂದು ಕಗ್ಗ ಮತ್ತು ಅದರ ವಿವರಣೆಯನ್ನು ಬರೆಯುತ್ತೇನೆ. ನಮಸ್ಕಾರ. 



ಇಂದು ಮೊದಲನೆಯ ಕಗ್ಗವನ್ನು ಬರೆದು ಹಾಕುತ್ತಿದ್ದೇನೆ. 

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ 
ದೇವ ಸರ್ವೇಶ ಪರಬೊಮ್ಮನೆಂದು ಜನಂ //
ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ 
ಆ ವಿಚಿತ್ರಕೆ ನಮಿಸೊ - ಮಂಕು ತಿಮ್ಮ //

ವಿಶ್ವಕ್ಕೆ ಮೂಲವಾದ ಶ್ರೀ ವಿಷ್ಣು, ಮಾಯಾಲೋಲ, ದೇವರು, ಪರಬ್ರಹ್ಮ, ಸರ್ವಕ್ಕೂ ಒಡೆಯನಾದ ಪರಮ ಪುರುಷ ಹೀಗೆ ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ ಪ್ರೀತಿ ಮತ್ತು ಭಕ್ತಿಯಿಂದ ನಂಬಿರುವರೋ  ಆ ವಿಚಿತ್ರಕ್ಕೆ ನಮಿಸು ಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು. 

ನಾವಿರುವ ಭೂಮಿಯಂತಹ 9 .80 ಲಕ್ಷ ಭೂಮಿಗಳನ್ನು ನಮ್ಮ ಸೌರವ್ಯೂಹದ ಸೂರ್ಯನೊಳಕ್ಕೆ ಹಾಕಿಬಿಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ಸೌರಮಂಲವೂ  ಸೇರಿದಂತೆ  ಲಕ್ಷಾಂತರ ಸೌರಮಂಡಲಳಿರುವ  ನಮ್ಮ ಕ್ಷೀರಪಥ, ನಮ್ಮ ಕ್ಷೀರಪಥವೂ ಸೇರಿದಂತೆ ಲಕ್ಷಾಂತರ ಕ್ಷೀರಪಥಗಳಿರುವ ಅಕಾಶಗಂಗೆ, ನಮ್ಮ ಆಕಾಶಗಂಗೆಯೂ ಸೇರಿದಂತೆ ಲಕ್ಷಾಂತರ ಆಕಾಶಗಂಗೆಗಳಿರುವ ಈ ವಿಶ್ವ. ಇಡೀ ವಿಶ್ವವನ್ನು ಒಂದು ಸೂತ್ರದಲ್ಲಿ ನಡೆಸುತ್ತಿರುವ ಒಂದು ಶಕ್ತಿ. ಅದನ್ನೇ ಬೇರೆ ಬೇರೆಯವರು ಬೇರೆ ಹೆಸರುಗಳಿಂದ ಕರೆಯುತ್ತಾರೆಂದು ಈ ಕಗ್ಗದ ಆಂತರ್ಯ ಮತ್ತು ವಿಶ್ವದ ಒಂದು ಅಣುವಷ್ಟೂ ಅಲ್ಲದ ನಾವು ಕಾಣದಿದ್ದರೂ ಆ ಶಕ್ತಿಯ ಅಧೀನದಲ್ಲಿರುವುದರಿಂದ, ಅದಕ್ಕೆ ಭಕ್ತಿಯಿಂದ ಪ್ರೀತಿಯಿಂದ ನಮಿಸಬೇಕು ಎಂದು ಒಂದು ಆದೇಶ. 

ಅವರವರ ಭಾವಕ್ಕೆ ಅವರವರ ಭಕುತಿಗೆ 
ಅವರವರ ತೆರನಾಗಿ ಇರುತಿಹನು ಶಿವಯೋಗಿ    
ಹರನ  ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ 
ನರರೇನು ಭಾವುಸುವರದರಂತೆ ಕಾಣುವನು 

ಶಿವ ಶರಣರ ಮಾತು. ಹೀಗೆ ಒಂದೇ ಸತ್ಯವನ್ನು ಎಲ್ಲ ಮಹಾ ಮಹಿಮರೂ ಹೇಳಿದ್ದಾರೆ  ಅಲ್ಲವೆ. 

ಬನ್ನಿ ಈ ವಿಚಾರಗಳನ್ನು ಮಂಥನ ಮಾಡುತ್ತಾ, ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳೋಣ. 
ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ