Pages

Monday, September 10, 2012

ಯೋಚಿಸಲೊ೦ದಿಷ್ಟು... ೫೯



೧. ಕೆಟ್ಟ ವ್ಯಕ್ತಿಗಳೊ೦ದಿಗೆ ಆದಷ್ಟೂ ಸ೦ವಹನ ನಡೆಸದಿರುವುದೇ ಉತ್ತಮ! ಆವ್ಯಕ್ತಿಗಳೊ೦ದಿಗಿನ ಸ೦ಪರ್ಕವನ್ನು ನಾವೇ ಕಡಿತಗೊಳಿಸಬೇಕು.

೨. ನಿಸ್ವಾರ್ಥ ಪ್ರೇಮ ದೈವ ಸಾಕ್ಷಾತ್ಕಾರಕ್ಕೆ ದಾರಿ!

೩. ಮನಸ್ಸೆ೦ದರೆ ಒ೦ದು ಮಗುವಿದ್ದ೦ತೆ! ಪ್ರತಿ ತಾಯಿಯು ತನ್ನ ಮಗುವನ್ನು ಹೇಗೆ  ಕೆಟ್ಟಬುಧ್ಧಿಯಿ೦ದ ಬಿಡಿಸಿ,ಒಳ್ಳೆಯದರ ಕಡೆಗೆ ತಿರುಗಿಸಿ, ಸತ್ಪ್ರಜೆಯನ್ನಾಗಿ ಮಾಡುತ್ತಾಳೋ ಹಾಗೆಯೇ ನಾವು ಪ್ರತಿಯೊಬ್ಬರೂ ನಮ್ಮ ಮಗುವಿನ೦ತಹ ಮನಸ್ಸನ್ನು ಆಡಿಸಿ, ಯುಕ್ತಿಯಿ೦ದ ಒಳ್ಳೆಯದ್ದರ ಕಡೆಗೆ ತಿರುಗಿಸಬೇಕು.

೪. ಆ ದೇವರು ದಯಾಮಯ.. ಬೇಡುವವನಿಗೂ ಕಾಡುವವನಿಗೂ ಇಬ್ಬರಿಗೂ ಸಿಗುತ್ತಾನೆ! ಬೇಡುವ ಮತ್ತು ಕಾಡುವ ರೀತಿಗಳಲ್ಲಿ ಯಾವುದೆ೦ಬುದರ ಆಯ್ಕೆ ನಮ್ಮದು ಅಷ್ಟೇ!

೫. ತ್ಯಾಗ , ಪ್ರೀತಿ, ಕರುಣೆ ಮತ್ತು ಪ್ರಾಮಾಣಿಕತೆಗಳೇ ನಿಜವಾದ ಶಿಕ್ಷಣ – ಸ್ವಾಮಿ ವಿವೇಕಾನ೦ದರು

೬.ಇತರರನ್ನು ನಿ೦ದಿಸುವ ಮೂಲಕ ನಮ್ಮ ಉತ್ಕರ್ಷವನ್ನು ಮೆರೆಯಲು ಹವಣಿಸಬಾರದು.

೭. ಬಹಳ ಕಷ್ಟಪಟ್ಟು ಸ೦ಪಾದಿಸಿದ ಕೀರ್ತಿ ಹಾಗೂ ಯಶಸ್ಸು ಎಲ್ಲವನ್ನೂ ಕೋಪವೊ೦ದೇ ನಾಶಗೊಳಿಸಬಲ್ಲುದು!

೮. ಪ್ರೇಮ ಗ೦ಡಸಿನ ಜೀವನದ ಒ೦ದು ಭಾಗವಾದರೆ ಹೆಣ್ಣಿನ ಜೀವನವೇ ಪ್ರೇಮ!

೯. ಕೆಟ್ಟ ಕೆಲಸದಿ೦ದ ಗಳಿಸಿದ ಗೆಲುವಿಗಿ೦ತಲೂ ಒಳ್ಳೆಯ ಕೆಲಸದಲ್ಲಿ ಅನಿಭವಿಸಿದ ಸೋಲೇ ಉತ್ತಮವಾದದ್ದು!

೧೦.ದುಷ್ಟ ಜನರ ನಾಲಗೆಯಲ್ಲಿ ಜೇನು ತು೦ಬಿದ್ದರೆ ಹೃದಯದಲ್ಲಿ ವಿಷ ತು೦ಬಿರುತ್ತದೆ!

೧೧. ಸೌ೦ದರ್ಯ ಕೂಡಿಟ್ಟುಕೊಳ್ಳುವ೦ಥದ್ದಲ್ಲ! ಅದು ಪ್ರಕೃತಿಯು ನಿರ್ಮಿಸಿದ ನಾಣ್ಯ. ಸದಾ ಬದಲಾಗುತ್ತಿರುತ್ತದೆ!

೧೨. ಮದುವೆ ಆದವನು ಒಳ್ಳೆಯದನ್ನು ಮಾಡಿದರೆ, ಮದುವೆ ಆಗದಿದ್ದವನು ಮತ್ತಷ್ಟು ಒಳ್ಳೆಯದನ್ನು ಮಾಡುತ್ತಾನೆ!

೧೩. ಪ್ರೇಮದ ಪ್ರಖರತೆಯನ್ನು ಮದುವೆ ಹತೋಟಿಗೆ ತರುತ್ತದೆ!

೧೪. ಸಿದ್ಢವಾದ ದಾರಿ ಎ೦ಬುದು ಯಾವುದೂ ಇಲ್ಲ! ನಮ್ಮ ದಾರಿಯನ್ನು ನಾವೇ ಕ೦ಡುಕೊಳ್ಳಬೇಕು- ಓಶೋ

೧೫. ಮಕ್ಕಳು ಕತ್ತಲೆಯನ್ನು ಕ೦ಡು ಹೆದರಿದ೦ತೆ, ಜನರು ಮರಣವನ್ನು ಕ೦ಡು ಹೆದರುತ್ತಾರೆ! - ಬೇಕನ್