ಹಾಸನದ ಶ್ರೀ ಶಂಕರ ಮಠದ ಧರ್ಮಾಧಿಕಾರಿಗಳಾದ ಶ್ರೀ ಶ್ರೀಕಂಠಯ್ಯನವರು ಶಂಕರಮಠದಲ್ಲಿ ನಡೆಯುವ ಶ್ರೀ ಶಂಕರ ಜಯಂತಿ ಹಾಗೂ ನವರಾತ್ರಿ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಉತ್ತಮವದ ಉಪನ್ಯಾಸಗಳನ್ನೂ ಹಲವು ವರ್ಷಗಳಿಂದ ನಡೆಸುತ್ತಾ ಬಂದಿರುತ್ತಾರೆ. ಕಳೆದ ೨-೩ ವರ್ಷಗಳಿಂದ ವೇದಾಧ್ಯಾಯೀ ಸುಧಾಕರ ಶರ್ಮರು ವೇದದ ವಿಚಾರವಾಗಿ ಉಪನ್ಯಾಸಗಳನ್ನು ಮಾಡಿದರೆ ಮಾತಾಜಿ ವಿವೇಕಮಯೀ ಇವರು ನಮ್ಮೊಳಗಿರುವ ಚೈತನ್ಯದ ಜಾಗೃತಿಯ ಬಗ್ಗೆ ಉತ್ತಮ ಉಪನ್ಯಾಸಗಳನ್ನು ಮಾಡುತ್ತಿದ್ದಾರೆ. ವೇದಸುಧೆಯ ಅಭಿಮಾನಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.
ಶೃಂಗೇರಿ ಶ್ರೀ ಶಂಕರ ಮಠ, ಹಾಸನ
ಶ್ರೀ ಶಾರದಾ ಶರನ್ನವರಾತ್ರಿ ಉಪನ್ಯಾಸ ಕಾರ್ಯಕ್ರಮಗಳು
ದಿನಾಂಕ 7.10.2010 ರಿಂದ 17.10.2010 ರವರಗೆ
ಸಂಜೆ 6.00 ರಿಂದ 7.30
ದಿನಾಂಕ | ಉಪನ್ಯಾಸಕರು | ವಿಷಯ |
7,8,9 | ಶ್ರೀ ಶ್ರೀ ಪರಮನಂದ ಭಾರತೀ ಸ್ವಾಮೀಜಿ, ಬೆಂಗಳೂರು | 1]ಮಹಾ ತಪಸ್ವೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು 2]ಪುನರ್ಜನ್ಮ-ಒಂದು ಚಿಂತನೆ |
10,11 | ಪೂಜ್ಯ ಮಾತಾಜಿ ವಿವೇಕಮಯೀ, ಭವತಾರಿಣಿ ಆಶ್ರಮ, ಬೆಂಗಳೂರು | 1] ಜೀವನದ ಸಾರ್ಥಕತೆ 2] ಭಕ್ತಿ ಮಾರ್ಗ-ಶಂಕರರು ಕಂಡಂತೆ |
12,13, 14,15 | ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮ, ಬೆಂಗಳೂರು | ನಿತ್ಯ ಜೀವನದಲ್ಲಿ ವೇದಮಂತ್ರಗಳ ಪ್ರಭಾವ [ಎಲ್ಲರಿಗಾಗಿ ವೇದ] |
16,17 | ಡಾ.ಸನತ್ ಕುಮಾರ್, ಮತ್ತೂರು | 1] ಶಿವಾಪರಾಧ ಕ್ಷಮಾಪಣಾ ಸ್ತೋತ್ರ 2] ಅರ್ಧ ನಾರೀಶ್ವರ ಸ್ತೋತ್ರ |
ಎಲ್ಲರಿಗೂ ಆದರಪೂರ್ಣ ಸ್ವಾಗತ
ಎಂ.ಎಸ್.ಶ್ರೀಕಂಠಯ್ಯ, ಧರ್ಮಾಧಿಕಾರಿಗಳು , ಶೃಂಗೇರಿ ಶ್ರೀ ಶಂಕರ ಮಠ, ಹಾಸನ
ಕಾರ್ಯಕ್ರಮ ಸಾಂಗವಾಗಿ ನಡೆಯಲಿ.
ReplyDelete