Pages

Monday, April 12, 2010

ಧನ-ದಾನ-ಧನ್ಯ

ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ|
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ||
-ನೀತಿ ಶತಕ

ದಾನ, ಭೋಗ, ನಾಶ- ಎಂದು ಹಣಕ್ಕೆ ಮೂರು ಗತಿಗಳುಂಟು. ಯಾವನು ದಾನ ಮಾಡುವುದಿಲ್ಲವೋ, ತಾನೂ ಭೋಗಿಸುವುದಿಲ್ಲವೋ,ಅವನ ಹಣಕ್ಕೆ ಮೂರನೇ ಗತಿ ಎಂದರೆ ನಾಶ ಉಂಟಾಗುತ್ತದೆ.

ಧನ ಶಬ್ಧದಿಂದ ಧಾನ್ಯ ಶಬ್ಧ ಹುಟ್ಟಿದೆ. ಒಂದು ಕಾಲದಲ್ಲಿ ಧಾನ್ಯವೇ ಧನವೆನಿಸಿತ್ತು. ಧಾನ್ಯವನ್ನು ಬಹುಕಾಲ ಕೂಡಿಹಾಕಿದರೆ ನಾಶವಾಗುತ್ತದೆ.ಅದರ ವಿನಿಯೋಗ ಆಗುತ್ತಲೇ ಇರಬೇಕು. ತಿನ್ನಬೇಕು ಅಥವಾ ತಿನ್ನಲು ಇಲ್ಲದವರಿಗೆ ದಾನ ಕೊಡಬೇಕು.ಹೀಗೆ ಮಾಡುವವನೇ ಧನ್ಯ.
ದ್ರವ್ಯ ಯಜ್ಞವು ಹಲವು
ಯಜ್ಞಗಳಲ್ಲಿ ಒಂದು. " ಯಜ: ದೇವಪೂಜಾ ಸಂಗತಿಕರಣ ದಾನೇಷು" ಎಂಬುದು ಧಾತ್ವರ್ಥ. ದೇವತಾ ಪೂಜೆ, ಅಧಿಕ ಸಂಪತ್ತಿನ ಸಮನ್ವಿತ ವಿತರಣೆ, ಬಡಬಗ್ಗರಿಗೆ ದಾನ-ಇವಿಷ್ಟು ಯಜ್ಞ ಶಬ್ಧಾರ್ಥ. ಅಗತ್ಯವಿದ್ದವರಿಗೆ ದಾನಮಾಡುವುದೇ ದ್ರವ್ಯಯಜ್ಞವು. ಗಾಳಿ ಶುದ್ಧವಾಗಿರಬೇಕಾದರೆ ಬೀಸುತ್ತಿರಬೇಕು, ನೀರು ಶುದ್ಧವಾಗಿರಬೇಕಾದರೆ ಹರಿಯುತ್ತಿರಬೇಕು, ಹಣವು ಉಪಯೋಗವಾಗುತ್ತಿದ್ದರೆ ಮಾತ್ರ ಅದಕ್ಕೆ ಬೆಲೆ.
ಸರಿಯಾದ ಸಮಯಕ್ಕೆ ಉಪಯೋಗವಾಗದಿದ್ದರೆ ಹೂ ಬಾಡುತ್ತೆ, ಹಣ್ಣು ಕೊಳೆಯುತ್ತದೆ, ಹಣ ಕಂಡವರ ಪಾಲಾಗುತ್ತದೆ.3 comments:

  1. ಸೂಕ್ತ ವಿಚಾರವನ್ನ ತಿಳಿಸಿದ್ದಿರಾ....
    ಇನ್ನಾದರೂ ಸ್ವಿಸ ಬ್ಯಾ೦ಕನಲ್ಲಿ ಹಣವಿಡುವ ಜನ ಅರಿತಾರೇ ಈದರ ಮರ್ಮವ..

    ReplyDelete
  2. ಇದರ ಮರ್ಮ ತಿಳಿಯಲು ಅವರಿಗೆಲ್ಲಿ ಪುರಸೊತ್ತು? ಮೂರನೇ ಗತಿ ಇದ್ದೇ ಇದೆಯಲ್ಲ!

    ReplyDelete