" ಶ್ರೀಧರ್ ಸ್ವಾಮಿಗಳೇ , ಭಾನುವಾರ ನಮ್ಮೂರಿಗೆ ಐದು ಜನ ಮುತ್ತೈದೆಯರನ್ನು ಕರೆದುಕೊಂಡು ಬರಬೇಕು. ಅವರಿಗೆ ನಾವು ಬಾಗನ ಕೊಡಬೇಕು" ಹೀಗೆ ಕರೆಮಾಡಿದವರು ಬೇಲೂರು ಸಮೀಪದ ಆಂದಲೆ ಗ್ರಾಮದ ಕೃಷ್ಣಮೂರ್ತಿಯವರು. ಶನಿದೇವರ ದೇವಾಲಯದ ದಲಿತ ಅರ್ಚಕರು. ಊರಲ್ಲೆಲ್ಲಾ ಬಹುಪಾಲು ದಲಿತ ಬಂಧುಗಳೇ. ದುರ್ಗಾಶ್ಟಮಿ ದಿನ ಎಲ್ಲರ ಮನೆಯಲ್ಲೂ ಹಬ್ಬದಾಚರಣೆ ಮಾಡುತ್ತಾರೆ. ಐದು ಜನರನ್ನು ಒಪ್ಪಿಸುವುದು ಹೇಗೆ? ಹೋಗದಿದ್ದರೆ ಕೃಷ್ಣಮೂರ್ತಿಗಳಿಗೆ ಬೇಸರವಾಗಬಹುದು. ಹೇಗಾದರೂ ಆಗಲಿ " ಸಂಜೆ ಸತ್ಸಂಗದಲ್ಲಿ ಮಾತನಾಡಿ ಕರೆಮಾಡುತ್ತೇನೆಂದೆ. ಮೂರು ಜನ ಭಗಿನಿಯರು ಒಪ್ಪಿದರು. ಬರುತ್ತೇವೆಂದು ಹೇಳಿದೆ. ಅಗ್ನಿಹೋತ್ರವನ್ನೂ ಮಾಡುತ್ತೇವೆಂದೆ. ಅವರಿಗೆ ಆದ ಸಂತಸ ಅಷ್ಟಿಷ್ಟಲ್ಲ. ಇಂದು ನಾವು ಗ್ರಾಮವನ್ನು ತಲುಪಿದಾಗ ಊರ ಮುಂದಿನ ಶನಿದೇವರ ದೇವಾಲಯದ ಎದುರು ತಮಟೆ ಸದ್ದು ಜೋರಾಗಿತ್ತು. ಬಹಳಷ್ಟು ಜನ ಭಕ್ತರು ಸೇರಿದ್ದರು. ವೇದ ಮಂತ್ರ ಪಠಣ ಶುರುವಾಗುವುದಕ್ಕೆ ಮುಂಚೆ ಎಲ್ಲರೂ ಧೀರ್ಘವಾಗಿ ನಮ್ಮೊಡನೆ ಓಂಕಾರ ಪಠಿಸಬೇಕೆಂದು ಹೇಳಿದ್ದೆ. ಓಂಕಾರಧ್ವನಿಯು ಕಾರ್ಯಕ್ರಮದಕ್ಕೆ ನಾಂದಿಯಾಯ್ತು. ಓದು ಬಲ್ಲವರಿಗೆಲ್ಲಾ ಅಗ್ನಿಹೋತ್ರದ ಪುಸ್ತಕವನ್ನು ಕೊಟ್ಟು ನೋಡಿಕೊಳ್ಳಲು ತಿಳಿಸಿದೆ. ಅಗ್ನಿಹೋತ್ರ ಮಾಡಲು ಊರಿನ ಒಬ್ಬ ಹೆಣ್ಣುಮಗಳನ್ನೂ ಮತ್ತು ಕೃಷ್ಣ ಮೂರ್ತಿಗಳನ್ನೂ ನಮ್ಮೊಟ್ಟಿಗೆ ಕೂರಿಸಿಕೊಂಡೆ.
ಹೌದು ಅದೊಂದು ದಲಿತ ಸಮುದಾಯದ ಪವಿತ್ರ ಕ್ಷೇತ್ರ. ಬೇಲೂರು ಸಮೀಪ ಆಂದಲೆ ಗ್ರಾಮ. ವೇದಭಾರತಿಯ ಆರು ಜನ ಕಾರ್ಯಕರ್ತರಿಗೆ ಅಲ್ಲೇ ದುರ್ಗಾಷ್ಟಮಿ ಹಬ್ಬ. ಎಲ್ಲರೊಡಗೂಡಿ ಅಗ್ನಿಹೋತ್ರ ಮಾಡಿದಾಗ ಎಲ್ಲರ ಮುಖದಲ್ಲಿ ಅದೆಂತಾ ಹರ್ಷ! ವೇದಭಾರತಿಯು ಸಾಮಜಿಕ ಸಾಮರಸ್ಯದ ಬಗ್ಗೆ ಭಾಷಣ ಮಾಡುತ್ತಾ ಕುಳಿತುಕೊಳ್ಳುವುದಿಲ್ಲ. ಬದಲಿಗೆ ಅವಕಾಶ ಸಿಕ್ಕಿದ ಕಡೆಯೆಲ್ಲಾ ವೇದದ ಪ್ರಸಾರವನ್ನು ಮಾಡಲು ಹಿಂದೆ ಬೀಳುವುದಿಲ್ಲ. ಇಂದು ಜೊತೆಗಿದ್ದ ಸತೀಶ್,ರಾಜಶೇಖರ್,ಶ್ರೀಮತಿಯರಾದ ಪಾರ್ವತಿ,ಶುಭ ಮತ್ತು ಪ್ರೇಮ ಇವರ ಉತ್ಸಾಹ ಹೆಚ್ಚಿದ್ದನ್ನು ಅವರ ಮುಖಗಳೇ ಹೇಳುತ್ತಿದ್ದವು.ಸತೀಶ್ ತಮ್ಮ ಸಂತೋಶ ವ್ಯಕ್ತ ಪಡಿಸಿದ್ದು ಹೀಗೆ " ಸರ್ ಈ ಜನರ ಸಂತೋಷ ನೋಡಿ ಮೂಕನಾದೆ"