Pages

Sunday, July 25, 2010

ಚುಚ್ಚಾಣಿ

ಚುಚ್ಚಾಣಿ

ಚುಚ್ಚಾಣಿ ಚೂಪಿನದಣ್ಣಾ
ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ
ಚುಚ್ಚಾಣಿ ಚೂಪಿನದಣ್ಣಾ|| ||ಪ||

ಚಿನ್ನದ ಚುಚ್ಚಾಣಿ ನವರಸದ ಚುಚ್ಚಾಣಿ
ಎಲ್ಲರ ಮೆಚ್ಚಿನ ಕಟ್ಟಾಣಿಯಣ್ಣಾ ||ಚುಚ್ಚಾಣಿ||

ಆಸೆ ಪುಗ್ಗೆಯೇರಿ ಸಂಭ್ರಮದಿ ತೇಲಿದ್ದೆ
ಪುಗ್ಗೆ ಡಬ್ಬೆಂದು ಧೊಪ್ಪನೆ ಕೆಳಬಿದ್ದೆ|| ||ಚುಚ್ಚಾಣಿ||

ಬಂಧು ಬಳಗದೆ ಕೂಡಿ ನಲಿಯುತಲಿದ್ದೆ
ಚುಚ್ಚು ಮಾತಿಂದಾಗಿ ಒಂಟಿ ಹೊರಬಿದ್ದೆ||||ಚುಚ್ಚಾಣಿ||

ದೇವಾಂತಃಕರಣದ ಫಲ ಕೈಲಿ ಹಿಡಿದಿದ್ದೆ
ಚುಚ್ಚು ಕಾಲ್ತೊಡರಿ ಎಡವಿ ಬಿದ್ದಿದ್ದೆ|| ||ಚುಚ್ಚಾಣಿ||

ಚುಚ್ಚಾಣಿ ಚೂಪಿನದಣ್ಣಾ
ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ
ಚುಚ್ಚಾಣಿ ಚೂಪಿನದಣ್ಣಾ||


(ಸ್ಪೂರ್ತಿ: ಪುರಂದರದಾಸರ 'ದುಗ್ಗಾಣಿ ಬಲು ಕೆಟ್ಟದಣ್ಣಾ"..)

2 comments:

  1. ಲಂಗೋಟಿ ಬಲು ಒಳ್ಳೆದಣ್ಣಾ|
    ಒಬ್ರ ಹಂಗಿಲ್ಲದೆ ಮಡಿಗೆ ಒದಗುವುದಣ್ಣಾ||

    ಈ ಹಾಡಿನಂತಿದೆ. ಹೌದು ನಾಗರಾಜ್, ಚುಚ್ಚುಮಾತುಗಳು ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಆದರೆ ನನ್ನದೊಂದು ಅನಿಸಿಕೆ ಇದೆ. ಚುಚ್ಚು ಮಾತನಾಡುವವರು ಹುಚ್ಚುಮನಸಿನವರು. ಅವರ ಒಳಗೆಲ್ಲಾ ಮಲಿನ. ಅವರ ಮಾತುಗಳೇ ಅವರಿಗೆ ಚುಚ್ಚುಮುಳ್ಳಾಗುವುದರಲ್ಲಿ ಸಂದೇಹವಿಲ್ಲ. ಅತ್ತೆಗೊಂದು ಕಾಲ! ಸೊಸೆಗೊಂದು ಕಾಲವಿದ್ದಂತೆ.ಆದರೆ ನಿರ್ಮಲ ಮನಸ್ಸುಳ್ಳವರು ಯಾರ ಮನಸ್ಸಿಗೂ ನೋವಾಗುವ ಮಾತನಾಡಲಾರರು.ನಿರ್ಮಲ ಮನಸ್ಸುಳ್ಳವರ ಬದುಕು ನಿರಾತಂಕವಾಗಿ ಸಾಗುವುದರಲ್ಲಿ ಸಂಶಯವಿಲ್ಲ.ಮಲಿನ ಮನಸ್ಸುಳ್ಳವರು ಭಗ್ನ ಸಂತೋಷಿಗಳು. ಸಂತೋಷವೆಲ್ಲಾ ತತ್ಕಾಲಕ್ಕೆ. ಮುಂದೆ ಕಾಲವು ಪಾಠಕಲಿಸದೆ ಇರದು.

    ReplyDelete