Pages

Saturday, April 10, 2010

ಮೂರ್ಖ ಜನರು ನಾಶವಾದಾರೇ ಹೊರತು ಬಾಗುವುದಿಲ್ಲ

ನಮಂತಿ ಫಲಿತಾ ವೃಕ್ಷಾ:|

ನಮಂತಿ ಬುಧಾ ಜನಾ: |
ಶುಷ್ಕ ಕಾಷ್ಠಾನಿ ಮೂರ್ಖಾಶ್ಚ|

ಭಿದ್ಯಂತೇನ ನಮಂತಿಚ||
ಹಣ್ಣು ಬಿಟ್ಟ ಮರಗಳು ಬಾಗುತ್ತವೆ.ವಿದ್ವಾಂಸರಾದ ಜನರು ವಿನಯದಿಂದಬಾಗುತ್ತಾರೆ. ಒಣಕಡ್ಡಿಗಳು ಮುರಿದುಹೋಗುತ್ತವೆ. ಬಾಗುವುದಿಲ್ಲ. ಅಂತೆಯೇ ಮೂರ್ಖ ಜನರು ನಾಶವಾದಾರೇ ಹೊರತು ಬಾಗುವುದಿಲ್ಲ.

2 comments:

  1. ಬಹಳ ಒಳ್ಳೆಯ ಸುಭಾಷಿತ, ಫಲ ಭರಿತ ಮರ ಹಲವು ರೀತಿಯಲ್ಲಿ ಪಾರೋಪಕಾರಿ, ಒಣ ಕಾಷ್ಠ ಕಡ್ಡಿ ಯಾವುದಕ್ಕೂ ಅನುಕೂಲವಲ್ಲ, ಮೂರ್ಖರ ಕೂಡ ವಾದಮಾಡಿದರೆ ನಾವೇ ತಲೆತಗ್ಗಿಸಬೇಕಾಗುತ್ತದೆ- ಇದರಲ್ಲಿ ಕಲಿತ ಅಹಂ ಬೆಳೆದಿರುವ ವಿದ್ವಾಂಸರೆಂಬ ಹೆಸರು ಪಡೆದಿರುವ ಮೂರ್ಖರೂ ಇದ್ದಾರೆ-ಅವರ ಕೂಪ ಮಂಡೂಕತನದಿಂದ ಬೇರೆಯವರು ಎಲ್ಲಾ ವಿಷಯಗಳಲ್ಲೂ ತಮಗಿಂತ ಕಡೆ ಎಂಬ ರೀತಿ ಇರುತ್ತಾರೆ, ಅವರ ಜಗತ್ತೇ ಹಾಗೆ. ವಿದ್ವತ್ತು ಬೇರೆ ಸಂಸ್ಕೃತಿ ಬೇರೆ, ನಿಜವಾದ ಸುಸಂಸ್ಕೃತ ವಿದ್ವಾಂಸ ಮಾತ್ರ ವಿನಯವಂತನಾಗಿ, ಸದಾಚಾರ ಸಂಪನ್ನನಾಗಿ, ಎಲ್ಲರಿಗೂ ಬಾಗಿ ನಡೆಯುವ ಸ್ವಭಾವ ಹೊದಿರುತ್ತಾನೆ,ಇದಕ್ಕೆ ಕನ್ನಡದಲ್ಲಿ ' ತುಂಬಿದ ಕೊಡ ತುಳುಕುವುದಿಲ್ಲ ' ಎಂಬ ಗಾದೆ ಇದೆಯಲ್ಲವೇ ? ನಮಸ್ಕಾರ.

    ReplyDelete