Pages

Monday, August 16, 2010

ಸಂಪಾದಕೀಯ

ಪ್ರಿಯ ವೇದಸುಧೆಯ ಅಭಿಮಾನಿಗಳೇ,
ವೇದಸುಧೆ ಬಳಗದ ಒಬ್ಬ ಸದಸ್ಯರ ಬಗ್ಗೆ ನಿಮಗೆ ಪರಿಚಯ ಮಾಡಲೇ ಬೇಕು. ನಿಜವಾಗಿ ನಿನ್ನೆಯೇ ಮಾಡಿದ್ದರೆ ಚೆನ್ನಾಗಿತ್ತು. ಇರಲಿ ಇಂದು ಸ್ವಾತಂತ್ರ್ಯೋತ್ಸವದ ಮರು ದಿನ, ತಪ್ಪೇನಿಲ್ಲ. ಪರಿಚಯ ಮಾಡಿಕೊಡಬೇಕಾದವರ ಬಗ್ಗೆ ನಿಮಗೆ ಈಗಾಗಲೇ ಪರಿಚಯವಿದೆ. ಅವರೇ ಕವಿ ನಾಗರಾಜ್. ೧೯೭೬ ರ ಎಮರ್ಜೆನ್ಸಿ ಅವಧಿಯಲ್ಲಿ ಸೆರೆಮನೆವಾಸ ಅನುಭವಿಸಿದವರು. ಅವರ ಅನುಭವಗಳನ್ನು ಅವರ ಮಾತುಗಳಿಂದಲೇ ಕೇಳಿ. ಅವರ ಬ್ಲಾಗ್ "ಕವಿಮನ" ವನ್ನು ಇಣುಕುವ ಮುನ್ನ ವೇದಸುಧೆಯ ವಿಶೇಷ ಲೇಖನಗಳ ಪುಟದಲ್ಲಿ ನಾಗರಾಜರ ಸೇವಾಪುರಾಣವನ್ನೊಮ್ಮೆ ಓದಿ , ಸೇವಾಪುರಾಣದ ಎಲ್ಲಾ ಭಾಗಗಳನ್ನೂ ಮೊದಲಿನಿಂದ ಓದಿದಾಗ ಮಾತ್ರ ನಾಗರಾಜರ ಬಗ್ಗೆ ಸರಿಯಾದ ಪರಿಚಯವಾಗುತ್ತೆ.ಅಲ್ಲಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲವಾದ್ದರಿಂದ ಇಲ್ಲಿ ಪ್ರತಿಕ್ರಿಯಿಸಿ. ಆಗಬಹುದೇ? ನಾಗರಾಜರು ಪಕ್ಕಾ ದೇಶಭಕ್ತರೆಂಬ ವಿಚಾರವನ್ನು ಮಾತ್ರ ತಿಳಿಸುತ್ತಾ ಮುಂದೊಮ್ಮೆ ವಿವರವಾಗಿ ಮಾತನಾಡಲು ಅವಕಾಶ ಉಳಿಸಿಕೊಳ್ಳುವೆ.ವಿಶೇಷ ಲೇಖನಗಳ ಪುಟದಲ್ಲಿ ಇನ್ನೊಂದು ಲೇಖನವೂ ಇದೆ.ಅದು ಕವಿ ಸುರೇಶ್ ಅವರದು. ಸುರೇಶ್ ಅವರು ನಾಗರಾಜರ ಸೋದರರು.

5 comments:

  1. ಹರಿಹರಪುರ ಶ್ರೀಧರರು ನನಗೆ ಸೋದರನಿದ್ದಂತೆ. ಅವರೊಡನೆ ನಾನು ನನ್ನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿರುತ್ತೇನೆ. ಅವರು ನನ್ನ ಬಗ್ಗೆ ಬರೆದಿರುವುದು ಸ್ವಲ್ಪ ಮುಜುಗರ ಉಂಟುಮಾಡಿತು. ಹೊಗಳಿಕೆ ಮಾನವಸಹಜವಾಗಿ ಸಂತಸ ಕೊಡುವಂತೆ ನನಗೂ ನೀಡಿದೆ. ಅವರಿಗೆ ಮತ್ತು ಪ್ರತಿಕ್ರಿಯಿಸಿದ ಶ್ರೀಯುತ ಸೀತಾರಾಮ ಮತ್ತು ವಿ.ಆರ್. ಭಟ್ಟರಿಗೆ ನಮನಗಳು.

    ReplyDelete
  2. ಕವಿ ನಾಗರಾಜ ಅವರ ಚುಟುಕಗಳನ್ನು , ಲೇಖನಗಳನ್ನು ಸಾಧ್ಯವಾದಾಗಲೆಲ್ಲ ಇಲ್ಲಿ ಓದುತ್ತಿರುವೆ ಮತ್ತು ಅದನ್ನು ನನ್ನ ಇತರ ನೆಟ್ ಗೆಳೆಯರೊಂದಿಗೆ ( ಅವರ ಹೆಸರು ಉಲ್ಲೇಖಿಸಿ ) ಹಂಚಿಕೊಂಡು ಖುಷಿ ಪಟ್ಟಿದ್ದೇನೆ ...ಹೆಚ್ಹೇನು ಹೇಳಲಿ - ನಾನು ಈಗ ಅವರ ಅಭಿಮಾನಿಯಾಗಿದ್ದೇನೆ !!...ಅವರಿಂದ ಹೀಗೆಯೇ ಹೆಚ್ಹು ಹೆಚ್ಹು ಬರಹಗಳು ಹೊಮ್ಮಿ ಬರಲಿ ಎಂದು ಹಾರೈಸುತ್ತೇನೆ !!....

    ReplyDelete
  3. ಧನ್ಯವಾದಗಳು, ಜಗದೀಶರೇ.

    ReplyDelete