Pages

Sunday, November 14, 2010

ಮೂಢ ಉವಾಚ -11

 ಕೆಲಸವಿರೆ ಓಲೈಸುವರು ಇಲ್ಲದಿರೆ ಹೀನೈಸುವರು|
ಎಲ್ಲರ ಸೇವೆ ಬಯಸುವರು ತಾವಾರಿಗೂ ಆಗರು||
ಕಂಡರೂ ಕಾಣದೊಲು ನಟಿಸುವ ಚತುರರಿವರು|
ಇವರೊಳು ನೀಯಾರು ನಾಯಾರು ಹೇಳು ಮೂಢ||


ಆಪತ್ತಿಗಾಗುವರಿಹರು ತಿರುಗಿ ನೋಡದವರಿಹರು|
ಒಳಿತು ಹಾರೈಸುವರಿಹರು ಕೆಡಕು ಬಯಸುವರಿಹರು||
ಒಳಿತು ಮಾಡದ ಕೆಡಕು ಎಣಿಸಲರಿಯದವರಿಹರು|
ಇವರೊಳು ನೀಯಾರು ನಾಯಾರು ಹೇಳು ಮೂಢ||


ಪರರ ನಡವಳಿಕೆಗಳೆನ್ನ ಮನವ ಕದಡದಿರಲಿ|
ಕಿರಿಪಿರಿಯ ಮಾತುಗಳಿಗೆನ್ನ ಜಿಹ್ವೆ ಪ್ರತಿಯಾಡದಿರಲಿ||
ಆಲಿಸಲಿಚ್ಛಿಸದ ಕಿವಿಗಳಿಗೆ ಉಪದೇಶ ವ್ಯರ್ಥ|
ಎನ್ನ ಭಾವನೆಗಳೆನಗೆಂಬುದೇ ಅಂತರಾರ್ಥ ಮೂಢ||


ಪರರೆಂತಿರಬೇಕೆಂದು ಬಯಸುವುದು ನೀನು?
ಅಂತಪ್ಪ ಮಾದರಿಯು ಮೊದಲಾಗು ನೀನು||
ಬದಲಾಗು ನೀ ಮೊದಲು ಬದಲಾಗು ನೀನು|
ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||
**********************
-ಕವಿ ನಾಗರಾಜ್.

8 comments:

  1. ಚೆನ್ನಾಗಿದೆ ಕವಿನಾಗರಾಜರೇ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  2. ಬದುಕು ಹಸನಾಗಿಸಲು
    ಸರಳ ಸೂತ್ರಗಳು
    ಅವನೆ ಬರಸಿಹನು
    ಬರೆದವರು ನೀವು
    ನೆಮ್ಮದಿಯ ಅರಸುವಗೆ ಇನ್ನೇನು ಬೇಕು?
    ಮೂಢನೇ ಜೊತೆಗಿರಲು
    ಅವನೇ ಎನಗೆ ಸಾಕು||

    ReplyDelete
  3. ಶ್ರೀನಿವಾಸ ಡಿ. ಶೆಟ್ಟಿNovember 14, 2010 at 7:05 PM

    ಸೊಗಾಸಾಗಿದೆ, ನಾಗರಾಜ್ ರವರೇ.....

    ReplyDelete
  4. ಧನ್ಯವಾದಗಳು ಶ್ರೀಯುತ ಸೀತಾರಾಮ ಮತ್ತು ಶ್ರೀನಿವಾಸ ಶೆಟ್ಟರಿಗೆ.

    ReplyDelete
  5. ಸಾಲುಗಳು ಹಿಡಿಸಿದವು, ಧನ್ಯವಾದ

    ReplyDelete
  6. ತುಂಬಾ ಚನ್ನಾಗಿದೆ ನಾಗರಾಜ ಮುಂದುವರಿಸಿ.
    ಧನ್ಯವಾದ

    ReplyDelete