Pages

Monday, February 7, 2011

ವೇದಸುಧೆಯ ವಾರ್ಷಿಕೋತ್ಸವಕ್ಕೆ ಬೆಂಬಲವಾಗಿ ನಿಂತ ರಾಷ್ಟ್ರ ಗೌರವ ಸಂರಕ್ಷಣ ಪರಿಷತ್

ಸುಧಾಕರ ಶರ್ಮರು ೨೯ ರಂದೇ ಬರ್ತಾರಾ? ಹಾಗಾದರೆ ಅವರ ಒಂದು ಉಪನ್ಯಾಸವನ್ನು ನಾವು ಆಯೋಜಿಸಿ ಬಿಡುತ್ತೇವೆ, ಎಂದು ಮುಂದೆ ಬಂದವರು ರಾಷ್ಟ್ರ ಗೌರವ ಸಂರಕ್ಷಣ ಪರಿಷತ್ ನ ಸಂಚಾಲಕರುಗಳಾದ ಶ್ರೀ ನಟರಾಜ್ ಮತ್ತು ಶ್ರೀ ರಾಮಸ್ವಾಮಿಯವರು. ಅಧ್ಯಕ್ಷರಾದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರ ಅನುಮತಿಪಡೆದೇ ನನ್ನ ಹತ್ತಿರ ಬಂದಿದ್ದರು. ಸರಿ ಉಪನ್ಯಾಸದ ಯೋಜನೆ ಯಾಯ್ತು. ಹೇಗೂ ಸಂಧ್ಯಾಕಾಲದಲ್ಲಿ ಮಾಡುತ್ತಿದ್ದೇವೆ, ಒಂದು ಅಗ್ನಿಹೋತ್ರ ಕಾರ್ಯಕ್ರಮವೂ ನಡೆದುಬಿಡಲಿ, ಎಂಬ ಸಲಹೆ ಬಂತು. ಶರ್ಮರೊಡನೆ ಸಮಾಲೋಚಿಸಿದ್ದಾಯ್ತು. ಶನಿವಾರ ಸಂಜೆ ಮತ್ತು ಭಾನುವಾರ ಬೆಳಿಗ್ಗೆ ಎರಡು ಅಗ್ನಿಹೋತ್ರಗಳನ್ನು ಮಾಡಬಹುದು, ಎಂದು ಶರ್ಮರು ಒಪ್ಪಿಗೆ ಸೂಚಿಸಿದರು. ಶರ್ಮರು ಆಹೊತ್ತಿಗೆ ಬೆಂಗಳೂರಿನಿಂದ ಬರಬೇಕಲ್ಲಾ! ಎಂದು ಯೋಚಿಸುತ್ತಿರುವಾಗಲೇ ಬೆಂಗಳೂರಿನ ಮಿತ್ರ ಪ್ರಸನ್ನ ಮತ್ತು ಚಿತ್ರ ದಂಪತಿಗಳು ನಮ್ಮ ಕಾರ್ ನಲ್ಲೇ ಕರೆದುಕೊಂಡು ಬರುತ್ತೇವೆ. ಆಜವಾಬ್ದಾರಿ ನಮಗಿರಲಿ, ಎಂದರು. ಕೂಡಲೇ ಅಗ್ನಿ ಹೋತ್ರದಲ್ಲಿ ಎಂಟು ಜನ ದಂಪತಿಗಳು ಕುಳಿತು ನಡೆಸಿದರೆ ಸೂಕ್ತ ವೆಂದು ಆಲೋಚಿಸಿ, ಯಾರ್ಯಾರು ಅಗ್ನಿಹೋತ್ರಕ್ಕೆ ಕುಳಿತುಕೊಳ್ಳಬೇಕೆಂದಾಗ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ನಾಗರಾಜ್, ರಾಷ್ಟ್ರ ಗೌರವ ಸಂರಕ್ಷಣ ಪರಿಷತ್ ನ ಸಂಚಾಲಕರುಗಳಾದ ಶ್ರೀ ನಟರಾಜ್ ಮತ್ತು ಶ್ರೀ ರಾಮಸ್ವಾಮಿಯವರು ಪತ್ನಿ ಸಮೇತರಾಗಿ ಮತ್ತು ಆಯ್ದ ಐದು ಜನ ದಂಪತಿಗಳನ್ನು ಅಗ್ನಿಹೋತ್ರಕ್ಕೆ ಕುಳಿತುಕೊಳ್ಳಲು ಮಾತನಾಡಿಸಿ ನಿಶ್ಚಯಿಸಿದ್ದೂ ಆಯ್ತು. ಎಲ್ಲವೂ ತರಾತುರಿಯಲ್ಲೇ. ಆದರೆ ಎಲ್ಲವೂ ಯಶಸ್ವಿಯಾಯ್ತು.ಈಗ ನೋಡಿ ಅಗ್ನಿಹೋತ್ರ ಮತ್ತು ಉಪನ್ಯಾಸ ಕಾರ್ಯಕ್ರಮಗಳ ಚಿತ್ರಗಳು.

ಶ್ರೀಮತಿ ಲಲಿತಾರಮೇಶ್ ರಿಂದ ಪ್ರಾರ್ಥನೆ
ಪರಿಷತ್ತಿನ ಪರಿಚಯ ಮಾಡಿದ ಶ್ರೀ ನಟರಾಜ್
ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರಿಂದ ಪರಿಷತ್ತಿನ ಅಧ್ಯಕ್ಷರಿಗೆ ಪುಷ್ಫಾರ್ಪಣೆ
ವೇದಸುಧೆಯ ಸಂಪಾದಕ ಶ್ರೀ ಹರಿಹರಪುರಶ್ರೀಧರರಿಂದ
      ಶ್ರೀ ಸುಧಾಕರಶರ್ಮರಿಗೆ ಪುಷ್ಫಾರ್ಪಣೆ
ಪರಿಷತ್ತಿನ ಸಂಚಾಲಕರಾದ ಶ್ರೀ ರಾಮಸ್ವಾಮಿಯರರಿಂದ ಹಿರಿಯ ಚಿಂತಕರಾದ  
         ಡಾ.ಎ.ಎಸ್.ವೇಣುಗೋಪಾಲ್ ರಾವ್ ಅವರಿಗೆ  ಪುಷ್ಫಾರ್ಪಣೆ

ವೇದಾಧ್ಯಾಯೀ ಸುಧಾಕರ ಶರ್ಮರಿಂದ ಉಪನ್ಯಾಸ
ಸಭೆಯ ಒಂದು ನೋಟ
ಪರಿಷತ್ತಿನ ಸಂಚಾಲಕರಾದ ಶ್ರೀ ರಾಮಸ್ವಾಮಿಯರರಿಂದ ಕಾರ್ಯಕ್ರಮದ ವಿವರಣೆ
 ಹಿರಿಯ ಚಿಂತಕರಾದ ಡಾ.ಎ.ಎಸ್.ವೇಣುಗೋಪಾಲರಾವ್
ಶ್ರೀ ಶಂಕರಮಠದ ಧರ್ಮಾಧಿಕಾರಿಗಳಾದ ಶ್ರೀ ಎಂ.ಎಸ್. ಶ್ರೀಕಂಠಯ್ಯನವರು
ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು
ವೇದಸುಧೆಯ ಸಂಪಾದಕ ಶ್ರೀ ಹರಿಹರಪುರಶ್ರೀಧರರಿಂದ
ಪರಿಷತ್ತಿನ ಅಧ್ಯಕ್ಷರಿಗೆ ಗೌರವಾರ್ಪಣೆ
   ಶ್ರೀ ಶಂಕರಮಠದ ಧರ್ಮಾಧಿಕಾರಿಗಳಾದ
ಶ್ರೀ ಎಂ.ಎಸ್. ಶ್ರೀಕಂಠಯ್ಯನವರಿಗೆ ಗೌರವಾರ್ಪಣೆ
                    ಹಿರಿಯ ಚಿಂತಕರಾದ
ಡಾ.ಎ.ಎಸ್.ವೇಣುಗೋಪಾಲರಾವ್ ಅವರಿಗೆ  ಗೌರವಾರ್ಪಣೆ
ವೇದಾಧ್ಯಾಯೀ ಶ್ರೀ ಸುಧಾಕರಶರ್ಮರಿಗೆ ಗೌರವಾರ್ಪಣೆ
ಶಾಂತಿಮಂತ್ರದ ನಂತರ ವಂದೇ ಮಾತರಮ್
ವಂದೇ ಮಾತರಮ್ ಹಾಡುತ್ತಿರುವ ಶ್ರೀಮತಿ ಲಲಿತಾ ನರಸಿಂಹಮೂರ್ತಿ

ವೇದಿಕೆಯಲ್ಲಿ ಶ್ರೀ ಶಂಕರಮಠದ ಧರ್ಮಾಧಿಕಾರಿಗಳಾದ
 ಶ್ರೀ ಎಂ.ಎಸ್. ಶ್ರೀಕಂಠಯ್ಯನವರು, ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು, ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು ಮತ್ತು
 ಹಿರಿಯ ಚಿಂತಕರಾದ ಡಾ.ಎ.ಎಸ್.ವೇಣುಗೋಪಾಲರಾವ್
ಸಭೆಯ  ಒಂದು ನೋಟ

ಒಂದೇ ಮಾಲಿಕೆಯಡಿ ವಾರ್ಷಿಕೋತ್ಸವ ಮಾಹಿತಿ

ಆತ್ಮೀಯ ವೇದಾಭಿಮಾನಿಗಳೇ,
ದಿನಾಂಕ ೩೦.೧.೨೦೧೧ ಭಾನುವಾರ ಹಾಸನದಲ್ಲಿ ಸಂಪನ್ನಗೊಂಡವೇದಸುಧೆಯ ವಾರ್ಷಿಕೋತ್ಸವದ ಹತ್ತಾರು ಬರಹಗಳು ಈಗಾಗಲೇ ವೇದಸುಧೆಯಲ್ಲಿ ಪ್ರಕಟವಾಗಿವೆ.ಶೃಂಗೇರಿ ಶಾರದಾ ಪೀಠದ ಪೂಜ್ಯ ಶ್ರೀ ಶ್ರೀ ಭಾರತೀತೀರ್ಥಮಹಾಸ್ವಾಮಿಗಳ ಆಶೀರ್ವಾದ ಪತ್ರವನ್ನೊಳಗೊಂಡಂತೆ, ಹಲವಾರು ಸ್ಮರಣೀಯ ಚಿತ್ರಗಳು, ಪಾಲ್ಗೊಂಡವರ ಅನಿಸಿಕೆಗಳು,...ಹೀಗೆ ಎಲ್ಲವನ್ನೂ  " ವಾರ್ಷಿಕೋತ್ಸವ"  ಮಾಲಿಕೆಯಡಿ ಒಂದೇ ಕಡೆ ಪ್ರಕಟಿಸಲಾಗಿದೆ. ಇನ್ನು ಮುಂದೆಯೂ ಹಲವಾರು ಫೋಟೋಗಳು, ಆಡಿಯೋಗಳು, ಬರಹಗಳು, ಇತ್ಯಾದಿಗಳನ್ನು ಇದೇ ಮಾಲಿಕೆಯಡಿ ಪ್ರಕಟಿಸಲಾಗುವುದು. ಆಸಕ್ತರು ವಾರ್ಷಿಕೋತ್ಸವ"ಮಾಲಿಕೆಯನ್ನು ತೆರೆದು ಅದರಡಿ ಎಲ್ಲಾ ಬರಹಗಳನ್ನೂ ನೋಡಬಹುದಾಗಿದೆ. ಮುಂದೆ ಬರೆಯುವವರೂ ಸಹ ಇದೇ ಮಾಲಿಕೆಯ ಲೇಬಲ್ ಹಾಕಿ ಬರೆದರೆ ಒಂದೇ ಮಾಲಿಕೆಯಡಿ ಎಲ್ಲವೂ ಪ್ರಕಟಗೊಳ್ಳುತ್ತವೆ.

ವಾರ್ಷಿಕೋತ್ಸವದ ಮರೆಯಲಾರದ ಕ್ಷಣಗಳು-2

ವಿಚಾರಸಂಕಿರಣದಲ್ಲಿ ಪಾಲ್ಗೊಂಡ ಶ್ರೀ ನಾಗರಾಜ ದೀಕ್ಷಿತ್

ವಿಚಾರಸಂಕಿರಣದಲ್ಲಿ ಪಾಲ್ಗೊಂಡ ಡಾ||ವಿವೇಕ್

ಭಾಷಣದ ನಡುವೆ  ಹಾಡಿನಿಂದ ತಂಪೆರದ ಕು|| ಸಹನಾ

ವಿಚಾರಸಂಕಿರಣದಲ್ಲಿ ಪಾಲ್ಗೊಂಡ ಶ್ರೀ ದಕ್ಷಿಣಾಮೂರ್ತಿಯವರು

ವಿಚಾರಸಂಕಿರಣದಲ್ಲಿ ಪಾಲ್ಗೊಂಡ ಶ್ರೀ ವಿ.ಆರ್.ಭಟ್

ವಿಚಾರಸಂಕಿರಣದಲ್ಲಿ ಪಾಲ್ಗೊಂಡ ಕು|| ಶೃತಿ

ಸಭೆಯ ಒಂದು ಭಾಗ

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರಿಂದ
      ಸಮನ್ವಯದ ನುಡಿಗಳು

ಅಧ್ಯಕ್ಷರಿಗೆ ಗೌರವ ಸಮರ್ಪಣೆ

ವೇದಸುಧೆಯ ಸಂಪಾದಕ ಶ್ರೀ ಹರಿಹರಪುರ ಶ್ರೀಧರರ
        ಪ್ರಯತ್ನಕ್ಕೆ ಯಶಸ್ಸು ಹಾರೈಸಿ

ವೇದಸುಧೆಯ ತಾಂತ್ರಿಕ ನಿರ್ವಾಹಕ ಚಿ|| ಪ್ರಸನ್ನರಿಗೆ ಶುಭ ಹಾರೈಕೆ

ವಿನಾ ದೈನ್ಯೇನ ಜೀವನಂ.......’ಅನಾಯಾಸೇನ ಮರಣಂ ವಿನಾ ದ್ಯೆನ್ಯೇನ ಜೀವನಂ.. .. ಎಂಬುದು ಎಲ್ಲ ಸಜ್ಜನರ ನಿತ್ಯ ಆಶಯ, ಪ್ರಾರ್ಥನೆ. ಅನಾಯಾಸವಾದ ಅಂತ್ಯ ನಮ್ಮ ಕೈಯಲ್ಲಿಲ್ಲ; ಅದು ಭಗವಂತನ ಇಚ್ಛೆ. ಅಂದರೆ ಜೀವನ ಪೂರ್ತಿ ಯಾರ ಮುಂದೆಯೂ ದೇಹಿ.ಎಂದು ಕೈ ಚಾಚುವ ಪರಿ ಬರದಿರಲಿ ಮತ್ತು ಅಂತ್ಯದಲ್ಲಿ ಹೆಚ್ಚು ಭಯ, ನೋವು ಮತ್ತು ಸಂಕಟಗಳಿಲ್ಲದ ನಿರಾಯಾಸವಾದ ಮರಣ ಬರಲಿ ಎಂಬುದೇ ಇದರ ಸಂದೇಶ. ಈ ಸಂಸ್ಕೃತ ಶ್ಲೋಕ ಬಹಳ ಆಳವಾದ ಮತ್ತು ವಿಸ್ತಾರವಾದ ಅರ್ಥವನ್ನು ಹೊಂದಿದೆ. ಆದಷ್ಟೂ ಇತರರನ್ನವಲಂಬಿಸದೇ ಜೀವನ ನಡೆಸುವ ಅವಕಾಶ ಪ್ರತಿಯೊಬ್ಬ ಮಾನವನಿಗೂ ಇದ್ದೇ ಇದೆ. ಅದನ್ನು ಅವನು ವಿವೇಚನೆಯಿಂದ ಬಳಸಬೇಕಷ್ಟೆ. ಇದರ ಮತ್ತೊಂದು ಅರ್ಥ - ಮನುಷ್ಯ ಹೆಚ್ಚು ಪರಾವಲಂಬಿಯಾಗದೇ, ತನ್ನೆಲ್ಲಾ ಅವಶ್ಯಕತೆಗಳನ್ನು ತಾನೇ ಸ್ವತ: ಪೂರೈಸಿಕೊಳ್ಳಲಿ ಎಂಬುದು. ಈ ಸಂದೇಶವನ್ನು ಅರಿತು ನಡೆಸುವ ಬದುಕೇ ನಿಜವಾದ ಮತ್ತು ಸಾರ್ಥಕವಾದ ಬದುಕು.

       ಹಾಗಾದರೆ ಜೀವನ ಪರ್ಯಂತ ನಾವು ಬೇರೆಯವರ ಸಹಾಯ-ಬೆಂಬಲ ಪಡೆಯದೇ ಜೀವನ ನಡೆಸುವುದು ಸಾಧ್ಯವೇ? ಖಂಡಿತಾ ಇಲ್ಲ. ಅಂತಹ ಜೀವನ ಸನ್ಯಾಸಿಯೊಬ್ಬನಿಂದ ಸಾಧ್ಯವಾದೀತು.


ದ್ವಾವಿಮೌ ಪುರುಷೌ ಲೋಕೇನ ಭೂತೌನ ಭವಿಷ್ಯತ: |

ಪ್ರಾರ್ಥಿತಂ ಯಶ್ಚ ಕುರುತೇ ಯಶ್ಚನಾರ್ಥ ಯತೇ ಪರಂ ||

 ಅಂದರೆ ಯಾರು ಕೇಳಿದ್ದನ್ನೆಲ್ಲವನ್ನು ಕೊಡುತ್ತಾರೋ, ಮತ್ಯಾರು ಯಾರಿಂದಲೂ ಏನನ್ನೂ ಬಯಸುವುದಿಲ್ಲವೋ - ಅಂತಹ ಇಬ್ಬರು ಹಿಂದೆಯೂ ಇರಲಿಲ್ಲ, ಮುಂದೆಯೂ ಇರಲಾರರು.


 ನಮ್ಮ ಜೀವನದ ಪ್ರತಿ ಹಂತದಲ್ಲೂ ನಾವು ಒಂದಲ್ಲ ಒಮ್ಮೆ ಪರರ ಸಹಾಯವನ್ನು (ಅದು ಯಾವುದೇ ರೂಪದಲ್ಲಿರಬಹುದು) ಪಡೆದೇ ಇದ್ದೇವೆ ಎನ್ನುವುದು ನಿಶ್ಚಿತ. ಹಾಗಿಲ್ಲದಿದ್ದಲ್ಲಿ, ಪ್ರತಿಯೊಬ್ಬರೂ ಇಂದು ವ್ಯವಸ್ಥಿತ ರೀತಿಯಲ್ಲಿ ಬೆಳೆದು, ಒಂದು ಶಿಸ್ತುಬದ್ಧ ಜೀವನ ನಡೆಸಲು ಸಾಧ್ಯವೇ ಆಗುತ್ತಿರಲಿಲ್ಲ. ನಮ್ಮ ವೈಯುಕ್ತಿಕ, ಆರ್ಥಿಕ ಮತ್ತು ಬೌದ್ಧಿಕ ಅವಶ್ಯಕತೆಗಳಿಗೋಸ್ಕರ ಮತ್ತು ಅಂತಹ ಹತ್ತು ಹಲವಾರು ಸನ್ನಿವೇಶಗಳಲ್ಲಿ ನಾವು ಸಾಕಷ್ಟು ಹೆಚ್ಚಿನ ರೀತಿಯಲ್ಲಿಯೇ (ಅದರ ಗಾತ್ರ ಮತ್ತು ಸ್ವರೂಪದಲ್ಲಿ ವ್ಯತ್ಯಾಸವಿರಬಹುದು) ಇತರರ ಬೆಂಬಲ ಪಡೆದೇ ಇರುತ್ತೇವೆ. ಅದು ಕಷ್ಟ ಕಾಲದಲ್ಲಿ ಹಣ ಸಹಾಯ ಇರಬಹುದು, ರೋಗ-ರುಜಿನಗಳಾದಾಗ ವೈಯುಕ್ತಿಕ ಸೇವೆಯ ರೂಪದಲ್ಲಿರಬಹುದು; ಮಾನಸಿಕ ಕ್ಲೇಷಕ್ಕೊಳಗಾದಾಗ ಮಾನಸಿಕ ಸಾಂತ್ವನ ನೀಡುವಂತಹದಾಗಿರಬಹುದು ಇತ್ಯಾದಿ. ಆದರೆ ಈ ರೀತಿ ಬಾಹ್ಯ ನೆರವು ಪಡೆಯುವಾಗ ಮಾತ್ರ ನಮ್ಮ ವಿವೇಚನಾ ಮಟ್ಟ ಅತ್ಯಂತ ಚುರುಕಾಗಿರಬೇಕು - ಅದೊಂದು ರೀತಿಯ balancing act! ಸಹಜವಾಗಿಯೇ ಸ್ವಾರ್ಥಿಯಾಗಿರುವ ಮಾನವ ತನಗೆ ಎಲ್ಲೆಡೆಯಿಂದ ಸಸೂರಾಗಿ ಬರುವ ಎಲ್ಲಾ ಸವಲತ್ತುಗಳನ್ನು ತಕ್ಷಣ (ಯಾವುದೇ ಸಂಕೋಚವಿಲ್ಲದೇ ಮತ್ತು ಅನೇಕ ಸಂದರ್ಭಗಳಲ್ಲಿ ತನ್ನ ಅವಶ್ಯಕತೆಗಳಿಗೂ ಮೀರಿ) ಬಾಚಿಕೊಂಡು ಬಿಡುತ್ತಾನೆ. ಬಹುತೇಕ ಸಂದರ್ಭಗಳಲ್ಲಿ ಆತ ಎಷ್ಟು ಸ್ವಾರ್ಥಿಯಾಗುತ್ತಾನೆಂದರೆ, ಹಾಗೆ ಅನೇಕ ಕಡೆಗಳಿಂದ ಸ್ವೀಕರಿಸಿದ ಸಹಾಯ-ಸವಲತ್ತುಗಳ ಕಾರಣಕರ್ತರನ್ನು ಕೂಡ ಮರೆತೇ ಬಿಡುತ್ತಾನೆ.  ಹಾಗೆ ಪಡೆಯುವುದೇ ತನ್ನ ಹಕ್ಕು ಎಂದು ಭಾವಿಸುತ್ತಾನೆ. ಉಪಕಾರ ಸ್ಮರಣೆ ದೂರವೇ ಉಳಿದ ಮಾತು. ಮೇಲೇರಿದ ನಂತರ ಏಣಿಯನ್ನೇ ಮರೆಯುವಂತೆ. ಇಂತಹ ಸಂದರ್ಭಗಳಲ್ಲಿಯೇ ನಾವು ಬಹು ಎಚ್ಚರದಿಂದಿರಬೇಕು. ಹೀಗೆ ನಾಚಿಕೆ ಬಿಟ್ಟು ಕಂಡದ್ದೆಲ್ಲಾ ಬಾಚುತ್ತಾ ಹೋಗುವ ಪ್ರವೃತ್ತಿ ನಿಜಕ್ಕೂ ನಮ್ಮ ಸ್ವಾಭಿಮಾನದ ಮತ್ತು ಸಚ್ಚಾರಿತ್ರ್ಯದ ದಿವಾಳಿತನವೇ ಸರಿ. ಸ್ವಾಭಿಮಾನ ಮಾನವನ ಅತ್ಯಂತ ಪ್ರಮುಖ ಸದ್ಗುಣಗಳಲ್ಲಿ ಒಂದು. ನಮ್ಮತನವನ್ನು ಬಿಟ್ಟು ನಾವೆಂದಿಗೂ ಬಾಳಬಾರದು. ಆದುದರಿಂದ ಸಂಪಾದನೆಗಿಂತ ಕಡಿಮೆ ಖರ್ಚು ಮಾಡುವುದೇ  ಪಾಂಡಿತ್ಯ; ಅದೇ ನಿಜವಾದ ಚಾತುರ್ಯ ಮತ್ತು ಜಾಣತನ. ಇಲ್ಲಿ ಎಚ್ಚರದ ಮತ್ತೊಂದು ಮಾತೆಂದರೆ ಸ್ವಾಭಿಮಾನ ಅತೀ ಹೆಚ್ಚಾಗಿ ಅದು ದುರಭಿಮಾನಕ್ಕೆ ಎಡೆಮಾಡಿಕೊಡುವ ಸಂದರ್ಭಗಳ ಬಗ್ಗೆ ಕೂಡ ನಾವು ಜಾಗರೂಕರಾಗಿರಬೇಕು.


ಸಮಾಜವೆಂಬ ಅಚ್ಚಿನಿಂದ ಹೊರಬಂದ ನಾವು ಜೀವನ ಸಾಗಿಸಲು ನಮ್ಮ ಅರ್ಹತೆಗೆ ತಕ್ಕ ದಾರಿ ಕಂಡು ಕೊಳ್ಳುತ್ತೇವೆ; ಹೆಚ್ಚಿನ ಸಂದರ್ಭಗಳಲ್ಲಿ ಆ ಭಗವಂತನೇ ಒಂದು ದುಡಿಮೆಗೆ ನಮ್ಮನ್ನು ಹಚ್ಚಿರುತ್ತಾನೆ (ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯಾನೇ?). ಅಂತಹ ಒಂದು ದಾರಿ ಸಿಕ್ಕ ಕೂಡಲೇ ನಾವು ಕಂಡದ್ದಕ್ಕೆ ಕೈ ಚಾಚುವ ಪ್ರವೃತ್ತಿಯ ಬಗ್ಗೆ ಜಾಗೃತರಾಗಬೇಕು. ಅಂದರೆ ನಮ್ಮ ನಿಜವಾದ ಅವಶ್ಯಕತೆಗಳ ಮತ್ತು ಅವುಗಳನ್ನು ಪೂರೈಸುವ ವ್ಯವಸ್ಥೆಯನ್ನು ನಾವು ಅಚ್ಚುಕಟ್ಟಾಗಿ ಯೋಜಿಸಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬುದು ನಮ್ಮ ನಿತ್ಯ ಮಂತ್ರವಾಗಬೇಕು. ಸದಾಕಾಲ ಜುಟ್ಟಲ್ಲಿ ಮಲ್ಲಿಗೆ ಹೂವಿರಲು ಸಾಧ್ಯವಿಲ್ಲ. ಪಾಲಿಗೆ ಬಂದದ್ದನ್ನು ದೇವರ ಪ್ರಸಾದ ಎಂದು ಸ್ವೀಕರಿಸುವ ನಮ್ರ ಜೀವನಶೈಲಿ ನಮ್ಮ ಗುರಿಯಾಗಬೇಕು. ಪರಮಾತ್ಮನ ದಯೆಯಿದ್ದರೆ ಇತರರಿಗೆ ಸಹಾಯಕವಾಗುವ ಪ್ರತಿಯೊಂದು ಕ್ಷಣವೂ ನಮಗೆ ಬರಲಿ, ಅಂತಹ ಸಹಾಯ ನೀಡಬಲ್ಲ ಶಕ್ತಿ ಕೂಡ ಬರಲಿ ಎಂಬುದು ಆ ಭಗವಂತನಲ್ಲಿ ನಮ್ಮ ನಿರಂತರ ಪ್ರಾರ್ಥನೆಯಾಗಬೇಕು. ಆದಷ್ಟೂ ಬೇರೆಯವರ ಮುಲಾಜಿಲ್ಲದೇ, ಬೇರೆಯವರ ಕೃಪಾಕಟಾಕ್ಷಕ್ಕೆ ಕಾಯದೇ, ಸ್ವಾವಲಂಬಿಯಾಗಿ, ಎದೆಯುಬ್ಬಿಸಿ ಸಾಗಿಸುವ ಜೀವನದ ಆನಂದವೇ ಬೇರೆ - ಆತ್ಮತೃಪ್ತಿಯೇ ಬೇರೆ. ಅದೊಂದು ಅವರ್ಣನೀಯ ಅನುಭವ.


     ಸತ್ಪಾತ್ರರಿಗೆ ದಾನ ಮಾಡುವುದು ಎಷ್ಟು ಸೂಕ್ತವೋ ಅಷ್ಟೇ ಮುಖ್ಯವಾದದ್ದು ಸತ್ಪಾತ್ರರಿಂದ ಸಹಾಯ ಪಡೆಯುವುದೂ ಕೂಡ. ನಿಮ್ಮ ಕ್ರಿಯಾಶೀಲತೆಯನ್ನು, ನಿಮ್ಮ ಕಾರ್ಯಸಿದ್ಧಿಯನ್ನು ಅಥವಾ ನಿಮ್ಮ ಬೌದ್ಧಿಕ ಶಕ್ತಿಯನ್ನು ನೋಡಿ ಒಳಗೊಳಗೇ ಹೊಟ್ಟೆಕಿಚ್ಚು ಪಡುವ ಮಂದಿಯಿಂದ ನೀವೇನಾದರೂ ಸಹಾಯ ಪಡೆದಲ್ಲಿ ಅದು ನಿಮಗೇ ಕಂಟಕವಾಗಬಲ್ಲದು; ನಿಮ್ಮಲ್ಲಿರುವ ಅಂತ:ಶಕ್ತಿ ಕೂಡಾ ಅಂತಹ ನಕಾರಾತ್ಮಕ ಅಲೆಗಳ ಪ್ರಭಾವದಿಂದ ಕುಂಠಿತವಾಗಬಲ್ಲದು. ಆದುದರಿಂದ ನಾವು ಯಾರಿಂದ (ಅದೂ ಅತ್ಯಂತ ಅನಿವಾರ‍್ಯವಾದ ಸಂದರ್ಭಗಳಲ್ಲಿ) ಸಹಾಯ ಹಸ್ತ ಬೇಡುತ್ತಿದ್ದೇವೆ ಎಂಬ ಬಗ್ಗೆ ಕೂಡ ಅತೀ ಎಚ್ಚರಿಕೆಯಿಂದ ಇರಬೇಕು. ಹಾಗಾದಾಗ ಮಾತ್ರ ನಾವು ಪಡೆದ ಸಹಾಯ ನಮಗೆ ಅನುಕೂಲವಾದೀತು; ನಮ್ಮ ಉದ್ದೇಶ ಸಾಧನೆಗೆ ದಾರಿಯಾದೀತು. ಅದೇ ರೀತಿ ನಾವು ಸಹಾಯ ಮಾಡುವಾಗ ಕೂಡ ದರಿದ್ರರಾದವರಿಗೇ ಸಹಾಯ ಮಾಡಬೇಕು. ಹಣವುಳ್ಳವರಿಗೇ ಸಹಾಯ ಮಾಡುವುದೂ ಒಂದೇ ಸಮುದ್ರಕ್ಕೆ ಒಂದು ಕೊಡ ನೀರು ಹಾಕುವುದೂ ಒಂದೇ. ಆದುದರಿಂದ ಯಾವಾಗಲೂ ವ್ಯಾಧಿಯುಳ್ಳವರಿಗೆ ಔಷಧಿ ನೀಡಿ ಉಪಚರಿಸಬೇಕೇ ವಿನಾ ವ್ಯಾಧಿಯಿಲ್ಲದವರಿಗಲ್ಲ. ಹಾಗೆ ಮಾಡಿದ ಸಹಾಯ ಮಾತ್ರ ಸಾರ್ಥಕತೆ ಹೊಂದಬಲ್ಲದು. ನಮ್ಮ ಮನಸ್ಸಿಗೂ ಹಾಗೂ ಸಹಾಯ ಪಡೆದವರಿಗೂ ಸಾಕಷ್ಟು ಸಂತೃಪ್ತಿ, ನೆಮ್ಮದಿ ತರಬಲ್ಲದು.   

ನಾವು ಎಲ್ಲರಿಗೂ ದಾನ ಮಾಡುವುದಿಲ್ಲ; ಎಲ್ಲರಿಂದಲೂ ದಾನ (ಸಹಾಯ) ಸ್ವೀಕರಿಸುವುದಿಲ್ಲ.  ಹಾಗೆ ದಾನ ಪಡೆದುಕೊಳ್ಳುವವರಿಗೆ ಕೊಡುವವರಿಂದ ಪೂರ್ವ ಜನ್ಮದಲ್ಲಿ ಬರಬೇಕಾದ ಹಳೇ ಬಾಕಿ ವಸೂಲಾತಿ ಅದಾಗಿರಬಾರದೇಕೆ? ಹಾಗಿದ್ದಲ್ಲಿ ನಾವು ನಿಜವಾಗಿ ಏನನ್ನೂ ದಾನ ಮಾಡುವುದೇ ಇಲ್ಲ; ನಮ್ಮ ಹಳೇ ಬಾಕಿ ತೀರಿಸಿದೆವು ಅಷ್ಟೆ! ಬಹುಶ: ನಮ್ಮ ಪೂರ್ವ ಜನ್ಮಗಳಲ್ಲಿ ಶೇಖರಿಸಿದ ಋಣದ ಭಾರಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಯೇ ಈ ಕೊಡು-ಕೊಳ್ಳುವಿಕೆ. ನಿಜಾರ್ಥದಲ್ಲಿ ನೋಡಿದಾಗ ದಾನ ಕೊಡುವುದು-ಪಡೆದು ಕೊಳ್ಳುವುದು ಎರಡೂ ಜೀವನದ ಸಹಜ ಕ್ರಿಯೆಗಳು; ಒಂದು ರೀತಿ ವ್ಯಕ್ತಿಯ ಪೂರ್ವ ಜನ್ಮದ ಕರ್ಮಫಲದ ಸಂಚಯಿತ ಕ್ರಿಯೆಗಳು. ದಾನ ಸ್ವೀಕರಿಸುವುದೂ ಅಷ್ಟೆ. ಅದೊಂದು ನಾವು ಬೇರೆಯವರಿಂದ ನಮ್ಮ ಹಿಂದಿನ ಜನ್ಮಗಳಲ್ಲಿ ಬರಬೇಕಾದ ನಮ್ಮ ಹಳೇಬಾಕಿ ಹಿಂದಕ್ಕೆ ಪಡೆಯುವ ಕ್ರಿಯೆ. ಆದರೆ, ವಿಷಯ ಅಷ್ಟು ಸರಳವಲ್ಲ. ಇದು ನಮ್ಮ ಪೂರ್ವಜನ್ಮಗಳಲ್ಲಿ ಅರ್ಜಿಸಿದ ಕರ್ಮಫಲವೇ ಆದರೂ ಕೂಡ ನಾವು ಈ ಪ್ರಕ್ರಿಯೆಯಲ್ಲಿ ಬಹಳ ಎಚ್ಚರವಿರಲೇ ಬೇಕಾಗುತ್ತದೆ. ದಾನ ಮಾಡುವವರು (ಬಹುತೇಕ ಮಂದಿ) ಯಾರೂ ಎಂದಿಗೂ ಕೈ ಬಿಟ್ಟು ದಾನ ಮಾಡುವುದಿಲ್ಲ. ಯಾರೋ ಒಂದು ಸಾವಿರ ರೂ. ಸಹಾಯ ಕೇಳಿದರೆ ಒಂದು ೪೦೦-೫೦೦ ಕೊಟ್ಟು ಕೈ ತೊಳೆದುಕೊಳ್ಳುವವರೇ ಹೆಚ್ಚು ಮಂದಿ. ಆಗ ಆ ಋಣ ಭಾರದ ಬಾಕಿ ಇನ್ನೂ ಉಳಿಯುತ್ತದೆ. ವ್ಯತಿರಿಕ್ತವಾಗಿ ನಾವು ದಾನ (ಸಹಾಯ) ಸ್ವೀಕರಿಸುವಾಗ ನಮಗೆ ಅಗತ್ಯಕ್ಕೆ ಹೆಚ್ಚಿನದ್ದನ್ನೇ ಅಪೇಕ್ಷೆ ಪಡುತ್ತೇವೆ. ಹಾಗೆ ನಮಗೆ ನಿಜವಾಗಿ ಬರಬೇಕಾದ್ದಕ್ಕಿಂತ ಹೆಚ್ಚಿಗೆ ಪಡೆಯುವುದೂ ಕೂಡ  ನಮ್ಮ ಮುಂದಿನ ಜನ್ಮಗಳಿಗೆ ಪುನ: ಹೊತ್ತು ಹೋಗುವ ಋಣದ ಚೀಲವನ್ನು ಇನ್ನಷ್ಟು ಭಾರವನ್ನಾಗಿಸುತ್ತದೆ. ಆದುದರಿಂದ, ದಾನ ಮಾಡುವಾಗ ಕೈ ಬಿಟ್ಟು, ಮನಬಿಚ್ಚಿ ದಾನ ಮಾಡಿ. ದಾನ ಸ್ವೀಕರಿಸುವಾಗ ಕನಿಷ್ಠ ಅವಶ್ಯವಿದ್ದಷ್ಟು ಮಾತ್ರ ಕೃತಜ್ಞತೆಯಿಂದ ಸ್ವೀಕರಿಸಿ. ಅನ್ಯರ ಋಣ ಭಾರ ನಮ್ಮ ಮೇಲೆ ಹೆಚ್ಚದಂತೆ ಎಚ್ಚರ ವಹಿಸಿ.   

     ತಾತ್ಪರ್ಯ ಇಷ್ಟೆ. ಮನುಷ್ಯ ಸರ್ವ ಸ್ವತಂತ್ರನಾಗಿ ತಾನೊಬ್ಬನೇ ಜೀವಿಸಲು ಸಾಧ್ಯವೇ ಇಲ್ಲ. ಅವನಿಗೆ ಇತರರ ಬೆಂಬಲ (ದೈಹಿಕ, ಮಾನಸಿಕ, ಸಾಮಾಜಿಕ, ಆರ್ಥಿಕ ಇತ್ಯಾದಿ) ಬೇಕೇ ಬೇಕು. ಹಾಗಿರುವಾಗ ಜೀವನ ಪರ್ಯಂತ ಈ ಕೊಡು-ಕೊಳ್ಳು ಗಳ ಪ್ರಕ್ರಿಯೆ ನಡೆದೇ ಇರುತ್ತದೆ. ಇದು ಹರಿಯುವ ನೀರಿನಂತೆಯೇ ನಿರಂತರ; ಸೂರ್ಯ-ಚಂದ್ರರಷ್ಟೇ ನಿತ್ಯ-ಸತ್ಯ. ಆದರೆ ಈ ಕೊಡು-ಕೊಳ್ಳು ವಿಕೆಯ ಪ್ರಮಾಣವನ್ನು ಸರಿಯಾದ ಮಟ್ಟದಲ್ಲಿ (ಅಂದರೆ ಲೌಕಿಕ ಮತ್ತು ತಾತ್ವಿಕ ದೃಷ್ಟಿಗಳೆರಡರಿಂದಲೂ) ಕಾಪಾಡುವ ಹೊಣೆ ಮತ್ತು ಜವಾಬ್ದಾರಿ ಮಾತ್ರ ನಮ್ಮದು. ಕೊಡುವುದು ಸ್ವಲ್ಪ ಜಾಸ್ತಿಯಾದರೂ ಪರವಾಗಿಲ್ಲ (ಹೆಚ್ಚಾದರೂ ಇನ್ನೂ ಒಳ್ಳೆಯದೇ!) ಆದರೆ ಕೊಳ್ಳುವುದು ಮಾತ್ರಾ ಅತೀ ಕಡಿಮೆ ಇರಬೇಕು.   ಹಾಗಾದಾಗ ನಮ್ಮ ಜೀವನ ನಮಗೂ ಸುಂದರವಾಗಿರುತ್ತದೆ; ಸಮಾಜ ಕೂಡ ಅದನ್ನು ಅನುಮೋದಿಸುತ್ತದೆ; ಮತ್ತು ಭಗವಂತ ಕೂಡ ಅದನ್ನು ಮೆಚ್ಚುತ್ತಾನೆ.
   ಫೈನಲ್ ಕಿಕ್:
ಸತ್ಪಾತ್ರರಿಗೆ ದಾನ/ಸಹಾಯ ಮಾಡಿ. ಸತ್ಪಾತ್ರರಿಂದ ಮಾತ್ರಾ ದಾನ/ಸಹಾಯ ಸ್ವೀಕರಿಸಿ. ಆದರೆ, ಜೀವನದ ಅಂತ್ಯಕಾಲದಲ್ಲಿ ಈ ಕೊಟ್ಟ ಮತ್ತು ಸ್ವೀಕರಿಸಿದ ಲೆಕ್ಕ ಮಾತ್ರಾ ಕನಿಷ್ಠಪಕ್ಷ ಸಮ ಸಮವಾಗಿರಲಿ. ಈ ಎರಡರ ಪ್ರಕ್ರಿಯೆಯಲ್ಲೂ ಸದಾ ನಿರಪೇಕ್ಷ ಭಾವ ಇರಲಿ.


01.07.2008                                                                                  
[ಸೆಪ್ಟೆಂಬರ್ ೨೦೦೮ ರ ಸ್ವಯಂ ಪ್ರಕಾಶ, ೨೪.೯.೨೦೦೮ ರ ಜನಹೋರಾಟ ಮತ್ತು ೨೦.೨.೨೦೦೯ ರ ನಾವಿಕ ಪತ್ರಿಕೆಗಳಲ್ಲಿ ಪ್ರಕಟಿತ ಲೇಖನ]

ವಾರ್ಷಿಕೋತ್ಸವದ ಮರೆಯಲಾರದ ಕ್ಷಣಗಳು-1

ಅಗ್ನಿಹೋತ್ರದಿಂದ ವಾರ್ಷಿಕೋತ್ಸವದ ಆರಂಭ

ವೇದಮಂತ್ರ  ಪಠಿಸಿದ ಚಿ|| ಭೃಗು

ಕಾರ್ಯಕ್ರಮ ನಿರೂಪಿಸಿದ ಬಳಗದ ಸದಸ್ಯರಾದ ಶ್ರೀ ಕವಿ ಸುರೇಶ್

ಸ್ವಾಗತ ಪರಿಚಯ-ಮಾಡಿದ ವೇದಸುಧೆಯ ಗೌರವ ಸಂಪಾದಕರಾದ
ಶ್ರೀ ಕವಿ ನಾಗರಾಜ್


ಪ್ರಾಸ್ತಾವಿಕಭಾಷಣ ಮಾಡಿದ ವೇದಸುಧೆಯ ಸಂಪಾದಕ
 ಶ್ರೀ ಹರಿಹರಪುರಶ್ರೀಧರ್

ದೀಪ ನೃತ್ಯದಿಂದ ಸಭೆಯನ್ನು ಆಕರ್ಷಿಸಿದ ಕು|| ಸಹನಾ

ಜ್ಯೋತಿ ಬೆಳಗಿಸಿ ವಾರ್ಷಿಕೋತ್ಸವವನ್ನು ಉದ್ಘಾಟಿಸಿದ ಶಂಕರ ಮಠದ        
     ಧರ್ಮಾಧಿಕಾರಿಗಳಾದ ಶ್ರೀ ಎಂ.ಎಸ್.ಶ್ರೀಕಂಠಯ್ಯನವರುಸಿ.ಡಿಯನ್ನು ಪರಿಚಯಿಸಿದ ಬಳಗದ ಸದಸ್ಯರಾದ ಶ್ರೀ ವಿಶಾಲ್

ಸಿ.ಡಿ ಯ ಲೋಕಾರ್ಪಣೆ

ಅಧ್ಯಕ್ಷ ಪೀಠದಿಂದ ಮಾತನಾಡಿದ ಶ್ರೀ ರಾಮಕೃಷ್ಣ ವಿದ್ಯಾಲಯದ   
      ಪ್ರಾಂಶುಪಾಲರಾದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು

ಜನರ ಮನಸೆಳೆದ ಕು|| ಬಿ.ಎಸ್.ಆರ್ ಅಂಬಿಕಾ ಮತ್ತು ಚಿ|| ಪವನ್

ಆಸಕ್ತಿಯಿಂದ ಆಲಿಸಿದ ವೇದಾಭಿಮಾನಿಗಳು

ವೇದಸುಧೆಗೆ ನಿಮ್ಮ ಭಾವಚಿತ್ರ ಕಳುಹಿಸಿಕೊಡಿ

ವೇದಸುಧೆಯ ಉದ್ಧೇಶವನ್ನು ಒಪ್ಪಿದ್ದರೂ ಇಲ್ಲಿಯವರಗೆ ಅನೇಕರು ತಮ್ಮ ಮೇಲ್ ವಿಳಾಸವನ್ನು ವೇದಸುಧೆಗೆ ಕಳುಹಿಸಿಲ್ಲ.ಅನೇಕರು ವೇದಸುಧೆಯ ಆಹ್ವಾನದ ಮೇಲ್ ಗಮನಿಸಿಲ್ಲ. ಮೇಲ್ ಬಂದಿದ್ದವರು ತಮ್ಮ ಸಮ್ಮತಿ ಸೂಚಿಸಿ ಲೇಖನ ಬರೆಯಲು ಶುರುಮಾಡ ಬೇಕಾಗಿ ವಿನಂತಿಸುವೆ. ತಮ್ಮ ಮೇಲ್ ವಿಳಾಸವನ್ನು ಕಳುಹಿಸದೆ ಇರುವ ಮತ್ತು ಬಳಗದ ಪಟ್ಟಿಯಲ್ಲಿ ಹೆಸರಿಲ್ಲದವರು ತಮ್ಮ ಭಾವಚಿತ್ರವನ್ನು ವೇದಸುಧೆಗೆ ಮೇಲ್ ಮಾಡಲು ಕೋರುವೆ.
-ಶ್ರೀಧರ್
ಸಂಪಾದಕ

ವೇದಸುಧೆ ಬಳಗವೇದಸುಧೆಯ ಆಹ್ವಾನವನ್ನು ಮನ್ನಿಸಿ ಹಲವಾರು ಅಭಿಮಾನಿಗಳು ವೇದಸುಧೆಯಲ್ಲಿ ಲೇಖನವನ್ನು ಬರೆಯಲು ಒಪ್ಪಿ ವೇದಸುಧೆಬಳಗವನ್ನು ಸೇರಿದ್ದಾರೆ. ಅವರುಗಳ ಪರಿಚಯವು ವೇದಸುಧೆಯ ಅಭಿಮಾನಿಗಳಿಗಿರಲಿ, ಎಂಬ ಉದ್ಧೇಶದಿಂದ ಅವರುಗಳ ಭಾವಚಿತ್ರವನ್ನು ಇಲ್ಲಿ ಪ್ರಕಟಿಸಲಾಗಿದೆ. ಇನ್ನು ಹಲವರು ಲೇಖಕರಾಗಿರಲು ತಮ್ಮ ಒಪ್ಪಿಗೆಯನ್ನು ಸೂಚಿಸಿ ಈಗಾಗಲೇ ವೇದಸುಧೆಯಲ್ಲಿ ಬರೆಯುತ್ತಿದ್ದರೂ ಅವರ ಭಾವಚಿತ್ರ ವೇದಸುಧೆಗೆ ಲಭ್ಯವಾಗಿಲ್ಲ. ಅವರುಗಳು ದಯಮಾಡಿ ತಮ್ಮ ಭಾವ ಚಿತ್ರವನ್ನು ವೇದಸುಧೆಗೆ ಕಳುಹಿಸಿಕೊಡಬೇಕಾಗಿ ವಿವಂತಿಸುವೆ.
ವೇದಸುಧೆಗೆ ಒಂದು ನಿರ್ದಿಷ್ಟ ಉದ್ಧೇಶವಿದೆ. ಆ ಉದ್ಧೇಶ ಈಗಾಗಲೇ ಎಲ್ಲರಿಗೂ ಅರ್ಥವೂ ಆಗಿದೆ. ಆದರೆ ವೇದಸುಧೆಯ ಉದ್ಧೇಶದ ಸ್ಪಷ್ಟನೆ ಇಲ್ಲದೆ ಆಹ್ವಾನವನ್ನು ಮನ್ನಿಸಿ ತಮ್ಮ ಮನೋಭೂಮಿಕೆಗೆ ವೇದಸುಧೆಯ ಉದ್ಧೇಶ ಸರಿ ಹೊಂದುವುದಿಲ್ಲ ಎಂಬ ಭಾವನೆ ಬಂದರೆ ಅಂತಹ ಲೇಖಕರು ತಮ್ಮ ಅಭಿಪ್ರಾಯವನ್ನು ವೇದಸುಧೆಗೆ ಮೇಲ್ ಮಾಡಿದರೆ , ವೇದಸುಧೆಯ ಲೇಖಕರ ಪಟ್ಟಿಯಲ್ಲಿ ತಮ್ಮ ಹೆಸರು ಬೇಡವೆಂಬ ಅಭಿಪ್ರಾಯವಿದ್ದರೆ ಅವರ ಇಚ್ಛೆಗೆ ವಿರುದ್ಧವಾಗಿ ವೇದಸುಧೆಯಬಳಗದ ಪಟ್ಟಿಯಲ್ಲಿ ಅವರ ಹೆಸರನ್ನು ಉಳಿಸಿಕೊಳ್ಳುವುದಿಲ್ಲ.

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮ
ಪ್ರೇರಕರು


ಕವಿ ನಾಗರಾಜ್ ಗೌರವ ಸಂಪಾದಕರು


ಶ್ರೀ ವಿ.ಆರ್.ಭಟ್, ನಿರ್ವಾಹಕರು

ಶ್ರೀ ಲಕ್ಷ್ಮೀ ನಾರಾಯಣರಾವ್ಜಿ.ಎಸ್.ಶ್ರೀನಾಥ
H.S. Prabhakar
ಕವಿ ಸುರೇಶ್

ಮಹೇಶ ಪ್ರಸಾದ ನೀರ್ಕಜೆಬೆಳ್ಳಾಲ ಗೋಪಿನಾಥ ರಾವ್
Shivaram H
k.s.raghavendranavada
ಪ್ರಸನ್ನ ಎಸ್.ಪಿ, ತಾಂತ್ರಿಕ ನಿರ್ವಾಹಕರು
Dr.Sreepad,H.R
ಶ್ರೀನಿವಾಸ ಡಿ. ಶೆಟ್ಟಿ
ಹರಿಹರಪುರ ಶ್ರೀಧರ್, ಸಂಪಾದಕ


 
ಶ್ರೀ ನಾಗರಾಜ ದೀಕ್ಷಿತ್