Pages

Monday, July 5, 2010

ಜೀವನ ಬುನಾದಿ -೫-

ಸ್ವತಃ ಯಜುರ್ವೇಧ ಸ್ಪಷ್ಟವಾಗಿ ಸಾರುತ್ತಿದೆ:
ಯಥೇಮಾಂ ವಾಚಂ ಕಲ್ಯಾಣೇಮಾವದಾನಿ ಜನೇಭ್ಯಃ
ಬ್ರಹ್ಮ ರಾಜನ್ಯಾಭ್ಯಾಂ ಶೂದ್ರಾಯ ಚಾರ್ಯಾಯ ಚ ಸ್ವಾಯ ಚಾರಣಾಯ ಚ
ಪ್ರಿಯೋದೇವಾನಾಂ ದಕ್ಷಿಣಾಯೈ ದಾತುರಿಹನಭೂಯಾಸಮಯಂ
ಮೇ ಕಾಮಃ ಸಮೃಧ್ಯತಾಮುಪ ಮಾದೋ ನಮತು (ಯಜು.೨೬.೨)
ಸರ್ವಾಧಾರನಾದ ಸರ್ವಜ್ಞಾನ ಪ್ರಕಾಶಕನಾದ ಪರಮಾತ್ಮನು ಈ ಮಂತ್ರದ ಮೂಲಕ ಹೇಳುತ್ತಿದ್ದಾನೆ:
[ಇಹ] ಈ ಲೋಕದಲ್ಲಿ [ಯಥಾ ದೇವಾನಾಂ ದಕ್ಷಿಣಾಯೈ ದಾತುಃ ಭೂಯಾಸಂ] ನಾನು ವಿದ್ವಜ್ಜನರಿಗೂ, ಉದಾರಾತ್ಮರಿಗೂ ಆಧ್ಯಾತ್ಮಿಕ ಶಕ್ತಿಯ ದಾತೃವಾಗುವಂತೆ [ಇಮಾಂ ಕಲ್ಯಾಣೀಂ ವಾಚಂ] ಈ ಕಲ್ಯಾಣಕಾರಿಯಾದ ವಾಣೀಯನ್ನು [ಜನೇಭ್ಯಃ] ಮಾನವರೆಲ್ಲರ ಸಲುವಾಗಿ [ಬ್ರಹ್ಮರಾಜನಾಭ್ಯಾಂ] ಬ್ರಾಹ್ಮಣ ಕ್ಷತ್ರಿಯರಿಗಾಗಿ [ಶೂದ್ರಾಯ] ಶೂದ್ರನಿಗಾಗಿ [ಚ] ಮತ್ತು [ಆರ್ಯಾಯ] ವೈಶ್ಯನ ಸಲುವಾಗಿ [ಸ್ವಾಯ] ತನ್ನವನಿಗಾಗಿ [ಚ] ಅದೇ ರೀತಿ [ಅರಣಾಯ] ಬೇರೆಯವನ ಸಲುವಾಗಿ [ಅವದಾನಿ] ಉಪದೇಶಿಸುತ್ತೇನೆ. [ಅಯಂ ಮೇ ಕಾಮಃ] ಈ ನನ್ನ ಕಾಮನೆ [ಸಮೃಧ್ಯತಾಂ] ಸಮೃದ್ಧವಾಗಲಿ. [ಅದಃ] ಈ ಜಗತ್ತು [ಮಾ ಉಪನಮತು] ನನ್ನ ಬಳಿ ನಮ್ರವಾಗಿ ಬರಲಿ.
ಈ ಮಂತ್ರ ಮಾನವ ಸಮಾಜದಲ್ಲಿ ವೇದಗಳ ಸ್ಥಾವೇನೆಂಬುದನ್ನು ಅವುಗಳ ಉದ್ದೇಶವೇನೆಂಬುದನ್ನು ತೆರೆನುಡಿಗಳಲ್ಲಿ ಉಸುರುತ್ತಿದೆ.
ಕವಿ ನಾಗರಾಜ್

1 comment:

  1. ವೇದ ಜ್ಞಾನವು ಎಲ್ಲರಿಗಾಗಿ ಎಂದು ವೇದವು ಸಾರಿ ಹೇಳುತ್ತಿದ್ದರೂ ಅದು ಎಲ್ಲರಿಗೆ ತಲುಪಲಿಲ್ಲ. ಹೀಗೂ ಹೇಳಬಹುದು ಎಲ್ಲಾ ಜನಾಂಗಕ್ಕೂ ಕಲಿಯುವ ಆಸೆಯೂ ಇಲ್ಲ.ಆರ್ಯಸಮಾಜವು ಎಲ್ಲರಿಗಾಗಿ ವೇದವೆನ್ನುವ ಮಾತನ್ನು ಹೇಳುತ್ತಿದ್ದರೂ ಅದರ ಕಾರ್ಯ ಚಟುವಟಿಕೆಯು ಸಮಾಜದ ಉದ್ದಗಲಕ್ಕೂ ಮುಟ್ಟುವ ಸಾಮರ್ಥ್ಯ ಅದಕ್ಕಿಲ್ಲ. ಆರ್ಯ ಸಮಾಜವು ಮಾಡುತ್ತಿರುವ ಒಂದು ಕೆಲಸವೆಂದರೆ ಅದರ ಹತ್ತಿರ ಬಂದವರಲ್ಲಿ ಹಿಂದು ಸಮಾಜದಲ್ಲಿ ನಡೆದುಕೊಂಡು ಬಂದಿರುವ ವಿಗ್ರಹಾರಾಧನೆ, ಹಬ್ಬ ಹರಿದಿನಗಳ ಆಚರಣೆ, ವ್ರತ ಕಥೆಗಳು, ಪುರಾಣ, ಇತ್ಯಾದಿಯ ಬಗ್ಗೆ ಶ್ರಧ್ಧೆಯನ್ನು ಕಡಿಮೆ ಮಾಡುವ ನಿರಂತರ ಪ್ರಯತ್ನ ವಾಗಿದೆ. [ಇಲ್ಲಿ ನಾನು ಶ್ರದ್ಧೆ ಎಂಬ ಪದವನ್ನು ನಂಬಿಕೆ ಎಂಬ ಅರ್ಥದಲ್ಲಿ ಉಪಯೋಗಿಸಿರುವೆ] ಹಿಂದು ಸಮಾಜಕ್ಕೆ ಅಂಟಿರುವ ಅಂಧಾಚರಣೆಗೆ ವಿರೋಧವಿರಲಿ, ಆದರೆ ಎಲ್ಲಾ ಆಚರಣೆಗಳಿಗೂ ವಿರೋಧವಿರುವುದರಿಂದ ಹಿಂದುಸಮಾಜವು ಆರ್ಯ ಸಮಾಜಿಗಳು ಒಪ್ಪುವುದಾದರೂ ಹೇಗೆ? ಆರ್ಯಸಮಾಜಿಗಳು ಮಾಡುತ್ತಿರುವ ಕೆಲಸವು ಕೇವಲ ಹಿಂದು ಸಮಾಜಕ್ಕಲ್ಲ, ಇಡೀ ಮಾನವ ಸಮಾಜಕ್ಕೆ ಎಂದು ಅವರು ಹೇಳಿದರೂ ಅದರ ಬೇರು ಹಿಂದು ಸಮಾಜದಲ್ಲಿದೆ, ಎಂಬುದನ್ನು ಮರೆಯಬಾರದಲ್ಲವೇ? ಈ ದೃಷ್ಟಿಯಿಂದ ವೇದಾಧ್ಯಾಯೀ ಸುಧಾಕರ ಶರ್ಮರಂತಹ ವಿಚಾರಶೀಲರು ತಮ್ಮ ಚಟುವಟಿಕೆಗಳ ಬಗ್ಗೆ ಒಂದಿಷ್ಟು ಚಿಂತನೆ ಮಾಡುವುದು ಒಳ್ಳೆಯದು, ಎಂಬುದು ನನ್ನ ಅಭಿಪ್ರಾಯ.

    ReplyDelete