Pages

Friday, July 16, 2010

ಮೂಢ ಉವಾಚ




ನನ್ನದು?
ಇರುವುದು ನಿನದಲ್ಲ ಬರುವುದು ನಿನಗಲ್ಲ|
ತರಲಾರದ ನೀನು ಹೊರುವೆಯೇನನ್ನು?
ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ|
ಫಲಧಾರೆ ಹರಿಯಗೊಡು ಮರುಳು ಮೂಢ||

ದೀಪಾವಳಿ
ಒಡಲಗುಡಿಯ ರಜ-ತಮಗಳ ಗುಡಿಸಿ|
ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ||
ಮನದ ಕತ್ತಲ ಕಳೆದು ತಿಳಿವಿನ ಬೆಳಕ|
ಪಸರಿಪುದೆ ದೀಪಾವಳಿ ತಿಳಿ ಮೂಢ||

ಸಮಪಾಲು
ಅಹುದಿಹುದು ಅಡೆತಡೆಯು ಬಾಳಹಾದಿಯಲಿ|
ಸಾಗಬೇಕರಿತು ಪತಿ ಪತ್ನಿ ಜೊತೆಜೊತೆಯಲಿ||
ಸಮಪಾಲು ಪಡೆದಿರಲು ನೋವು ನಲಿವಿನಲಿ|
ಬಾಳು ಬಂಗಾರ ಬದುಕು ಸಿಂಗಾರ ಮೂಢ||

ನೀತಿವಂತ
ನೀತಿವಂತರ ನಡೆಯು ನ್ಯಾಯಕಾಸರೆಯು|
ನುಡಿದಂತೆ ನಡೆಯುವರು ಸವಿಯ ನೀಡುವರು||
ಪ್ರಾಣವನೆ ಪಣಕಿಟ್ಟು ಮಾತನುಳಿಸುವರು|
ಜಗದ ಹಿತ ಕಾಯ್ವ ಧೀರರವರು ಮೂಢ||

-ಕ.ವೆಂ.ನಾಗರಾಜ್

6 comments:

  1. ಚೆನ್ನಾಗಿವೆ, ಅರ್ಥಗರ್ಭಿತವಾಗಿವೆ.
    ನಮಸ್ಕಾರಗಳೊ೦ದಿಗೆ,

    ReplyDelete
  2. ಚೆನ್ನಾಗಿದೆ, ಅರಿವು ಮೂಡಿಸುವಂತಿದೆ. ಹೀಗೆಯೇ ಬರೆಯುತ್ತಿರಿ, ನಾಗರಾಜ್.

    ReplyDelete
  3. ಹೃದಯದಲುದಿಸಿಹ ಭಾವಭವ್ಯಕೆ
    ನೀಡಿರುವಿರಿ ಕಾವ್ಯರೂಪುರೇಖೆ|
    ಆಗಲದು ಉದಾರ ಉದಾತ್ತ
    ಹುಡುಕಬೇಕೇ ಶಾಂತಿಗೆ ಅತ್ತಇತ್ತ||

    -ಸುಧಾಕರ ಶರ್ಮಾ

    ReplyDelete
  4. ಪ್ರತಿಕ್ರಿಯಿಸಿದ ಶ್ರೀಯುತ ಸುಧಾಕರ ಶರ್ಮ, ಶ್ರೀಧರ, ಸೀತಾರಾಮ, ನಾವಡರಿಗೆ ಧನ್ಯವಾದಗಳು.

    ReplyDelete
  5. ಉತ್ತಮ ವಿಚಾರಗಳು.
    ಮನಮುಟ್ಟುವಂತಿವೆ!!!
    ಧನ್ಯವಾದಗಳು.

    ReplyDelete