ಸತ್ಯ
ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!
ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?
ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!
ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?
ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!
ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ ಸತ್ಯ!
****
-ಕವಿನಾಗರಾಜ್.
[ಅರ್ಥೈಸಿದರೆ ಸತ್ಯ,
ReplyDeleteಪಥ್ಯವಾದರೆ ಸತ್ಯ,
ದೇವನೊಲಿವ ಸತ್ಯ!]
ನಾಗರಾಜ್,
ಹೀಗಂದರೇನು? ಸ್ವಲ್ಪ ನೀವೇ ವಿವರಣೆ ಕೊಡಿ
ನೈಸ್!
ReplyDeleteಶ್ರೀಧರ್, ಸತ್ಯವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ, ಅರ್ಥ ಮಾಡಿಕೊಂಡರೂ ಅದು ಪಥ್ಯವಾಗದೆ ಹೋಗಬಹುದು ಎಂಬುದು ನನ್ನ ಅನಿಸಿಕೆ. ಯಾವುದು ಒಳ್ಳೆಯದು ಎಂಬುದು ಗೊತ್ತಿದ್ದರೂ ಆ ಒಳ್ಳೆಯದನ್ನು ಏಕೆ ಮಾಡಲು ಹಿಂಜರಿಯುತ್ತಾರೆ ಎಂಬುದಕ್ಕೆ ವಿವರಣೆ ಕೊಡುವ ಅಗತ್ಯವಿಲ್ಲವೆಂದು ಭಾವಿಸುವೆ.ಸ್ವಂತಕ್ಕೆ ಲಾಭವಿಲ್ಲದಿದ್ದರೂ, ಕಷ್ಟವೆನಿಸಿದರೂ ಮೌಲ್ಯ ಉಳಿಸಿಕೊಂಡು ನಡೆಯುವವರಿಂದ ಹೆಚ್ಚಿನವರಿಗೆ ಒಳ್ಳೆಯದಾಗುವುದು.ಅವರು ದೇವರಿಗೆ ಹತ್ತಿರದವರು, ಅಥವಾ ಅವರೇ ದೇವರು!
ReplyDelete