Pages

Tuesday, September 29, 2015

ಅಗ್ನಿಹೋತ್ರ ಕಲಿಸಿ- ಮುಸ್ಲಿಮ್ ಸೋದರಿಯ ಕೋರಿಕೆ

ಒಬ್ಬ ಮುಸ್ಲಿಮ್ ಸೋದರಿ ನನಗೆ ಬರೆದಿರುವ ಪತ್ರ ನೋಡಿ. ಪತ್ರದಲ್ಲಿನ ಅಕ್ಷರಗಳ ತಪ್ಪನ್ನು ನೋಡಬೇಡಿ. ಭಾವನೆಯನ್ನು ನೋಡಿ.
---------------------------
ಧನ್ಯವಾದಗಳು ಸರ್, ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನಲ್ಲಿ ನಿಮ್ಮಿಂದ ಅಗ್ನಿಹೋತ್ರ ಹೋಮವನ್ನು ಅಪೇಕ್ಷಿಸುತ್ತೇನೆ. ಅಗ್ನಿಹೋತ್ರದಿಂದ ಆಗುವ ಉಪಯೋಗವನ್ನು ಜನಸಾಮ್ಯರಿಗೂ ಅರಿವಾಗಬೇಕಾಗಿದೆ.
- Reehana Firdose 
     --------------------------------------------
ನಮಸ್ತೆ,
ಹಾಸನ ವೇದಭಾರತೀ ಟೀಮ್ ಸಾಗರಕ್ಕೂ ಬಂದು ಅಗ್ನಿಹೋತ್ರಮಾಡಿಸಿ ಅದರ ಪರಿಚಯ ಮಾಡಿಸಲು ತೊಂದರೆಯೇನಿಲ್ಲ. ಅಲ್ಲಿ ಆರ್ಗನೈಸ್ ಮಾಡುವ ವ್ಯಕ್ತಿಗಳು ಬೇಕು. ನಿಮ್ಮಿಂದ ಸಾಧ್ಯವೇ ತಿಳಿಸಿ. ಅದಕ್ಕೆ ನೀವು ವೇದಭಾರತಿ ಕಾರ್ಯಕರ್ತರಿಗೆ ಯಾವ ಶುಲ್ಕ ಕೊಡಬೇಕಾಗಿಲ್ಲ. ಅಗ್ನಿಹೋತ್ರದ ಪೂರ್ಣ ವ್ಯವಸ್ಥೆ ನಾವೇ ಉಚಿತಮಾಡುತ್ತೇವೆ. ಜನರನ್ನು ಸೇರಿಸುವ ಜವಾಬ್ದಾರಿ ಸ್ಥಳೀಯರದ್ದು
-ಹರಿಹರಪುರಶ್ರೀಧರ್
ಸಂಯೋಜಕ, ವೇದಭಾರತೀ, ಹಾಸನ​
------------------------------------------------
ನಮಸ್ತೆ ಸರ್,
ನಾನು ಒಬ್ಬ ಮುಸ್ಲಿಂ ಹುಡಗಿಯಾಗಿದ್ದು, ಪ್ರಸ್ತುತವಾಗಿ ಸಾಗರದಲ್ಲಿ ಕಂಪ್ಯೂಟರ್ ಆಫ್ ರೇಟರ್ ಆಗಿ ಕೆಲಸ ಮಾಡುತ್ತಿದ್ದೆನೇ ಬಿ.ಎ. ಡಿಗ್ರಿ ಆಗಿದೆ. ನನ್ನಗೆ ಹಿಂದೂ ಧರ್ಮದ ಮೇಲೆ ಅಪಾರವಾದ ಪ್ರೀತಿ ಹಾಗೂ ಅಭಿಮಾನವಿದೆ. ಹಾಗಾಗಿ ಅನೇಹ ಪುಸ್ತಕಗಳನ್ನು ಓದುತ್ತಿರುತ್ತೇನೆ. ಹಿಂದಿನ ಸಂಪ್ರಧಾಯಗಳು ನಮಗೆ ಎಷ್ಟು ಆರೋಗ್ಯ ಹಾಗೂ ಒಳೆಯ ಜೀವನವನ್ನು ನೀಡುತ್ತವೆ ಎಂಬ ಬಗ್ಗೆ ಸ್ವಲ್ಪಮಟ್ಟಿಗೆ ಅರಿತಿರುತ್ತೇನೆ. ಇಗಿನ ಕಾಲದಲ್ಲಿ ಆನೇಕರು ಆನರೋಗ್ಯದಿಂದ ಬಳಲುತ್ತಿರುತ್ತಾರೆ. ವಿವಿಧ ವಿವಿಧವಾದ ಕಾಯಿಲೆಗಳು, ಮಾನಸಿಕ ನೆಮ್ಮದಿ ಇಲ್ಲದೇ ಮನ್ಸ್ ಶಾಂತಿಯಿಲ್ಲದೆ ಸುಂದರವಾದ ಜೀವನವನ್ನು ಅನುಭವಿಸುವುದು ಜೀವನವನ್ನು ಕಳೆಯುವುದು ಕಷ್ಟಸಾಧ್ಯವಾಗಿದೆ. ನಾನು ಒಬ್ಬ ಸಾಮನ್ಯ ಹೆಣ್ಣಾಗಿರುವ ಕಾರಣ ನನ್ನಿಂದ ನಮ್ಮ ಜನರಿಗೆ ಏನು ಸಹಾಯ ಮಾಡಲು ಆಗದೆ ಇರುವುದರಿಂದ ನಿಮ್ಮಿಂದ ಏನಾದರು ನಮ್ಮ ಊರಿನ ಜನರಿಗೂ ಉಪಯೋಗವಗಬಹುದೇನೋ? ಎಂಬ ವಿಶ್ವಾಸದಿಂದ ನಿಮ್ಮಲ್ಲಿ ಮನವಿ ಮಾಡಿರುತ್ತೇನೆ. 

ಇಂತಿ ನಿಮ್ಮ ವಿಶ್ವಾಸಿ,

ರಿಹಾನ ಫೀರ್ಧೋಸ್,
ಸಾಗರ ತಾಲ್ಲೂಕು,ಶಿವಮೊಗ್ಗ ಜಿಲ್ಲೆ.
------------------------------------------------------
 ನಮಸ್ತೆ,
ಸಾಗರದಲ್ಲಿನ ಯಾರಾದರೂ ಮಿತ್ರರ ಸಹಕಾರ ಪಡೆದು ಅಗ್ನಿಹೋತ್ರ ಶಿಬಿರ ಒಂದನ್ನು ನಡೆಸೋಣ ಭಗಿನೀ. ನಿಮ್ಮ ಆಪೇಕ್ಷೆಗೆ ಬಹಳ ಸಂತೋಷವಾಗಿದೆ. ನಿಜವಾಗಿ ಅಗ್ನಿಹೋತ್ರವು ಮಾನವೆಲ್ಲರೂ   ಮಾಡಬೇಕಾದ ದೈನಂದಿನ ವಿಧಿ
-ಹರಿಹರಪುರಶ್ರೀಧರ್

Sunday, September 27, 2015

ಚನ್ನರಾಯಪಟ್ಣದ ಸಾರ್ವಜನಿಕ ಗಣೇಶೋತ್ಸವದಲ್ಲಿ ಅಗ್ನಿಹೋತ್ರ ಪ್ರಾತ್ಯಕ್ಷಿಕೆ

 ವೇದಭಾರತಿಯ ಅಗ್ನಿಹೋತ್ರ ಆಂದೋಳನಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಪತಂಜಲಿ ಯೋಗ ಕೇಂದ್ರದ ಶ್ರೀ ಶೇಷಪ್ಪನವರು ಕಳೆದ ಹತ್ತು ದಿನಗಳಿಂದ  ಚನ್ನರಾಯಪಟ್ಟಣದಲ್ಲಿ ನಡೆಸುತ್ತಿರುವ ಯೋಗ ಶಿಬಿರದಲ್ಲಿ ಇಂದು ಆರು ಕುಂಡಗಳಲ್ಲಿ ಸಾಮೂಹಿಕ ಅಗ್ನಿಹೋತ್ರವನ್ನು ವೇದಭಾರತಿಯ ಸಹಪಾರದೊಡನೆ ಆಯೋಜಿಸಲಾಗಿತ್ತು. ಪರಿಸರವಾದಿ ಮತ್ತು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಅವರ ನೇತೃತ್ವದಲ್ಲಿ ನಡೆದ ಈ ಅದ್ಭುತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಭಾವವಶರಾದರು.
ಆರಂಭದಲ್ಲಿ "ಎಲ್ಲರಿಗಾಗಿ ವೇದ" ಮತ್ತು  ಅಗ್ನಿಹೋತ್ರ ಮಹತ್ವವನ್ನು ಕುರಿತು ನನ್ನ ಮಾತುಗಳು. ನಂತರ ನಡೆದ ಅಗ್ನಿಹೋತ್ರವು ಎಲ್ಲರನ್ನೂ ಆಕರ್ಶಿಸಿ ಕಾರ್ಯಕ್ರಮವು ಸಾರ್ಥಕವೆನಿಸಿತು.

Saturday, September 26, 2015

RSS ನ ಗ್ರಾಮವಿಕಾಸ ಯೋಜನಾ ಕಾರ್ಯಕರ್ತರ ರಾಜ್ಯ ಮಟ್ಟದ ಶಿಬಿರದಲ್ಲಿ ಸಾಮೂಹಿಕ ಅಗ್ನಿಹೋತ್ರ

ಬೇಲೂರಿನಲ್ಲಿ  ದಿನಾಂಕ 25.9.2015 ರಂದು ಆಯೋಜಿಸಿದ್ದ  RSS ನ  ಗ್ರಾಮವಿಕಾಸ ಯೋಜನಾ ಕಾರ್ಯಕರ್ತರ ರಾಜ್ಯ ಮಟ್ಟದ ಶಿಬಿರದಲ್ಲಿ ಹಾಸನದ ವೇದಭಾರತೀ ಸದಸ್ಯರ  ಮಾರ್ಗದರ್ಶನದಲ್ಲಿ ನಡೆದ  ಸಾಮೂಹಿಕ ಅಗ್ನಿಹೋತ್ರ. 640 ಹಳ್ಳಿಗಳಲ್ಲಿ ಕೆಲಸ ಮಾಡುವ 80 ಪ್ರತಿನಿಧಿಗಳು ಭಾಗವಹಿಸಿದ್ದರು. ಗ್ರಾಮಗಳಲ್ಲಿ ಸಾಮರಸ್ಯ ವೃದ್ಧಿಸಲು  ಅಗ್ನಿಹೋತ್ರವು ಹೇಗೆ ನೆರವಾಗಬಲ್ಲದೆಂದು ತಿಳಿಸುವ ಹೊಣೆ ನನ್ನದಾಗಿತ್ತು. ಒಂದು ಉತ್ತಮ ಪ್ರಯೋಗ ನಡೆಯಲು ಅವಕಾಶ ಮಾಡಿದ ಗ್ರಾಮವಿಕಾಸದ ಪ್ರಾಂತ ಪ್ರಮುಖರಿಗೆ ವೇದಭಾರತಿಯು ಆಭಾರಿ.

Friday, September 25, 2015

RSS ನ ಪೂಜ್ಯ ಸರಸಂಘಚಾಲಕರು " ವೇದದ ಅರಿವು ಪಡೆಯಲು ಸಂಘದ ಶಾಖೆಗಳಿಗೆ ಬನ್ನಿ" ಎಂದು ಕೊಟ್ಟಿರುವ ಕರೆಗೆ ಮಿತ್ರರೊಬ್ಬರು ಹೀಗೆ ಪ್ರತಿಕ್ರಿಯಿಸಿದ್ದಾರೆ. " ಮೋಹನ್ ಜಿ ಭಾಗವತ್ ಅವರ ವೇದದ ಕಲ್ಪನೆ ಎಂದರೆ ವಿಗ್ರಹಾರಾಧನೆಗೆ ಮಹತ್ವ ಕೊಡುವುದು" ಎಂದು. ಆದರೆ ಹಾಗೆ ಹೇಳಿಲ್ಲ. ಜನರಿಗೆ ವೇದದ ನಿಜವಾದ ಅರಿವು ಮೂಡಿದರೆ ಇಡೀ ವಿಶ್ವ ನೆಮ್ಮದಿಯಿಂದ ಬದುಕ ಬಹುದು.ಅಷ್ಟು ಉತ್ಕೃಷ್ಠವಾಗಿದೆ. ವೇದವೆಂದರೆ ಕೇವಲ ಪೂಜಾ ಪುನಸ್ಕಾರದ ಅಥವಾ ಶ್ರಾದ್ಧ ಕರ್ಮಗಳ ಮಂತ್ರವಲ್ಲ. ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಬದುಕಿನ ಮಾರ್ಗದರ್ಶನ ವೇದದಲ್ಲಿದೆ. ಅದರ ಪರಿಚಯಆಗಬೇಕೆಂಬುದು ಸನ್ಮಾನ್ಯ ಶ್ರೀ ಮೋಹನ್ ಜಿ ಭಾಗವತ್ ಅವರ ಅಪೇಕ್ಷೆ. ವೇದಭಾರತಿಯು ಅದೇ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ. ಈಗ ಸರಸಂಘಚಾಲಕರ ಮಾತು ನಮ್ಮ ಕೆಲಸಕ್ಕೆ ಹೆಚ್ಚು ಉತ್ಸಾಹ ತುಂಬಿದೆ. ಸಂಘದ ಎಲ್ಲಾ ಕಾರ್ಯಕರ್ತರು ಎಷ್ಟು ಬೇಗ ಸರಸಂಘಚಾಲಕರ ಮಾತನ್ನು ಅರ್ಥಮಾಡಿಕೊಳ್ಳುತ್ತಾರೋ ಅಷ್ಟು ಒಳ್ಳೆಯದು. ಇದಕ್ಕೆ ಪೂರಕವಾಗಿ ಬಾಬಾ ರಾಮ್ ದೇವ್ ಅವರು ನಡೆಸುವ ಯೋಗಶಿಬಿರಗಳಲ್ಲಿ ವೇದದ ಅರಿವು ಮೂಡಿಸಲಾಗುತ್ತಿದೆ.ಅಗ್ನಿಹೋತ್ರವನ್ನು ಸಾರ್ವತ್ರೀಕರಣ ಗೊಳಿಸಲಾಗಿದೆ. ಅಗ್ನಿಹೋತ್ರದ ಬಗ್ಗೆ ಒಂದು ಮಾತು ಸ್ನೇಹಿತರ ಗಮನಕ್ಕೆ ತರುವುದು ಅವಶ್ಯಕವಾಗಿದೆ. ಅಗ್ನಿಹೋತ್ರದಿಂದ ಹಲವು ಖಾಯಿಲೆಗಳು ದೂರವಾಗುತ್ತದೆಂಬುದು ನಿಜ. ಆ ಕಾರಣ ದಿಂದ ಪಾಶ್ಚಿಮಾತ್ಯರೆಲ್ಲಾ ಅಗ್ನಿಹೋತ್ರ ಮಾಡುವುದನ್ನು ಆರಂಭಿಸಿದ್ದಾರೆ. ಅವರೆಲ್ಲಾ ಅಗ್ನಿಹೋತ್ರ ಮಾಡುವುದು ಕೇವಲ ಐದು ನಿಮಿಷಗಳಲ್ಲಿ ಮುಗಿದು ಹೋಗುತ್ತದೆ. ಓಂ ಸೂರ್ಯಾಯ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ| ಮಂತ್ರಗಳನ್ನು ಸೂರ್ಯೋದಯದಲ್ಲೂ , ಅಗ್ನಯೇ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ ಮಂತ್ರಗಳನ್ನು ಸೂರ್ಯಾಸ್ತದಲ್ಲೂ ಹೇಳುತ್ತಾ ಅಗ್ನಿಹೋತ್ರ ಮಾಡುತ್ತಾರೆ. ಆದರೆ ಮಹರ್ಷಿ ದಯಾನಂದ ಸರಸ್ವತೀ ಅವರು ರಚಿಸಿರುವ ಅಗ್ನಿಹೋತ್ರ ವಿಧಿಯು ಬಲು ಸೊಗಸಾಗಿದೆ. ಸುಮಾರು 15 ನಿಮಿಷಗಳ ವಿಧಿ. ಅದಕ್ಕೆ ಪೂರ್ವದಲ್ಲಿ ಈಶ್ವರಸ್ತುತಿ ಹಾಗೂ ಶಾಂತಿಮಂತ್ರಗಳ ಪಠಣ. ಇದು ಅದ್ಭುತ. ವೇದಭಾರತಿಯು ಮಹರ್ಷಿ ದಯಾನಂದ ಸರಸ್ವತೀ ರೂಪಿಸಿರುವಂತೆ ಅಗ್ನಿಹೋತ್ರವನ್ನು ನಿತ್ಯವೂ ನಡೆಸುತ್ತಿದೆ. ಮಂತ್ರಗಳನ್ನು ಶೃಂಗೇರಿ ಪರಂಪರೆಯಂತೆ ಸ್ವರಬದ್ಧವಾಗಿ ಪಠಿಸುವಾಗ ಆನಂದವಾಗುತ್ತದೆ. ಯಾವ ಜಾತಿ-ಮತ-ಲಿಂಗ ವಯಸ್ಸಿನ ಭೇದವಿಲ್ಲದೆ ನಡೆಯುತ್ತಿರುವ ವೇದಭಾರತಿಯ ಅಗ್ನಿಹೋತ್ರ ಸತ್ಸಂಗದಲ್ಲಿ ಸುಮಾರು ಐವತ್ತು ಜನರು ನಿತ್ಯವೂ ಭಾಗವಹಿಸುತ್ತಾರೆ. ಅಲ್ಲದೆ ಹಾಸನದ ಪತಂಜಲಿ ಯೋಗ ಕೇಂದ್ರಗಳಲ್ಲಿ ಆಗಿಂದಾಗ್ಗೆ ಅಗ್ನಿಹೋತ್ರ ಮತ್ತು ವೇದದ ಪರಿಚಯ ನಡೆಯುತ್ತಿದೆ.
Vasudevarao Rao ಸಂಘದ ಶಾಖೆಗಳಲ್ಲಿ ವೇದದ ಬಗ್ಗೆ ಅರಿವು ಮೂಡಬೇಕಾದರೆ ವೇದದಲ್ಲಿ ಏನಿದೆ ಎನ್ನುವುದು ಮೊದಲು ತಿಳಿಯಬೇಕು. ಸಂಧ್ಯಾ ಮತ್ತು ಅಗ್ನಿಹೋತ್ರ ಮಿಗಿಲಾಗಿ ವೇದಗಳಲ್ಲಿ ಎಷ್ಟು ಉದಾತ್ತ ಮತ್ತು ನಿತ್ಯ ಪ್ರೇರಕ ವಿಷಯಗಳನ್ನು ತಿಳಿಯಲು ದಿ|| ಜಗದೀಶ್ವರಾನಂದ ಸರಸ್ವತಿಯವರು ಬರೆದ ವೈದಿಕ ಉದಾತ್ತ ಭಾವನೆಗಳು ಎಂಬ ಪುಸ್ತಕವನ್ನು ಒಂದು ಪಠ್ಯಪುಸ್ತಕವಾಗಿ ಮತ್ತು ಅದಕ್ಕೆ ಪೂರಕವಾಗಿ ಚತುರ್ವೇದಿಗಳು ಬರೆದ ವೇದೋಕ್ತ ಜೀವನ ಪಥ ಪುಸ್ತಕವನ್ನು ಕಡ್ಡಾಯವಾಗಿ ಇಡಬೇಕು ವೈದಿಕ ಉದಾತ್ತ ಭಾವನೆಗಳು ಪುಸ್ತಕದಲ್ಲಿ 52 ವಿಷಯಗಳ ಬಗ್ಗೆ ವೇದಗಳ ವಿಚಾರವನ್ನು ಪ್ರಸ್ತುತ ಪಡಿಸುತ್ತದೆ. ಉದಾ, ಸ್ವಾವಲಂಬನೆ, ದೇಶ ಪ್ರೇಮ, ಸಾಹಸ, ಭ್ರಾತೃಪ್ರೇಮ, ಸಂಸಾರದಲ್ಲಿ ಯಶಸ್ಸು, ವೀರತೆಯ ತರಂಗ, ಇತ್ಯಾದಿ ವಿಷಯಗಳು ಸದಾ ಪ್ರೇರಕವಾಗಿವೆ. ಇದನ್ನು ಓದಿದ ಯಾವುದೇ ವಿಚಾರವಾದಿಯು ವೇದಗಳನ್ನು ಶ್ಲಾಘಿಸದೇ ಇರಲಾರ. ಅಂದ ಹಾಗೆ ಈ ಪುಸ್ತಕ ಕನ್ನಡಕ್ಕೆ ಕೃಷ್ಣ ಮೂರ್ತಿಯವರು ಅನುವಾದಿಸಿದ್ದು ಇದನ್ನು ಆರ್ಯಸಮಾಜ 1995 ರಲ್ಲಿಯೇ ಪ್ರಕಟಮಾಡಿತು. ಸದ್ಯ ಇದರ ಪ್ರತಿಗಳು ಅಲಭ್ಯ. ಸಂಘವು ಈ ಪುಸ್ತಕವನ್ನು ಮತ್ತು ಚತುರ್ವೇದಿಗಳ ಪುಸ್ತಕಗಳನ್ನು ಮರು ಪ್ರಕಟಣೆ ಮಾಡಿ, ಇದನ್ನು ಎಲ್ಲಾ ಶಾಖೆಗಳಿಗೆ ಹಂಚಬೇಕು. ನನಗೆ ಗೊತ್ತಿರುವಂತೆ ಬಹುಪಾಲು ಪ್ರಚಾರಕರಕರಿಗೂ ವೇದಗಳ ಬಗ್ಗೆ ಇರುವ ಜ್ಞಾನ ತುಂಬಾ ಸೀಮಿತವಾದದ್ದು. ಮತ್ತು ಅದೂ ಸಹ ಪೌರಾಣಿಕ ಜಗತ್ತಿನ ಹಿನ್ನೆಲೆಯಿಂದ ಕೂಡಿದ್ದು. ವೇದಗಳು ಸಾರ್ವಕಾಲಿಕ, ಸಾರ್ವಜನಿಕ ಮತ್ತು ಸಾರ್ವಭೌಮ ಸಾಹಿತ್ಯವಾಗಲು ಕ್ಷಮತೆಯಿದ್ದು ಈ ನಿಟ್ಟಿನಲ್ಲಿ ಮುಂದುವರೆದರೆ ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಉಪಕಾರವಾದೀತು. ಸೆಕ್ಯುಲರ್ ಬುದ್ಧಿ ಜೀವಿಗಳು ಸಹ ಆಕ್ಷೇಪ ವೆತ್ತುವ ಪ್ರಸಂಗವೇ ಒದಗಿಬರದು.

ವೇದ ಸುಧೆ Vasudevarao Rao ಸಂಘವು ಈ ಸುಧೀರ್ಘ ಪಯಣದಲ್ಲಿ ಹಿಂದು ಸಮಾಜವನ್ನು ಗಟ್ಟಿ ಮಾಡಲು ಯಾವ ಆಚರಣೆಗಳನ್ನೂ ವಿರೋಧಿಸದೇ ಅವರಲ್ಲಿ ಹಿಂದುತ್ವ ಮತ್ತು ರಾಷ್ಟ್ರಭಕ್ತಿಯನ್ನು ತುಂಬುತ್ತಿದೆ. ವಿಗ್ರಹಾರಾಧನೆ ವಿರೋಧ ಮುಂತಾದ ಕೆಲವು ನಂಬಿಕೆಗಳನ್ನು ವಿರೋಧಿಸುವ ವಿಚಾರಗಳು ಚತುರ್ವೇದಿಗಳ ಸಾಹಿತ್ಯದಲ್ಲಿ ಮ್ರಮುಖ ಸ್ಥಾನ ಪಡೆಯುತ್ತವೆ. ಶತಶತಮಾನಗಳ ನಂಬಿಕೆಗಳನ್ನು ಹೋಗಲಾಡಿಸುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿಯೇ RSS ಆರ್ಯಸಮಾಜದ ಹಾದಿಯಲ್ಲಿ ಸಾಗುವುದಿಲ್ಲ. ಆದರೆ ಇಂದಲ್ಲಾ ನಾಳೆ ವೇದದ ಆಧಾರದಲ್ಲಿಯೇ ಸಮಾಜವು ನಡೆಯುವಂತೆ ಮಾಡುವ ಶಕ್ತಿ ಸಂಘಕ್ಕೆ ಇದೆ. ಆದರೆ ಸಂಘವು ಬಹಳ ಪ್ರಬುದ್ಧವಾಗಿ ಚಿಂತನೆ ನಡೆಸಿ ಒಂದೊಂದೇ ಹೆಜ್ಜೆ ಇಡುತ್ತಾ ಹೋಗುತ್ತದೆ. ಸಂಘವನ್ನು ಹತ್ತಿರದಲ್ಲಿ ಗಮನಿಸಿದವರಿಗೆ ಇದು ಗೊತ್ತಾಗುತ್ತದೆ.

ಸಂಘದ ಶಾಖೆಗಳಲ್ಲಿ ವೇದದ ಪರಿಚಯ

RSS ನ ಪೂಜ್ಯ ಸರಸಂಘಚಾಲಕರು " ವೇದದ ಅರಿವು ಪಡೆಯಲು ಸಂಘದ ಶಾಖೆಗಳಿಗೆ ಬನ್ನಿ" ಎಂದು ಕೊಟ್ಟಿರುವ ಕರೆಗೆ ಮಿತ್ರರೊಬ್ಬರು ಹೀಗೆ ಪ್ರತಿಕ್ರಿಯಿಸಿದ್ದಾರೆ. " ಮೋಹನ್ ಜಿ ಭಾಗವತ್ ಅವರ ವೇದದ ಕಲ್ಪನೆ ಎಂದರೆ ವಿಗ್ರಹಾರಾಧನೆಗೆ ಮಹತ್ವ ಕೊಡುವುದು" ಎಂದು. ಆದರೆ ಹಾಗೆ ಹೇಳಿಲ್ಲ. ಜನರಿಗೆ ವೇದದ ನಿಜವಾದ ಅರಿವು ಮೂಡಿದರೆ ಇಡೀ ವಿಶ್ವ ನೆಮ್ಮದಿಯಿಂದ ಬದುಕ ಬಹುದು.ಅಷ್ಟು ಉತ್ಕೃಷ್ಠವಾಗಿದೆ. ವೇದವೆಂದರೆ ಕೇವಲ ಪೂಜಾ ಪುನಸ್ಕಾರದ ಅಥವಾ ಶ್ರಾದ್ಧ ಕರ್ಮಗಳ ಮಂತ್ರವಲ್ಲ. ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಬದುಕಿನ ಮಾರ್ಗದರ್ಶನ ವೇದದಲ್ಲಿದೆ. ಅದರ ಪರಿಚಯಆಗಬೇಕೆಂಬುದು ಸನ್ಮಾನ್ಯ ಶ್ರೀ  ಮೋಹನ್ ಜಿ ಭಾಗವತ್  ಅವರ ಅಪೇಕ್ಷೆ. ವೇದಭಾರತಿಯು ಅದೇ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ. ಈಗ ಸರಸಂಘಚಾಲಕರ ಮಾತು ನಮ್ಮ ಕೆಲಸಕ್ಕೆ ಹೆಚ್ಚು ಉತ್ಸಾಹ ತುಂಬಿದೆ. ಸಂಘದ  ಎಲ್ಲಾ  ಕಾರ್ಯಕರ್ತರು ಎಷ್ಟು ಬೇಗ ಸರಸಂಘಚಾಲಕರ ಮಾತನ್ನು ಅರ್ಥಮಾಡಿಕೊಳ್ಳುತ್ತಾರೋ ಅಷ್ಟು ಒಳ್ಳೆಯದು. ಇದಕ್ಕೆ ಪೂರಕವಾಗಿ ಬಾಬಾ ರಾಮ್ ದೇವ್  ಅವರು ನಡೆಸುವ ಯೋಗಶಿಬಿರಗಳಲ್ಲಿ ವೇದದ ಅರಿವು ಮೂಡಿಸಲಾಗುತ್ತಿದೆ.ಅಗ್ನಿಹೋತ್ರವನ್ನು ಸಾರ್ವತ್ರೀಕರಣ ಗೊಳಿಸಲಾಗಿದೆ. ಅಗ್ನಿಹೋತ್ರದ ಬಗ್ಗೆ ಒಂದು ಮಾತು ಸ್ನೇಹಿತರ ಗಮನಕ್ಕೆ ತರುವುದು ಅವಶ್ಯಕವಾಗಿದೆ. ಅಗ್ನಿಹೋತ್ರದಿಂದ ಹಲವು ಖಾಯಿಲೆಗಳು ದೂರವಾಗುತ್ತದೆಂಬುದು ನಿಜ. ಆ ಕಾರಣ ದಿಂದ ಪಾಶ್ಚಿಮಾತ್ಯರೆಲ್ಲಾ  ಅಗ್ನಿಹೋತ್ರ ಮಾಡುವುದನ್ನು ಆರಂಭಿಸಿದ್ದಾರೆ. ಅವರೆಲ್ಲಾ ಅಗ್ನಿಹೋತ್ರ ಮಾಡುವುದು ಕೇವಲ ಐದು ನಿಮಿಷಗಳಲ್ಲಿ ಮುಗಿದು ಹೋಗುತ್ತದೆ. ಓಂ ಸೂರ್ಯಾಯ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ| ಮಂತ್ರಗಳನ್ನು ಸೂರ್ಯೋದಯದಲ್ಲೂ ,  ಅಗ್ನಯೇ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ ಮಂತ್ರಗಳನ್ನು ಸೂರ್ಯಾಸ್ತದಲ್ಲೂ ಹೇಳುತ್ತಾ ಅಗ್ನಿಹೋತ್ರ ಮಾಡುತ್ತಾರೆ. ಆದರೆ ಮಹರ್ಷಿ ದಯಾನಂದ ಸರಸ್ವತೀ ಅವರು ರಚಿಸಿರುವ ಅಗ್ನಿಹೋತ್ರ ವಿಧಿಯು ಬಲು ಸೊಗಸಾಗಿದೆ. ಸುಮಾರು 15 ನಿಮಿಷಗಳ ವಿಧಿ. ಅದಕ್ಕೆ ಪೂರ್ವದಲ್ಲಿ ಈಶ್ವರಸ್ತುತಿ ಹಾಗೂ ಶಾಂತಿಮಂತ್ರಗಳ  ಪಠಣ. ಇದು ಅದ್ಭುತ. ವೇದಭಾರತಿಯು  ಮಹರ್ಷಿ ದಯಾನಂದ ಸರಸ್ವತೀ ರೂಪಿಸಿರುವಂತೆ ಅಗ್ನಿಹೋತ್ರವನ್ನು ನಿತ್ಯವೂ ನಡೆಸುತ್ತಿದೆ. ಮಂತ್ರಗಳನ್ನು ಶೃಂಗೇರಿ ಪರಂಪರೆಯಂತೆ ಸ್ವರಬದ್ಧವಾಗಿ ಪಠಿಸುವಾಗ  ಆನಂದವಾಗುತ್ತದೆ. ಯಾವ ಜಾತಿ-ಮತ-ಲಿಂಗ ವಯಸ್ಸಿನ ಭೇದವಿಲ್ಲದೆ ನಡೆಯುತ್ತಿರುವ ವೇದಭಾರತಿಯ ಅಗ್ನಿಹೋತ್ರ ಸತ್ಸಂಗದಲ್ಲಿ ಸುಮಾರು ಐವತ್ತು ಜನರು ನಿತ್ಯವೂ ಭಾಗವಹಿಸುತ್ತಾರೆ. ಅಲ್ಲದೆ ಹಾಸನದ ಪತಂಜಲಿ  ಯೋಗ ಕೇಂದ್ರಗಳಲ್ಲಿ ಆಗಿಂದಾಗ್ಗೆ ಅಗ್ನಿಹೋತ್ರ ಮತ್ತು ವೇದದ ಪರಿಚಯ ನಡೆಯುತ್ತಿದೆ.

Thursday, September 24, 2015

Attend Sangh Shakhas to attain Vedic knowledge- RSS Chief

ನನಗಂತೂ ಅತ್ಯಂತ ಸಂತೋಷ ಆಗ್ತಾ ಇದೆ. ನಾವೇನು ಈಗಾಗಲೇ ಮಾಡುತ್ತಿದ್ದೀವೋ   ನಮ್ಮ ಪೂಜ್ಯ ಸರಸಂಘ ಚಾಲಕರು ಅದನ್ನೇ ಒತ್ತಿ ಹೇಳಿದ್ದಾರೆ.ಸಂಘದ ಶಾಖೆಗಳಿಗೆ ಬಂದು ವೇದದ ಅರಿವು ಮೂಡಿಸಿಕೊಳ್ಳಲೂ ಸಹ ಜನರಿಗೆ ಕರೆ ನೀಡಿದ್ದಾರೆ.[The RSS Chief asked people to attend Sangh Shakhas to attain Vedic knowledge.]ಈಗ ಸಂಘದ ಸಾಮಾನ್ಯ ಕಾರ್ಯಕರ್ತರ ಅಂಗಳದಲ್ಲಿದೆ ಚೆಂಡು.
-------------------------------------------------------------------------------------------

Nobody can imagine India without its culture, philosophy and the Vedas as these make up the soul of the country, RSS Chief Mohan Bhagwat said here today.

"Late Swami Vivekanand had said that so long as religion is alive even in one particle, eliminating India cannot be possible," he said while inaugurating a Ved Vidyalaya at Vrindavan.

"Efforts made to eliminate the country's culture for over 200 years could not succeed as it is deeply-rooted," he said.

Comparing the Vedas with science, Bhagwat said that while the latter has its limitations, the former had none.

Bhagwat suggested that acharyas, saints and academicians should interpret Vedas in a way which would be relevant in different times, situations and places so that "the secret of the welfare of humanity, that India has in the Vedas, could be spread throughout the world".

The RSS Chief asked people to attend Sangh Shakhas to attain Vedic knowledge.

Meanwhile, when people requested Bhagwat for selfies at the event, he said it was okay to take pictures but, "don't share them on the social media".

"Post photos of our great leaders instead," he said.

Punjab and Haryana Governor Kaptan Singh Solanki, who also attended the programme, emphasised the importance of Vedas.

"If India has to lead the world in the 21st Century, character building that comes through Vedas is a must," he added.

Founder of Bharat Mata Mandir Hardwar, Mahamandaleshwar Swami Satyamitranand Giri, Maluk Peethdheeshwar Rajendra Das and the founder of Veda School in Vrindaban, Govind Deo Giri, were among those present at the event.