ವೈರಿಯ ಅಬ್ಬರಕೆ ಬರೆಯೆಳೆಯಬಹುದು
ಕಪಟಿಯಾಟವನು ಮೊಟಕಿಬಿಡಬಹುದು
ಮನೆಮುರುಕರನು ತರುಬಿಬಿಡಬಹುದು
ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ
ನಲ್ನುಡಿ
ನಿಂದನೆಯ ನುಡಿಗಳು ಅಡಿಯನೆಳೆಯುವುವು
ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು
ಪರರ ನಿಂದಿಪರ ಜಗವು ಹಿಂದಿಕ್ಕುವುದು
ವಂದಿತನಾಗು ನಲ್ನುಡಿಯೊಡೆಯನಾಗು ಮೂಢ
ಯಾರು?
ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವರಿಹರು ಬೆಸೆದುಕೊಂಬವರಿಹರು
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ
ಜಗದ ಪರಿ
ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು
ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು
ನಗುವಿರಲು ನೆಂಟತನ ಇಲ್ಲದಿರೆ ಒಂಟಿತನ
ಜಗದ ಪರಿಯಿದು ಏನೆನುವಿಯೋ ಮೂಢ
*************
-ಕವಿನಾಗರಾಜ್.
NICE!
ReplyDeleteಕೊನೆಯದು ತುಂಬಾ ಚೆನ್ನಾಗಿದೆ. ಒಳ್ಳೆ ಚುಟುಕುಗಳು.
ReplyDeleteಧನ್ಯವಾದಗಳು ಶ್ರೀಯುತ ಭಟ್ಟರು ಮತ್ತು ಸೀತಾರಾಮರಿಗೆ.
ReplyDeleteನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ , ಭೇಟಿ ಹೀಗೇ ಮುಂದುವರೆಯುತ್ತಿರಲಿ . ನಿಮ್ಮ ವೇದಜೀವನ, ಕವಿಮನ ಗಳಿಗೆ ಬೇಟಿ ಕೊಟ್ಟೆ . ತುಂಬಾ ಪ್ರಭುದ್ದವಾದ ಬರಹ , ನಾವೆಲ್ಲಾ ಇನ್ನೂ ಕಲಿಯುವುದಿದೆ ನಿಮ್ಮಿಂದ . ಧನ್ಯವಾದಗಳು
ReplyDeleteಧನ್ಯವಾದಗಳು.
ReplyDelete