ವೇದಸುಧೆ ಕೇಳಿದ ಪ್ರಶ್ನೆ:
ಭೂಪಾಲ್ ಅನಿಲ ದುರಂತವಾದಾಗ ಯಾವ ಮನೆಯಲ್ಲಿ ನಿತ್ಯಹೋಮ ಮಾಡುವ ಪದ್ದತಿ ಇತ್ತೋ ಆ ಮನೆಯ ಜನರಿಗೆ ಅನಿಲ ದುರಂತದಿಂದ ಯಾವ ತೊಂದರೆಯಾಗಲಿಲ್ಲವೆಂಬ ಸುದ್ದಿ ಓದಿದ್ದ ನೆನಪು. ಆ ಬಗ್ಗೆ ಮಾಹಿತಿ ಕೊಡಿ. ನಿತ್ಯಹೋಮ ಆಚರಿಸುವ ಬಗ್ಗೆಯೂ ತಿಳಿಸಿ.
ಭೂಪಾಲ್ ಅನಿಲ ದುರಂತವಾದಾಗ ಯಾವ ಮನೆಯಲ್ಲಿ ನಿತ್ಯಹೋಮ ಮಾಡುವ ಪದ್ದತಿ ಇತ್ತೋ ಆ ಮನೆಯ ಜನರಿಗೆ ಅನಿಲ ದುರಂತದಿಂದ ಯಾವ ತೊಂದರೆಯಾಗಲಿಲ್ಲವೆಂಬ ಸುದ್ದಿ ಓದಿದ್ದ ನೆನಪು. ಆ ಬಗ್ಗೆ ಮಾಹಿತಿ ಕೊಡಿ. ನಿತ್ಯಹೋಮ ಆಚರಿಸುವ ಬಗ್ಗೆಯೂ ತಿಳಿಸಿ.
ಶ್ರೀಸುಧಾಕರ ಶರ್ಮರ ಉತ್ತರ:
ಅಗ್ನಿಯನ್ನು ಒಂದೆಡೆ ಸ್ಥಾಪಿಸಿ `ಸ್ವಾಹಾ' ಎಂದು ಅಗ್ನಿಗೆ ಆಹುತಿಯನ್ನು ನೀಡುವ ಯಜ್ಞಕ್ಕೆ `ದ್ರವ್ಯ ಯಜ್ಞ' ಅಥವಾ 'ದೇವ ಯಜ್ಞ' ಎಂದು ಹೆಸರು. (ಯಜ್ಞದ ವಿಸ್ತೃತ ಅರ್ಥ `ಯಜ್ಞೋ ವೈ ಶ್ರೇಷ್ಠತಮಂ ಕರ್ಮ' - ಎಲ್ಲ ಶ್ರೇಷ್ಠತಮ ಕರ್ಮಗಳೆಲ್ಲವೂ ಯಜ್ಞವೇ!) ಬೆಂಕಿಗೆ ಒಂದು ವಿಶೇಷಗುಣವಿರುವುದು ಎಲ್ಲರ ಅನುಭವಕ್ಕೂ ಬಂದಿರುವುದೇ. ಬೆಂಕಿಗೆ ಏನನ್ನು ಹಾಕುತ್ತೇವೆಯೋ ಅದನ್ನುವಿಘಟಿಸಿ ಪರಿಸರಕ್ಕೆ ಹರಡುತ್ತದೆ. ಲೋಬಾನ ಹಾಕಿದರೆ `ಘಂ' ಎಂಬ ಸುಗಂಧವನ್ನು ಹರಡುತ್ತದೆ. ಮೆಣಸಿನಕಾಯನ್ನು ಹಾಕಿದರೆಘಾಟ'ನ್ನು ಹರಡುತ್ತದೆ.ಈ ಗುಣವನ್ನು ಕಂಡವರು ಬೆಂಕಿಗೆ ಔಷಧೀಯ ಗುಣವುಳ್ಳ ವಸ್ತುಗಳನ್ನು ಹಾಕಿದರೆ ಔಷಧೀಯ ಗುಣಗಳೇ ಪರಿಸರಕ್ಕೆಹರಡುತ್ತಲ್ಲವೇ?! - ಎಂದು ದೇವ ಅಥವಾ ದ್ರವ್ಯಯಜ್ಞದಲ್ಲಿ ಔಷಧೀಯ ಗುಣಗಳಿರುವ ವಸ್ತುಗಳನ್ನೇ ಹಾಕಿ (ರವಿಕೆ ಕಣ, ರೇಷ್ಮೆ ವಸ್ತ್ರ, ದುಡ್ಡು-ಕಾಸು ಮೊದಲಾದುವನ್ನು ಹಾಕುವುದು ಅವೈಜ್ಞಾನಿಕ ಮತ್ತು ಅವೈದಿಕ) ಪರಿಸರ ಶುದ್ಧತೆಯನ್ನು ಕಾಪಾಡಿಕೊಳ್ಳುವವ್ಯವಸ್ಥೆಯನ್ನು ಮಾಡಿದರು. ಅರಳೀಮರದ ಕಡ್ಡಿ, ಆಲದ ಕಡ್ಡಿ, ತುಪ್ಪ, ಎಳ್ಳು, ಬೆಲ್ಲ, ಕೊಬ್ಬರಿ, ಅರಳು, ಭತ್ತ, ದರ್ಭೆ, ಅಮೃತಬಳ್ಳಿ, ಔದುಂಬರ (ಅತ್ತಿ), ಬಿಲ್ವ, ತುಳಸಿ ಮುಂತಾಗಿ ಅನೇಕ ದ್ರವ್ಯಗಳಿವೆ. ಭೂಪಾಲ್ ಅನಿಲ ದುರಂತದ ಸಂದರ್ಭದಲ್ಲಿ `ಅಗ್ನಿಹೋತ್ರ'ದಅಭ್ಯಾಸವಿರುವವರು, ಅಗ್ನಿಹೋತ್ರ ಮಾಡಿ ವಾಯುವಿನಲ್ಲಿಯ ದೋಷವನ್ನು ಪರಿಹರಿಸಿಕೊಂಡಿದ್ದಾರೆ. (ಇದಕ್ಕೆ ಸಂಬಂಧಿಸಿದಅನ್ನು ಸಧ್ಯದಲ್ಲೇ ಒದಗಿಸುವೆ). ಆಯುರ್ವೇದದಲ್ಲಿ ವಿಶಿಷ್ಟ ದ್ರವ್ಯಗಳನ್ನು ಬಳಸಿಕೊಂಡು ರೋಗನಿವಾರಣೇಮಾಡುವ, ಮಾಡಿಕೊಳ್ಳುವ ಉಲ್ಲೇಖಗಳಿವೆ. (ಧೂಮಪಾನ! ತಂಬಾಕಿನದಲ್ಲ ಬಿಡಿ!) ಹೀಗೊಂದು ಪ್ರಶ್ನೆ ಕೇಳಬಹುದು - ಬೆಂಕಿಗೆವಸ್ತುಗಳನ್ನು ಹಾಕಿದರೆ ಸಾಕಲ್ಲ, ಮಂತ್ರಗಳನ್ನು ಹೇಳಬೇಕ್ಯಾಕೆ? ಮಂತ್ರಗಳನ್ನು ಸುಮ್ಮನೆ ಹೇಳುವುದಲ್ಲ, ಮಂತ್ರ ತಿಳಿದೇಹೇಳಬೇಕು. (ತಜ್ಜಪಸ್ತದರ್ಥಭಾವನಮ್ - ಪತಂಜಲಿ) ಅರ್ಥ ತಿಳಿದು ಹೇಳಿದಾಗಲೇ ಜಪ. ಇಲ್ಲವಾದಲ್ಲಿ ಗಿಣಿಪಾಠ!! ಅರ್ಥತಿಳಿದುಮಂತ್ರಗಳನ್ನು ಹೇಳಿದಾಗ ನಮ್ಮ ಅಂತರಂಗದ ಶುದ್ಧತೆಗೆ ಅದು ಕಾರಣವಾಗುತ್ತದೆ. ಏಕಕಾಲಕ್ಕೆ ಹೊರ ಮತ್ತು ಒಳಪರಿಸರಗಳನ್ನು ಶುದ್ಧೀಕರಿಸುವ ವ್ಯವಸ್ಥೆಯೇ ಯಜ್ಞ.
ಇಷ್ಟಾದಮೇಲೆಯೂ ಈ ಯಾವುದೇ ಮಾತುಗಳನ್ನು ನಂಬಬೇಕಾದ್ದಿಲ್ಲ. ಕೆಲವು ತಿಂಗಳುಗಳಾದರೂ `ಅಗ್ನಿಹೋತ್ರ'ದಪ್ರಯೋಗವನ್ನು ನಿಮ್ಮ ಮನೆಯಲ್ಲಿ ಮಾಡಿರಿ. ಏನಾದರೂ ಧನಾತ್ಮಕ ಬದಲಾವಣೆ ಕಂಡರೆ, ಆಗ ಮಾತ್ರ ಒಪ್ಪಬಹುದು. *ಆರೋಗ್ಯಕರ ವಸ್ತುಗಳನ್ನು ಹಾಕಿ * ಮಂತ್ರಗಳ ಅರ್ಥ ತಿಳಿದು ಮಾಡಿ. `
ಇಷ್ಟಾದಮೇಲೆಯೂ ಈ ಯಾವುದೇ ಮಾತುಗಳನ್ನು ನಂಬಬೇಕಾದ್ದಿಲ್ಲ. ಕೆಲವು ತಿಂಗಳುಗಳಾದರೂ `ಅಗ್ನಿಹೋತ್ರ'ದಪ್ರಯೋಗವನ್ನು ನಿಮ್ಮ ಮನೆಯಲ್ಲಿ ಮಾಡಿರಿ. ಏನಾದರೂ ಧನಾತ್ಮಕ ಬದಲಾವಣೆ ಕಂಡರೆ, ಆಗ ಮಾತ್ರ ಒಪ್ಪಬಹುದು. *ಆರೋಗ್ಯಕರ ವಸ್ತುಗಳನ್ನು ಹಾಕಿ * ಮಂತ್ರಗಳ ಅರ್ಥ ತಿಳಿದು ಮಾಡಿ. `
----------------------------------------------------------------------------
ವೇದಾಧ್ಯಾಯೀ ಸುಧಾಕರಶರ್ಮರಲ್ಲಿ ವೇದಸುಧೆಯ ಮನವಿ:
ಎಲ್ಲರಿಗಾಗಿ ವೇದ ತಾಣದಲ್ಲಿ ವೇದಪಾಠವನ್ನು ದಯಮಾಡಿ ಬೇಗ ಆರಂಭಿಸಿ. ಕೆಲವಾದರೂ ವೇದ ಮಂತ್ರಗಳನ್ನು ಸ್ವರಸಹಿತ ನೀವು ತಾಣದಲ್ಲಿ ಪೇರಿಸಿದರೆ ಅದನ್ನು ಕೇಳಿಕೊಂಡು ನಮ್ಮಂತ ಕೆಲವರಾದರೂ ಕಲಿಯಬಹುದು. ಜೊತೆಗೆ ಅದರ ಅರ್ಥವನ್ನು ಬರಹರೂಪದಲ್ಲಿ ಪ್ರಕಟಿಸಿದರೂ ಸರಿ ಅಥವಾ ಆಡಿಯೋ ಹಾಕಿದರೂ ಸರಿ. ಈ ಪ್ರಯತ್ನ ಬೇಗ ಆಗಬೇಕು. ಇದು ಬಲು ಜನರ ಅಪೇಕ್ಷೆ. ಕನಿಷ್ಟ ವಾರಕ್ಕೊಂದಾದರೂ ಮಂತ್ರ ವನ್ನು ಅರ್ಥ ಸಹಿತ ಕಲಿಯುವಂತಾದರೆ ಉತ್ತಮ. ಇಲ್ಲೊಂದು ಮಾತು - ತಾವು ಮುಂದಿನ ನಿಮ್ಮ ಬರಹದಲ್ಲಿ ವೇದಮಂತ್ರವನ್ನು ಜನಸಾಮಾನ್ಯರು ಹೇಗೆ ಕಲಿಯಬೇಕು? ಅದಕ್ಕೇನಾದರೂ ನೀತಿ ನಿಯಮಾವಳಿಗಳಿವೆಯೇ? ಎಂಬ ಬಗ್ಗೆ ಬರೆದರೆ ಉತ್ತಮ.ನಿಮ್ಮಿಂದ ಈ ಬಗ್ಗೆ ಒಂದು ಪ್ರತಿಕ್ರಿಯೆ ಬಂದರೂ ಅದನ್ನು ಪ್ರಮುಖವಾಗಿಯೇ ಪ್ರಕಟಿಸಲಾಗುವುದು.
ಇವತ್ತಿನ ದಿನ ಅಗ್ನಿಹೋತ್ರ ಕೇವಲ ನಾಮಾವಶೇಷವಾಗಿದೆ, ಅಗ್ನಿಹೋತ್ರವನ್ನು ನಡೆಸಿದವರನ್ನು ಹಿಂದೆ ಅಗ್ನಿಹೋತ್ರಿ ಅಂತ ಕರೆಯುತ್ತಿದ್ದರು, ಅಗ್ನಿಯಲ್ಲಿ ಎರಡು ವಿಧ, ಒಂದು ಹವ್ಯಾಗ್ನಿ [ಹೋಮ-ಹವನ,ನಮ್ಮ ದೈನಂದಿನ ಬೇಯಿಸುವಿಕೆಗೆ ಬಳಸುವ ಅಗ್ನಿ] ಇನ್ನೊಂದು ಕವ್ಯಾಗ್ನಿ [ಕೇವಲ ಅಪರಕ್ರಿಯೆ,ಅಂತ್ಯೇಷ್ಟಿಗೆ ಬಳಸಲ್ಪಡುವ ಅಗ್ನಿ] ಬಹು ವಿಶೇಷವೆಂದರೆ ಈ ಅಗ್ನಿಹೋತ್ರದ ಅಗ್ನಿ ಉಪಾಸಕರು ಗತಿಸಿದಾಗ ಅವರು ನಿತ್ಯವೂ ಪೂಜಿಸುತ್ತಿರುವ ಆ ಅಗ್ನಿಯಿಂದಲೇ ಕೆಂಡ ತೆಗೆದು ಅವರ ಅಂತ್ಯೇಷ್ಟಿಗಳಿಗೆ ಬಳಸುತ್ತಿದ್ದರು ಮತ್ತು ಅಲ್ಲಿಗೆಮಾತ್ರ ಆ ಅಗ್ನಿಹೊತ್ರಿಯ ವೃತ ಸಮಾಪ್ತಿಯಾಗುತ್ತಿತ್ತು. ಇಂದು ಅಗ್ನಿಹೋತ್ರವೆಂದರೆ ತಮಾಷೆಯಾಗಿ ಜನ CHAIN SMOKERS ನ್ನು ಅಗ್ನಿಹೋತ್ರಿ ಅನ್ನುವುದಿದೆ ! ಇದು ನಿಜವಾಗಿ ನಾವು ಅಗ್ನಿಹೋತ್ರಿ ಎಂಬ ಆ ಪದಕ್ಕೆ
ReplyDeleteಅಪಚಾರಮಾಡುವ ಕ್ರಮ,ಹಾಗಾಗಿ ಆ ರೀತಿ ಶಬ್ಧದ ದುರ್ಬಳಕೆ ಆಗದಿರಲಿ. ಲೇಖನ ಅರ್ಥಪೂರ್ಣ! ಶರ್ಮರಿಗೂ ಹಾಗೂ ವೇದಸುಧೆಯ ಹರಿಹರಪುರ ಶ್ರೀಧರರೂ ಸೇರಿದಂತೆ ಮಿಕ್ಕೆಲ್ಲರಿಗೂ ಧನ್ಯವಾದಗಳು.