Pages

Tuesday, October 19, 2010

ವೇದಪಾಠ ಪರಿಚಯ



* ಸತ್ಯ-ಪ್ರಿಯ-ಹಿತ
ಒಂದು ವಿಚಾರವನ್ನು ನಂಬಿ ಜೀವನದಲ್ಲಿ ಅಳವಡಿಸಿಕೊಳ್ಳುವಾಗ ಹಾಗೂ ಬೇರೆಯವರಿಗೆ ತಿಳಿಸುವಾಗ ಮೂರು ಅಂಶಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು.ಅವು ಯಾವುವೆಂದರೆ ಈ ವಿಚಾರ ಸತ್ಯವಾಗಿದೆಯೇ? ಇದು ಪ್ರಿಯವಾಗಿದೆಯೇ? ಬೇರೆಯವರಿಗೆ ಹಿತವಾಗಿದೆಯೇ? ನಾವು ನಿತ್ಯ ಜೀವನದಲ್ಲಿ ನಮ್ಮ ಮಾತುಗಳನ್ನು ಗಮನಿಸಿದಾಗ ನಾವಾಡುವ ಬಹಳಷ್ಟು ಮಾತುಗಳು ಸತ್ಯ-ಪ್ರಿಯ ಮತ್ತು ಹಿತಕ್ಕೆ ದೂರವಾಗಿಯೇ ಇರುತ್ತವೆ.ಹಾಗಾಗಿ ಮಾತುಗಳು ಯಾವ ಪ್ರಭಾವವನ್ನು ಜೀವನದಲ್ಲಿ ಮಾಡಬೇಕಿದೆ, ಅದರಲ್ಲಿ ಅದು ಸೋತಿದೆ.ಆದ್ದರಿಂದ ಜೀವನದಲ್ಲಿ "ಅಯ್ಯೋ ಜೀವನ ಮಾಡಬೇಕಾಗಿದೆಯಲ್ಲಾ!" ಎನಿಸಿದೆ.ಆದರೆ ಜೀವನವು ಹೀಗೆ ಇರಬೇಕಾಗಿಲ್ಲ.ನಮ್ಮ ಜೀವನವನ್ನು ನಗು ನಗುತ್ತಾ ನಡೆಸುತ್ತಾ ಸುಖ ಸಂತೋಷಗಳನ್ನು ಅನುಭವಿಸುತ್ತಾ, ನಾವೂ ಚೆನ್ನಾಗಿದ್ದುಕೊಂಡು ಬೇರೆಯವರನ್ನೂ ಚೆನ್ನಾಗಿ ನೋಡಿ ಕೊಂಡು ಬದುಕಲು ಸಾಧ್ಯವಿದೆ.ಅದಕ್ಕೆ ಬೇಕಾಗುವ ಸಕಲ ಮಾರ್ಗದರ್ಶನಗಳು ನಮಗೆ ಸಿದ್ಧವಾಗಿ ವೇದದಲ್ಲಿ ಲಭ್ಯವಿದೆ. ಅದನ್ನು ಉಪಯೋಗಿಸಿಕೊಂಡು ಬದುಕಿದರೆ ಸುಖ-ಸಮೃದ್ಧ-ಸಮಾಧಾನಕರ ಜೀವನವನ್ನು ನಡೆಸಲು ಸಾಧ್ಯ.
* ವೇದದ ಮುಖ್ಯ ಉದ್ಧೇಶ
ನಾವು ನಮ್ಮ ಲೌಕಿಕ ಜೀವನವನ್ನು ಹೇಗೆ ಉತ್ತಮವಾಗಿ ನಡೆಸುತ್ತಾ ಅಂತಿಮವಾಗಿ ಜೀವನದ ಪರಮಗುರಿಯಾದ ಅಧ್ಯಾತ್ಮಿಕ ಸಾಧನೆಯನ್ನು ಹೇಗೆ ಮಾಡಬೇಕೆಂಬುದನ್ನು ತಿಳಿಸಿಸುವುದೇ ವೇದಗಳ ಉದ್ಧೇಶವಾಗಿದೆ.
* ಎರಡು ವಿಪರೀತ ವಾದಗಳು
ಭೋಗವಾದ:
ಕೆಲವರು ಹೇಳುತ್ತಾರೆ. ಜೀವನ ಇರುವುದೇ ಅಲ್ಪ. ಅದನ್ನು ಚೆನಾಗಿ ಅನುಭೋಗಿಸು.[ಲೈಫ್ ಈಸ್ ಶಾರ್ಟ್, ಮೇಕ್ ಇಟ್ ಸ್ವೀಟ್] ನಾವು ಪ್ರಪಂಚಕ್ಕೆ ಹೇಗೆ ಬಂದೆವೋ ತಿಳಿಯದು, ೫೦-೬೦ ವರ್ಷಗಳು ಬದುಕಿರುತ್ತೇವೋ ಇಲ್ಲವೋ ತಿಳಿಯದು, ಅದನ್ನು ಚೆನ್ನಾಗಿ ಅನುಭವಿಸಿಬಿಡಿ.
ಕುಡಿದು, ತಿಂದು, ಬೇಕಾದ್ದನ್ನು ಅನುಭೋಗಿಸುವ ಈ ವಾದಕ್ಕೆ "ಭೋಗವಾದ" ಎನ್ನುತ್ತೇವೆ.ಇದು ಒಂದು ವಿಪರೀತವಾದ.
ವೈರಾಗ್ಯವಾದ:
ಇನ್ನೊಂದು ಗುಂಪಿನ ವಾದವಾದವಾದರೋ ಈ ಭೌತಿಕ ಜೀವನವನ್ನು ಪೂರ್ಣ ತಿರಸ್ಕರಿಸಿ ವೈರಾಗ್ಯದ ವಿಚಾರವನ್ನು ಹೇಳುತ್ತದೆ.ವೈರಾಗ್ಯದ ವಿಚಾರವನ್ನು ಹೇಳುವಾಗ ನಮ್ಮ ಜೀವನವನ್ನು ಸಂಪೂರ್ಣ ತಿರಸ್ಕರಿಸುವ ವಾದ ಇವರದು.ಆದರೆ ಯಾವ ವ್ಯಕ್ತಿಯೂ ವೈರಾಗ್ಯದ ವಿಚಾರವನ್ನು ಹೇಳುವಾಗಲೂ ಅವನ ಹಸಿವು-ಬಾಯಾರಿಕೆಗಳನ್ನು ಬಿಟ್ಟು ಕೇವಲ ವೈರಾಗ್ಯ ಹೇಳಲು ಸಾಧ್ಯವಿಲ್ಲ. ಈ ಭೌತಿಕ ಜೀವನವನ್ನು ಪೂರ್ಣ ತಿರಸ್ಕರಿಸಿ ವೈರಾಗ್ಯದ ವಿಚಾರವನ್ನು ಹೇಳುವ ಈ ವಾದವು ಮತ್ತೊಂದು ವಿಪರೀತ ವಷ್ಟೆ.
ಸಮತ್ವ:
ಇವೆರಡೂ ವಾದಗಳಿಂದ ಪರಿಪೂರ್ಣ ಜೀವನ ಸಾಧ್ಯವಿಲ್ಲ.ಆದರೆ ಇವೆರಡರ ಮಧ್ಯೆ , ಎರಡನ್ನೂ ಹೊಂದಿಸುವ ವಿಚಾರ ಒಂದಿದೆ. ಅದುವೇ "ಸಮತ್ವ" ಅದನ್ನು ವೇದವು ಹೇಳುತ್ತದೆ. ಅದೇನು? ಮಾನವನು ಅನುಭವಿಸುತ್ತಿರುವ ಈ ಲೌಕಿಕ ಜೀವನವನ್ನು ನಡೆಸುತ್ತಲೇ ಅಂತಿಮವಾಗಿ ಅಧ್ಯಾತ್ಮದತ್ತ ಸಾಗುವ ಜೀವನ ಕ್ರಮ.ಹೆಂಡತಿ ಮಕ್ಕಳೊಡನೆ ಸುಖವಾಗಿ ಬಾಳುತ್ತಾ, ಅಷ್ಟರಲ್ಲೇ ಮುಳುಗದೆ ಈ ಜೀವನದಾಚೆಗೂ ಏನೋ ಒಂದು ಅದ್ಭುತ ವಿಚಾರವಿದೆ ಎಂಬ ಅರಿವಿನೊಂದಿಗೆ ಜೀವನವನ್ನು ನಡೆಸುವ ಕ್ರಮ.ಅಧ್ಯಾತ್ಮ ಸಾಧನೆ ಮಾಡುವವನಿಗೂ ಹಸಿವು ಬಾಯಾರಿಕೆಗಳು ಸಹಜ. ಅದನ್ನು ತಿರಸ್ಕರಿಸದೆ ಈ ಲೌಕಿಕ ಬದುಕಿಗಾಗಿ ಐಶ್ವರ್ಯವನ್ನು ಸಂಪಾದಿಸುತ್ತಾ, ಆದರೆ ಬದುಕಿಗೆ ಎಷ್ಟು ಬೇಕೋ ಅಷ್ಟನ್ನು ಸಂಪಾದಿಸುವ ಮಾನಸಿಕತೆಯೊಂದಿಗೆ ಬದುಕುವುದನ್ನು ವೇದವು ಕಲಿಸುತ್ತದೆ. ದೇಹವನ್ನು ಬಿಡುವಾಗ ಎಲ್ಲವನ್ನೂ ಬಿಟ್ಟುತಾನೇ ಹೋಗಬೇಕು. ಈ ಅರಿವಿನೊಂದಿಗೆ ಬದುಕುವುದನ್ನು ವೇದವು ಕಲಿಸುತ್ತದೆ.ಹೀಗೆ ಬದುಕುವಾಗ ವಾಮಮಾರ್ಗಗಳಿಂದ ದುಡಿದು ಬೇಕಾದ್ದನ್ನು ಪಡೆಯುವ ವಿಚಾರವು ಹತ್ತಿರ ಸುಳಿಯುವುದಿಲ್ಲ. ಅಂತಿಮವಾಗಿ ಆನಂದವನ್ನು ಪಡೆಯುವ ಮಾರ್ಗವನ್ನು ವೇದವು ತಿಳಿಸಿಕೊಡುತ್ತದೆ.
*ಅಧ್ಯಾತ್ಮ ಸಾಧನೆಗೆ ಮನುಷ್ಯಜನ್ಮ ಮಾತ್ರ ಸಾಧ್ಯ:
ಮಾನವ ಜನ್ಮ ದೊಡ್ದದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪ ಗಳಿರಾ! ದಾಸರ ವಾಣಿ ಎಲ್ಲರಿಗೂ ಚಿರಪರಿಚಿತ.ಅಧ್ಯಾತ್ಮ ಸಾಧನೆಗೆ ಮನುಷ್ಯ ಜನ್ಮದಿಂದ ಮಾತ್ರವೇ ಸಾಧ್ಯ.ಮನುಷ್ಯೇತರವಾದ ಪಶು-ಪಕ್ಷಿ-ಕ್ರಿಮಿ-ಕೀಟಗಳ ಶರೀರ, ಇಂದ್ರಿಯ ಮನಸ್ಸುಗಳಿಗೆ ಅಧ್ಯಾತ್ಮ ಸಾಧನೆಯ ಈ ಸಾಮರ್ಥ್ಯ ಇರುವುದಿಲ್ಲ.ಅವುಗಳ ಹತ್ತಿರ ಇರುವುದು ಸಾಮಾನ್ಯ ಕ್ಯಾಲ್ಕುಲೇಟರ್. ಆದ್ದರಿಂದ ಅವುಗಳು ತಿಂದು-ಉಂಡು ಮರಿಹಾಕಿದರೆ ಅವುಗಳ ಜೀವನ ಮುಗಿದಂತೆ.ಮನುಷ್ಯನ ಶರೀರ, ಇಂದ್ರಿಯ ಮನಸ್ಸುಗಳು  ಸೈಂಟಿಫಿಕ್ ಕ್ಯಾಲ್ಕುಲೇಟರ್ ನಂತೆ. ಆದರೆ ಅದರ ಉಪಯೋಗ ಮಾಡದೆ ಭೋಗವಾದಿಗಳು ಸಾಮಾನ್ಯ ಕ್ಯಾಲ್ಕುಲೇಟರ್ ನಲ್ಲಿ ಮಾಡುವಂತೆ  ಕೂಡು, ಕಳೆ, ಗುಣಿಸು, ಭಾಗಿಸು ಕೆಲಸವನ್ನು ಈ ಸೈಂಟಿಫಿಕ್ ಕ್ಯಾಲ್ಕುಲೇಟರ್ ನಲ್ಲಿ ಮಾಡುತ್ತಿರುವರಲ್ಲಾ!ಇಂತಹ ಸಾಮಾನ್ಯ ಕೆಲಸಕ್ಕೆ  ಸೈಂಟಿಫಿಕ್ ಕ್ಯಾಲ್ಕುಲೇಟರ್ ಅಗತ್ಯವಿತ್ತೇ?  ಕೇವಲ ಕೂಡು, ಕಳೆ, ಗುಣಿಸು, ಭಾಗಿಸು ಕೆಲಸವನ್ನು  ಸಾಮಾನ್ಯ ಕ್ಯಾಲ್ಕುಲೇಟರ್ ನಲ್ಲೂ ಮಾಡಬಹುದಲ್ಲವೇ? ಹಾಗೆ ಮನುಷ್ಯ ಶರೀರವು ದೊರೆತಿರುವಾಗ ಅದರ ಉಪಯೋಗ ಪಡೆದು ಎಷ್ಟು ಉತ್ತಮ ಕೆಲಸವನ್ನು ಮಾಡಬಹುದೋ ಅದನ್ನು ಮಾಡಬೇಕು.ಹಾಗಾಗದೆ ಪ್ರಾಣಿಯಂತೆ  ತಿಂದು -ಉಂಡು ಮರಿಹಾಕಿ ಬದುಕಿಗೆ ವಿದಾಯ ಹೇಳಿದರೆ , ಪ್ರಾಣಿಗಳಿಗೂ ಮನುಷ್ಯನಿಗೂ ಯಾವ ವ್ಯತ್ಯಾಸ ಇರುವುದಿಲ್ಲ.ಹಾಗಾದರೆ ಕೂಡು-ಕಳೆಯುವ ಸಾಮಾನ್ಯ ಕೆಲಸ ಬೇಡವೇ? ಬೇಕು. ಮನುಷ್ಯನ ಶರೀರ, ಮನಸ್ಸು.ಇಂದ್ರಿಯಗಳ ಆರೋಗ್ಯಕ್ಕಾಗಿ ಎಲ್ಲವೂ ಬೇಕು,  ಆದರೆ ಅಷ್ಟಕ್ಕೇ ಜೀವನ ಮುಗಿಯ ಬಾರದು.ಅದನ್ನು ಆಧಾರವಾಗಿಟ್ಟುಕೊಂಡು ಅದರ ಮುಂದಿನ ಆಧ್ಯಾತ್ಮ ಸಾಧನೆ ಮಾಡಬೇಕು. ಇದು  ಸಮತೋಲನದ ಬಿಂಧು.ಇದುವೇ ಸಮತ್ವ. ಇದನ್ನೇ ಕೃಷ್ಣನು ಯೋಗವೆಂದು ಹೇಳಿದ್ದಾನೆ." ಸಮತ್ವಂ ಯೋಗ ಉಚ್ಛತೇ" ಎಂದಿದ್ದಾನೆ.ಈ ಸಮತ್ವವೇ ಯೋಗ. ಈ ಸಮತ್ವವನ್ನು ಯಾರ್ಯಾರು ಜೀವನದಲ್ಲಿ ಗುರುತಿಸಿಕೊಳ್ಳುತ್ತಾರೆ, ಅವರು ಜೀವನದ ಸಾರ್ಥಕತೆಯನ್ನು ಪಡೆಯುತ್ತಾರೆ.ಹಿಂದಿನ ಕಾಲದ ನಮ್ಮ ಋಷಿಮುನಿಗಳಲ್ಲಿ ಬಹಳಷ್ಟು  ಜನರು ಗೃಹಸ್ಥರೇ ಆಗಿದ್ದರು.ವೈರಾಗ್ಯದ ಹೆಸರಿನಲ್ಲಿ ಈ ಲೌಕಿಕಜೀವನವನ್ನು ಅವರು ನಿರಾಕರಿಸಿರಲಿಲ್ಲ.ಲೌಕಿಕ ಲೀವನದಲ್ಲಿದ್ದು ಕೊಂಡೇ ಇಲ್ಲಿನ ಕರ್ತವ್ಯಗಳನ್ನು ನಿರ್ವಹಿಸುತ್ತಲೇ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದರು.
ಇದೇ ಸರಿಯಾದ ಮಾರ್ಗ. ಇದುವೇ ಸಮತ್ವ.ಇದೇ ಯೋಗ.ಈ ಸಮತ್ವವನ್ನು  ಅದ್ಭುತವಾಗಿ ವೇದಗಳಲ್ಲಿ ತಿಳಿಸಿದೆ. ಇದು  ನಮಗೆ ಅರ್ಥವಾಗದೆ ಸಹಜವಾಗಿ ಕೇಳುತ್ತಿರುವ ಮಂತ್ರಗಳಷ್ಟೇ ವೇದವೆಂಬುದು ನಮ್ಮ ಕಲ್ಪನೆ. ಆದರೆ ಅದು ತಪ್ಪು ಕಲ್ಪನೆ. ಎಲ್ಲಾ ವೇದಮಂತ್ರಗಳಲ್ಲೂ ನಮ್ಮ ಉತ್ತಮ ಬದುಕಿಗೆ ಬೇಕಾಗುವ ಜ್ಞಾನ ಭಂಡಾರವೇ  ಅಡಗಿದೆ.ನಾವು ಈ ಜ್ಞಾನ ಭಂಡಾರವನ್ನು ಅರ್ಥಮಾಡಿಕೊಂಡು ಜೀವನಕ್ಕೆ ಅಳವಡಿಸಿಕೊಂಡಿದ್ದೇ ಆದರೆ ನಾವೂ ಸುಖ -ನೆಮ್ಮದಿಯನ್ನು ಜೀವನದಲ್ಲಿ ಪಡೆಯಬಹುದು, ಜಗತ್ತಿಗೂ ನೆಮ್ಮದಿಯನ್ನು ಕೊಡಬಹುದು. ಮನುಷ್ಯ ಜೀವನದ ಲೌಕಿಕ ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಬಹುಶ:  ಇನ್ಯಾವುದರಿಂದಲೂ ಪಡೆಯಲು ಸಾಧ್ಯವಾಗಲಾರದು. ಹಿಂದಿನ ತಲೆಮಾರಿಗೂ ಇಂದಿನ-ಮುಂದಿನ ತಲೆಮಾರುಗಳ ನಡುವೆ ದೊಡ್ದ  ಸಮಸ್ಯೆಯನ್ನು ಕಾಣಬಹುದಾಗಿದೆ. ಹಿಂದಿನ ತಲೆಮಾರಿನವರು ಅಧ್ಯಾತ್ಮಿಕ ಸಾಧನೆ ಮಾಡಬೇಕೆನ್ನುತ್ತಾರೆ. ಆದರೆ ಯಾಕಾಗಿ ಮಾಡಬೇಕೆಂದು ಇಂದಿನ ತಲೆಮಾರಿನವರು ಕೇಳಿದರೆ ಅವರಲ್ಲಿ ಉತ್ತರವಿಲ್ಲ. ಇಂದಿನ-ಮುಂದಿನ ತಲೆಮಾರಿನವರ ವಾದವಾದರೋ ಭೋಗ ವಾದ. ಬದುಕಿರುವಷ್ಟು ದಿನ ತಿಂದುಂಡು ಮೆರೆದು ಬಿಡುವ ವಾದ.ಈ ತಲೆಮಾರಿನವರ ಪ್ರಶ್ನೆಗಳಿಗೆ ಹಿಂದಿನ ತಲೆಮಾರಿನವರು ಉತ್ತರಿಸಲು ಅಸಮರ್ಥರಾಗಿರುವುದರಿಂದ ಎರಡೂ ತಲೆಮಾರಿನ ಮಧ್ಯೆ ಗೊಂದಲವು ನಿರ್ಮಾಣವಾಗಿದೆ. ಆದರೆ ಈ ಎರಡೂ ತಲೆಮಾರಿನ ಜನರನ್ನು ಬೆಸೆಯುವ ಸಮತ್ವದ ಮಾರ್ಗಬೇಕೆಂದರೆ ಅದು ವೇದದಿಂದ  ಮಾತ್ರವೇ ಸಾಧ್ಯ.ಹಿಂದಿನ ತಲೆಮಾರಿನವರು  ಗೊಡ್ಡು ವಿಚಾರಗಳನ್ನು ಹೇಳುತ್ತಿದ್ದರೆ ವೇದದ ಜ್ಞಾನವು ಅದನ್ನು ನಿವಾರಣೆ ಮಾಡಬಲ್ಲದು.ಇಂದಿನ-ಮುಂದಿನ ಪೀಳಿಗೆಯವರ ಸಂದೇಹಗಳಿಗೆ ವೈಜ್ಞಾನಿಕವಾಗಿ ಪರಿಹಾರವನ್ನು ವೇದವು ನೀಡುವುದರಿಂದ ಅವರ ಜೀವನವನ್ನು ಸುಧಾರಿಸಿಕೊಳ್ಳಲು ಸಾಧ್ಯವಿದೆ. ಅಂದರೆ ಎರಡೂ ತಲೆಮಾರಿನವರಿಗೂ ವೇದದಲ್ಲಿ ಮಾರ್ಗದರ್ಶನವಿದೆ. ಇದನ್ನು ಇದೀಗಲೇ ಒಪ್ಪಬೇಕಾಗಿಲ್ಲ. ಆದರೆ ಮುಂದೆ ನಾಲ್ಕಾರು ಮಂತ್ರಗಳ ಅರ್ಥವನ್ನು ತಿಳಿದಮೇಲೆ ಅದು ಸ್ವೀಕಾರ್ಹವಾದರೆ ಆಗ ಒಪ್ಪಬಹುದು.ವೇದವೆನ್ನುವುದು ಲೌಕಿಕ ಮತ್ತು ಆಧ್ಯಾತ್ಮಿಕ ಬದುಕನ್ನು ಬೆಸುಗೆಗೊಳಿಸುವ ಜೀವನ ವಿಜ್ಞಾನವೆನ್ನುವುದನ್ನು  ವೇದದ ನಾಲ್ಕಾರು ಮಂತ್ರಗಳ ಅರ್ಥವನ್ನು ಸರಿಯಾಗಿ ತಿಳಿದುಕೊಂಡಾಗ ಮನದಟ್ಟು ಮಾಡಿಕೊಳ್ಳಬಹುದು. ಹೇಳಿಕೊಡುವ ಏಕೈಕ ವಿಜ್ಞಾನವೆಂದರೆ ಅದು ವೇದಗಳು.
ಲೌಕಿಕ ಮತ್ತು ಆಧ್ಯಾತ್ಮಿಕ ಸಾಧನೆಗೆ ವೇದವೇ ಆಗಬೇಕೇ? 
ಅನೇಕರ  ಪ್ರಶ್ನೆ ಹೀಗೂ ಇರಬಹುದು. ಅನೇಕ ಮಹಾಮಹಿಮರುಗಳು ಬರೆದಿರುವ ಧರ್ಮ ಗ್ರಂಥಗಳ ಭಂಡಾರವೇ ಇರುವಾಗ ವೇದವೇ ಏಕಾಗಬೇಕು? ಈ ವಿಚಾರವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸುವಾಗ ಮೊಟ್ಟಮೊದಲ ಅಂಶವೆಂದರೆ  " ವೇದವು ಇಡೀ ಮನುಕುಲದ ಉನ್ನತಿಗಾಗಿ ಇದೆ.ವೇದವು ಯಾವುದೇ ಮತ-ಪಂಥಗಳಿಗೆ ಸೀಮಿತವಾಗಿಲ್ಲ. ಯಾವುದೇ ಮತ-ಪಂಥಗಳ ಗ್ರಂಥದ ವಿಚಾರವನ್ನು ಗಮನಿಸಿದಾಗ ನಮಗೆ ತಿಳಿದುಬರುವ ಅಂಶವೆಂದರೆ ಯಾರು ಈ ಮತವನ್ನು ನಂಬುತ್ತಾರೋ, ಯಾರು ಈ ಮಾರ್ಗವನ್ನು ನಂಬುತ್ತಾರೋ,ಯಾರು ಈ ಗ್ರಂಥವನ್ನು ನಂಬುತ್ತಾರೋ ಅವರಿಗೆ ಅದು ಸೀಮಿತಗೊಳ್ಳುತ್ತದೆ.ಜಗತ್ತಿನಲ್ಲಿರುವ ಯಾವುದೇ ಮತ-ಸಂಪ್ರದಾಯಗಳೂ ಸೀಮಿತವೇ ಆಗಿವೆ.ಯಾವ ಕಟ್ಟು ಪಾಡುಗಳಿಲ್ಲದೆ, ಜಾತಿ-ಮತ-ಪಂಥ,ಲಿಂಗ ಭೇದವಿಲ್ಲದೆ, ಸಕಲ ಮಾನವಕುಲದ ಹಿತಕ್ಕಾಗಿ ಒಂದು ಗ್ರಂಥವಿದೆಯೆಂದಾದರೆ ಅದು ವೇದ ಮಾತ್ರವೇ ಆಗಿದೆ.ಇಷ್ಟು ವಿಶಾಲ ವ್ಯಾಪ್ತಿಯ ಜ್ಞಾನ ಭಂಡಾರವು ವೇದದ ಹೊರತಾಗಿ ಮತ್ಯಾವುದೂ ಜಗತ್ತಿನಲ್ಲಿಲ್ಲ.ಆದರೆ ದುರಾದೃಷ್ಟವೆಂದರೆ ವೇದದ ಬಗ್ಗೆ ಮಾತನಾಡುವ ಅನೇಕರು ಈ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತಿಲ್ಲ.ವೇದವು ಯಾವುದೋ ವರ್ಗಕ್ಕೆ ಸೀಮಿತವೆಂಬ ಕಟ್ಟುಪಾಡು ವಿಧಿಸಿರುವುದು ನಮ್ಮ ಸಮಾಜದ ದು:ಸ್ಥಿತಿಗೆ ಕಾರಣವಾಗಿದೆ.ಆದರೆ ಈಗ ನಾವು ವೇದದ ಕೆಲವು ಮಂತ್ರಗಳ ಅರ್ಥವನ್ನು ನೇರವಾಗಿ ತಿಳಿಯುವ ಪ್ರಯತ್ನವನ್ನು ಮಾಡೋಣ. ಆಗ ನಮಗೆ ವೇದದ ಹಿರಿಮೆ ಅರ್ಥವಾಗುತ್ತದೆ.ಆಗಲೂ ಅದು ನಮಗೆ ಒಪ್ಪಿಗೆಯಾಗದಿದ್ದಲ್ಲಿ ಅದನ್ನು ಬಿಡುವ ಅಧಿಕಾರ ನಮಗೆ ಇದ್ದೇ ಇದೆ.ಇನ್ನು ಮುಂದಿನ ನಾಲ್ಕಾರು ಮಂತ್ರಗಳ ಅರ್ಥ ವಿವರಣೆಯನ್ನು ತಿಳಿಯುವಾಗ ಬಹಳ ಎಚ್ಛರಿಕೆಯಿಂದಿದ್ದು ಗಮನಿಸಿದಾಗ ವೇದದ ಗಟ್ಟಿತನ ನಿಚ್ಛಳವಾಗುತ್ತದೆ. ಆದರೆ ವೇದವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಪೂರ್ವಾಗ್ರಹವಿಲ್ಲದ  ಮುಕ್ತ ಮನಸ್ಸು ಇರಬೇಕು.ನಾವು ಇದುವರವಿಗೆ ಬೆಳೆದು ಬಂದಿರುವ ಪರಿಸರದಲ್ಲಿ ಸ್ವಲ್ಪ ಗೊಂದಲವಾಗಲೂ ಬಹುದು. ಆದರೆ ಈ ನಾಲ್ಕಾರು ಮಂತ್ರಗಳನ್ನು ಅರ್ಥಮಾಡಿಕೊಳ್ಳುವ ವರಗೆ ನಮ್ಮ ತಲೆಯಲ್ಲಿ ತುಂಬಿರಬಹುದಾದ ಯಾವುದೇ ವಿಚಾರವನ್ನೂ ಸ್ವಲ್ಪ ಕಾಲ ಬದಿಗಿರಿಸಿ ಮುಕ್ತ ಮನಸ್ಸಿನಿಂದ  ವೇದ ಮಂತ್ರಗಳ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿದ್ದೇ ಆದರೆ ನಮ್ಮಲ್ಲಿರಬಹುದಾದ ಪೂರ್ವಾಗ್ರಹವು ತೊಂದರೆ ಮಾಡುವುದನ್ನು ತಪ್ಪಿಸಿಕೊಳ್ಳ ಬಹುದಾಗಿದೆ............

17 comments:

  1. ಎಲ್ಲಾ ದೇವರಿಗೂ ನವಶಕ್ತಿ ಪೂಜಾ ಮತ್ತು ನವಶಕ್ತಿ ಪೂಜೆಯವಿವರ ದಯವಿಟ್ಟು ತಿಳಿಸಿ
    -Vinayak bhat

    ReplyDelete
  2. Dear Bhatt,

    what is navashakti pooja and what do you mean by yella devaru?

    ReplyDelete
  3. ಶ್ರೀ ವಿನಾಯಕ ಭಟ್,
    ನಮಸ್ತೆ,ವೇದಸುಧೆಯನ್ನು ಭೇಟಿ ಮಾಡಿದ್ದಕ್ಕೆ ಧನ್ಯವಾದಗಳು.ವೇದವನ್ನು ಹೇಗೆ ಅರ್ಥಮಾಡಿಕೊಳ್ಳಬೇಕೆಂಬುದಕ್ಕೆ ವೇದಸುಧೆ ಸಹಕಾರಿಯಾಗಬಲ್ಲದು. ಅಷ್ಟೇ ಅಲ್ಲ, ಶ್ರೀ ಶರ್ಮರ ವಿಶಿಷ್ಟ ಚಿಂತನೆಯು ನಮ್ಮನ್ನು ಸತ್ಯಪಥದಲ್ಲಿ ಕೊಂಡೊಯ್ಯಬಲ್ಲದು.
    ಈ ಲೇಖನವನ್ನು ಓದುವ ಮುಂಚೆ ದಯಮಾಡಿ ವೇದಪಾಠಪೀಠಿಕೆ ಆಡಿಯೋ ಕೇಳಿ.
    ಉಪನ್ಯಾಸದ ಬಗ್ಗೆ ಸಂದೇಹವಿದ್ದರೆ ಕೇಳಿ, ಶರ್ಮರು ಉತ್ತರಿಸುವರು.
    -ಹರಿಹರಪುರಶ್ರೀಧರ್

    ReplyDelete
  4. ಶ್ರೀ ವಿಶಾಲ್,ನಮಸ್ತೆ,
    ನಿಮ್ಮ ಸಲಹೆಗಳನ್ನು ಸ್ವೀಕರಿಸಿ ಆದಷ್ಟು ಸುಧಾರಣೆ ಮಾಡಿಕೊಂಡಿರುವುದನ್ನು ಗಮನಿಸಿರುವಿರಾ?ಹಾಸನದಲ್ಲಿ ನಡೆದ ಶ್ರೀ ಸುಧಾಕರಶರ್ಮರ ವೇದ ಪ್ರವಚನದ ಮಾಸ್ ಸಿ.ಡಿ. ಮಾಡಬೇಕೆಂಬ ಆಶೆ ಇದೆ.ವೇದಸುಧೆಯನ್ನು ಇತ್ತೀಚಿಗೆ ನೋಡುತ್ತಿರುವಿರಾ? ನಿಮ್ಮ ಸಲಹೆ ?

    ReplyDelete
  5. ಮುಂದುವರೆಯಲಿ, ಶ್ರೀಧರ್. ವಿಚಾರ ತಿಳಿಯುವ ಕುತೂಹಲವಿರುವವರು ಪ್ರಶ್ನೆಗಳನ್ನು ಕೇಳುವುದು, ತಮ್ಮ ಮನಸ್ಸಿನ ಗೊಂದಲಗಳನ್ನು ವ್ಯಕ್ತಪಡಿಸುವುದು ಸಹಜಕ್ರಿಯೆ. ತಿಳಿಯುತ್ತಾ ಹೋದಂತೆ ಗೊಂದಲ ದೂರವಾಗುತ್ತಾ ಹೋಗುತ್ತದೆ. ಅನಿಸಿಕೆಗಳೂ, ಪ್ರತಿಕ್ರಿಯೆಗಳೂ ಸಹ ಇದನ್ನೇ ಬಿಂಬಿಸುವುವು. ತಿಳಿಯುವ ಹಂತದಲ್ಲಿ ಇವೆಲ್ಲಾ ಸಾಮಾನ್ಯವಾದ್ದರಿಂದ ಅಂತಹ ಪ್ರತಿಕ್ರಿಯೆ/ಅನಿಸಿಕೆಗಳನ್ನು ವ್ಯಕ್ತಪಡಿಸುವವರನ್ನು ಹೀಗಳಿಯದೆ ಸಮಾಧಾನವಾಗಿ ಸಂದೇಹ ದೂರ ಮಾಡುವ ಪ್ರಯತ್ನ ಮಾಡಬಹುದು. ಸತ್ಯ ಅಪ್ರಿಯವಾದರೂ ಪ್ರಿಯವಾದ ರೀತಿಯಲ್ಲಿ ವ್ಯಕ್ತಪಡಿಸಲು ಪ್ರಯತ್ನಿಸಬೇಕು ಅನ್ನುವುದು ನನ್ನ ಅನಿಸಿಕೆ.

    ReplyDelete
  6. ಒಪ್ಪುವೆ, ನಾಗರಾಜ್.ನಾನೆಂದೂ ಯಾರನ್ನೂ ಹೀಯಾಳಿಸುವುದಿಲ್ಲ.ವೇದಸುಧೆಯಂತಾ ಮನೋರಂಜನೆಯಿಲ್ಲದ ತಾಣಕ್ಕೆ ಬರುವ ಜನರಿಗೆ ಖಂಡಿತವಾಗಿ ತಿಳಿಯುವ ಆಸಕ್ತಿ ಇದ್ದೇ ಇದೆ. ಅವರ ಆಸಕ್ತಿಯನ್ನು ಗೌರವಿಸುವೆ.ಯಾರೂ ಯಾರನ್ನೂ ಹೀಯಾಳಿಸಬಾರಬೆಂಬುದು ನನ್ನ ಕಿವಿಮಾತು ಕೂಡ.

    ReplyDelete
  7. Dear Sir,

    Yes I have been following vedasudhe, I really appreciate you in making all the efforts to spread knowledge.I even had a detailed discussion with sharmaji last week and we discussed about vedasudhe too.

    I guess Mr. Nagaraj commented on my response above.I am sorry If It felt offensive, I was just curious to know so asked a direct question.It was a genuine question and never intended to discourage or criticize anyone.

    ReplyDelete
  8. ಶ್ರೀ ವಿಶಾಲ್, ನಿಮ್ಮ ತೆರೆದ ಮನದ ಮಾತನ್ನು ಶ್ರೀ ವಿನಾಯಕ ಭಟ್ ಮತ್ತು ಕವಿ ನಾಗರಾಜರು ನೋಡುತ್ತಾರೆಂದು ಭಾವಿಸುವೆ. ಅಂತೂ ಸತ್ಯ-ಪ್ರಿಯ-ಹಿತ ಈ ಮೂರೂ ಎಚ್ಛರಿಕೆಯೊಡನೆ ವೇದದ ಜ್ಞಾನಪ್ರಸಾರದ ಕೆಲಸವಾಗಬೇಕು. ನಿಮ್ಮ ಸಹಕಾರ ಎಂದೆಂದೂ ಇರಲಿ.ನಿಮ್ಮ ಕ್ಯಾಮರಾ ಬಲು ಉಪಯೋಗವಾಗಿದೆ. ಮೊನ್ನೆ ಹಾಸನದಲ್ಲಿ ನಡೆದ ಶರ್ಮರ ಪ್ರವಚನಗಳ ಒಟ್ಟು ೩೫ ಕ್ಲಿಪ್ ಗಳು ಸಿದ್ಧವಿದೆ. ಬ್ಲಾಗಿಗೆ ಹಾಕುವ ಉದ್ಧೇಶದಿಂದ ಎಲ್ಲವನ್ನೂ ೧೦-೧೩ ನಿಮಿಷಗಳ ಕ್ಲಿಪ್ ಆಗಿ ಸೆರೆಹಿಡಿಯಲಾಗಿದೆ. ಎಲ್ಲವನ್ನೂ ಡಿ.ವಿ.ಡಿ ಗೆ ಬರೆದು ನಿಮಗೆ ಕಳಿಸುವೆ. ಯಾವುದಾದರೂ ತಾಣಕ್ಕೆ ನೀವು ಅಪ್ ಲೋಡ್ ಮಾಡಬಹುದಾದರೆ ಅದರ ಕೊಂಡಿ ಪಡೆದು ವೇದಸುಧೆಯಲ್ಲಿ ಬಳಸಿಕೊಳ್ಳುವೆ.ಈಗಾಗಲೇ ಶರ್ಮಾಜಿಯವರ ಧ್ವನಿಯನ್ನು ನೇರವಾಗಿ[ಲೈನ್ ಇನ್] ರೆಕಾರ್ಡ್ ಮಾಡಲಾಗಿದೆ. ಅದು ಬಹಳ ಸ್ಪಷ್ಟವಾಗಿ ಬಂದಿದೆ.ಅದರ ಮಾಸ್ ಸಿಡಿ ಮಾಡುವ ಯೋಜನೆ ಇದೆ.ನಿಮಗೆ ಯಾವುದಾದರೂ ಸ್ಟುಡಿಯೋ ಪರಿಚಯವಿದ್ದರೆ ಸಾಮಾನ್ಯವಾಗಿ ೫೦೦/೧೦೦೦ ಸಿ.ಡಿ ಮುದ್ರಣಕ್ಕೆ ಏನು ಖರ್ಚು ಬರುತ್ತದೆಂದು ವಿಚಾರಿಸಿ ನನಗೆ ಮೇಲ್ ಮಾಡುವಿರಾದರೆ ತುಂಬಾ ಅನುಕೂಲವಾಗುತ್ತದೆ.ಅದನ್ನು ನಾನೇ ಮಾಡಬೇಕೆಂದೇನೂ ಇಲ್ಲ. ಶರ್ಮಾಜಿಯವರು ಪ್ರಕಟಿಸಿ ಕಾಪಿ ರೈಟ್ ಕೂಡ ಇಟ್ಟುಕೊಳ್ಳಬಹುದು.ಅಂತೂ ಶರ್ಮಾಜಿಯವರು ವೇದದ ಬಗೆಗೆ ತಿಳಿಸುವ ಸರಳ ವಿಚಾರಗಳು ಸಹಸ್ರ-ಸಹಸ್ರ ಜನರನ್ನು ತಲುಪಬೇಕು. ಅದಕ್ಕಾಗಿ ನನ್ನ ಅಳಿಲು ಸೇವೆ ಯಾವಾಗಲೂ ಇರುತ್ತದೆ.ನಾಲ್ಕು ದಿನಗಳ ಪ್ರವಚನವನ್ನು ಬರಹ ರೂಪಕ್ಕೆ ತಂದು ಮುಂದೊಂದು ದಿನ ಪುಸ್ತಕವಾಗಿ ಪ್ರಕಟಿಸಲೂ ಬಹುದು. ಈ ಕೆಲಸದಲ್ಲಿ ಅನುಭವವಿದ್ದವರ ಸಹಕಾರ ಪಡೆಯುವ ದೃಷ್ಟಿಯಿಂದ ಮೇಲ್ ಮಾಡಬೇಕಾದ ವಿಚಾರವನ್ನು ಇಲ್ಲಿ ಬರೆದಿರುವೆ.

    ReplyDelete
  9. ಶ್ರೀ ವಿಶಾಲ್,
    ನಿಮ್ಮ ಮನದ ಮಾತು ಸಂತಸ ನೀಡಿದೆ.ನಿಮ್ಮೊಡನೆ ತಾಂತ್ರಿಕ ಅಂಶಗಳಬಗ್ಗೆ ದೂರವಾಣಿಯಲ್ಲಿ ಮಾತನಾಡುವೆ

    ReplyDelete
  10. ಶ್ರೀ ವಿಶಾಲ್ ಮತ್ತು ಶ್ರೀಧರರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

    ReplyDelete
  11. Dear Sridhar/Vishal,
    I have asked a question not relevant to the Post(probably). fortunately I found link (without thinking much )expecting some valuable information I posted question here.
    I wanted to post it as separate request for the detail(did not know where to post), but unfortunately ended up posting to this very informative post.
    Once again my apologies from deviating the essence of the post.
    regards

    Vinayak

    ReplyDelete
  12. ಶ್ರೀ ವಿನಾಯಕ ಭಟ್,
    ನಮಸ್ತೆ,
    ನೀವು ವೇದಸುಧೆಗೆ ಬಂದಿದ್ದು ಸಂತಸದ ಸಂಗತಿ.ನಿಮ್ಮಿಂದ ಯಾವ ಲೋಪವಾಗಿಲ್ಲ. ನಿಮ್ಮ ಪ್ರಶ್ನೆಗೆ ಈ ತಾಣದಲ್ಲಿ ಉತ್ತರಸಿಗದಿದ್ದಕ್ಕೆ ಬೇಸರ ಮಾಡದಿರಿ. ಕಾರಣ ಉತ್ತರ ನಮಗೆ ಗೊತ್ತಿಲ್ಲ. ಆದರೆ ನಿಮಗೆ ವೇದವನ್ನು ಹೀಗೂ ಅರ್ಥಮಾಡಿಕೊಳ್ಳಬಹುದೆಂಬ ಶರ್ಮರ ಮಾತುಗಳು ಹಿತವನ್ನು ನೀಡಿರಬಹುದೆಂದು ಭಾವಿಸುವೆ. ಆಡಿಯೋ ಕೇಳಿದ್ದರೆ ಆಡಿಯೋ ಬಗ್ಗೆ ನಿಮ್ಮ ಪ್ರಾಮಾಣಿಕೆ ಅಭಿಪ್ರಾಯವನ್ನು ತಿಳಿಸಿ. ನಿಮ್ಮ ಅಭಿಪ್ರಾಯವು ವೇದಸುಧೆಯ ಚಿಂತನಾಲಹರಿಗೆ ಪೂರಕವಾಗಿರಬೇಕೆಂದೇನೂ ಅಲ್ಲ. ನಿಮ್ಮ ಅನಿಸಿಕೆಯನ್ನು ನಿರೀಕ್ಷಿಸುವೆ.

    ReplyDelete
  13. Dear Vinayak Bhat,

    With all the comments above I feel that you would have not got the clarity about what this portal is all about and what kind of discussion happens here.I would like to list out the points one by one so that you ll clearly understand the intent of this site and also you ll come to know what to expect from it.

    First of all,this portal intends to

    Explore vedas in true sense, this means looking at vedas as it is and not looking through the lens of puranas and other stories.

    The reason why we would like to explore vedas is to understand the universal truth,universal power(i.e God) and ultimately gaining universal knowledge.

    Here knowledge is not confined to spiritual knowledge but we ll also get to understand sociology, psychology,anthropology and also history.

    The intention of understanding the above things is to implement all the good qualities into ourselves,by doing so we will be able to understand our purpose of life.

    We all know that if a person realizes his purpose and works on it will surely find the success.

    We see things in scientific, logical and rational way by rejecting all illogical believes.

    This is also a place to clarify any kind of doubts we have, right from the existence of god to the procedure for worship.

    Hope I have given enough details about this forum.Shridhar sir will correct if something is wrong in the above points. Please let us know what you feel.

    Vishal

    ReplyDelete
  14. When I saw various comments appearing here , I felt like sharing the following which I felt " so apt " and take liberty in reproducing it .
    ( ಇಂದಿನ ( ೬-೧-೨೦೧೧ ) ಪ್ರಜಾವಾಣಿ ೪ನೇ ಪುಟದಲ್ಲಿ )

    II ಸುಖಬಾಳಿನ ಸೂತ್ರ II

    ವಿನಯವೇ ಭೂಷಣ

    " ನಿಮಗಿಂತ ಹಿರಿಯರನ್ನು , ಉನ್ನತ ಸ್ಥಾನ ಅಲಂಕರಿಸಿರುವರನ್ನು ಹಿಂದಕ್ಕೆ ಹಾಕಿ , ನಿಮ್ಮ ಬುದ್ಧಿವಂತಿಗೆ, ಶಕ್ತಿ ಪ್ರದರ್ಶನ ಮಾಡಬೇಡಿ . 'ದೊಡ್ಡವರನ್ನು ' ಸಮಾನರಂತೆ ಕಂಡು , ನೀವು ಅವರಿಗಿಂತ ' ದೊಡ್ಡವರು ' ಎಂದು ತೋರಿಸಿಕೊಳ್ಳಬೇಡಿ . ನಿಮ್ಮ ಪ್ರತಿಭಾ ಪ್ರದರ್ಶನ ನಿಮ್ಮ ಬೆಳವಣಿಗೆಗೆ ಸಹಾಯ ಮಾಡುವುದಿಲ್ಲ . ವಿನಯದಿಂದ ತಗ್ಗಿ ನಡೆಯುವುದು ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ ."


    ಎಲ್ಲರಿಗೂ ವಂದನೆಗಳು ,
    ಬಿ ಕೆ ಜಗದೀಶ್

    ReplyDelete
  15. ಶ್ರೀ ಜಗದೀಶ್,
    ನಮಸ್ತೆ,
    ಕಳೆದ ಭಾನುವಾರ ಶರ್ಮರ ಮನೆಯಲ್ಲಿ ನಿಮ್ಮ ನಿರೀಕ್ಷೆಯಲ್ಲಿದ್ದೆ.ವಾರ್ಷಿಕೋತ್ಸವಕ್ಕಾದೂ ೩೦.೧.೨೦೧೧ ರಂದು ಹಾಸನಕ್ಕೆ ಬರುವಿರಲ್ಲವೇ?

    ReplyDelete
  16. ಪ್ರಿಯ ಶ್ರೀಧರ್

    ೧ ) ಬರುವ ಉತ್ಸಾಹದಲ್ಲಿದ್ದೆ ಆದರೆ ಕಾರ್ಯ ಬಾಹುಳ್ಯದಿಂದ ಬರಲಾಗಲಿಲ್ಲ , ತಿಲಿಸುವುದಕ್ಕು ಸಾಧ್ಯವಾಗಲಿಲ್ಲ ,ದಯವಿಟ್ಟು ಕ್ಷಮಿಸಿ .
    ೨) ೩೦ ರಂದು ನನ್ನ ಅಣ್ಣನ ಮೊಮ್ಮಗುವಿನ ಹುಟ್ಟುಹಬ್ಬದ ಕಾರ್ಯಕ್ರಮ ಇರುವುದರಿಂದ ಬರುವುದು ಸಂದೇಹ . ಬೆಳಗಿನ ಕಾರ್ಯಕ್ರಮಕ್ಕೆ ಮಾತ್ರ ಬಂದು ಹಿಂದಿರುಗಲಾ ಎಂದು ಯೋಚಿಸುತ್ತೇನೆ .
    ೩ ) ವಿಚಾರಿಸಿದಕ್ಕೆ ವಂದನೆಗಳು .

    ReplyDelete
  17. ಅಂತೂ ಬಂದರೆ ಬಲು ಸಂತೋಷವಾಗುತ್ತೆ.

    ReplyDelete