Pages

Thursday, October 21, 2010

ವೇದಪಾಠ ಭಾಗ-1

ಶ್ರೀ ಸುಧಾಕರಶರ್ಮರು ಹಾಸನದ ಶ್ರೀ ಶಂಕರ ಮಠದಲ್ಲಿ ನವರಾತ್ರಿ ಸಂದರ್ಭದಲ್ಲಿ ದಿನಾಂಕ 12.10.2010 ರಂದು ಮಾಡಿದ ಎರಡು ಗಂಟೆಗಳ ಪ್ರವಚನವನ್ನು ಐದು ಪಾಠಗಳಾಗಿ ಇಲ್ಲಿ ಪ್ರಕಟಿಸಲಾಗಿದೆ. ಸಮಯಾವಕಾಶವಾದಂತೆ ಅವುಗಳ ಬರಹ ರೂಪವನ್ನು ಕೊಡಲಾಗುವುದು. ಆಡಿಯೋ ಕ್ಲಿಪ್ ಗಳನ್ನು ಕೇಳುವಾಗ ಹಿಂದಿನ ಕ್ಲಿಪ್ ಗಳನ್ನು ಕೇಳಿ ಮುಂದಿನ ಕ್ಲಿಪ್ ಕೇಳುವುದರಿಂದ ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ವೇದಪಾಠದ ಹೆಸರಿನಲ್ಲಿ ಜಡ,ಚೇತನ, ಅಸ್ತಿತ್ವ, ನ್ಯೂಟನ್ ನ ನಿಯಮ, ಹೀಗೆ ವಿಜ್ಞಾನದ ಪಾಠ ಮಾಡಿದ್ದಾರಲ್ಲಾ! ವೇದ ಮಂತ್ರಗಳ ಪಾಠ ಮಾಡುವುದಿಲ್ಲವೇ? ಎಂದು ಅನೇಕರು ಕೇಳಿದ್ದಾರೆ.ಆದರೆ ವೇದಸುಧೆಯ ಎಲ್ಲಾ ಅಭಿಮಾನಿಗಳಲ್ಲೂ ಕಳಕಳಿಯ ಮನವಿ ಏನೆಂದರೆ" ಸುಧಾಕರ ಶರ್ಮರ ಉಪನ್ಯಾಸವೇ ಹಾಗೆ. ಎಲ್ಲಾ ವಿಚಾರಗಳ ಮೂಲ ಅರಿಯದೆ ಅದರ ಪೂರ್ಣ ಅರ್ಥವಾಗುವಿದಿಲ್ಲವೆಂಬ ಕಾನ್ಸೆಪ್ಟ್ ಇಟ್ಟುಕೊಂಡು ವೈಜ್ಞಾನಿಕವಾಗಿ ಎಳೆ ಎಳೆಯಾಗಿ ವಿವರಣೆ ಕೊಟ್ಟಿದ್ದಾರೆ. ಕೆಲವೊಮ್ಮೆ ಅತಿಯಾಯ್ತೆಂದೆನಿಸಬಹುದು. ಆದರೆ ಶರ್ಮರ ಇಲ್ಲಿಯ ಮಾತುಗಳನ್ನು ಪೂರ್ಣ ಕೇಳದೆ ಹೋದರೆ ಮುಂದೆ ವೇದಮಂತ್ರಗಳ ಅರ್ಥವನ್ನು ತಿಳಿಯುವುದು ಕಷ್ಟವಾಗುತ್ತದೆ. ಆದ್ದರಿಂದ ಇಲ್ಲಿ ಪ್ರಕಟಿಸಿರುವ ಶರ್ಮರ ಪ್ರವಚನಗಳನ್ನು ತಾಳ್ಮೆಯಿಂದ ಕೇಳಿದ್ದೇ ಆದರೆ ಮುಂದೆ ನಮಗೆ ವೇದಮಂತ್ರಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಲಾರದು. ದಿನಾಂಕ 13,14 ಮತ್ತು 15 ರ ಪ್ರವಚನಗಳಲ್ಲಿ ವೇದ ಮಂತ್ರಗಳ ಅರ್ಥವನ್ನು ಸೊಗಸಾಗಿ ವಿವರಿಸಿದ್ದಾರೆ. ಅದಕ್ಕೆ ಈ ಪೀಠಿಕೆಯೇ ತಳಹದಿಯಾಗಿದೆ.ಮುಂದಿನ ಮೂರು ದಿನಗಳ ಪ್ರವಚನವನ್ನು ಪ್ರಕಟಿಸಲು ಇನ್ನೂ 8-10 ದಿನಗಳ ಸಮಯವಾದರೂ ಬೇಕಾಗಬಹುದು. ಅಂತೂ ಅಮೂಲ್ಯವಾದ ಈ ಪ್ರವಚನಗಳನ್ನು ಹಲವು ಕಂತುಗಳಲ್ಲಿ ಪ್ರಕಟಿಸಲಾಗುವುದು.


 ಪಾಠ-1



ಪಾಠ-2



ಪಾಠ-3



ಪಾಠ-4



ಪಾಠ-5

4 comments:

  1. ಪೋಸ್ಟ್ ಮಾಡಿದ ಸ್ವಲ್ಪ ಸಮಯದಲ್ಲೇ ಪ್ರತಿಕ್ರಿಯೆ ನೀಡಿದ್ದೀರ. ಬಲು ಆಶ್ಚರ್ಯ ವಾಯ್ತು. ನಿಮ್ಮ ಬ್ಲಾಗ್ ಇಣುಕಿದೆ. ತುಂಬಾ ಒಳ್ಳೆಯ ಪ್ರಯತ್ನ ಮಾಡಿದ್ದೀರ.ಧನ್ಯವಾದಗಳು.

    ReplyDelete
  2. Thanks a lot Shri Shridhar, I will comeback to cooment

    ReplyDelete
  3. ಶ್ರೀ ವಿಷ್ಣುಭಟ್ಟರೇ,
    ನಿಮ್ಮ ಒಂದಕ್ಷರ ನನ್ನ ಎಷ್ಟೋ ಆಯಾಸವನ್ನು ಪರಿಹರಿಸಬಲ್ಲದೆಂದರೆ ಅತಿಶಯವೆಂದು ಭಾವಿಸದಿರಿ.ನನ್ನ ಅಲ್ಪ ಸಾಮರ್ಥ್ಯ, ಕಛೇರಿಯ ಒತ್ತಡದ ಮಧ್ಯೆ ಶರ್ಮರ ಪ್ರವಚನಗಳ ಧ್ವನಿಯನ್ನು ಎಡಿಟ್ ಮಾಡಿ ಅಂತರ್ಜಾಲದಲ್ಲಿ ಪ್ರಕಟಿಸಲು ಸರ್ಕಸ್ ಮಾಡುತ್ತಿರುವೆ. ಈ ಮಧ್ಯೆ ಪ್ರವಚನದ ಬರಹ ರೂಪ ಪ್ರಕಟಿಸಿ ಎಂಬ ಕರೆಗಳು ಬರುತ್ತಿವೆ.ನಿಧಾನವಾಗಿ ಪ್ರಕಟಿಸಲಾಗುವುದೆಂದು ಉತ್ತರಿಸುತ್ತಿರುವೆ.ಈ ಮಧ್ಯೆ ಒಬ್ಬ ಯುವ ಸಾಫ್ಟ್ ವೇರ್ ಎಂಜಿನಿಯರ್ ನನ್ನ ಸಂಪರ್ಕಕ್ಕೆ ಬಂದು ಒಂದಿಷ್ಟು ತಾಂತ್ರಿಕ ನೆರವು ನೀಡುತ್ತಿದ್ದಾರೆ. ಅದರಿಂದ ನಿಮಗೆ ಕೊಡುತ್ತಿದ್ದ ಕಷ್ಟ ಸ್ವಲ್ಪ ಪರಿಹಾರ ಕಂಡಿದೆ.ಅವರಿಗೆ ಪಾಸ್ವರ್ಡ್ ಕೊಟ್ಟಿದ್ದರಿಂದ ಪಾಸ್ವರ್ಡ ಬದಲಾವಣೆ ಯಾಗಿದೆ. ತಮಗೆ ಸಮಯಾವಕಾಶವಾದಾಗ ವೇದಸುಧೆಗೆ ಅಲ್ಪಸ್ವಲ್ಪ ಮಾರ್ಪಾಡುಗಳನ್ನು ಮಾಡುವ ಸಂದರ್ಭ ಬಂದರೆ ನಿಮಗೆ ಪಾಸ್ ವರ್ಡ್ ಕಳಿಸುವೆ.ನಮಸ್ಕಾರಗಳು
    -ಶ್ರೀಧರ್

    ReplyDelete