ವೇದಸುಧೆಯ ಪ್ರಥಮ ವಾರ್ಷಿಕೋತ್ಸವದ ಆಮಂತ್ರಣ ಇಲ್ಲಿದೆ. ದಯಮಾಡಿ ನಿಮ್ಮ ಅಂಚೆಯ ವಿಳಾಸವನ್ನು ವೇದಸುಧೆಗೆ ಮೇಲ್ ಮಾಡಿದರೆ ಅಂಚೆಯ ಮೂಲಕ ಕೂಡ ನಿಮಗೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿಕೊಡಲಾಗುವುದು. ವಾರ್ಷಿಕೋತ್ಸವವು ಹಾಸನದಲ್ಲಿ ನಡೆಯುತ್ತಿರುವುದರಿಂದ ಈಗಾಗಲೇ ವೇದಸುಧೆಯ ಸಂಪರ್ಕದಲ್ಲಿರುವವರಿಗೆ ಹಾಸನ ಬಹಳ ದೂರವೇನೂ ಆಗಲಾರದೆಂದು ಭಾವಿಸುವೆ.ಆದರೂ ಸಕಾಲಕ್ಕೆ ನೀವು ಬರಬೇಕಾದ್ದರಿಂದ ಕೆಳಗಿನ ಕೆಲವು ಅಂಶಗಳನ್ನು ವೇದಸುಧೆಗೆ ಮೇಲ್ ಮೂಲಕ ತಿಳಿಸಿದರೆ ಸಾಧ್ಯವಾದಷ್ಟೂ ಉತ್ತಮ ವ್ಯವಸ್ಥೆ ಮಾಡಲಾಗುವುದು. ಬೆಂಗಳೂರಿನಿಂದ ಹಾಗೂ ಶಿವಮೊಗ್ಗಗಳಿಂದ ಬರುವವರು ನಿಮ್ಮೂರಿನ ಬಸ್ ನಿಲ್ದಾಣದಿಂದ ಮುಂಜಾನೆ 5.30 ಕ್ಕೆ ಬಸ್ ನಲ್ಲಿ ಹೊರಟರೆ ಸಕಾಲದಲ್ಲಿ ಹಾಸನ ತಲುಪಬಹುದು. ಸ್ವಂತ ಕಾರ್ ನಲ್ಲಿ ಬರುವವರಿಗೆ ಮೂರುವರೆ ಇಂದ ನಾಲ್ಕು ಗಂಟೆ ಬೇಕಾಗಬಹುದು.
ಆಮಂತ್ರಣದಲ್ಲಿ ಕಾರ್ಯಕ್ರಮಗಳ ವಿವರ ಇದೆ. 
ಇತರೆ ವ್ಯವಸ್ಥೆ ಗಳು:
* ಉಪಹಾರ: ಪ್ರಾತ: ಕಾಲ 8.30 ರಿಂದ 9.15
* ಚಹ/ಕಾಫೀ/ಬಾದಾಮಿ ಹಾಲು: ಕಾರ್ಯಕ್ರಮದ ನಡುವೆ ಬೆಳಿಗ್ಗೆ 11.00 ಕ್ಕೆ
ಇತರೆ ವ್ಯವಸ್ಥೆ ಗಳು:
* ಉಪಹಾರ: ಪ್ರಾತ: ಕಾಲ 8.30 ರಿಂದ 9.15
* ಚಹ/ಕಾಫೀ/ಬಾದಾಮಿ ಹಾಲು: ಕಾರ್ಯಕ್ರಮದ ನಡುವೆ ಬೆಳಿಗ್ಗೆ 11.00 ಕ್ಕೆ
ಮತ್ತು  ಮಧ್ಯಾಹ್ನ 4.00 ಕ್ಕೆ
* ಭೋಜನ: ಮಧ್ಯಾಹ್ನ 1.30 ರಿಂದ 2.30
* ಭೋಜನ: ಮಧ್ಯಾಹ್ನ 1.30 ರಿಂದ 2.30
* ಸಮಾರಂಭದ ಸ್ಥಳದಲ್ಲಿ ವೇದದ ಸಾಹಿತ್ಯಗಳು ಮಾರಾಟಕ್ಕೆ ಲಭ್ಯವಿರುತ್ತದೆ.
*  ಹಾಸನ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಾದ ಬೇಲೂರು, ಹಳೇಬೀಡು ಮತ್ತು ಶ್ರವಣ ಬೆಳಗೊಳ  ಗಳನ್ನು ನೋಡಬಯಸುವವರಿಗೆ ಬಾಡಿಗೆ ಕಾರ್ ವ್ಯವಸ್ಥೆ ಬೇಕಾದರೆ ಮುಂಚಿತವಾಗಿ ತಿಳಿಸಿ.
* ಶನಿವಾರ ರಾತ್ರಿ ಬರುವವರಿಗೆ ಉಳಿಯುವ ಮತ್ತು ಊಟೋಪಚಾರದ ಸಾಮಾನ್ಯ ವ್ಯವಸ್ಥೆ ಇರುತ್ತದೆ. ವಿಶೇಷವಾಗಿ ಹೋಟೆಲ್ ನಲ್ಲಿ ರೂಮ್ ಮಾಡಬಯಸುವವರು ಮುಂಚಿತವಾಗಿ ತಿಳಿಸಿದರೆ ಆರಕ್ಷಣೆ ಮಾಡಲಾಗುವುದು. 
----------------------------------------
* ಹೆಸರು:
* ಊರು:
* ಮೊಬೈಲ್ ನಂಬರ್:
* ನಿಮ್ಮೊಡನೆ ಎಷ್ಟು ಜನ ಬರುವರು?
* ಯಾವ ಸಮಯಕ್ಕೆ ಹಾಸನ ತಲುಪುವಿರಿ?
* 29.1.2011 ರಂದು ರಾತ್ರಿ ಹಾಸನದಲ್ಲಿ ವಸತಿ ವ್ಯವಸ್ಥೆ ಬೇಕೇ?
* ನಿಮ್ಮ ಸ್ನೇಹಿತರುಗಳನ್ನು ಆಹ್ವಾನಿಸಲು ನಿಮಗೆ ಹೆಚ್ಚು ಆಮಂತ್ರಣ
ಪತ್ರಿಕೆಗಳು ಬೇಕೆ?
ವಾರ್ಷಿಕೋತ್ಸವ ಬೆಳಗಿನ ಅವಧಿ
| 1. ವೇದಘೋಷ: | 9.30-9.35 | 
| 2. ಸ್ವಾಗತ ಪರಿಚಯ: | 9.35-9.40 | 
| 3. ಪ್ರಾಸ್ತಾವಿಕನುಡಿ: | 9.40-9.50 | 
| 4. ದೀಪ ನೃತ್ಯ ಮತ್ತು ಉದ್ಘಾಟನೆ: | 9.50-10.00 | 
| 5. ಉದ್ಘಾಟನಾ ಭಾಷಣ: | 10.00-10.10 | 
| 6. ಸಿ.ಡಿ ಪರಿಚಯ: | 10.10-10.20 | 
| 7. ಸಿ.ಡಿ ಬಿಡುಗಡೆ: | 10.20-10.25 | 
| 8. ಅಧ್ಯಕ್ಷರ ನುಡಿ: | 10.25-10.35 | 
| 9. ಚಹಾ ವಿರಾಮ: | 10.35-10.40 | 
| 10. ವಯೊಲಿನ್ ವಾದನ: | 10.40-11.10 | 
| 11. ವಿಚಾರ ಸಂಕಿರಣ [1 ಗಂಟೆ] | 11.10-12.30 | 
| 12.ಗೀತಗಾಯನ [ 20 ನಿಮಿಷ] | |
| 13. ಸುಧಾಕರ ಶರ್ಮರನುಡಿ: | 12.30- 1.20 | 
| 14. ಅಭಿನಂದನೆ: | 1.20-1.25 | 
| 15. ಶಾಂತಿಪಾಠ: | 1.25-1.30 | 




 
 
No comments:
Post a Comment