Pages

Tuesday, July 13, 2010

Religion


ವೇದಸುಧೆಯ ಅಭಿಮಾನಿಗಳೇ,
ಶ್ರೀ ವಿಶಾಲ್ ಒಬ್ಬ ಸಹೃದಯೀ ತರುಣ ಇಂಜಿನಿಯರ್. ವೇದಸುಧೆ ಬಳಗದ ಒಬ್ಬ ಯುವ ಚಿಂತಕ. ಕನ್ನಡದಲ್ಲಿ ಬರೆಯುವ ಅಭ್ಯಾಸ ಕಡಿಮೆ.ಆಂಗ್ಲ ಭಾಷೆಯಲ್ಲಿ ಬರೆದರೂ ಸರಳವಾಗಿ ತಮ್ಮ ಚಿಂತನೆಯನ್ನು ಮುಂದಿಟ್ಟಿದ್ದಾರೆ. ನಾವೆಲ್ಲಾ ಅವರ ಚಿಂತನೆಯನ್ನು ಓದಿ ನಮ್ಮ ನಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾ ಚರ್ಚೆಯಲ್ಲಿ ಪಾಲ್ಗೊಳ್ಳೋಣ. ವೇದಸುಧೆ ಇರುವುದೇ ಇಂತಹ ಒಂದು ಸದ್ವಿಚಾರದ ಚರ್ಚೆಗಾಗಿ.ಇಲ್ಲಿ ಭಾಷೆ ಅಡ್ಡಿಯಾಗದು.
----------------------------------------------------

I was just thinking the other day about what actually this term mean to any individual.
All these years we have seen people fighting for religion.Few in the name of religion,few
to save the religion and few to increase the number.But the ultimate question is,

Do we really need religion, any religion for that matter????

Let me run through few question before coming to the conclusion

Do we need religion to earn our livelihood?
Do we need religion to spend good time with family and friends?
Do we need religion to get entertained at occasions?
Do we need religion to help people who are in need?
Do we need religion to be humble and kind to others?
Do we need religion to take good care of our parents and children?
Do we need religion to spread good thoughts?
Do we need religion to succeed in our profession?
Do we need religion to learn or teach mathematics,science,physics,
logic or spirituality etc?
Do we need religion to understand this world?

Finally, Do we need religion to stay happy?

Well to me the answer seems to be a BIG NO.Apart from giving some kind of identity its
doing no good to the society.But again the question is, Do we really need that religious identity?
For any foreigner we all are identified on a single identity called Indians.
Why should it change within us.


ವಿಶಾಲ್

8 comments:

 1. Dear Vishal,

  Religion gives us many things, just like constitution for a state/country. It gives us the guidelines for social/moral life , solutions/suggestions when we face crisis etc. Let's separate fanaticism and religion.

  ReplyDelete
 2. ಪಶುವಂತೆ ಜೀವನ ಮಾಡುವದಿದ್ದರೆ ಏನು ಬೇಕಾಗಿಲ್ಲ!
  ಪ್ರಾಣಿಗಳು -ಬಟ್ಟೆ ಹಾಕಿಕೊಳ್ಳುವವೇ? ಬೇಯಿಸಿ ಅಡುಗೆ ಮಾಡುವವೇ? ಸಂಸಾರಕ್ಕೆ ಕಟ್ಟು ಬಿದ್ದಿವಿವೆಯಾ? ಕೆಲಸಕ್ಕೆ ಹೋಗುವವೇ? ಮನೆ, ವಿಧ್ಯುತ, ಸಾಮಾನು ಪರಿಕರದ ಗೋಜಲಿದೆಯೇ?

  ಹಾಗಂತಾ ಸಮಾಜದಲ್ಲಿನ ಮತ್ತು ಧರ್ಮದಲ್ಲಿ ಕಾಲಕಾಲದಲ್ಲಿ ಬೆಳೆದ ಮೌಡ್ಯಗಲಿಲ್ಲವೆನ್ದಲ್ಲಾ ಅವನನು ತೊಡಿಯುತ್ತಾ ಮುಂದೆ ಸಾಗಬೇಕು.

  ReplyDelete
 3. Our greatest misfortune is that we translate religion as dharma.I would like to clearly state that religion is a sect and not dharma.

  Following dharma doesnt mean following religion.Dharma is a way of life that applies to any person of any religion.The religion here is the religion called hindu muslim christian etc. The identity thing in the article is the identity called hindu muslim christian.

  Dear Anonymous, I never mixed fanaticism and religion, infact I havent said anything about fanaticism in the previous post.

  ReplyDelete
 4. ಒಂದು ಸೂಕ್ಷ್ಮವನ್ನು ಅರ್ಥಮಾಡಿಕೊಂಡರೆ ನಮಗೆ ಉತ್ತರ ಸಿಗಬಹುದು.
  ರಿಲಿಜಿಯನ್ ಎಂದರೆ ’ಮತ” ಎಂದಷ್ಟೇ ಅರ್ಥ ಮಾಡಿಕೊಳ್ಳುವುದು ಉತ್ತಮ.ಹಾಗಾದರೆ ಮತ ಎಂದರೇನು? ಮತ ವೆಂದಾಗ ಅದಕ್ಕೆ ಒಬ್ಬ ಪ್ರವರ್ತಕರು ಇರಬೇಕಾಗುತ್ತದೆ. ಉಧಾಹರಣೆಗೆ ಅಧ್ವೈತ ಮತ-ಇದರ ಪ್ರವರ್ತಕರು ಶ್ರೀ ಶಂಕರಾಚಾರ್ಯರು. ಹೀಗೆಯೇ ದ್ವೈತ, ವಿಶಿಷ್ಟಾದ್ವೈತ, ಬೌದ್ಧ, ಜೈನ, ಕ್ರೈಸ್ತ, ಇಸ್ಲಾಮ್...ಹೀಗೆ ಹತ್ತು ಹಲವು ಮತಗಳಿವೆ, ಅವಕ್ಕೆ ಪ್ರವರ್ತಕರೂ ಇದ್ದಾರೆ. ಅವುಗಳಿಗೆಲ್ಲಾ ಒಂದು ಗ್ರಂಥವಿದೆ. ಆದರೆ ’ ಹಿಂದು’ಎಂಬುದು ಮತವಲ್ಲ. ಕಾರಣ ಇದಕ್ಕೆ ಒಂದು ಗ್ರಂಥವಾಗಲೀ, ಒಬ್ಬನೇ ಪ್ರವರ್ತಕನಾಗಲೀ ಇಲ್ಲ.ಇದೊಂದು ಧರ್ಮ. ಧರ್ಮ ಎಂದರೆ ಉತ್ತಮ ಜೀವನ ಮಾಡುವ ಕ್ರಮ.
  ಆದರೆ ಹಿಂದು ಎಂಬುದನ್ನು ಮತವೆಂದು ಭಾವಿಸಿ ಅದಕ್ಕಾಗಿ ಸಂಘರ್ಷಗಳು ನಡೆದೇ ಇದೆ.
  ಇಲ್ಲಿ ಮತವೆಂಬುದು ಜೀವನಕ್ಕೆ ಅನಿವಾರ್ಯವೇ? ಎಂಬುದು ವಿಶಾಲ ಇವರ ಪ್ರಶ್ನೆ ಎಂದು ತಿಳಿಯುವೆ.ಈ ಹಿನ್ನೆಲೆಯಲ್ಲಿ ಚರ್ಚೆ ಮುಂದುವರೆದರೆ ಸೂಕ್ತವಾದೀತು.

  ReplyDelete
 5. ಇಷ್ಟೆಲ್ಲಾ ನಾವು ಪರಿತಪಿಸುವುದನ್ನು ನೋಡಿದರೆ ನಮಗೆ ಬುದ್ಧಿ ಜಾಸ್ತಿಯೋ ಕಂಮಿಯೋ ಅರ್ಥವಾಗದಲ್ಲ ! ಮನುಜ ಜೀವನಧರ್ಮ ಎಂಬ ಅಂಶವನ್ನು ಅಳವಡಿಸಿಕೊಂಡರೆ ಅದೇ ಸಾಕು ಎನಿಸುತ್ತದೆ. ಆ ಮನುಜ ಜೀವನಧರ್ಮದಲ್ಲಿ ನಮ್ಮ ಹಿರಿಯ ಜೀವ ಡೀವೀಜಿ ಬರೆದ 'ಜೀವನಧರ್ಮ ಯೋಗ' ಕೃತಿಯಲ್ಲಿ ಬರುವ ಸಾರಗಳ ಅಳವಡಿಕೆ ಇದ್ದು ಎಲ್ಲಾ ಧರ್ಮಗಳ ಸಂಗಮವಾಗಿ ಸಿಗುವ ಮಥಿತಾರ್ಥವನ್ನು ಅರ್ಥಾತ್ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡರೆ ಅದಕ್ಕಿಂತ ಇನ್ನೇನು ಬೇಕು. ಆದರೆ ಸೀತಾರಾಮ ರಾಯರು ಹೇಳಿದಂತೆ ಯಾವುದೂ ಇಲ್ಲದಿದ್ದರೆ ಅದು ಕಾಂಪೌಂಡ್ ಇಲ್ಲದ ಕಟ್ಟಡದಂತೆ, ಬೇಲಿಯೇ ಇಲ್ಲದ ಹೊಲದಂತೆ! ಅಲ್ಲಿ ಮರ್ಕಟ ಮನಸ್ಸು ಸ್ವೇಚ್ಛಾಚಾರಕ್ಕೆ ಇಳಿವ ಸಂದರ್ಭ ಹೆಚ್ಚಾಗಬಹುದು, ಒನ್ ವೇ ಯಲ್ಲಿ ಕದ್ದು ಓಡಿಸಿದಂತೆ ಹೇಳಿ-ಕೇಳಿ ಮಾಡುವ ಯಾವ ತತ್ವವೂ ಇಲ್ಲದೇ ಮನುಷ್ಯ ಹಾಳಾಗ ಬಹುದು, ಈಗಿರುವ ಕಚ್ಚಾಟ ಇನ್ನೂ ಸಾವಿರಪಟ್ಟಾಗಿ ವ್ಯಕ್ತಿಯನ್ನೇ ಇನ್ನೊಬ್ಬ ವ್ಯಕ್ತಿ ಹರಿದು ತಿನ್ನುವ ದುರಂತ ಎಡತಾಕಬಹುದು, ಹೀಗಾಗಿ ಒಳ್ಳೆಯ ಮಾರ್ಗವನ್ನು ಬೋಧಿಸುವ ಧರ್ಮ ಅದು ಯಾವುದೇ ಆಗಲಿ ಜೀವನಕ್ಕೊಂದು ಧರ್ಮ ಬೇಕು-ಆದರೆ ಕುರುಡು ಆಚರಣೆಗಳು-ಮೂಢ ನಂಬಿಕೆಗಳು ಬೇಡ, ಈಗಿರುವ ಎಲ್ಲಾ ಧರ್ಮೀಯರೂ ಒಂದೇ ವೇದಿಕೆಯಲ್ಲಿ ಮಾನವ ಸಹಜ ಬದುಕಿಗೆ ಬೇಕಾಗುವ ಜೀವನಧರ್ಮ ಯೋಗ ವನ್ನು ಅಳವಡಿಸಿಕೊಂಡರೆ ಜಗತ್ತೇ ಉತ್ತಮವಾಗುವ ದಿನ ದೂರವಿರುವುದಿಲ್ಲ, ಅದು ಬಾಂಬು, ಚಾಕು-ಚೂರಿ,ಪಿಸ್ತೂಲು ಹಿಂಸೆ ರಹಿತ ಸುಲಲಿತ ಸಂತೃಪ್ತ ಜೀವನದ ಜಗತ್ತಾದೀತು, ಆದರೆ ಇದಕ್ಕೆ ಪ್ರವರ್ತ್ಕರೋಬರು ಬೇಕು, ಯಾಕೆಂದರೆ ಇದನ್ನು ಪ್ರಚುರಪಡಿಸದೇ ಇದು ಎಲ್ಲರಿಗೂ ತಿಲ್ಲಿಯುವುದು ಹೇಗೆ. ನನ್ನಿಂದ ಇಷ್ಟು ಸಾಕು ಎನಿಸುತ್ತದೆ, ಎಲ್ಲರಿಗೂ ನಮಸ್ಕಾರ.

  ReplyDelete
 6. ಚರ್ಚೆ ಉತ್ತಮವಾಗಿ ಸಾಗಿದೆ.ಈ ವೇದಿಕೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿರುವ ನಾವೆಲ್ಲಾ ಜನ್ಮತಳೆದಿರುವ ಈ ನೆಲದಲ್ಲಿ ಅದೆಷ್ಟು ಜನ ಋಷಿಮುನಿಗಳು ಜನ್ಮತಾಳಿ ತಪಸ್ಸು ಮಾಡಿದ್ದಾರೋ!
  ನಾವು ನಿತ್ಯವೂ ಅಭಿವಾದನ ಮಾಡುವಾಗ ಹೇಳುವ ಮಂತ್ರದ ಅರ್ಥ ತಿಳಿದರೆ ಸಾಕು " ಚತುಸ್ಸಾಗರ ಪರ್ಯಂತಮ್ ಗೋ ಬ್ರಾಹ್ಮಣೇಭ್ಯ: ಶುಭಂ ಭವತು..................ಮುಂದೆ ಗೋತ್ರ ಸೂತ್ರಗಳನ್ನು ಹೇಳಿ ನಮಸ್ಕರಿಸುವ ಪದ್ದತಿಯನ್ನು ನಾವು ಬಿಟ್ಟಿಲ್ಲ. ಆದರೆ ಅದರ ಅರ್ಥ ಮಾಡಿಕೊಳ್ಳುತ್ತಿಲ್ಲ!!!

  ReplyDelete
 7. ವಿಶಾಲ್
  ನೋಡಿ ನೀವು ತಿಳಿದ೦ತೆ ಮತ ನಮಗೆ ಅವಶ್ಯವಿಲ್ಲವೆ೦ಬುದು ನಿಮ್ಮಲ್ಲಿನ ಒ೦ದು ಗೊ೦ದಲದ ಅಭಿವ್ಯಕ್ತಿ.. ಇಲ್ಲಿ ಮತ ಎ೦ದರೆ ಅಭಿಮತ, ಅಭಿಪ್ರಾಯ. ಅದು ಮನುಕುಲಕ್ಕೆ ಹಿತಕಾರಿಯಾಗುವ೦ತಿದ್ದರೆ ಅದನ್ನು ಸ್ವೀಕರಿಸೋಣ. ಅದು ಮನುಕುಲದ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾದಲ್ಲಿ ಅದನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸೋಣ ಖ೦ಡಿಸೋಣ. ಎಲ್ಲ ಮನುಷ್ಯರೂ ಸಮಾನವಾಗಿ ವಿಕಾಸವಾಗಿಲ್ಲ ಎಲ್ಲರಲ್ಲೂ ಪ್ರಜ್ಞೆ ಸಮಾನವಾಗಿ ವಿಕಸಿತವಾಗಿಲ್ಲ ಹೀಗಾಗಿ ಆ೦ತರಿಕ ವಿಕಾಸದಲ್ಲಿ ಹಿ೦ದುಳಿದವರಿಗೆ ಖ೦ಡಿತ ಮಾರ್ಗದರ್ಶನ ಸಲಹೆ ಪೋಷಣೆ ಅಗತ್ಯ. ನದಿ ತನ್ನ ಪಾತ್ರಕ್ಕೆ ಅನುಗುಣವಾಗಿ ಹರಿಯಲು ಅದಕ್ಕೆ ಎರಡು ದಡಗಳು ಅತ್ಯಗತ್ಯ. ದಡಗಳೇ ಬೇಡವೆ೦ದರೆ ನದಿ ತನ್ನ ಪಾತ್ರ ಮೀರಿ ಹರಿದು ಪ್ರವಾಹ ಅನಾಹುತವನ್ನೇ ಮಾಡೀತು. ಹಾಗೆಯೇ ನಮ್ಮ ಬದುಕುಗಳು ಒ೦ದು ಕ್ರಮಬದ್ಧವಾಗಿ ಅರ್ಥಪೂರ್ಣವಾಗಿ ಸಾಗಲು ನಮಗೂ ದಡಗಳು ಬೇಕು. ಆದರೆ ಇಲ್ಲಿ ಯಾವ ಮತವು ಅ೦ಧಾನುಕರಣೆ ಮತ್ತು ವ್ಯಕ್ತಿಯ ಮೂಲ ಸ್ವಾತ೦ತ್ರ್ಯಕ್ಕೇ ಕೊಡಲೀಪ್ರಾಯವಾಗುತ್ತದೋ ಅ೦ತಹ ಅವಿಜ್ಞಾನಿಕ ಮತಗಳು ನಮಗೆ ಬೇಕಿಲ್ಲ. ಹಾಗೆಯೇ ಧರ್ಮವೇ ಬೇರೆ ಮತವೇ ಬೇರೆ. ಧರ್ಮದ ಸರಳ ಅರ್ಥ ಸ್ವಭಾವ ಸಹಜತೆ, ಸೂರ್ಯನ ಧರ್ಮ ಬೆಳಗುವುದು ಬೆ೦ಕಿಯ ಧರ್ಮ ಸುಡುವುದು ನೀರಿನ ಧರ್ಮ ತೋಯಿಸುವುದು ಹೀಗೇ ... ಹಾಗಾದರೆ ಮನುಷ್ಯನ ಧರ್ಮ ಯಾವುದು? ಈ ಜಗತ್ತಿನ ಎಲ್ಲ ಜೀವಿಗಳನ್ನು ಹೊರತುಪಡಿಸಿ ಸೃಷ್ಟಿಕರ್ತ ಮನುಷ್ಯನಿಗೆ ಅದ್ಭುತವಾದ ಆಲೋಚಿಸುವ ವಿಶ್ಲೇಶಿಸುವ ವಿವೇಚಿಸುವ ವಿಮರ್ಶಿಸುವ ವಿಶಿಷ್ಟ ಗುಣವನ್ನು ದಯಪಾಲಿಸಿದ್ದಾನೆ. ಈ ವಿಶಿಷ್ಟ ಗುಣದಿ೦ದ ಮನುಷ್ಯ ತನ್ನ ಧರ್ಮವನ್ನು ತಾನೇ ಅವಿಶ್ಕಾರಮಾಡಬೇಕು. ಮಾನವತೆಯನ್ನು ಮೀರಿ ದೈವೀಕತೆಯನ್ನು ಪ್ರಕಟಪಡಿಸಿಕೊಳ್ಳುವ ನಿಟ್ಟಿನಲ್ಲಿ ಅವನ ನಿರ೦ತರ ಪ್ರಯತ್ನ ಸಾಧನೆಯ ಯಾತ್ರೆ ಸಾಗಬೇಕು. ಈ ನಿಟ್ಟಿನಲ್ಲಿ ನಮಗೆ ಜಗತ್ತಿನ ಎಲ್ಲ ಮತ ಧರ್ಮಗಳು ದಾರ್ಶನಿಕರ ಚಿ೦ತನೆಗಳು ಬೋಧೆಗಳು ಸಹಕಾರಿಯಾಗಬಲ್ಲವು ಮಾರ್ಗದರ್ಶನಮಾಡಬಲ್ಲವು, ಅಷ್ಟೇ ವಿನಃ ಅ೦ತಿಮವಾಗಿ ನಮ್ಮ ಧರ್ಮವನ್ನು ನಾವೇ ಕ೦ಡುಕೊಳ್ಳಬೇಕು. ಅದು ನಮ್ಮನ್ನೂ ಬೆಳಗುವುದಲ್ಲದೇ ಇಡೀ ಜಗತ್ತನ್ನೇ ಬೆಳಗುವುದರಲ್ಲಿ ಸಹಕಾರಿಯಾದರೆ ಅಲ್ಲಿಗೆ ಧರ್ಮದ ನಿಜವಾದ ಅರ್ಥ ಲಭ್ಯವಾಗುತ್ತದೆ ಎ೦ಬುದು ನನ್ನ ಆಳವಾದ ನ೦ಬಿಕೆ.

  ReplyDelete
 8. Sorry Vishal, I saw your response just now. I did not say you mentioned about fanatism, but I felt like you were annoyed by extremities of religion, not the religion itself.

  But, now that I understand your segregation between religion and dharma, I see your context. But, like many learned scholars have replied here, religion is dharma for Hinduism at least. Other Semitic religions have lot of good things but they have zero tolerance to take criticism and they go to any extent to spread their religion. You must have read Mr. Bhairappa's article in Vijay Karnataka about Conversion and debate in it after that. If not, please go to these links:

  http://slbhyrappa.com/pages/articles.html

  (open the pdf articles there).

  ReplyDelete