Pages

Thursday, May 27, 2010

ಅಪರಾಧ ಮಾಡಿದ್ದೇನೆ! ಕ್ಷಮಿಸು!- ಒಂದು ಜಿಜ್ಞಾಸೆ

ಇಲ್ಲಿರುವ ಒಂದು ನಿಮಿಷದ ಆಡಿಯೋ ಕೇಳಿ. ನಾವೆಲ್ಲರೂ ಸಂಧ್ಯಾವಂದನೆ ಸಮಯದಲ್ಲಿ ಈ ಮಂತ್ರವನ್ನು ಸಾಮಾನ್ಯವಾಗಿಹೇಳುತ್ತೇವೆ. ನನಗೆ ಬಹಳ ದಿನಗಳಿಂದ ಒಂದು ಜಿಜ್ಞಾಸೆ ಕಾಡಿತ್ತು. ಅಪರಾಧ ಮಾಡಿದ್ದೇನೆ! ಕ್ಷಮಿಸು! ಎನ್ನುವ ಈ ಮಾತು ಎಷ್ಟು ಸರಿ? ನಿತ್ಯವೂ ಕ್ಷಮಿಸು ಎಂದು ಹೇಳುವುದರಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಡಕವಾಗಿದೆಯಲ್ಲವೇ? ಇದು ನಿಜವಾಗಿಯೂ ತಲೆಹರಟೆಪ್ರಶ್ನೆ ಅಲ್ಲ. ನನ್ನೊಳಗಿನ ಪ್ರಶ್ನೆ. ಇದಕ್ಕೆ ಸಮಂಜಸ ಸಮಾಧಾನ ಬೇಕು. ತಿಳಿದವರು ನಿಮ್ಮ ಅಭಿಪ್ರಾಯ ತಿಳಿಸಿ. ಸುಧಾಕರ ಶರ್ಮರುಅವರ ವ್ಯಾಖ್ಯಾನವನ್ನು ಪ್ರತಿಕ್ರಿಯೆ ಕಾಲಮ್ ನಲ್ಲೂ ಬರೆಯಬಹುದು. ಅಥವಾ ಪ್ರತ್ಯೇಕ ಲೇಖನವಾಗಿಯೇ ನನಗೆ ಕಳಿಸಬಹುದು. ಪ್ರತ್ಯೇಕವಾಗಿಯೇ ಪ್ರಕಟಿಸುವೆ.


ವಿ.ಆರ್.ಭಟ್ -ಇವರ ಪ್ರತಿಕ್ರಿಯೆ:

ಅಥರ್ವಣದಲ್ಲಿರುವ ಗಣಪತಿ ಉಪನಿಷತ್ತಿನಲ್ಲಿ " ಸಾಯಮಧೀಯಾನೋ ದಿವಸ ಕೃತಂ ಪಾಪಂ ನಾಶಯತಿ| ಪ್ರಾತರಧೀಯಾನೋ ರಾತ್ರಿಕೃತಂ ಪಾಪಂ ನಾಶಯತಿ| ಎಂದು ಬಂದಂತೆ ನಮಗೆ ಅರಿತೋ ಅರಿವಿಲ್ಲದೆಯೋ ನಮ್ಮಅನುಕೂಲಕ್ಕೋ ಅವಶ್ಯಕತೆಗೋ ತಕ್ಕಂತೆ ಸಣ್ಣ ಏಕಕೋಶ ಜೀವಿಗಳಿಂದ ಹಿಡಿದು ಸೊಳ್ಳೆ,ಇರುವೆ,ಜಿರಳೆ ಮುಂತಾದ ಅನೇಕಜೀವಿಗಳನ್ನು ನಾವು ನಾಶಮಾಡುತ್ತೇವೆ--ಆ ಹಕ್ಕು ನಮದಲ್ಲವಲ್ಲ, ಹಾಗಂತ ಅವುಗಳು ಸತ್ತಿದ್ದಕ್ಕೆ ಅನುಕಂಪ-ಪಶ್ಚಾತ್ತಾಪ ನಮ್ಮಮನಕ್ಕಿಲ್ಲವಲ್ಲ ! ಅವುಗಳಿಗೂ ಸಂಬಂಧಿಸಿದ ಮಕ್ಕಳು,ಮರಿಗಳು,ಪಾಲಕರೇ ಇತ್ಯಾದಿ ಪರಿವಾರವಿದ್ದು ಅವರು ನೊಂದುರೋದಿಸಬಹುದಲ್ಲ? ಅಲ್ಲದೇ ನಮ್ಮ ಆಹಾರಕ್ಕಾಗಿ ನಾವು ಅನೇಕ ಬೀಜಗಳನ್ನು ಕಾಳು-ಧಾನ್ಯಗಳನ್ನು ಉಪಯೋಗಿಸುತ್ತಿರುವುದುಅದು ಇನ್ನೊಂದು ಸಸ್ಯದ-ಗಿಡದ ಸಂತಾನಹರಣಮಾಡಿದಹಾಗಿರುತ್ತದಲ್ಲ ? ನಾವು ಕುಡಿಯುವ ಹಾಲು ಆಕಳು/ಎಮ್ಮೆ ಇತ್ಯಾದಿಪ್ರಾಣಿಗಳ ಕರುವಿನ ತುತ್ತನ್ನು ಕಸಿದ ಹಾಗಿರುತ್ತದಲ್ಲ ? ಹೀಗೆ ವಿಚಾರ ಮಥಿಸಿದರೆ ಹಲವು ತಪ್ಪು ಮಾಡಿದ ದಾರಿ ಕಾಣಬಹುದಲ್ಲ? ಈಎಲ್ಲಾ ತಪ್ಪನ್ನು ನಮ್ಮುಳಿವಿಗಾಗಿ ನಾವು ಮಾಡುತ್ತಿರುವುದರಿಂದ ಅನಿವಾರ್ಯವಾಗಿ ಮಾಡಬೇಕಾಗಿ ಬಂದ ಈ ತಪ್ಪುಗಳನ್ನುಕ್ಷಮಿಸು ಎಂದು ಉದಾರ ಮನದಿಂದ ಕೇಳಲು ಅಡ್ಡಿ ಇಲ್ಲವಲ್ಲ ? ಹೀಗಾಗಿ ಸಂಧ್ಯಾವಂದನೆ ಸರಿಯಾಗೇ ಇದೆ ಎಂಬುದು ನನ್ನಸಮರ್ಥನೆ, ಧನ್ಯವಾದಗಳು


May 26, 2010 7:06 PM
ವೇದಸುಧೆಯ ಮಾತು:

ಶ್ರೀ ವಿಷ್ಣುಭಟ್ಟರಿಗೆ ನಮಸ್ಕಾರಗಳು. ನಿಮ್ಮ ಸಮರ್ಥನೆ ಅರ್ಥಪೂರ್ಣವಾಗಿದೆ. ಧನ್ಯವಾದಗಳು.ಜಿಜ್ಞಾಸೆ ನಡೆಯುವಾಗ ವಿಷಯದಅನೇಕ ಮಗ್ಗಲುಗಳನ್ನು ವಿವೇಚಿಸಬೇಕಾಗುತ್ತದೆ. ಹೀಗೆ ವಾದ ಮಂಡಿಸುವಾಗ ದಯಮಾಡಿ ತಪ್ಪಾಗಿ ಭಾವಿಸಬಾರದು. ಮಂತ್ರದಆಡಿಯೋ ಕೇಳಿದಿರಿ.ಎಲ್ಲರೂ ಹೇಳುವಂತಹ ಮಂತ್ರವೇ, ಹಾಗಾಗಿ ಎಲ್ಲರಿಗೂ ಈ ಮಂತ್ರದ ಬಗ್ಗೆ ಅರಿವಿದೆ.ನನ್ನ ಮನದಲ್ಲಿ ಮೂಡಿದಸಂದೇಹಕ್ಕೆ ಎರಡು ಕಾರಣಗಳಿವೆ. ತಿಳಿದವರು ಅನುಮಾನ ಪರಿಹರಿಸಬೇಕು.
೧] ಇಲ್ಲಿ ಶಿಶ್ನ ಪದದ ಪ್ರಯೋಗವಾಗಿದೆ. ಅದರಿಂದ ಆಗಬಹುದಾದ ತಪ್ಪಿನ ಬಗ್ಗೆಯೂ ಉಪನ್ಯಾಸಕರು ವಿವರಿಸಿದ್ದಾರೆ. ಪ್ರತಿನಿತ್ಯವೂ ಸಂಧ್ಯಾವಂದನೆ ಕಾಲದಲ್ಲಿ ಈ ಮಂತ್ರ ಹೇಳುವುದು ಆಚರಣೆಯಲ್ಲಿದೆ. ಮಕ್ಕಳಿಗೆ ಎಂಟು ವರ್ಷಕ್ಕೆಉಪನಯನವಾಗುತ್ತಿದುದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ. ಇಂತಾ ಮಕ್ಕಳೂ ಈ ಮಂತ್ರವನ್ನು ಹೇಳಬೇಕಲ್ಲಾ! ಇದುಸರಿಯೇ?
೨] ಸ್ತ್ರೀಯರಿಗೂ ಉಪನಯನ ಸಂಸ್ಕಾರವಿತ್ತು. ಅವರೂ ಇದೇ ಮಂತ್ರ ಹೇಳುವುದು ಎಷ್ಟು ಉಚಿತ?
ಬಹುಷ: ಈ ರೀತಿಯ ಅನೇಕ ತಪ್ಪು-ಒಪ್ಪುಗಳಬಗ್ಗೆ ವೇದಸುಧೆಯಲ್ಲಿ ಚರ್ಚೆಮಾಡಬೇಕಾಗುತ್ತದೆ. ಸತ್ಯವನ್ನು ಕೊನೆಗೆಒಪ್ಪಿಕೊಳ್ಳಬೇಕಾಗುತ್ತದೆ. ಇಲ್ಲಿ ಯಾರದೋ ಸೋಲು ಯಾರದೋ ಗೆಲುವು ಮುಖ್ಯವಲ್ಲ. ನನ್ನ ಉದ್ಧೇಶವೆಂದರೆ ತಪ್ಪು ಆಚರಣೆಮಾಡುತ್ತಿದ್ದರೆ, ಅದು ತಪ್ಪು ಎಂದು ಶೃತಪಟ್ಟರೆ ಅದನ್ನು ಸರಿಪಡಿಸಿಕೊಳ್ಳಬೇಕಲ್ಲವೇ?

ವಿ.ಆರ್.ಭಟ್ said...

ಇಲ್ಲಿ ಒಂದು ಸಣ್ಣ ಅವಲೋಕನ-

ಮಂತ್ರವನ್ನು ಒಟುವಾಗಲೀ ಸ್ತ್ರೀಯಾಗಲೀ ಒಳಗಿನ ಆತ್ಮಕ್ಕೆ ಲಿಂಗಭೇದವಿಲ್ಲ. ಶಿಶ್ನ ಎಂಬುದು ಕೇವಲ ಗುಪ್ತಾಂಗದ ಬಾಹ್ಯನಿರೂಪಣೆ, ತಪ್ಪು ಕೇವಲ ಭೌತಿಕವಲ್ಲ, ತ್ರಿಕರಣಗಳಲ್ಲೂ ತಪ್ಪು ಹೊಮ್ಮಬಹುದು.ಉದಾಹರಣೆಗೆ- ಚೆನ್ನಾಗಿರುವಹೆಂಗಸನ್ನು/ಗಂಡಸನ್ನು ಕಂಡು ಮನಸ್ಸು ಭೋಗದ ಅಭಿಲಾಷೆ ಪಡೆಯಬಹುದು, ಚಿಕ್ಕವಟುಗಳು ತಮ್ಮ ಪೂರ್ವಾರ್ಜಿತದಲ್ಲಿಲೈಂಗಿಕ ವ್ಯಭಿಚಾರ ಎಸಗಿದ್ದನ್ನು ಆತ್ಮ ಅಡಕವಾಗಿಸಿ ಇಟ್ಟುಕೊಂಡಿರಬಹುದು! ಹೀಗಾಗಿ ಎಲ್ಲರಿಗೂ ಒಳ್ಳೆಯ ದೈವಿಕಕಾರ್ಯಕ್ರಮಗಳನ್ನು ಆಚರಿಸುವಾಗ ಕೃಚ್ರ ಅಂತ ಒಂದು ವಿಧಿಮಾಡಿಸುತ್ತಾರೆ ನೋಡಿ, ಅದೂ ಕೂಡ ಕ್ಷಣಿಕವಾಗಿ ಹೀಗೇ ತ್ರಿಕರಣಶುದ್ಧಿಯಾಗಲು ಒಂದು ಮಾರ್ಗ ಅಷ್ಟೇ! ಈ ನಿಟ್ಟಿನಲ್ಲಿ ನಾವು ಅವಲೋಕಿಸಿದರೆ ಲಿಂಗ ಭೇದವಿಲ್ಲದ ಆತ್ಮಕ್ಕೆ ಲಿಂಗಕಲ್ಪನೆ ಮಾಡಿಕರುಣಿಸಿದ ಮಂತ್ರ ಅದು, ಅದು ಸರಿಯೇ ಇದೆ ಎಂಬುದು ನನ್ನ ಅನಿಸಿಕೆ,ಧನ್ಯವಾದಗಳು

May 27, 2010 6:29 PM
hariharapurasridhar said...

ಶ್ರೀ ಭಟ್ಟರೇ, ಸಕ್ರಿಯವಾಗಿ ಪಾಲ್ಗೊಂಡಿರಿ.ನಿಮಗೆ ಧನ್ಯವಾದಗಳು.

May 27, 2010 8:36 PM
ಸುಧಾಕರ ಶರ್ಮಾ said...

ಮಾನ್ಯ ಓದುಗರಿಗೆ ವಂದನೆಗಳು!
ಆಲೋಚನೆಗಾಗಿ ಕೆಲವು ಮಾಹಿತಿ.
ಮೊದಲಿಗೆ `ಕ್ಷಮೆ'
ರೂಢಿಯಲ್ಲಿ ಕ್ಷಮೆ ಎಂಬ ಪದದ ಅರ್ಥವನ್ನು 'Excuse' ಎಂದೇ ತಿಳಿದಿದ್ದೇವೆ.
ಆದರೆ, ಇದರ ಸರಿಯಾದ ಮೂಲ ಅರ್ಥ 'Tolerance'.
ಆ ವ್ಯಕ್ತಿಯು ಈ ಕೆಲಸವನ್ನು ಮಾಡಲು ಸಕ್ಷಮನಾಗಿದ್ದಾನೆ/ಳೆ - ಈ ವಾಕ್ಯವನ್ನು ನೋಡಿರಿ.
ಇನ್ನು ತಪ್ಪುಗಳನ್ನು ಮಾಡುವ ಬಗ್ಗೆ:
ವೇದಗಳು ಈ ವಿಚಾರದಲ್ಲಿ ಬಹಳ ಸ್ಪಷ್ಟವಾಗಿವೆ. ತಪ್ಪನ್ನು ಮಾಡಿದ ಮೇಲೆ ಶಿಕ್ಷೆಯನ್ನು ಅನುಭವಿಸಿಯೇ ತೀರಬೇಕು. ಏನುಮಾಡಿದರೂ ಶಿಕ್ಷೆಯಿಂದ ಬಿಡುಗಡೆಯಿಲ್ಲ. ಶಿಕ್ಷೆ ಬೇಡವೆಂದರೆ ತಪ್ಪನ್ನು ಮಾಡಬಾರದು ಅಷ್ಟೆ! ಗೊತ್ತಿಲ್ಲವೆಂದರೆ ತಿಳಿದುಕೊಳ್ಳಬೇಕು. ಮಾನವರಿಗೆ ತಿಳಿಯುವ, ಆಲೋಚಿಸುವ , ವಿಮರ್ಶಿಸುವ ಸಾಮರ್ಥ್ಯವಿದೆ. Ignorance is no excuse!!
ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.12.3.48) - ಮಾಡಿದ ಅಡುಗೆಯು ಮಾಡಿದವನನ್ನು ಹುಡುಕಿಕೊಂಡು ಹೋಗುತ್ತದೆ.
ಇದು 'ಮಾಡಿದ್ದುಣ್ಣೋ ಮಹರಾಯ' ಎಂಬ ಜಾನಪದದ ಗಾದೆಗಿಂತ powerful!
ಮಾಡಿದ್ದನ್ನು ಉಣ್ಣುವುದಿಲ್ಲ, ಏಕೆಂದರೆ ಕೆಟ್ಟುಹೋಗಿದೆಯೆಂದು, ಹೋಟಲಿಗೆ ಹೋಗಬಹುದು. ಆದರೆ ಈ ಮಂತ್ರ ಹೇಳುತ್ತಿದೆ. ಯಾವುದೇ ಹೋಟಲಿಗೆ ಹೋದರೂ ಅಲ್ಲಿ ಬಡಿಸುವುದು, ಬೇಡವೆಂದು ಬೆಟ್ಟುಹೋದ ಕೆಟ್ಟ ಅಡುಗೆಯೇ!! ಏಕೆಂದರೆ, ನೀನು ಬಿಟ್ಟರೂಅದು ನಿನ್ನನ್ನು ಬಿಡುವುದಿಲ್ಲ, ಹುಡುಕಿಕೊಂಡು ಬರುತ್ತದೆ!!!
ಇನ್ನು ಈ ಆಡಿಯೋನಲ್ಲಿ ಬಂದಿರುವ ಸಂಧ್ಯಾವಂದನೆಯ ಮಂತ್ರ (?).
ನನ್ನ ಹುಡುಕುವಿಕೆಯ ಫಲಿತಾಂಶವೇನೆಂದರೆ, ಇದು ನಾಲ್ಕೂ ವೇದಸಂಹಿತೆಗಳಲ್ಲಿ ಎಲ್ಲಿಯೂ ಬಂದಿರುವುದಿಲ್ಲ. (ಬಂದಿದ್ದಲ್ಲೆ ಯಾವವೇದ, ಯಾವ ಮಂಡಲ ಅಥವಾ ಸೂಕ್ತ, ಮಂತ್ರ ಸಂಖ್ಯೆಯನ್ನು ತಿಳಿಸಿದಲ್ಲಿ ಪುನಃ ಪರಿಶೀಲಿಸುವೆ) ಸಂಸ್ಕೃತದಲ್ಲಿದ್ದ ಮಾತ್ರಕ್ಕೆ ಅದುಪ್ರಮಾಣವಾಗುವುದಿಲ್ಲ. ಏಕೆಂದರೆ, ಸಂಸ್ಕೃತ ಬರುವ ಯಾರು ಬೇಕಾದರೂ ಏನನ್ನೂ ಬರೆದು ವೇದದ ಮುದ್ರೆಯನ್ನುಹಾಕಿಬಿಡಬಹದು. ಸಂಪ್ರದಾಯದಲ್ಲಿ ಇಂತಹ ಅನಾಚಾರ ಲೆಕ್ಕವಿಲ್ಲದಷ್ಟು ಆಗಿದೆ. (ಉದಾ: ಮಾಂಗಲ್ಯ ತಂತುನಾನೇನ ಮಮಜೀವನ ಹೇತುನಾ ...)
ಹಾಗಾಗಿ ಆಡಿಯೋದಲ್ಲಿರುವ ಸಂಸ್ಕೃತ ರಚನೆ ಮಾನ್ಯವಲ್ಲ, ಪ್ರಮಾಣವಲ್ಲ. ಈ ಮಾತುಗಳಿಗೆ ವೇದದ ಬೆಂಬಲವಿಲ್ಲ!!
ಆಡಿಯೋದಲ್ಲಿರುವ ಇನ್ನೊಂದು ವೇದವಿರುದ್ಧವಾದ ವಿಚಾರವೆಂದರೆ, ಸಂಧ್ಯೋಪಾಸನೆ, ಪಶ್ಚಾತ್ತಾಪಗಳ ವಿಚಾರ ಹೇಳುವಾಗಸ್ಪಷ್ಟವಾಗಿಯೇ ಶೂದ್ರರನ್ನು ಬಿಟ್ಟಿರುವುದು.
ವೇದಗಳ ಸ್ಪಷ್ಟ ನಿಲುವಿನಂತೆ ಶೂದ್ರವೂ ಒಂದು ಆರಿಸಲು ಯೋಗ್ಯವಾದ ವರ್ಣವಾದ್ದರಿಂದ ಅವರು ನೀಚರಲ್ಲ. ಇದುಸಂಪ್ರದಾಯದಲ್ಲಿ ಬಂದಿರುವ ದೊಡ್ಡ ಮಾನವದ್ರೋಹ. ಅವೈದಿಕ.


May 27, 2010 8:47 PM
ಸುಧಾಕರ ಶರ್ಮಾ said...

ಅಜ್ಯೇಷ್ಠಾಸೋ ಅಕನಿಷ್ಠಾಸಃ ಸಂ ಭ್ರಾತರೋ ವಾವೃಧುಃ ಸೌಭಗಾಯ(ಋಕ್.5.60.5.)- ಹೇ ಮಾನವರೇ! ನಿಮ್ಮಲ್ಲಿ ಯಾರೂಜ್ಯೇಷ್ಠರಲ್ಲ, ಯಾರೂ ಕನಿಷ್ಠರಲ್ಲ. ನೀವೆಲ್ಲರೂ ಸಹೋದರರಂತೆ. ನಿಮ್ಮೆಲ್ಲರ ಸೌಭಾಗ್ಯಕ್ಕಾಗಿ ಒಂದುಗೂಡಿ ಮುಂದುವರೆಯಿರಿ. ವರ್ಣಗಳ ವಿಚಾರದಲ್ಲಿ ವೇದಗಳು ಇಷ್ಟು ಸ್ಪಷ್ಟವಾಗಿರುವಾಗ ಅವೈದಿಕ ವಿಚಾರವನ್ನು, ಸಮಾಜವನ್ನು ನಾಶಮಾಡುವ ವಿಚಾರವನ್ನುತಿಳಿದವರೆನಿಸಿಕೊಂಡವರೂ ಕೂಡ (ಆಡಿಯೋದಲ್ಲಿರುವವರು ಯಾರೆಂದು ತಿಳಿಯಬಹುದೆನಿಸುತ್ತದೆ) ಮೂರ್ಖತನದಿಂದಪ್ರಚಾರಮಾಡುತ್ತಿರುವುದು ನಮ್ಮ ದುರ್ದೈವ. ನಾವು ಸಾಧಾರಣರಾದರೂ ಚಿಂತಿಲ್ಲ, ಸತ್ಯವಿಚಾರವನ್ನು ಸಾಧಾರವಾಗಿ ಜನತೆಗೆತಿಳಿಸುತ್ತಾ ಸಾಗೋಣ. ಸಂಧ್ಯೋಪಾಸನೆ ಎರಡೇ ಸಲ! ಸ್ಪಷ್ಟವಾಗಿರಲಿ. ದಿನದಲ್ಲಿ ಇರುವುದು ಎರಡೇ ಸಂಧಿಗಳು. ರಾತ್ರಿ-ಹಗಲಿನಸಂಧಿ, ಮತ್ತೊಂದು ಹಗಲು-ರಾತ್ರಿಗಳ ಸಂಧಿ. ಮಧ್ಯಾಹ್ನದಲ್ಲಿ ಯಾವುದೇ ಸಂಧಿಯಿಲ್ಲ!!
ಆಗ ನಾವು ಮಾಡುವ ವೈದಿಕ ಸಂಧ್ಯೋಪಾಸನೆಯ ಸಾರವಿಷ್ಟು -
ನಮ್ಮ ಇತಿ-ಮಿತಿಗಳನ್ನು ಅರಿಯುವುದು, ಮಾಡಿರುವ ತಪ್ಪುಗಳ ವಿಚಾರದಲ್ಲಿ ಪಶ್ಚಾತ್ತಾಪವನ್ನು ಪಡುವುದು (ನೆನಪಿರಲಿಪ್ರಾಯಶ್ಚಿತ್ತವಿಲ್ಲವೇ ಇಲ್ಲ!!) ತಪ್ಪಿಗೆ ಕಾರಣವನ್ನು, ವಿಶೇಷವಾಗಿ ನಮ್ಮ ಅಜ್ಞಾನವನ್ನು ಗುರುತಿಸಿಕೊಂಡು, ಮುಂದಿನಸಂಧ್ಯೋಪಾಸನೆಯವರೆಗೂ ಎಚ್ಚರಿಕೆ, ಜಾಗೃತಿಯಿಂದ ಕೆಲಸಮಾಡುವ ಸಂಕಲ್ಪವನ್ನು ಕೈಗೊಳ್ಳುವುದು. ಸಂಧ್ಯೋಪಾಸನೆಯುಆಗಿದೆಯೇ ಹೊರತು ಎಂದಿಗೂ Retrospective ಅಲ್ಲ. ಹೋದ ಕಾಲ ಹೋದಂತೆಯೇ. ಅದರ ಬಗ್ಗೆ ಎಷ್ಟುಚಿಂತಿಸಿದರೂ ಫಲವಿಲ್ಲ. It is a waste of time, energy and resources. ತಪ್ಪು ಮಾಡುವ ಸಾಧ್ಯತೆಯಿರುವಪ್ರತಿಯೊಬ್ಬರೂ, ಜಾತಿ-ಮತ-ಪಂಥ-ದೇಶೀಯತೆಗಳ ಭೇದವಿಲ್ಲದೆ, ಗಂಡು-ಹೆಣ್ಣು ಭೇದವಿಲ್ಲದೇ ಈ ಸಂಧ್ಯೋಪಾಸನೆಯನ್ನುಮಾಡತಕ್ಕದ್ದು. ಕ್ರಮೇಣ ಎಚ್ಚರಿಕೆ ಹೆಚ್ಚುತ್ತಾ ತಪ್ಪುಗಳ ಸಂಖ್ಯೆ ಕಡಿಮೆಯಾಗುತ್ತದೆ. This is real progress!
ಹಾಗಾದರೆ 'ಕ್ಷಮೆ'ಗೆ ಏನರ್ಥ?
ನಮ್ಮ ತಪ್ಪಿಲ್ಲದೆ, ನಮ್ಮ ಅಜ್ಞಾನವಿಲ್ಲದೇ ಯಾವುದೇ ಶಿಕ್ಷೆ ನಮಗಾಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಭಗವಂತನನ್ಯಾಯವ್ಯವಸ್ಥೆ ನಿರ್ದುಷ್ಟವಾಗಿದೆ. ನ ಕಿಲ್ಬಿಷಮತ್ರ .. (ಅಥರ್ವ.12.3.48.)- ಇದರಲ್ಲಿ ಯಾವುದೇ ದೋಷವಿಲ್ಲ. ಭಗವಂತನಹೆಸರೇ ಅರ್ಯಮಾ = ನ್ಯಾಯಕಾರಿ.
ಈ ಪ್ರಜ್ಞೆಯಿದ್ದಾಗ, ತೊಂದರೆಗಳು ಶಿಕ್ಷೆಯ ರೂಪದಲ್ಲಿ ಬಂದಾಗ, ಆ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಹವಣಿಕೆ - Escapism - ಮಾಡುವುದಿಲ್ಲ. (ಮಾಡಿದರೆ ಆಗುವುದೂ ಇಲ್ಲ ಬಿಡಿ!) ಬದಲಿಗೆ ಧೈರ್ಯವಾಗಿ ಆ ಶಿಕ್ಷೆಯನ್ನು ಅನುಭವಿಸುತ್ತೇವೆ. ಕಾರಣವಾದತಪ್ಪನ್ನು ತಿದ್ದಿಕೊಳ್ಳಲು ಯತ್ನಿಸುತ್ತೇವೆ. ಭಗವಂತನಲ್ಲಿ ನಾವು ಬೇಡುತ್ತಿರುವುದು 'ಕ್ಷಮೆ' - ಸಹನಾ ಶಕ್ತಿ - Tolerance.
ಈ ಕ್ಷಮೆ ನಮಗೆ ದೊರೆತಾಗ ಶಿಕ್ಷೆಯು ಸಹನೀಯವಾಗುತ್ತದೆ. ನಮ್ಮ ತಪ್ಪನ್ನು ನಮ್ಮ ಮೇಲೇ ಹಾಕಿಕೊಂಡು ತಿದ್ದಿಕೊಳ್ಳುತ್ತೇವೆ. ನಮ್ಮ ತಪ್ಪಿಗೆ, ಬಂದ ಶಿಕ್ಷೆಗೆ ಯಾರನ್ನೋ Scapegoat ಮಾಡಲು ಯತ್ನಿಸುವುದಿಲ್ಲ.
ಕೊನೆಯ ಪಂಚ್ - ಮಾಡಿದ ತಪ್ಪುಗಳನ್ನು Excuse ಮಾಡುವ ಒಂದು ವ್ಯವಸ್ಥೆಯಿರುವುದಾದರೆ ತಪ್ಪು ಮಾಡಲು ಯಾರಾದರೂಹಿಂಜರಿಯುತ್ತಾರೆಯೇ?!!!!!
(ಈಗ ಆಗಿರುವುದಾದರೂ ಹೀಗೆಯೇ. ಬೇಕಾದ್ದು ಮಾಡು. ತಪ್ಪು-ಸರಿ, ನ್ಯಾಯ-ಅನ್ಯಾಯಗಳ ಗೊಡವೆ ಬೇಡ, ಧರ್ಮ-ಅಧರ್ಮಗಳ ಗೋಜಲೇ ಬೇಡ. ಬಂದ ಫಲದಲ್ಲಿ ದೇವರಿಗಷ್ಟು ಲಂಚ ಕೊಟ್ಟು, ಕಾಣಿಕೆ, ಕಿರೀಟ, ತಲೆಕೂದಲು, ಉರಳುಸೇವೆ, ದಶದಾನಗಳು ಇತ್ಯಾದಿ ಇತ್ಯಾದಿ, ಪಾಪದಿಂದ ಬಿಡುಗಡೆಯಾದೆವೆಂಬ ಸಮಾಧಾನದಿಂದ ಭವಿಷ್ಯದಲ್ಲಿ ಮತ್ತೆಪಾಪಗಳನ್ನು ಮಾಡಲು License Renew ಮಾಡಿಕೊಳ್ಳುವುದು!!!)
- ಸುಧಾಕರ ಶರ್ಮಾ
May 27, 2010 8:48 PM Prospective

ಶ್ರೀ ಸುಧಾಕರ ಶರ್ಮರೇ,
ನಿಮ್ಮ ಮಾತುಗಳನ್ನು ಹೀಗೆ ಅರ್ಥಮಾಡಿಕೊಂಡಿದ್ದೇನೆ.
೧] ಕ್ಷಮೆಯ ಅರ್ಥ- ಸಹಿಸುವ ಸಾಮರ್ಥ್ಯ. ಅಂದರೆ ತಪ್ಪು ಮಾಡಿದ್ದೇ ಆದರೆ ಅದಕ್ಕೆ ಒದಗುವ ಶಿಕ್ಷೆಯನ್ನುಸಹಿಸುವಸಾಮರ್ಥ್ಯವನ್ನು ಕರುಣಿಸೆಂದು ಭಗವಂತನಲ್ಲಿ ಬೇಡುವುದು.
೨] ತಪ್ಪು ಮಾಡಿದ ಮೇಲೆ ಅದರ ಫಲ ಅನುಭವಿಸಲೇ ಬೇಕು.
೩] ಸಂಧ್ಯಾಕಾಲಗಳು- ರಾತ್ರಿ ಕಳೆದು ಹಗಲಾಗುವ ಮತ್ತು ಹಗಲು ಕಳೆದು ರಾತ್ರಿಯಾಗುವ ಎರಡು ಸಂಧಿಕಾಲ.
೪] ಶೂದ್ರ ವರ್ಣಕ್ಕೂ ವೇದಾಧಿಕಾರವಿದೆ.
೫] ಆಡಿಯೋದಲ್ಲಿರುವ ಮಂತ್ರವು ನಾಲ್ಕೂ ವೇದ ಸಂಹಿತೆಗಳಲ್ಲಿಲ್ಲ.
ಕೊನೆಯದಾಗಿ ನಿಮ್ಮ ಕಠೋರವಾದ ಮಾತು" ಸಂಪ್ರದಾಯದಲ್ಲಿ ಇಂತಹ ಅನಾಚಾರಗಳು ಲೆಕ್ಖವಿಲ್ಲದಷ್ಟು ಆಗಿದೆ" ಎಂದುಅದಕ್ಕೊಂದು ಉಧಾಹರಣೆ ಕೊಟ್ಟಿರುವಿರಿ.
ಎಲ್ಲವನ್ನೂ ಒಪ್ಪಬಹುದಾಗಿದೆ.ಆದರೆ ಸಂಪ್ರದಾಯದ ಮಾತು ಬಂದೊಡನೆ ನೀವು ಕೆಂಡವಾಗುತ್ತೀರಿ.ನನ್ನ ಅಭಿಮತಹೀಗಿದೆ.ವೇದದಲ್ಲಿಲ್ಲ ಎಂದಾಕ್ಷಣ ಅದು ಸಮಾಜಕ್ಕೆ ಹಾನಿಕರವಲ್ಲವಾದರೆ ಆಚರಿಸಬಾರದೇಕೇ? ಇಲ್ಲಿ ಕೇಳಿದ ಮಂತ್ರದ ಬಗ್ಗೆ ಶ್ರೀವಿಷ್ಣುಭಟ್ಟರ ವಿವರಣೆ ಆಪ್ಯಾಯಮಾನವಾಗಿ ಕಾಣುತ್ತದೆ. ಶಿಶ್ನಾ ಪದದ ಹೊರತಾಗಿ ಉಳಿದದ್ದರ ಬಗ್ಗೆ ನನ್ನ ಅಕ್ಷೇಪವೇ ಇಲ್ಲ. ಶಿಶ್ನಾಪದದ ಬಗ್ಗೆ ಅಕ್ಷೇಪವೇಕೆಂದು ಈಗಾಗಲೇ ಹೇಳಿರುವೆ.
ಇನ್ನು ತಪ್ಪು-ಒಪ್ಪುವಿನ ವಿಚಾರ:- ಇದು ತಪ್ಪು , ಇದು ಒಪ್ಪು ಎಂದು ನಿರ್ಧರಿಸುವುದು ಹೇಗೆ? ನನ್ನ ದೃಷ್ಟಿಯಲ್ಲಿ ಮನುಷ್ಯನಿಗೆಅಂತಿಮವಾಗಿ ಬೇಕಾಗಿರುವುದು ನೆಮ್ಮದಿಯ ಜೀವನ. ಸತ್ಯಶೋಧನೆ ಮಾಡುವ ಬರದಲ್ಲಿ ನೆಮ್ಮದಿಯನ್ನು ಹಾಳುಮಾಡಿಕೊಂಡರೆಪ್ರಯೋಜನವಾದರೂ ಏನು? ತಪ್ಪು-ಒಪ್ಪುಗಳಿಗೆ ಒಬ್ಬನೇ ಅಪರಾಧಿ ಕೂಡ ಆಗುವುದಿಲ್ಲ. ಒಬ್ಬ ಮತ್ತೊಬ್ಬನ ಕೊಲೆಮಾಡಿಬಿಡುತ್ತಾನೆ. ಕೊಲೆಯಾದವನು ಕೊಲೆಯಾಗಿದ್ದಾದರೂ ಏಕೆ? ಕೊಲೆಯನ್ನು ಮಾಡಿದನಲ್ಲಾ! ಅವನಿಗೆ ಕೊಲೆಯಾದವನಿಂದಇನ್ನೆಂತಹ ಮಾನಸಿಕ ನೆಮ್ಮದಿ ಕೆಡುವ ತಪ್ಪು ಆಗಿದ್ದಿರಬಹುದು. ಇಲ್ಲದಿದ್ದರೆ ಕೊಲೆ ಮಾಡಿ ಜೈಲು ಸೇರುವ ದುಷ್ಟಕೆಲಸ ಅವನಿಂದನಡೆಯುತ್ತಲೇ ಇರಲಿಲ್ಲ. " ತನ್ನ ಪತ್ನಿ ಬಿಟ್ಟು ಅನ್ಯರಿಂದ ಸುಖವನ್ನು ಅಪೇಕ್ಷಿಸಿದ್ದೇ ಆದರೆ ಅಲ್ಲಿ ಪತ್ನಿಯ ತಪ್ಪು ಇಲ್ಲವೇ? ತನ್ನ ಪತಿಗೆಅವಳು ನಿಜವಾದ ಸುಖದಿಂದ ವಂಚಿಸಿ ತಪ್ಪು ಮಾಡಿರ ಬಹುದೇ? ಇವೆಲ್ಲಾ ಚರ್ಚೆಗೆ ಬರುತ್ತದೆ.
ಇನ್ನು ವರ್ಣಾಶ್ರಮದ ನಿಮ್ಮ ವಿವರಣೆಯನ್ನು ಒಪ್ಪುತ್ತೇನಾದರೂ ಶೂದ್ರ ಕೆಲಸ ಮಾಡುವವನಿಗೆ ಅವನ ಕೆಲಸವೇ ಯಜ್ಞವಾಗಿರುತ್ತದೇ ಹೊರತು [ಕಾಯಕವೇ ಕೈಲಾಸ] ಅವನಿಗೆ ವೇದಾಧ್ಯಯನ ಮಾಡಲು ಪುರಸೊತ್ತಾದರೂ ಎಲ್ಲಿಂದ ಬಂತು?

ಕಡೆಯದಾಗಿ--
ಇದು ಸರಿಯಿಲ್ಲವೆಂದು ಕಿತ್ತುಹಾಕುವಾಗ ಆಜಾಗವನ್ನು ಖಾಲಿಬಿಡಕೂಡದು. ಖಾಲಿ ಬಿಟ್ಟರೆ ಆಭಾಸ ಕಟ್ಟಿಟ್ಟ ಬುತ್ತಿ. ನಿಮ್ಮಮಾತುಗಳನ್ನು ಕೇಳುವಾಗ ಹಿತವಾಗಿರುತ್ತೆ. ಕಾರಣ ಅಲ್ಲಿ ಸತ್ಯ ಅಡಗಿರುವುದು ಗೋಚರವಾಗುತ್ತೆ. ಆದರೆ ನಿಮ್ಮ ಮಾತುಗಳನ್ನುಕೇಳಿ ಮನೆಗೆ ಹಿಂದುರುಗಿದ ವ್ಯಕ್ತಿಯು ಅಲ್ಲೂ ಇಲ್ಲ, ಇಲ್ಲೂ ಇಲ್ಲ ಸ್ಥಿತಿಗೆ ತಳ್ಳಲ್ಪಟ್ಟಿರುತ್ತಾನೆ. ಈ ಮಾತನ್ನು ನಿಷ್ಟುರವಾಗಿ ಹೇಳಲುಕಾರಣವಿದೆ.
ಮೂರ್ತಿಪೂಜೆ, ಅರಿಶಿನ-ಕುಂಕುಮ ಧಾರಣೆ, ಹಬ್ಬ-ಹರಿದಿನಗಳ ಆಚರಣೆ, ನಿತ್ಯಕರ್ಮಗಳು-ಇತ್ಯಾದಿಯನ್ನು ನಾವೀಗ ಏನುಆಚರಿಸುತ್ತಾ ಬಂದಿದ್ದೇವೋ ಆಬಗ್ಗೆ ನಿಮ್ಮ ಮಾತುಗಳಿಂದ ಶ್ರದ್ಧೆ ಕಡಿಮೆಯಾಗುತ್ತೆ. ಆಗಲೀ ಪರವಾಗಿಲ್ಲವೆಂದರೆಖಾಲಿಜಾಗತುಂಬಲು ನೀವು ಪರ್ಯಾಯವನ್ನು ಆಕೂಡಲೇ ಒದಗಿಸುವಷ್ಟು ನಿಮಗೆ ಸಮಯವಾಗಲೀ ಕಲಿಸುವವರಾಗಲೀಇಲ್ಲ.ಹಾಗಾಗಿ ನಿಮ್ಮ ಹಿಂಬಾಲಕರು ಎಡಬಿಡಂಗಿಗಳಾಗುವ ಸಾಧ್ಯತೆಯೇ ಹೆಚ್ಚು.
ಇಷ್ಟು ನಿಷ್ಟುರ ನುಡಿಗಳನ್ನು ಕೇಳಿದ ಮೇಲೆ ನೀವು ವೇದಸುಧೆಯ ಅಭಿಮಾನಿಗಳಿಗೆ ಸೂಕ್ತ ಸಮಾಧಾನ ಕೊಡುವಿರಲ್ಲವೇ?
-ಹರಿಹರಪುರಶ್ರೀಧರ್

ಶ್ರೀ ವಿ.ಆರ್.ಭಟ್ :

ತಪ್ಪಲ್ಲ ಎಂದು ಪರಿಗಣಿತವಾದರೆ ಹೀಗೊಂದು ಚಿಂತನೆ, ಹಂಸ ಕ್ಷೀರ ನ್ಯಾಯದಂತೆ ಹಾಲನ್ನು ನೀರಿಂದ ಬೇರ್ಪಡಿಸುವ ಕೆಲಸಶ್ರೀಯುತ ಸುಧಾಕರ ಶರ್ಮರಿಂದ ಆದರೆ ಅದು ಬಹಳ ಉತ್ತಮ ಮಾರ್ಗ. ತಾವು ಹೇಳಿದ ಹಾಗೇ ವೇದಕ್ಕೂ ಆಚರಣೆಗಳಿಗೂ ಮಧ್ಯೆಇರುವ ಸೇತುವೆ ಶಿಥಿಲವಾಗಿದ್ದರೆ, ಅಥವಾ ಅನಾವಶ್ಯಕ ಸರಕುಗಳಿಂದ ತುಂಬಿದ್ದರೆ ಅದನ್ನು ಸ್ವಚ್ಛಗೊಳಿಸಿ ಉಪಯೋಗಕ್ಕೆ ಬರುವಂತೆ ಮಾಡಬಹುದಲ್ಲ, ಒಂದು ಅಂಶವೆಂದರೆ ಎಲ್ಲಾ ಧರ್ಮಗಳಲ್ಲೂ ಪ್ರಾರ್ಥನೆ ಹೀಗೆ ಅಂತಿದೆ, ಆದರೆ ಹಿಂದೂ ಧರ್ಮದಲ್ಲಿಕಡ್ಡಾಯವಾಗಿ ಇಂಥದೇ ಪ್ರಾರ್ಥನೆ ಎಂಬ ಒತ್ತಾಯವಿಲ್ಲ! ಅನುಕೂಲ,ಅವಶ್ಯಕತೆ ಇದ್ದವರು, ತಾಕತ್ತಿದ್ದವರು ಸರಿಯಾಗಿ ಅರ್ಥವಿಸಿಸಾಧ್ಯವಾದಷ್ಟನ್ನು ಮಾಡಲಿ, ಕೊನೆಪಕ್ಷ ಪೂಜೆ-ಧ್ಯಾನಗಳು ಒಳ್ಳೆಯ ಮನಸ್ಸನ್ನಾದರೂ ಸೃಜಿಸಬಹುದು ಆಗದೇ ? ನಮಸ್ಕಾರ.
May 29, 2010 2:54 PM

1 comment:

  1. ತಪ್ಪಲ್ಲ ಎಂದು ಪರಿಗಣಿತವಾದರೆ ಹೀಗೊಂದು ಚಿಂತನೆ, ಹಂಸ ಕ್ಷೀರ ನ್ಯಾಯದಂತೆ ಹಾಲನ್ನು ನೀರಿಂದ ಬೇರ್ಪಡಿಸುವ ಕೆಲಸ ಶ್ರೀಯುತ ಸುಧಾಕರ ಶರ್ಮರಿಂದ ಆದರೆ ಅದು ಬಹಳ ಉತ್ತಮ ಮಾರ್ಗ. ತಾವು ಹೇಳಿದ ಹಾಗೇ ವೇದಕ್ಕೂ ಆಚರಣೆಗಳಿಗೂ ಮಧ್ಯೆ ಇರುವ ಸೇತುವೆ ಶಿಥಿಳವಾಗಿದ್ದರೆ, ಅಥವಾ ಅನಾವಶ್ಯಕ ಸರಕುಗಳಿಂದ ತುಂಬಿದ್ದರೆ ಅದನ್ನು ಸ್ವಚ್ಛಗೊಳಿಸಿ ಉಪಯೋಗಕ್ಕೆ ಬಿದ್ದುಗದೆ ಮಾಡಬಹುದಲ್ಲ, ಒಂದು ಅಂಶವೆಂದರೆ ಎಲ್ಲಾ ಧರ್ಮಗಳಲ್ಲೂ ಪ್ರಾರ್ಥನೆ ಹೀಗೆ ಅಂತಿದೆ, ಆದರೆ ಹಿಂದೂ ಧರ್ಮದಲ್ಲಿ ಕಡ್ಡಾಯವಾಗಿ ಇಂಥದೇ ಪ್ರಾರ್ಥನೆ ಎಂಬ ಒತ್ತಾಯವಿಲ್ಲ! ಅನುಕೂಲ,ಅವಶ್ಯಕತೆ ಇದ್ದವರು, ತಾಕತ್ತಿದ್ದವರು ಸರಿಯಾಗಿ ಅರ್ಥವಿಸಿ ಸಾಧ್ಯವಾದಷ್ಟನ್ನು ಮಾಡಲಿ, ಕೊನೆಪಕ್ಷ ಪೂಜೆ-ಧ್ಯಾನಗಳು ಒಳ್ಳೆಯ ಮನಸ್ಸನ್ನಾದರೂ ಸೃಜಿಸಬಹುದು ಆಗದೇ ? ನಮಸ್ಕಾರ.

    ReplyDelete