Pages

Thursday, July 25, 2013

Wednesday, July 24, 2013

ವೇದೋಕ್ತ ಜೀವನ ಶಿಬಿರ

ವೇದಭಾರತೀ, ಹಾಸನ

ವೇದೋಕ್ತ ಜೀವನ ಶಿಬಿರ

ಆಗಸ್ಟ್ 23,24 ಮತ್ತು 25

* ಹೊರ ಊರಿನಿಂದ ಶಿಬಿರ ಶುಲ್ಕ ಪಾವತಿಸಿರುವವರು 
1. ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2. ಸುಹಾಸ್ ದೇಶಪಾಂಡೆ,ಬೆಂಗಳೂರು
3. ಸುಬ್ರಹ್ಮಣ್ಯ, ಬೆಂಗಳೂರು
4. ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
5. ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
6. ಗಿರೀಶ್ ನಾಗಭೂಷಣ್, ಬೆಂಗಳೂರು
7. ವಿಶ್ವನಾಥ್ ಕಿಣಿ-ಪುಣೆ 
* ಹೊರ ಊರಿನಿಂದ  ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
1.ಕೆ.ಜಿ.ಕಾರ್ನಾಡ್,ತುಮಕೂರು.
2. ಮೋಹನ್ ಕುಮಾರ್, ನಂಜನ ಗೂಡು
3.ಗುರುಪ್ರಸಾದ್, ಭದ್ರಾವತಿ
4. ಮಹೇಶ್, ಭದ್ರಾವತಿ
5. ಶಿವಕುಮಾರ್, ಬೆಂಗಳೂರು
6. ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ
7. ವಿನಯ್ ಕಾಶ್ಯಪ್, ಬೆಂಗಳೂರು
8 .ಶರಣಪ್ಪ, ಗದಗ್
9. ವಿಜಯ್ ಹೆರಗು, ಬೆಗಳೂರು
10. ಸುಬ್ರಹ್ಮಣ್ಯ ಹೆಚ್.ಎಸ್ , ಹಳೆಬೀಡು
ಹಾಸನ ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
1. ಕವಿ ನಾಗರಾಜ್
2. ಶ್ರೀನಿವಾಸ್, AIR
3. ಹರಿಹರಪುರಶ್ರೀಧರ್
4. ಶ್ರೀ ಹರ್ಷ
5. ಚಿನ್ನಪ್ಪ
6. ಅಶೋಕ್
7. ನಟರಾಜ್ ಪಂಡಿತ್
8. ಶ್ರೀ ನಾಥ್        
9. ಸತೀಶ್
10.ಲೋಕೇಶ್
11.ಆದಿಶೇಷ್
12.ಕೇಶವಮೂರ್ತಿ
13.ಬೈರಪ್ಪಾಜಿ,
14. ಕೇಶವ ಮೂರ್ತಿ
15. ಪ್ರೇಮಾ ಭಗಿನಿ 

ಶಿಬಿರಶುಲ್ಕವನ್ನು ಈಗಾಗಲೇ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಶುಲ್ಕ ಪಾವತಿಸಿರುವವರ ಪಟ್ಟಿಯಲ್ಲಿ ಹೆಸರು ಸೇರಿರದಿದ್ದಲ್ಲಿ ನೀವು ಶುಲ್ಕ ಪಾವತಿಸಿರುವ ಲಭ್ಯ ವಿವರವನ್ನು vedasudhe@gmail.com ಗೆ ಮೇಲ್ ಮೂಲಕ ತಿಳಿಸಲು ವಿನಂತಿಸುವೆ. 

ಒಟ್ಟು 40 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ಹೊರ ಊರುಗಳಿಂದ 15 ಜನರಿಗೆ ಮತ್ತು ಹಾಸನ ಜಿಲ್ಲೆಯಿಂದ 25 ಸಂಖ್ಯೆಗೆ ಮಿತಿಗೊಳಿಸಲಾಗುವುದು. 

Tuesday, July 23, 2013

ಗೀತಾ ಜ್ಞಾನಯಜ್ಞ


ವೇದಭಾರತಿಯಿಂದ ಗುರುಪೂರ್ಣಿಮಾ ಆಚರಣೆ


ಕಳೆದ ವರ್ಷ ಆಗಸ್ಟ್ 19ಕ್ಕೆ ಆರಂಭವಾದ "ಎಲ್ಲರಿಗಾಗಿ ವೇದ" ಸಾಪ್ತಾಹಿಕ ವೇದಪಾಠವು ಕೆಲವೇ ದಿನಗಳಲ್ಲಿ ನಿತ್ಯವೇದಪಾಠವಾಗಿ ಮುಂದುವರೆಯಿತು.ಕಳೆದ ಹನ್ನೊಂದು ತಿಂಗಳಲ್ಲಿ ಸ್ವರಗಳ ಪರಿಚಯದ ಜೊತೆಗೆ ಈಶ್ವರಸ್ತುತಿ ಪ್ರಾರ್ಥನಾ ಮಂತ್ರಗಳು,ಹಾಗೂ ಆರೇಳು ಸೂಕ್ತಗಳನ್ನು ಗುರುಗಳು ಕಲಿಸಿಕೊಟ್ಟಿದ್ದಾರೆ. ಬೇಲೂರಿನ ವೇದಾಧ್ಯಾಯೀ ಶ್ರೀವಿಶ್ವನಾಥಶರ್ಮರು ಹಾಕಿದ ಭದ್ರ ಬುನಾದಿಯಮೇಲೆ ಚನ್ನರಾಯಪಟ್ಟಣದ ವೇದಾಧ್ಯಾಯೀ ಶ್ರೀಪ್ರಸಾದ್ ಮತ್ತು ಹಾಸನದ ಶ್ರೀ ಅನಂತನಾರಾಯಣರು ವೇದಪಾಠವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ.ಸಾಪ್ತಾಹಿಕ ಪಾಠನಡೆಯುವಾಗ ವಿಶ್ವನಾಥಶರ್ಮರು ಅಥವಾ ಪ್ರಸಾದ್ ಪಾಠವನ್ನು ನಡೆಸಿಕೊಂಡುಹೋಗುತ್ತಿದ್ದರು. ಆನಂತರ ಹಾಸನದವರೇ ಆದ ಮಿತ್ರ ಅನಂತನಾರಯಣರು ನಿತ್ಯವೂ ವೇದಪಾಠವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸಹಜವಾಗಿ ಗುರುಪೂರ್ಣಿಮಾ ದಿನವು ಹತ್ತಿರವಾಗುತ್ತಿದ್ದಂತೆ ಎಲ್ಲಾ ಸದಸ್ಯರಿಗೂ ಗುರುಪೂಜಾ ಕಾರ್ಯಕ್ರಮವನ್ನು ಮಾಡುವ ತವಕ.ಗುರುಪೂರ್ಣಿಮೆಯ ದಿನವೇ ಮೂರೂ ಜನ ಗುರುಗಳನ್ನು ಕರೆದು ಅವರ ಮಾತುಗಳನ್ನು ಕೇಳುವ ಹಂಬಲ. ಎಲ್ಲರನ್ನೂ ಆಹ್ವಾನಿಸಿದೆವು.  ಕಾರ್ಯಕ್ರಮಕ್ಕೆ ವೇದ ಕಲಿಯುವ ಎಲ್ಲರೂ ಹಾಜರ್. ಆದರೆ ಒಬ್ಬರು ಮಾತ್ರ ಗುರುಗಳು ಬರಬೇಕಾಗಿದ್ದವರು ಅವರೂ ಬೇರೊಂದು ಕಾರ್ಯಕ್ರಮ ನಿಮಿತ್ತ ಬರಲಾಗಲಿಲ್ಲ.ಇಬ್ಬರು ಗುರುಗಳು ಮೊದಲೇ ತಾವು ಬರಲು ಸಮಯಾವಕಾಶವಿಲ್ಲವೆಂದು ಹೇಳಿದ್ದರು.ಸರಿ ಕಾರ್ಯಕ್ರಮ ಮಾಡಲು ಸಂಕಲ್ಪಿಸಿದ್ದಾಗಿದೆ. ಕವಿನಾಗರಾಜರೊಡನೆ ಚರ್ಚಿಸಿ ಒಂದು ಸ್ವರೂಪ ನೀಡಿದ್ದಾಯ್ತು. ಮೊದಲು ಸಾಂಗವಾಗಿ ಅಗ್ನಿಹೋತ್ರ ನಡೆಯಿತು. ಎಲ್ಲರೂ ಚೆನ್ನಾಗಿಯೇ ಈಶ್ವರಸ್ತುತಿಪ್ರಾರ್ಥನಾ ಮಂತ್ರವನ್ನು ಪಠಿಸಿ ನಂತರ ಅಗ್ನಿಹೋತ್ರ ಮಂತ್ರವನ್ನು ಸಾಮೂಹಿಕವಾಗಿಯೇ ಪಠಿಸಿದರು. ಅಗ್ನಿಹೋತ್ರವು ಸೊಗಸಾಗಿ ಸಂಪನ್ನಗೊಂಡಿತು.
ನಂತರ ಗುರುಪೂಜಾ ಕಾರ್ಯಕ್ರಮ. ಯಾವ ಗುರುವನ್ನು ಪೂಜಿಸುವುದು. ಗುರು ವ್ಯಕ್ತಿಯಾದರೆ ಶಾಶ್ವತನಲ್ಲ. ಹಾಗಾಗಿ ತತ್ವವನ್ನೇ ಆಯ್ದುಕೊಂಡೆವು. ನಮ್ಮೆಲ್ಲರಿಗೂ ಮಹಾನ್ ಗುರು ಭಗವಂತನೇ. ಅವನ ನುಡಿಯೇ ವೇದ. ವೇದವೇ ನಮಗೆ ಗುರು. ವೇದವನ್ನು ಪೂಜಿಸುವುದೆಂದರೆ ವೇದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು, ಬೇರೆಯವರಿಗೂ ಜ್ಞಾನವನ್ನು ನೀಡುವುದು. ಈ ಸ್ಪಷ್ಟವಿಚಾರವನ್ನು ಮನಸ್ಸಿನಲ್ಲಿ ಸಂಕಲ್ಪಿಸಿ ಸಾಂಕೇತಿಕ ವಾಗಿ ವೇದಭಾಷ್ಯ ಗ್ರಂಥವನ್ನೇ ಅರ್ಚಿಸಿದೆವು.[ ವೇದದಲ್ಲಿ ಹೂ ಅರ್ಚಿಸುವ ಪದ್ದತಿ ಎಲ್ಲಾ ಇಲ್ಲವೆಂದು ನನ್ನ ಅನಿಸಿಕೆ. ಆದರೆ ಸಾಂಕೇತಿಕವಾಗಿ ಮನದಲ್ಲಿ ವಿಚಾರವನ್ನು ಸಂಕಲ್ಪಿಸಿಕೊಂಡೇ ಮಾಡಿದೆವು] ಈ ವಿಚಾರಕ್ಕಾಗಿ ನನ್ನ ದುಡಿಮೆಯ ಒಂದು ಭಾಗವನ್ನು ಸಮರ್ಪಿಸುವುದು. ಎಲ್ಲರೂ ಈ ವಿವರಣೆ ಪಡೆದು ಅದರಂತೆ ಗುರುಪೂಜಾ ನಡೆಯಿತು. ನಂತರ ಎಲ್ಲಾ ಸದಸ್ಯರೂ ತಮ್ಮ ತಮ್ಮ ವಿಚಾರ ಹಂಚಿಕೊಂಡರು. ಆರಂಭದಲ್ಲಿ ರೆಕಾರ್ಡ ಮಾಡುವ ಯೋಜನೆ ಇರಲಿಲ್ಲ. ಕೆಲವರ ಆತ್ಮೀಯ ನುಡಿಗಳನ್ನು ಕೇಳಿದಂತೆ ರೆಕಾರ್ಡ ಮಾಡ ಬೇಕೆನಿಸಿತು. ನಮ್ಮ ವೆಬ್ ತಾಣ vedasudhe.com ನಲ್ಲಿ ರೆಕಾರ್ಡ್ ಆದ ಧ್ವನಿಯನ್ನು ಇಲ್ಲಿ ಹಂಚಿಕೊಂಡಿದ್ದೇವೆ.
 ಕೇಳಿ. ಈ ಅಪರೂಪದ ಗುಪೂಜಾ ಮೊದಲ ವರ್ಷದ ಕಾರ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
--

Saturday, July 20, 2013

ಹೆಸರೊಂದಿಟ್ಟರೆನಗೆ

ಹೆಸರೊಂದಿಟ್ಟರೆನಗೆ ಹೆಸರಿರದ ನನಗೆ
ಹೆಸರೊಂದಿಟ್ಟರೆನಗೆ || ಪ ||

ಎನಿತು ಜನನವೋ ಎನಿತು ಮರಣವೋ
ಯಾವ ಜೀವವೋ ಎಂಥ ಮಾಯೆಯೋ
ಆದಿ ಅಂತ್ಯವನರಿಯದವಗೆ ಹೆಸರೊಂದಿಟ್ಟರೆನಗೆ ||

ಹಿಂದೆ ಇರದ ಮುಂದೆ ಇರದಿಹ
ತನುವ ಕಣಕಣ ಚಣಚಣಕೆ ಬದಲು
ಇಂತಪ್ಪ ತನುವೆ ತಾನು ಎಂದವಗೆ ಹೆಸರೊಂದಿಟ್ಟರೆನಗೆ ||

ಪಂಚತತ್ವದ ದೇಹ ಬಣ್ಣ ಬಣ್ಣದ ಬಟ್ಟೆ
ಚೈತನ್ಯವಿಲ್ಲದಿರೆ ಬರಿಯ ಲೊಳಲೊಟ್ಟೆ
ಚೇತನದ ಚೆಲುವ ಕಂಡರಿಯದವಗೆ ಹೆಸರೊಂದಿಟ್ಟರೆನಗೆ ||

ಅವನ ಕರುಣೆ ನವರಸದ ಅರಮನೆ
ಚಲಿಪ ಅರಮನೆಗೊಡೆಯನೆಂದು
ಬೀಗಿ ರಾಗದಿ ನಿಜವ ಮರೆತವಗೆ ಹೆಸರೊಂದಿಟ್ಟರೆನಗೆ ||

ಎನಿತು ಪುಣ್ಯವೋ ಮನುಜನಾಗಿಹೆ
ಮತಿಯ ಬಿಟ್ಟರೆ ಜಾರಿಹೋಗುವೆ
ಅರಿಗೆ ಗುರಿಯಾಗಿರುವ ನರಗೆ ಹೆಸರೊಂದಿಟ್ಟರೆನಗೆ ||

ಹೆಸರು ಹೆಸರೆಂದು ಕೊಸರುತಿಹರು
ಅರಿತವರೆ ಬಿಡರು ಹೆಸರ ಹಂಬಲ
ಹೆಸರು ಹಸಿರೆಂದುಸಿರುವವಗೆ ಹೆಸರೊಂದಿಟ್ಟರೆನಗೆ ||

-ಕ.ವೆಂ.ನಾಗರಾಜ್.

Tuesday, July 16, 2013

ಅಭಿನಂದನೆಗಳು

     ಅಭಿನಂದನೆಗಳು. ಆತ್ಮೀಯ ಮಿತ್ರ ಹರಿಹರಪುರ ಶ್ರೀಧರ ಯಾವ ಮುಹೂರ್ತದಲ್ಲಿ ಈ ಬ್ಲಾಗ್ ಪ್ರಾರಂಭಿಸಿದರೋ, ಯಾವ ಉದ್ದೇಶದಿಂದ ಪ್ರಾರಂಭವಾಯಿತೋ ಅದು ಸಾರ್ಥಕ ರೀತಿಯಲ್ಲಿ ಮುನ್ನಡೆದಿದೆ. ಈ ವೈಚಾರಿಕ ತಾಣದ ಪುಟವೀಕ್ಷಣೆಗಳು ಒಂದು ಲಕ್ಷದ ಗಡಿ ದಾಟಿ ಮುನ್ನಡೆದಿರುವುದು ಶುಭ ಸಂಕೇತವೇ ಸರಿ. 'ವೇದಭಾರತೀ' ಅಡಿಯಲ್ಲಿ ನಡೆದಿರುವ,  ನಡೆಯುತ್ತಿರುವ ಮತ್ತು ಮುಂದೆ ನಡೆಯಲಿರುವ ಕಾರ್ಯಕ್ರಮಗಳಿಗೆ ಇದು ಸ್ಫೂರ್ತಿದಾಯಕವಾಗಿದೆ. ಹರಿಹರಪುರ ಶ್ರೀಧರರಿಗೆ, ಎಲ್ಲಾ ಸಹಕಾರಿಗಳಿಗೆ, ಓದುಗರಿಗೆ, ವೈಚಾರಿಕ ಜಿಜ್ಞಾಸೆ, ಚರ್ಚೆಗಳಲ್ಲಿ ಸಕ್ರಿಯರಾಗಿ ಪಾಲುಗೊಂಡ ಎಲ್ಲರಿಗೂ ಮನಃಪೂರ್ವಕ ಅಭಿನಂದನೆಗಳು.
-ಕ.ವೆಂ.ನಾಗರಾಜ್.