///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Saturday, September 18, 2010
ದಶಶ್ಲೋಕೀ
ಗುರ್ವಷ್ಟಕಮ್
ನಿರ್ವಾಣ ಷಟ್ಕಮ್
ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ನಿಮಗೆಲ್ಲರಿಗೂ ತಿಳಿದಿರುವಂತೆ ವೇದಾಧ್ಯಾಯೀ ಸುಧಾಕರಶರ್ಮರ ಉಪನ್ಯಾಸಗಳಿಂದ ಪ್ರೇರಿತವಾಗಿ ಸಾಮಾನ್ಯ ಜನರಿಗೆ ಸರಳ ಮಾತುಗಳಲ್ಲಿ ವೇದದ ವಿಚಾರಗಳನ್ನುತಿಳಿಸಲು "ವೇದಸುಧೆ" ಬ್ಲಾಗ್ ಆರಂಭಿಸಿದೆ. ಆದರೆ ಪ್ರಾರಂಭದ ದಿನಗಳಲ್ಲಿ ಶರ್ಮರ ವಿಪರೀತವಾದ ಪ್ರವಾಸಗಳಿಂದ ವೇದಸುಧೆಗೆ ಅವರು ಹೆಚ್ಚು ಸಮಯ ಕೊಡಲು ಸಾಧ್ಯವಾಗಲಿಲ್ಲ. ಹಾಗಾಗಿ ವೇದದ ವಿಚಾರಕ್ಕೆ ಪೂರಕವಾದ ಲೇಖನಗಳನ್ನು ವೇದಸುಧೆಯಲ್ಲಿ ಬರೆಯಲು ವೇದಸುಧೆಯ ಅಭಿಮಾನಿಗಳನ್ನೇ ಆಹ್ವಾನಿಸಲಾಯ್ತು. ನಮ್ಮ ಆಹ್ವಾನವನ್ನು ಮನ್ನಿಸಿ ಶ್ರೀ ವಿಷ್ಣುಭಟ್, ಶ್ರೀರಾಘವೇಂದ್ರ ನಾವಡ, ಶ್ರೀ ಕವಿ ನಾಗರಾಜ್,ಶ್ರೀ ಕವಿಸುರೇಶ್, ಶ್ರೀ ವಿಶಾಲ್, ಡಾ|| ಜ್ಞಾನದೇವ್,ಮತ್ತು ಶ್ರೀ ಹಂಸಾನಂದಿ ಇವರುಗಳು ಹಲವು ಲೇಖನಗಳನ್ನು ಬರೆದು ವೇದಸುಧೆಯನ್ನು ನಿರಂತರವಾಗಿ ಚಟುವಟಿಕೆಯಿಂದಿರುವಂತೆ ಸಹಕರಿಸುತ್ತಾ ಬಂದಿರುವುದು ಸಂತಸದ ಸಂಗತಿ. ಕಳೆದ ಒಂದೆರಡು ದಿನಗಳಿಂದ ಶ್ರೀ ಶರ್ಮರು ಹಾಸನ ಜಿಲ್ಲೆಯ ಬೇಲೂರು, ಹಾಸನ ಮತ್ತು ಅರಕಲಗೂಡಿನಲ್ಲಿ ಪ್ರವಾಸ ಕೈಗೊಂಡು ಹಲವು ಸತ್ಸಂಗಗಳಲ್ಲಿ ಪಾಲ್ಗೊಂಡಿರುತ್ತಾರೆ. ಅವರ ಎಲ್ಲಾ ಉಪನ್ಯಾಸಗಳನ್ನೂ ವೀಡಿಯೋ/ಆಡಿಯೋ ರೆಕಾರ್ಡ್ ಮಾಡಲಾಗಿದೆ. ಅಲ್ಲದೆ ವೇದಸುಧೆಗಾಗಿಯೇ ಹಲವು ವೀಡಿಯೋ ಕ್ಲಿಪ್ ಗಳನ್ನು ತಯಾರಿಸಲಾಗಿದೆ. ಎಲ್ಲವೂ ನಮ್ಮ ದೈನಂದಿನ ಜೀವನಕ್ಕೆ /ಆರೋಗ್ಯಕರ ಬದುಕಿಗೆ ನೆರವಾಗುವುದರಲ್ಲಿ ಸಂದೇಹವಿಲ್ಲ. ನೂರಾರು ವರ್ಷಗಳಿಂದ ನಾವು ಆಚರಿಸಿಕೊಂಡು ಬಂದಿರುವ ಹಲವು ಸಂಪ್ರದಾಯಗಳು/ಆಚರಣೆಗಳು ವೇದೋಕ್ತವಾಗಿರುವುದಿಲ್ಲವಷ್ಟೇ ಅಲ್ಲ , ನಮ್ಮ ಆಚರಣೆಗಳಲ್ಲಿ ಹಲವು ಆಚರಣೆಗಳು ಅಂಧಾನುಕರಣೆಗಳೇ ಆಗಿವೆ. ಸತ್ಯಾನ್ವೇಶಿಯಾದ ಶ್ರೀ ಶರ್ಮರು ವೇದದ ಆಧಾರವಿಲ್ಲದ ಆಚರಣೆಗಳನ್ನು ಖಂಡಿಸುತ್ತಾರಾದ್ದರಿಂದ ನಮಗೆ ಕಸಿವಿಸಿಯಾಗದಿರದು. ಆದರೆ ಅವರ ಪೂರ್ಣ ಉಪನ್ಯಾಸಗಳನ್ನು ತಾಳ್ಮೆಯಿಂದ ಕೇಳಿದವರಿಗೆ ಒಂದು ಹೊಸ ಹೊಳಹು ಸಿಗುವುದರಲ್ಲಿ ಸಂಶಯವಿಲ್ಲ. ಇಡೀ ಮನುಕುಲದ ಒಳಿತಿಗಾಗಿ ಇರುವ ವೇದವನ್ನು ಎಲ್ಲರಿಗೂ ತಲುಪಿಸುವಲ್ಲಿ ಯಾಕೋ ನಮ್ಮ ವೇದ ಪಂಡಿತರು ಸೋತಿದ್ದಾರೆ. ಆ ಕೆಲಸವನ್ನು ತಮ್ಮ ಶಕ್ತಿ ಮೀರಿ ಮಾಡುತ್ತಿರುವವರಲ್ಲಿ ನಮಗೆ ಶರ್ಮರು ಪ್ರಮುಖವಾಗಿ ಕಾಣುತ್ತಾರೆ. ಅವರ ನಿತ್ಯ ಬದುಕು ನೋಡಿದವರಿಗೆ ಅವರಂತಿರಬೇಕೆನಿಸುತ್ತದೆ. ಆದ್ದರಿಂದ ವೇದಸುಧೆಯು ತನ್ನ ಅಭಿಮಾನಿಗಳಿಗೆ ಇನ್ನು ಮುಂದೆ ವಾರದಲ್ಲಿ ಎರಡುದಿನಗಳು [ಪ್ರತಿ ಮಂಗಳವಾರ ಮತ್ತು ಶುಕ್ರವಾರ] ವೇದದ ವಿಚಾರಗಳನ್ನು ಶರ್ಮರ ಸರಳ ಮಾತುಗಳಲ್ಲಿ ಕೇಳಲು ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಸಧ್ಯಕ್ಕೆ ಒಂದೆರಡು ತಿಂಗಳುಗಳಿಗಾಗುವಷ್ಟು ಸಾಮಗ್ರಿಯನ್ನು ಶರ್ಮರು ಒದಗಿಸಿರುತ್ತಾರೆ. ಅದು ಮುಗಿಯುವುದರೊಳಗಾಗಿ ವೇದಸುಧೆಯು ಪುನ: ಶರ್ಮರ ಬೆನ್ನು ಹತ್ತಿ ಮತ್ತಷ್ಟು ಸರಕು ಸಂಪಾದಿಸಿ ವೇದಸುಧೆಯಲ್ಲಿ ನೀಡುವ ಭರವಸೆಯನ್ನು ನೀಡುತ್ತದೆ. ವೇದಸುಧೆಯಲ್ಲಿ ಬರೆಯುವ ನಮ್ಮ ಬಳಗದ ಮಿತ್ರರು ಮಂಗಳವಾರ ಮತ್ತು ಶುಕ್ರವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ನಿಮ್ಮ ಲೇಖನಗಳನ್ನು ವೇದಸುಧೆಯ ಅಭಿಮಾನಿಗಳಿಗೆ ನೀಡಬೇಕೆಂದು ವೇದಸುಧೆಯು ವಿನಂತಿಸುತ್ತದೆ. ಅಲ್ಲದೆ ಶರ್ಮರ ಉಪನ್ಯಾಸಗಳನ್ನು ತಾಳ್ಮೆಯಿಂದ ಕೇಳಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಸಂದೇಹಗಳಿದ್ದರೆ ಶರ್ಮರಿಂದ ಸಮಾಧಾನವನ್ನು ಪಡೆಯಬಹುದಾಗಿಗೆ ಎಂದು ತಿಳಿಸ ಬಯಸುತ್ತದೆ. ಪುಂಸವನ ಉಪನ್ಯಾಸದ ಬಗ್ಗೆ ಶ್ರೀಯುತ ಕವಿ ಸುರೇಶ್ ಮತ್ತು ಶ್ರೀ ವಿಶಾಲ್ ಆರೋಗ್ಯಕರ ಚರ್ಚೆ ಮಾಡುತ್ತಾ ವೇದಸುಧೆಯ ಘನತೆಯನ್ನು ಹೆಚ್ಚಿಸಿರುತ್ತಾರೆ. ಹೀಗೆಯೇ ವೇದಸುಧೆಯಲ್ಲಿ ಆರೋಗ್ಯಕರ ಚರ್ಚೆಗಳು ನಡೆದು ಒಂದಿಷ್ಟು ಸದ್ವಿಚಾರಗಳು ಎಲ್ಲರಿಗೂ ತಲುಪುವಂತಾಗಲಿ. ಮುಂದಿನ ಏಪ್ರಿಲ್ ಮಾಹೆಯಲ್ಲಿ ವೇದೋಕ್ತ ಜೀವನ ಪಥ ಕಾರ್ಯಗಾರ ಒಂದನ್ನು ಹಾಸನ ಜಿಲ್ಲೆಯ ಕಾವೇರಿ ನದಿ ದಂಡೆಯ ಅಥವಾ ಹೇಮಾವತಿ ದಂಡೆಯ ಪ್ರಕೃತಿ ಮಡಿಲಲ್ಲಿ ಆಯೋಜಿಸಲು ಚಿಂತನೆ ನಡೆದಿದೆ. ಎಲ್ಲರಿಗೂ ಅದಕ್ಕೆ ಮುಕ್ತ ಆಹ್ವಾನವಿದೆ. ಎಂದಿನನಂತೆ ಸಹಕಾರವನ್ನು ಕೋರುತ್ತಾ, ವಂದನೆಗಳೊಂದಿಗೆ,
-ಹರಿಹರಪುರಶ್ರೀಧರ್ನಿಮಗೆಲ್ಲರಿಗೂ ತಿಳಿದಿರುವಂತೆ ವೇದಾಧ್ಯಾಯೀ ಸುಧಾಕರಶರ್ಮರ ಉಪನ್ಯಾಸಗಳಿಂದ ಪ್ರೇರಿತವಾಗಿ ಸಾಮಾನ್ಯ ಜನರಿಗೆ ಸರಳ ಮಾತುಗಳಲ್ಲಿ ವೇದದ ವಿಚಾರಗಳನ್ನುತಿಳಿಸಲು "ವೇದಸುಧೆ" ಬ್ಲಾಗ್ ಆರಂಭಿಸಿದೆ. ಆದರೆ ಪ್ರಾರಂಭದ ದಿನಗಳಲ್ಲಿ ಶರ್ಮರ ವಿಪರೀತವಾದ ಪ್ರವಾಸಗಳಿಂದ ವೇದಸುಧೆಗೆ ಅವರು ಹೆಚ್ಚು ಸಮಯ ಕೊಡಲು ಸಾಧ್ಯವಾಗಲಿಲ್ಲ. ಹಾಗಾಗಿ ವೇದದ ವಿಚಾರಕ್ಕೆ ಪೂರಕವಾದ ಲೇಖನಗಳನ್ನು ವೇದಸುಧೆಯಲ್ಲಿ ಬರೆಯಲು ವೇದಸುಧೆಯ ಅಭಿಮಾನಿಗಳನ್ನೇ ಆಹ್ವಾನಿಸಲಾಯ್ತು. ನಮ್ಮ ಆಹ್ವಾನವನ್ನು ಮನ್ನಿಸಿ ಶ್ರೀ ವಿಷ್ಣುಭಟ್, ಶ್ರೀರಾಘವೇಂದ್ರ ನಾವಡ, ಶ್ರೀ ಕವಿ ನಾಗರಾಜ್,ಶ್ರೀ ಕವಿಸುರೇಶ್, ಶ್ರೀ ವಿಶಾಲ್, ಡಾ|| ಜ್ಞಾನದೇವ್,ಮತ್ತು ಶ್ರೀ ಹಂಸಾನಂದಿ ಇವರುಗಳು ಹಲವು ಲೇಖನಗಳನ್ನು ಬರೆದು ವೇದಸುಧೆಯನ್ನು ನಿರಂತರವಾಗಿ ಚಟುವಟಿಕೆಯಿಂದಿರುವಂತೆ ಸಹಕರಿಸುತ್ತಾ ಬಂದಿರುವುದು ಸಂತಸದ ಸಂಗತಿ. ಕಳೆದ ಒಂದೆರಡು ದಿನಗಳಿಂದ ಶ್ರೀ ಶರ್ಮರು ಹಾಸನ ಜಿಲ್ಲೆಯ ಬೇಲೂರು, ಹಾಸನ ಮತ್ತು ಅರಕಲಗೂಡಿನಲ್ಲಿ ಪ್ರವಾಸ ಕೈಗೊಂಡು ಹಲವು ಸತ್ಸಂಗಗಳಲ್ಲಿ ಪಾಲ್ಗೊಂಡಿರುತ್ತಾರೆ. ಅವರ ಎಲ್ಲಾ ಉಪನ್ಯಾಸಗಳನ್ನೂ ವೀಡಿಯೋ/ಆಡಿಯೋ ರೆಕಾರ್ಡ್ ಮಾಡಲಾಗಿದೆ. ಅಲ್ಲದೆ ವೇದಸುಧೆಗಾಗಿಯೇ ಹಲವು ವೀಡಿಯೋ ಕ್ಲಿಪ್ ಗಳನ್ನು ತಯಾರಿಸಲಾಗಿದೆ. ಎಲ್ಲವೂ ನಮ್ಮ ದೈನಂದಿನ ಜೀವನಕ್ಕೆ /ಆರೋಗ್ಯಕರ ಬದುಕಿಗೆ ನೆರವಾಗುವುದರಲ್ಲಿ ಸಂದೇಹವಿಲ್ಲ. ನೂರಾರು ವರ್ಷಗಳಿಂದ ನಾವು ಆಚರಿಸಿಕೊಂಡು ಬಂದಿರುವ ಹಲವು ಸಂಪ್ರದಾಯಗಳು/ಆಚರಣೆಗಳು ವೇದೋಕ್ತವಾಗಿರುವುದಿಲ್ಲವಷ್ಟೇ ಅಲ್ಲ , ನಮ್ಮ ಆಚರಣೆಗಳಲ್ಲಿ ಹಲವು ಆಚರಣೆಗಳು ಅಂಧಾನುಕರಣೆಗಳೇ ಆಗಿವೆ. ಸತ್ಯಾನ್ವೇಶಿಯಾದ ಶ್ರೀ ಶರ್ಮರು ವೇದದ ಆಧಾರವಿಲ್ಲದ ಆಚರಣೆಗಳನ್ನು ಖಂಡಿಸುತ್ತಾರಾದ್ದರಿಂದ ನಮಗೆ ಕಸಿವಿಸಿಯಾಗದಿರದು. ಆದರೆ ಅವರ ಪೂರ್ಣ ಉಪನ್ಯಾಸಗಳನ್ನು ತಾಳ್ಮೆಯಿಂದ ಕೇಳಿದವರಿಗೆ ಒಂದು ಹೊಸ ಹೊಳಹು ಸಿಗುವುದರಲ್ಲಿ ಸಂಶಯವಿಲ್ಲ. ಇಡೀ ಮನುಕುಲದ ಒಳಿತಿಗಾಗಿ ಇರುವ ವೇದವನ್ನು ಎಲ್ಲರಿಗೂ ತಲುಪಿಸುವಲ್ಲಿ ಯಾಕೋ ನಮ್ಮ ವೇದ ಪಂಡಿತರು ಸೋತಿದ್ದಾರೆ. ಆ ಕೆಲಸವನ್ನು ತಮ್ಮ ಶಕ್ತಿ ಮೀರಿ ಮಾಡುತ್ತಿರುವವರಲ್ಲಿ ನಮಗೆ ಶರ್ಮರು ಪ್ರಮುಖವಾಗಿ ಕಾಣುತ್ತಾರೆ. ಅವರ ನಿತ್ಯ ಬದುಕು ನೋಡಿದವರಿಗೆ ಅವರಂತಿರಬೇಕೆನಿಸುತ್ತದೆ. ಆದ್ದರಿಂದ ವೇದಸುಧೆಯು ತನ್ನ ಅಭಿಮಾನಿಗಳಿಗೆ ಇನ್ನು ಮುಂದೆ ವಾರದಲ್ಲಿ ಎರಡುದಿನಗಳು [ಪ್ರತಿ ಮಂಗಳವಾರ ಮತ್ತು ಶುಕ್ರವಾರ] ವೇದದ ವಿಚಾರಗಳನ್ನು ಶರ್ಮರ ಸರಳ ಮಾತುಗಳಲ್ಲಿ ಕೇಳಲು ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಸಧ್ಯಕ್ಕೆ ಒಂದೆರಡು ತಿಂಗಳುಗಳಿಗಾಗುವಷ್ಟು ಸಾಮಗ್ರಿಯನ್ನು ಶರ್ಮರು ಒದಗಿಸಿರುತ್ತಾರೆ. ಅದು ಮುಗಿಯುವುದರೊಳಗಾಗಿ ವೇದಸುಧೆಯು ಪುನ: ಶರ್ಮರ ಬೆನ್ನು ಹತ್ತಿ ಮತ್ತಷ್ಟು ಸರಕು ಸಂಪಾದಿಸಿ ವೇದಸುಧೆಯಲ್ಲಿ ನೀಡುವ ಭರವಸೆಯನ್ನು ನೀಡುತ್ತದೆ. ವೇದಸುಧೆಯಲ್ಲಿ ಬರೆಯುವ ನಮ್ಮ ಬಳಗದ ಮಿತ್ರರು ಮಂಗಳವಾರ ಮತ್ತು ಶುಕ್ರವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ನಿಮ್ಮ ಲೇಖನಗಳನ್ನು ವೇದಸುಧೆಯ ಅಭಿಮಾನಿಗಳಿಗೆ ನೀಡಬೇಕೆಂದು ವೇದಸುಧೆಯು ವಿನಂತಿಸುತ್ತದೆ. ಅಲ್ಲದೆ ಶರ್ಮರ ಉಪನ್ಯಾಸಗಳನ್ನು ತಾಳ್ಮೆಯಿಂದ ಕೇಳಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಸಂದೇಹಗಳಿದ್ದರೆ ಶರ್ಮರಿಂದ ಸಮಾಧಾನವನ್ನು ಪಡೆಯಬಹುದಾಗಿಗೆ ಎಂದು ತಿಳಿಸ ಬಯಸುತ್ತದೆ. ಪುಂಸವನ ಉಪನ್ಯಾಸದ ಬಗ್ಗೆ ಶ್ರೀಯುತ ಕವಿ ಸುರೇಶ್ ಮತ್ತು ಶ್ರೀ ವಿಶಾಲ್ ಆರೋಗ್ಯಕರ ಚರ್ಚೆ ಮಾಡುತ್ತಾ ವೇದಸುಧೆಯ ಘನತೆಯನ್ನು ಹೆಚ್ಚಿಸಿರುತ್ತಾರೆ. ಹೀಗೆಯೇ ವೇದಸುಧೆಯಲ್ಲಿ ಆರೋಗ್ಯಕರ ಚರ್ಚೆಗಳು ನಡೆದು ಒಂದಿಷ್ಟು ಸದ್ವಿಚಾರಗಳು ಎಲ್ಲರಿಗೂ ತಲುಪುವಂತಾಗಲಿ. ಮುಂದಿನ ಏಪ್ರಿಲ್ ಮಾಹೆಯಲ್ಲಿ ವೇದೋಕ್ತ ಜೀವನ ಪಥ ಕಾರ್ಯಗಾರ ಒಂದನ್ನು ಹಾಸನ ಜಿಲ್ಲೆಯ ಕಾವೇರಿ ನದಿ ದಂಡೆಯ ಅಥವಾ ಹೇಮಾವತಿ ದಂಡೆಯ ಪ್ರಕೃತಿ ಮಡಿಲಲ್ಲಿ ಆಯೋಜಿಸಲು ಚಿಂತನೆ ನಡೆದಿದೆ. ಎಲ್ಲರಿಗೂ ಅದಕ್ಕೆ ಮುಕ್ತ ಆಹ್ವಾನವಿದೆ. ಎಂದಿನನಂತೆ ಸಹಕಾರವನ್ನು ಕೋರುತ್ತಾ, ವಂದನೆಗಳೊಂದಿಗೆ,
ನಿರ್ವಾಹಕ
Friday, September 17, 2010
ಸೂತಕ- ಹಾಗೆಂದರೇನು?
ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಇಂದು ನಡೆದ ಒಂದು ಸತ್ಸಂಗದಲ್ಲಿ ಪಾಲ್ಗೊಂಡಿದ್ದವರ ಅನೇಕ ಪ್ರಶ್ನೆಗಳಿಗೆ ಶ್ರೀ ಸುಧಾಕರಶರ್ಮರು ಉತ್ತರಿಸಿದರು.ಸುಮಾರು ಎರಡು ಗಂಟೆಗಳು ನಡೆದ ಸತ್ಸಂಗದಲ್ಲಿ ಶ್ರೀ ಶರ್ಮರು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಒಂದು ವಿಷಯದ ಆಡಿಯೋ ಇಲ್ಲಿದೆ. ಇನ್ನು ಮುಂದೆ ವಾರದಲ್ಲಿ ಎರಡು ದಿನ ಶರ್ಮರ ಮಾತುಗಳನ್ನು ಇಲ್ಲಿ ಕೇಳಬಹುದು.
ಎಲೆ ಮಾರೆ ಕಾಯಿಗಳು ಎಷ್ಟಿವೆಯೋ?
ಒಂದೇ ಮಾತಲ್ಲಿ ಹೇಳಬೇಕೂಂದ್ರೆ " ಸಾಹಿತ್ಯ ಕ್ಷೇತ್ರದಲ್ಲಿ ಎಲೆ ಮಾರೆ ಕಾಯಿಗಳು ಎಷ್ಟಿವೆಯೋ? ಬಲ್ಲವರಾರು? ಅದರಲ್ಲಿ ಹಾಸನದ ಸುದಾರ್ಥಿ ಒಬ್ಬರೆನ್ನುವುದರಲ್ಲಿ ಎರಡು ಮಾತಿಲ್ಲ.ಅವರ ನಾಲ್ಕು ದಶಕಗಳ ಸಾಹಿತ್ಯ ಕೃಷಿ ಕಂಡು ಬೆರಗಾದೆ.ಅವರ ಬಗ್ಗೆ ಬರೆಯಲು ಮಿತ್ರ ನಾಗರಾಜರನ್ನು ಕೋಳಿಕೊಳ್ಳುವೆ. ಸಧ್ಯಕ್ಕೆ ಅವರ ಸಂದರ್ಶನದ ಒಂದು ತುಂಡು ಈಗ ನೋಡಿ. ಇನ್ನೂ ಬಹಳ ಇದೆ...ವರ್ಷವೆಲ್ಲಾ ಬರೆಯುವಷ್ಟು [ಗಡಿಬಿಡಿಯಲ್ಲಿ ಆಫೀಸಿಗೆ ಹೊರಟು ನಿಂತಿದ್ದರೂ ಒಂದು ತುಣುಕು ಬ್ಲಾಗಿಗೆ ಪೇರಿಸಿಯೇ ಹೊರಡಬೇಕೆಂಬ ಆಸೆಯಿಂದ ಒಂದು ಕ್ಲಿಪ್ ಹಾಕಿರುವೆ]
Thursday, September 16, 2010
ಬೆಲಗೂರಿನಲ್ಲಿ ನಡೆದ ಶ್ರೀ ಮಹಾಸುದರ್ಶನ ಮತ್ತು ಶ್ರೀ ಮಹಾ ಲಕ್ಷ್ಮೀ ಯಾಗ
ಇತ್ತೀಚೆಗಷ್ಟೇ ಹೊಸದುರ್ಗ ತಾಲೂಕಿನ ಬೆಲಗೂರಿನಲ್ಲಿ ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿಗಳ ನೇತೃತ್ವದಲ್ಲಿ ಸುಮಾರು 8 ದಿನಗಳ ಕಾಲ ಅನೇಕ ಹೋಮ-ಯಾಗಗಳ ನಡುವೆ ಪ್ರಮುಖವಾಗಿ ಶ್ರೀ ಮಹಾಲಕ್ಷ್ಮೀ ಯಾಗ ಬಹು ವಿಜೃಂಭಣೆಯಿಂದ, ವಿಧಿವತ್ತಾಗಿ ನಡೆಯಿತು. ಆಗ ತೆಗೆದ ಕೆಲವು ಚಿತ್ರಗಳನ್ನು ಆಸಕ್ತರಿಗೆ ಇಲ್ಲಿ ಕೊಡಲಾಗಿದೆ. ಪ್ರಾರಂಭದ ದಿನ ಉತ್ಸವ ಮೂರ್ತಿಯ ಮೆರವಣಿಗೆಯ ಜೊತೆಗೆ "ವೇದೋತ್ಸವ" ವನ್ನೂ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರದಲ್ಲಿ ಚತುರ್ವೇದ ಸಂಹಿತಾ ಯಾಗಗಳನ್ನೂ ನಡೆಸಲಾಯಿತು. ವೇದಕ್ಕೆ ಸಂಬಂಧಪಟ್ಟ ಮತ್ತು ಶಾಸ್ತ್ರ ಪುರಾಣಗಳಿಗೆ ಸಂಬಂಧಪಟ್ಟ ಪವಿತ್ರ ಗ್ರಂಥಗಳನ್ನು ಸಾಲಂಕೃತ ರಥದ ಮೇಲೆ ಇರಿಸಿ ಸುಮಾರು 300ಕ್ಕೂ ಹೆಚ್ಚು ಋತ್ವಿಜರ ವೇದಘೋಷದೊಂದಿಗೆ ಸಾವಿರಾರು ಮಂದಿ ಭಕ್ತರೊಂದಿಗೆ ಊರಿನ ಪ್ರಮುಖ ಬೀದಿಗಳನ್ನು ಸಾಗಿದ್ದು ಬಹುಶ: ಇದೇ ಪ್ರಥಮವಿರಬಹುದು. ಮುಂಚೂಣಿಯಲ್ಲಿ 2 ಅಲಂಕೃತಗೊಂಡ ಆನೆಗಳು, ಅದರ ಹಿಂದೆ ಸಾಲಂಕೃತಗೊಂಡ ಅಶ್ವಗಳು, ಅದರ ಹಿಂದೆ ಗೋವುಗಳು, ಋತ್ವಿಜರು, ಭಕ್ತರು ಮತ್ತು ಸಮವಸ್ತ್ರ ಧರಿಸಿದ ಶಾಲಾ ಮಕ್ಕಳುಗಳು ಉತ್ಸವಕ್ಕೆ ಕಳೆ ಕಟ್ಟಿದ್ದವು. 8 ದಿನಗಳ ಈ ಕಾಲಾವಧಿಯಲ್ಲಿ ಸುಮಾರು 3 ಲಕ್ಷ್ಕ್ಕೂ ಅಧಿಕ ಮಂದಿ ಭಕ್ತರು ಇಲ್ಲಿಗೆ ಬಂದಿದ್ದು, ಸರ್ವರಿಗೂ ಸದಾಕಾಲ ಪಾನೀಯ, ಉಪಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಸ್ವಾಮೀಜಿಯವರು 2-3 ದಿನ ಕ್ಷೇತ್ರಕ್ಕೆ ಬಂದ ಎಲ್ಲ ಸುಮಂಗಲಿಯರಿಗೆ (ಯಾವುದೇ ಭೇದ-ಭಾವವಿಲ್ಲದೆ) ಸೀರೆಗಳನ್ನು ಮತ್ತು ಮಂಗಳದ್ರವ್ಯಗಳನ್ನು ಆಶೀರ್ವಾದಪೂರ್ವಕವಾಗಿ ನೀಡಿದಾಗ ಅಲ್ಲಿ ಒಂದು ಜಾತ್ರೆಯೇ ನೆರೆದಂತಿತ್ತು. ಕ್ಷೇತ್ರಕ್ಕೆ ಹೆಬ್ಬಳ್ಳಿಯ ಶ್ರೀ ದತ್ತಾವಧೂತರು ಭೇಟಿ ನೀಡಿದ್ದು ಮತ್ತು ಅವರಿಗೆ ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿಯವರು ಪಾದಪೂಜೆ ಮಾಡಿದ್ದು ಎಲ್ಲರಿಗೂ ಅವಿಸ್ಮರಣೀಯ ಅನುಭವವಾಯಿತು.
ಇಲ್ಲಿ ಭಕ್ತಾದಿಗಳು ನೀಡುವ ದಾನಧರ್ಮಗಳು, ನಡೆವ ದಾರ್ಮಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ನೋಡಿದಾಗ, ಅನೇಕ ವಿಚಾರಗಳ ಬಗ್ಗೆ ನಮ್ಮನ್ನೇ ನಾವು ಬಲು ದೊಡ್ಡವರೆಂದು ಭಾವಿಸಿದ ನಮಗೆ, ನಮ್ಮ ಕುಬ್ಜತನದ ಅರಿವು ಉಂಟಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿನ ಬಹುತೇಕ ಎಲ್ಲ ದಾನಿಗಳೂ ಅನಾಮಧೇಯರು. ಎಷ್ಟು ಅನುಕರಣೀಯ ನಡತೆ ಅಲ್ಲವೇ? ಇಲ್ಲಿ ನಡೆವ ಬೃಹತ್ ಕಾರ್ಯಗಳೂ ಕೂಡ ಎಷ್ಟು ಸುಲಭವಾಗಿ ನಡೆಯುತ್ತವೆ ಎಂದರೆ ಅದು ಒಂದು ಅಲೌಕಿಕ ಶಕ್ತಿಯ ಪವಾಡವೇ ಸರಿ. ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯ ಮತ್ತು ಶ್ರೀ ಗುರೂಜಿಗಳ ಕೃಪೆ ಎಲ್ಲರ ಮೇಲಿರಲಿ ಎಂಬ ಆಶಯದೊಂದಿಗೆ.
Subscribe to:
Posts (Atom)