Pages

Sunday, June 20, 2010

ನಿಮಗೆ ಇಷ್ಟವಾಯ್ತೇ?

ವೇದಸುಧೆಯಲ್ಲಿ ಇತ್ತೀಚೆಗೆ ಒಂದಿಷ್ಟು ಬದವಾವಣೆಗಳಾಗಿವೆ. ನಿಮಗೆ ಇಷ್ಟವಾಯ್ತೇ? ಅಥವಾ ಹೇಗಿದ್ದರೆ ಚೆನ್ನ? ಎರಡುಮಾತಲ್ಲಿ ತಿಳಿಸುವಿರಾ?
-----------------------------------------------------
ಮೊಳಕಾಲ್ನೂರ್ ನಿಂದ ಡಾ|| ಜ್ಞಾನದೇವ್ ಹೀಗೆ ಹೇಳಿದ್ದಾರೆ......
"ಇತ್ತೀಚಿನ ವೇದಸುಧೆಯ ನೂತನ ಅವತಾರ ತು೦ಬಾ ಆಪ್ಯಾಯಮಾನವಾಗಿದೆ. ನಯನ ಮನೋಹರವಾಗಿದೆ, ಹಾಗೆಯೇ ಸುಶ್ರಾವ್ಯದ ಮ೦ತ್ರಗಳ ಮಧುರ ಗಾನ ಮನಸ್ಸನ್ನು ಅಲೌಕಿಕತೆಗೆ ಕರೆದೊಯ್ಯುವುದರಲ್ಲಿ ನನಗೆ ಸ೦ದೇಹವಿಲ್ಲ. ನಿಮ್ಮ ಈ ಸತತ ಪ್ರಯತ್ನಗಳು ಪ್ರಶ೦ಸನೀಯ. ನನಗೆ ಸಾಧ್ಯವಿದ್ದಾಗಲೆಲ್ಲಾ ವೇದಸುಧೆಗೆ ಖ೦ಡಿತ ಬರೆಯುತ್ತೇನೆ ಶ್ರೀಧರ್. ವ೦ದನೆಗಳೊ೦ದಿಗೆ,"

---------------------------------------------------------

7 comments:

  1. ಇತ್ತೀಚಿನ ವೇದಸುಧೆಯಲ್ಲಿನ ಬದಲಾವಣೆಗಳನ್ನು ಮೆಚ್ಚಿ ಮೇಲ್ ಮಾಡಿರುವ ಡಾ|| ಜ್ಞಾನದೇವ್ ಅವರಿಗೆ ವೇದಸುಧೆಯ ಧನ್ಯವಾದಗಳು.

    ReplyDelete
  2. ವೇದಸುಧೆಯ ಬದಲಾವಣೆಗಳು ಹಿಡಿಸಿವೆ, ಆದರೆ ತಮ್ಮಲ್ಲಿ ಒಂದು ಅರಿಕೆ- ವೇದಕ್ಕೆ ಕಾಲಿಡುವಾಗ, ವೇದವನ್ನೂ ಅದರ ಭಾಗವನ್ನೂ ತಿಳಿಯುವಾಗ ಅರಿವಾದ-ಗುರುವಾದ ವೇದವ್ಯಾಸರನ್ನು ನಮಿಸಬೇಕೆಂಬುದು ನನ್ನನಿಸಿಕೆ. ಬಹುತೇಕರು ಆ ಕೆಲಸದಲ್ಲಿ ಹಿಂದೆ ಬೀಳುತ್ತಾರೆ.

    ವ್ಯಾಸಾಯ ವಿಷ್ಣು ರೂಪಾಯ ವ್ಯಾಸರೂಪಾಯ ವಿಷ್ಣವೇ.... ಈ ಶ್ಲೋಕವನ್ನು ಹಲವು ಮಂಡಿ ನೆನೆಯಲಿಕ್ಕಿಲ್ಲ, ಆದರೂ ಅವರಿಗೆ ಮಹರ್ಷಿಯೊಬ್ಬನ ಚಿತ್ರ ನೋಡುವುದರಿಂದ ಅದು ಮೇಲ್ಗಡೆ ಇರಲಿ ಎಂಬ ತಳಹದಿಯ ಮೇಲೆ ಹಾಗೇ ಹಾಕಿದ್ದಿತ್ತು ! ಇನ್ನು ರಂಗೋಲಿ ಮತ್ತು ದೀಪಗಳು ಬದುಕಿನಲ್ಲಿ ಪೂರಕ ನವಚೇತನ ತುಂಬುವ ಅಂಶಗಳಾಗಿದ್ದರಿಂದ ಅವುಗಳನ್ನೂ ಅಳವಡಿಸಿದ್ದಾಗಿತ್ತು. ಈಗ ಮತ್ತೆ ಅವುಗಳನ್ನು ಮರಳಿ ತರಲು ಹಲವು ಘಂಟೆಗಳ ಶ್ರಮ! ನನಗೆ ಇತ್ತೀಚಿಗೆ ಬಹಳ ಸಮಯ ಸಿಗುತ್ತಿಲ್ಲ ಹೀಗಾಗಿ ತಾವು ಅಂದು ಕೇಳಿದಾಗ ನಾನು ನಿರುತ್ತರಿಯಾದೆ. ಅದಕ್ಕೇ ನನ್ನ ಅನಿಸಿಕೆಯನ್ನು ತಮಗೆ ಈಗ ನೇರವಾಗಿ ಹೇಳಿಬಿಟ್ಟಿದ್ದೇನೆ. ಹೊಸ ಆಯಾಮ ಕೊಡುವಾಗ 'ಫೋಟೋ ಶಾಪ್' ತಂತ್ರಾಂಶದಲ್ಲಿ ಕೆಲಸಮಾಡಿದರೆ ಚಿತ್ರಗಳು ಮತ್ತು ಅಕ್ಷರಗಳನ್ನು ಜೋಡಿಸಬಹುದು ! ನಮಸ್ಕಾರ

    ReplyDelete
  3. ಶ್ರೀ ಭಟ್ಟರೇ,
    ವೇದಸುಧೆಯು ನಿಮ್ಮದು. ನಾನು ಏನೋ ಮಾಡಲು ಹೋಗಿ ಏನೋ ಆಗಿದೆ.ನಿಮಗೆ ಸಮಯ ಸಿಕ್ಕಾಗ ಸಿಂಗರಿಸಿ. ನಿಮ್ಮ ಶ್ರಮವನ್ನು ವ್ಯರ್ಥಮಾಡಲಾರೆ. ಪಾಸ್ ವರ್ಡ್ ಅದೇ ಇದೆ.ನೀವು ಸರ್ವ ಸ್ವತಂತ್ರರು. ನಮ್ಮ ಪೂರ್ವಜರ ಹಿರಿಮೆಯನ್ನು ತಿಳಿಸುವ ಒಂದಿಷ್ಟು ಉಪನ್ಯಾಸಗಳನ್ನು ಹಾಕಿರುವೆ. ಅಂತೆಯೇ ಅಂತರ್ಜಾಲದಲ್ಲಿ ಲಭ್ಯವಾದ ವೇದಮಂತ್ರಗಳನ್ನು ಪೇರಿಸಿರುವೆ. ಅಂದಹಾಗೆ ಕೊಳಲಿನ ದನಿ ಕೇಳಿದಿರಾ? ತಂತ್ರಜ್ಞಾನದ ಸರಿಯಾದ ಅನುಭವವಿಲ್ಲದೆ ನನ್ನಿಂದ ತಪ್ಪುಗಳಾಗಿರುತ್ತವೆ. ತಿದ್ದುವುದಕ್ಕೆ ನಿಮ್ಮಂತವರು ಇದ್ದೀರೆಂಬ ಸಮಾಧಾನ.

    ReplyDelete
  4. "Vedakke kaaliduvudu" endarenu? vedakke budhdhiyanno,manassanno idabahudallave? athava kadepaksha kaiyannaadaroo idabahudittu!! :-)

    ReplyDelete
  5. ಸನ್ಮಾನ್ಯ ಅನಾನಿಮಸ್ಸರೆ, ಯಾವುದನ್ನಾದರೂ ಕಲಿಯಬೇಕಾದರೆ ಕುತರ್ಕಕ್ಕಿಂತ ಮನಸ್ಸು ಮುಖ್ಯ, ನೀವೂ ಭಾಗವಹಿಸಿ ಸಿನಾನಿಮಸ್ ಆಗಿ ಮುಂಚೂಣಿಗೆ ಬನ್ನಿ, ಕಾಲಿಡುವುದು,ಕೈಯಿಡುವುದು ಎಲ್ಲಾ ಕೇವಲ ಸಾಂದರ್ಭಿಕ ಪದಗಳು, ಅವುಗಳ ಶಬ್ಧಶಹ ಅರ್ಥಗಳು ಅಲ್ಲಿ ಗೌಣ! ಅಂತೆಯೇ ನಿಮ್ಮ ಕುತರ್ಕಕ್ಕೂ ಅವಕಾಶವಿಲ್ಲ, ಅರ್ಥವಾಯಿತೇ ? ಸಾಧ್ಯವಾದರೆ ವೇದ ಓದಿ, ಇಲ್ಲವೆಂದರೆ ನಿಮ್ಮ ದಾರಿನಿಮಗೆ

    ReplyDelete
  6. ಬಿದ್ದರೂ ಮೀಸೆ ಮಣ್ಣಾಗದು. ಈಜಲು ಬಾರದ ವೇದಪನ್ದಿತ ತಾವಾಗಬಾರದೆಂದೆ ಈ ತರ್ಕ.
    ವೇದವನ್ನು ತಿಳಿದವರಿಗೆ ಇಂತಹ ಎಚ್ಚರ ಹೇಗೆ ತಪ್ಪಿತು?
    ಬೇರೆಯವರಿಗೆ ಬುಧ್ಧಿ ಹೇಳುವ ತಾವು "ವೇದಕ್ಕೆ ಕಾಲಿಡುವ" ಶಬ್ದ ಪ್ರಯೋಗ ಮಾಡಿದ್ದು ಅಪರಾಧ.
    ಕ್ಷಮೆ ಕೇಳುವ ಬದಲು ದುರಹಂಕಾರದ ಪ್ರತಿಕ್ರಿಯೆ ನೀವೆಷ್ಟು ಸಣ್ಣ ವ್ಯಕ್ತಿ ಎನ್ನುವುದನ್ನು ತೋರಿಸುತ್ತಿದೆ.
    ಸುಮ್ಮನೆ ವೆದಸುಧೆಯನ್ನು ಮಲಿನ ಮಾಡಬೇಡಿ! ಉಳಿದವರೆಲ್ಲ ಸಾತ್ವಿಕರೆ ಇದ್ದಾರೆ.

    ReplyDelete
  7. ಇಂತಹ ಚರ್ಚೆ ಇದು ಮೊದಲಭಾರಿ ನಡೆದಿದೆ.ವೇದಸುಧೆ ಬಳಗದ ಪರವಾಗಿ ಕ್ಷಮೆ ಕೋರುವೆ.ಇನ್ನು ಈ ರೀತಿಯ ಚರ್ಚೆ ದಯವಿಟ್ಟು ಬೇಡ. ನಮ್ಮ ಆಚರಣೆಗಳು ಸಮಾಜಕ್ಕೆ ಎಷ್ಟು ಪೂರಕವಾಗಿವೆ? ಎಷ್ಟನ್ನು ಕುರುಡಾಗಿ ಅನುಸರಿಸುತ್ತಿದ್ದೇವೆ! ಈ ಬಗ್ಗೆ ಚಿಂತನ-ಮಂಥನ ನಡೆದರೆ ಅದರಲ್ಲಿ ಯಾವುದು ವೇದಕ್ಕೆ ಪೂರಕ? ಯಾವುದು ವೇದದ ವಿರುದ್ಧ? ಹೀಗೆ ಮಂಥನ ನಡೆದರೆ ಒಂದಿಷ್ಟು ಒಳ್ಳೆಯದಾಗುತ್ತದಲ್ಲವೇ? ಎಲ್ಲೋ ಹೋಗುವವರು ವೇದ ಸುಧೆಯನ್ನು ಇಣುಕ ಲಾರರು.ಆಸಕ್ತರು ಮಾತ್ರವೇ ಇಲ್ಲಿ ಬರುತ್ತಾರೆ.ಆದ್ದರಿಂದ ವೈಯಕ್ತಿಕವಾಗಿ ಚರ್ಚೆ ಇಲ್ಲಿ ಅನಗತ್ಯ, ಅಲ್ಲವೇ?

    ReplyDelete