Pages

Saturday, August 7, 2010

ಅವಧೂತ-೫

"ಉಪೇಂದ್ರ, ನೀನು ನಿಮ್ಮ ಅತ್ತಿಗೆಯನ್ನು ಕರೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಯಾಕೆ ೧೫ ದಿನ ಇಟ್ಟುಕೊಳ್ಳಬಾರದು? "- ಅವಧೂತರ ಬಾಯಲ್ಲಿ ಬಂದದ್ದು ಉಪೇಂದ್ರರಿಗೆ ವೇದವಾಕ್ಯವೇ ಸರಿ. ಮರು ಮಾತಾಡದೆ " ಸರಿ ಗುರುಗಳೇ ಈಗಿಂದೀಗಲೇ ಚಿಕ್ಕಮಗಳೂರಿಗೆ ಹೋಗಿ ಅತ್ತಿಗೆಯನ್ನು ಕರೆದುಕೊಂಡು ಹೋಗುವೆ."-ಎಂದವರೇ ಅತ್ತಿಗೆಯನ್ನು ಕರೆದುಕೊಮ್ಡು ಹಾಸನಕ್ಕೆ ಬಂದು ಬಿಟ್ಟರು. ಯಾರೂ ಏಕೆ? ಏನು? ಎಂದು ಕೇಳಲಿಲ್ಲ. ಹದಿನೈದು ದಿನಗಳು ಕಳೆದಿದೆ. ಅತ್ತಿಗೆಯೊಡನೆ ಅವರ ಮನೆಯ ಕ್ಷೇಮ - ಸಮಾಚಾರಗಳನ್ನು ಸಹಜವಾಗಿ ಉಪೇಂದ್ರರು ಪ್ರಸ್ತಾಪಿಸುತ್ತಾರೆ.
ಅತ್ತಿಗೆ ಹೇಳುತ್ತಾರೆ" ನೀನು ನನ್ನನ್ನು ಕರೆದುಕೊಂಡು ಬರದೆ ಇದ್ದಿದ್ದರೆ ನನ್ನ ಜೀವ ಹೋಗಿ ಹದಿನೈದು ದಿನಗಳಾಗಿರುತ್ತಿತ್ತು! " --ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿತ್ತು. ಗುರುಗಳು ಜೀವ ಉಳಿಸಿದ್ದರು!!

4 comments:

  1. ಅವಧೂತರ ಕಥೆಗಳನ್ನು ಮುಂದುವರಿಸಿದ್ದಕ್ಕೆ ನಿಮಗೆ ಮೊದಲಾಗಿ ನಮನಗಳು, ಮಹಾಪುರುಷರು ಎಲ್ಲವನ್ನೂ ಕೆಲವೊಮ್ಮೆ ಬಿಡಿಸಿ ಹೇಳುವುದಿಲ್ಲ, ಅವರ ಸಲಹೆಗಳು ಒಗಟಾಗಿ ಕಾಣುತ್ತವೆ, ಆದರೆ ಒಮ್ಮೆ ಅವು ಫಲಕಾರಿಯಾದಮೇಲೆ ನಮಗೆ ಇಡೀ ಕಥೆಗಳ ಅರಿವು ಮೂಡುತ್ತದೆ, ಅವಧೂತರ ಪರಿಚಯ,ಅ ಅವರ ದಿನಚರಿ, ಧ್ಯಾನ, ಆಹಾರ, ಆಚರಣೆ ಇವುಗಳ ಕುರಿತು ತಾವು ತಿಳಿಸಿದ್ದರೆ ಉಪಕಾರವಾಗುತ್ತಿತ್ತು, ಬಹಳ ಹಂಬಲಿಸಿದ್ದೆ-ಒಮ್ಮೆ ಕಾಣಬೇಕು ಅಂತ, ಅದು ಆಗಲಿಲ್ಲ! ಕಾರಣ ನನಗಂತೂ ಅರಿವಿಗಿಲ್ಲ, ಎಲ್ಲಕ್ಕೂ ಯೋಗಬೇಕು.

    ReplyDelete
  2. ನನಗೆ ತಿಳಿದಿರುವಂತೆ ಅವಧೂತರಿಗೆ ಯಾವ ಕಟ್ಟುಪಾಡುಗಳಿರಲಿಲ್ಲ.ಅವರ ದಿನಚರಿಯನ್ನು ಒಂದಿಷ್ಟು ವಿಷಯ ಸಂಗ್ರಹಿಸಿ ನಿಧಾನಕ್ಕೆ ಬರೆಯುತ್ತಾ ಹೋಗುವೆ.ಆದರೆ ಇಷ್ಟಂತೂ ನಿಜ. ಅವರೊಟ್ಟಿಗೆ ಒಂದಿಷ್ಟು ಶಿಷ್ಯರು ಸೇರಿಕೊಳ್ಳುತ್ತಿದ್ದರು.ಯಾರಾದರೂ ಅವಧೂತರಿಗೆಂದು ಹಣ್ಣು ಹಂಪಲು ತಂದರೆ ಅದನ್ನೆಲ್ಲಾ ಅಲ್ಲಿದ್ದವರಿಗೆ ಹಂಚಿಸಿಬಿಡುತ್ತಿದ್ದರು.ಅವರಿಗೆ ಏನು ತೋಚುತ್ತದೋ ಅದರಂತೆ ಆ ಕ್ಷಣದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅವರೊಟ್ಟಿಗೆ ಇದ್ದ ಶಿಷ್ಯರಿಗೆ ಒಮ್ಮೆ ಗುರುಗಳೊಡನೆ ಸೇರಿಕೊಂಡರೆ ಮುಂದೆ ಎಲ್ಲಿ ಹೋಗುತ್ತೇವೆ? ಯಾವಾಗ ಹಿಂದಿರುಗುತ್ತೇವೆ? ಎಂದು ಯಾರಿಗೂ ತಿಳಿಯುತ್ತಿರಲಿಲ್ಲ.ಪೂಜ್ಯ ಶೃಂಗೇರಿ ಶ್ರೀಗಳಿಗೆ ಅವಧೂತರ ಬಗ್ಗೆ ತುಂಬಾ ಗೌರವವಿತ್ತೆಂದೇ ಹೇಳಬೇಕು. ಈಗ ಅರಸೀಕೆರೆಯಲ್ಲಿರುವ ಶಂಕರಾನಂದಾಶ್ರಮಕ್ಕೆ ಹೊರಟಿರುವೆ.ಸಮಯ ದೊರೆತಾಗ ಇನ್ನಷ್ಟು ಬರೆಯುವೆ.

    ReplyDelete
  3. ಕುತೂಹಲಕಾರಿ ವಿಷಯಗಳನ್ನು ತಿಳಿಸುತ್ತಿರುವಿರಿ, ಶ್ರೀಧರ್. ವಂದನೆಗಳು.

    ReplyDelete
  4. ವೇದಸುಧೆಯ ಅಭಿಮಾನಿಗಳೇ,
    ಯಾವ ಒಂದು ಅಂಧ ವಿಶ್ವಾಸದಿಂದ ಈ ಲೇಖನಮಾಲೆ ಶುರುಮಾಡಿಲ್ಲ.ಭಗವಂತನ ಚೈತನ್ಯವು ಯಾರ್ಯಾರಲ್ಲಿ ಯಾವ್ಯಾವ ಮಟ್ಟಕ್ಕೆ ಇರುತ್ತೋ! ಯಾರು ಸ್ವಂತಕ್ಕೆ ಏನೂ ಬಯಸದೆ ಸಮಾಜಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿರುತ್ತಾರೋ ಅವರ ಬಗ್ಗೆ ವಿಷಯಗಳನ್ನು ಹಂಚಿಕೊಳ್ಳಬೇಕೆನಿಸುತ್ತದೆ. ಅವಧೂತರು ತಮ್ಮ ಹತ್ತಿರಕ್ಕೆ ಬಂದವರಿಗೆಲ್ಲಾ ಒಂದು ಸನ್ಮಾರ್ಗವನ್ನು ತೋರಿಸಿದವರು. ಇನ್ನೂ ಬರೆಯುವುದಿದೆ. ನಿಧಾನವಾಗಿ ಬರೆಯುವೆ.

    ReplyDelete