Pages

Thursday, December 30, 2010

ಕೆಳದಿ ಕವಿಮನೆತನದ ಸಮಾವೇಶ






ಆಧುನಿಕತೆ ಬೆಳೆದಂತೆ  ಕುಟುಂಬದ ಪರಿಕಲ್ಪನೆಯೇ  ನಶಿಸುತ್ತಿರುವ ಈ ದಿನಗಳಲ್ಲಿ  ಒಂದು ವಂಶದ ಎಲ್ಲಾ ಬಂಧುಬಾಂಧವರನ್ನೂ ವರ್ಷದಲ್ಲಿ ಒಮ್ಮೆ ಒಂದುಕಡೆ ಸಮಾವೇಶಗೊಳಿಸಿ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುತ್ತಾ ಸಂಬಂಧದ ಕೊಂಡಿಯನ್ನು ಭದ್ರಪಡಿಸುವ ಒಂದು ಅಪೂರ್ವ ಪ್ರಯತ್ನವು ಮೊನ್ನೆ ಭಾನುವಾರ ಶಿಕಾರಿಪುರದಲ್ಲಿ ನಡೆಯಿತು.ಸೋದರರಾದ ಕವಿ ನಾಗರಾಜ್ ಮತ್ತು ಕವಿ ಸುರೇಶ್ ಮತ್ತು ಅವರ ಸಂಬಂಧಿಗಳು  ಶಿಕಾರಿಪುರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ  ಸ್ವತ: ಪಾಲ್ಗೊಳ್ಳುವ ಅವಕಾಶ ಸಿಕ್ಕಿತ್ತು. ಶ್ರೀ ಕವಿಸುರೇಶ್ ಅಥವಾ ಕವಿನಾಗರಾಜ್  ಸಮಾವೇಶದ ಬಗ್ಗೆ ಪೂರ್ಣ ಮಾಹಿತಿಯನ್ನು ಬರೆಯಬಹುದು. ನನ್ನ ಮಗ ಶ್ರೀಕಂಠನು ಕ್ಲಿಕ್ಕಿಸಿದ್ದ ಒಂದೆರಡು ಫೋಟೋ ಗಳನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಪ್ರಕಟಿಸಿರುವೆ. ಅಂತೂ ಒಂದು ಭಾವಪೂರ್ಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದ್ದ  ಶ್ರೀ ನಾಗರಾಜ್ ಬಂಧುಗಳಿಗೆ ಧನ್ಯವಾದಗಳನ್ನು ಹೇಳುತ್ತಾ ವೇದಸುಧೆಯ ಅಭಿಮಾನಿಗಳಿಗಾಗಿ ಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲು ಅವರಲ್ಲಿ ಕೋರುವೆ.

2 comments:

  1. The concept of FAMILY as an important unit of a society is fast dwindling . So it was heartening to come across a novel positive approach in this direction thereby reviving & strengthening our sacred old values !. Well done , keep it up !!Kudos to ಕವಿ ನಾಗರಾಜ್ ಮತ್ತು ಕವಿ ಸುರೇಶ್ for making such event happen & THANKS to my respected friend ಹರಿಹರಪುರ ಶ್ರೀಧರ್ and his son ಶ್ರೀಕಂಠ for sharing the photos !!..

    ReplyDelete