Pages

Saturday, January 8, 2011

ಊಟವನ್ನು ಏಕೆ ಮಾಡಬೇಕು?ಯಾವಾಗ ಮಾಡಬೇಕು?ಏನು ಸೇವಿಸಬೇಕು? Part-2

(ಮುಂದುವರೆದಿದೆ)
ಪ್ರಕೃತಿಯು ಮನುಷ್ಯರಿಗಾಗಿ ಸಿದ್ಧಪಡಿಸಿರುವ ಆಹಾರವು ಅತ್ಯಂತ ಸತ್ವಭರಿತ, ಶ್ರೇಷ್ಠ. ಅವೇ ಹಣ್ಣುಗಳು. ಮಾನವರು ಶರೀರರಚನೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ಹೇಳುವುದಾದರೆ ಬರೀ Vegetarian ಅಷ್ಟೇ ಅಲ್ಲ, Frutarian! Dry Fruits ಮತ್ತು Nuts ಕೂಡ ಇದರೊಂದಿಗೆ ಸೇರುತ್ತದೆ.
ಆ ಹಣ್ಣುಗಳನ್ನು ಬೆರೆಸುವ, ಅವಕ್ಕೆ ಸ್ವಲ್ಪ ಹಾಲು, ಬೆಲ್ಲ, ಜೇನು, ಕಾಯಿತುರಿ ಇತ್ಯಾದಿಗಳನ್ನು ಬೆರೆಸಿ/ಸಂಸ್ಕರಿಸಿ ಬಳಸಿದರೂ Good. ಮೊಳಕೆ ಬರಿಸಿ ಸೇವಿಸಿದರೂ Good. ಆದರೆ, ಸತ್ವಭರಿತದಲ್ಲೇ ಎರಡನೆಯ ದರ್ಜೆ.
ಆಹಾರವನ್ನು ಬೇಯಿಸಿ ತಿನ್ನುವುದು ಮುಂದಿನ ಕೆಳದರ್ಜೆ. ಈ ದರ್ಜೆಯಲ್ಲಿ ಬೇಯಿಸಿರುವುದಷ್ಟೇ. ಆದರೆ ಸಪ್ಪೆ. ಅಥವಾ ಅತ್ಯಂತ ಸ್ವಲ್ಪ ಉಪ್ಪು, ಹುಳಿ, ಖಾರ.
ಇಲ್ಲಿಂದ ಮುಂದೆ ಸೇವಿಸಲು ಅರ್ಹವಾದದ್ದಿಲ್ಲ. ಅವುಗಳ ವಿವರ ಹೀಗಿದೆ.
ಬೇಯಿಸಿದ ಆಹಾರ. ಯದ್ವಾತದ್ವಾ ಉಪ್ಪು, ಹುಳಿ, ಖಾರಗಳನ್ನು ಹಾಕಿ ತಿನ್ನುವುದು. (ಆದರೂ ಪರವಾಗಿಲ್ಲ! ಕಾಲಾನಂತರದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದಾಗ ಬಿಡಲೇಬೇಕಾಗುತ್ತದೆ!!)
ಮುಂದಿನದು ನಿಷಿದ್ಧ ಆಹಾರ.
ಹಿಂಸೆಯ ಪರಿಣಾಮವಾಗಿ ಬರುವ ಮಾಂಸಾಹಾರ.
(ಈ ಬಗ್ಗೆ ವ್ಯಾಪಕ ಚರ್ಚೆ ಯಾವಾಗಲೂ ನಡೆಯುತ್ತಿರುತ್ತದೆ. ಮಾಂಸಾಹಾರವನ್ನು ಸಮರ್ಥಿಸುವವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಮ್ಮ ನಾಲಿಗೆಗೆ/ಚಪಲಕ್ಕೆ ಸಿಲುಕಿರುತ್ತಾರೆ. ಹೃದಯವಾಗಲೀ, ಮಿದುಳಾಗಲೀ ಕೆಲಸ ಮಾಡುತ್ತಿರುವುದಿಲ್ಲ!)
ಇದರ ಬಗ್ಗೆ ಮತ್ತೊಮ್ಮೆ ವ್ಯಾಪಕವಾಗಿ ಚಿಂತಿಸೋಣ.
Golden Rule ಹೀಗಿದೆ -
ಪ್ರಕೃತಿಗೆ ಎಷ್ಟು ಹತ್ತಿರವಾಗಿರುತ್ತೇವೋ, ಸಂಸ್ಕರಣ ಎಷ್ಟು ಕಡಿಮೆಯಿರುತ್ತದೋ (Zero ಕೂಡ ಆಗಬಹುದು) ಅಷ್ಟೂ ಆ ಆಹಾರ ಸೇವಿಸಲು ಹೆಚ್ಚು ಹೆಚ್ಚು ಯೋಗ್ಯವಾಗಿರುತ್ತದೆ.
ಮುಂದಿನ ಪ್ರಶ್ನೆ ಹೇಗೆ ಸೇವಿಸಬೇಕು?
(ಮುಂದುವರೆಯುವುದು)
Sudhakarasharma

8 comments:

  1. ಶ್ರೀ ಶರ್ಮಾಜಿ, ಸಜ್ಜನರಿಗೆ ಗುದ್ದು ಕೊಡುವ ಅವಕಾಶ ಕಲ್ಪಿಸಿದ್ದೀರಿ, ನಿಮ್ಮ ಪ್ರತೀ ಉಪೋದ್ಘಾತಗಳಿಗೂ ಏನಾದ್ರೂ ಬರೆಯುತ್ತಲೇ ಬಂದವ ನಾನು, ಈ ನಿಮ್ಮ ಆಹಾರ ಕುರಿತಾದ ಹೇಳಿಕೆಯನ್ನು ಎಳ್ಳಷ್ಟೂ ತಕರಾರಿಲ್ಲದೇ ಒಪ್ಪಿಕೊಂಡಿದ್ದೇನೆ ಮಾತ್ರವಲ್ಲ ಅದನ್ನೇ ಜಗದಮಿತ್ರನಾಗಿ ನನ್ನ ಕಾವ್ಯದಲ್ಲೂ ಬಳಸಿಕೊಂಡಿದ್ದೇನೆ. ನಿಮ್ಮೆಲ್ಲರ ಸಂಘದಿಂದ ಸಿಗುವ ಅಮೃತತುಲ್ಯ ಅನುಭವದ ಪಾಕವನ್ನು ಆದಷ್ಟೂ ಜಾಸ್ತಿ ಸವಿಯಬೇಕೆಂಬ ’ರಕ್ಕಸ ಬಯಕೆ ’ಯಾಗುತ್ತಿದೆ. ಲೇಖನಗಳು ಜಾಸ್ತಿಯಾಗಲಿ, ಎಲ್ಲವೂ ಹೊಸಹೊಸ ಮಾಹಿತಿಗಳನ್ನು ಆಳಕ್ಕಿಳಿದು ಮುತ್ತು ಸಂಗ್ರಹಿಸಿದ ಅನುಭವವನ್ನು ಕೊಡಲಿ ಎಂದು ಆಶಿಸುತ್ತೇನೆ, ಧನ್ಯವಾದಗಳು

    ReplyDelete
  2. ಶ್ರೀ ಸುಧಾಕರ ಶರ್ಮಾ ರವರೇ,

    ಈ ಲೇಖನದ ಹಿಂದಿನ ಕಂತಿನ (part 1) ಕೊಂಡಿಯನ್ನು ಕೊಡಿ.

    ಮೊದಲನೆಯ ದರ್ಜೆಯಲ್ಲಿ ಬರುವ ಆಹಾರವನ್ನು ಅಂದರೆ ತರಕಾರಿ, ಹಣ್ಣು, ಒಣಹಣ್ಣುಗಳನ್ನು ಹೇಗೆ ಸೇವಿಸಬೇಕೆಂದು ತಿಳಿಸಿಕೊಡಿ. ಹಾಗೆಯೇ ಬೇಯಿಸಿದ ಆಹಾರವನ್ನು (ತರಕಾರಿಯಿಂದ ಮಾಡಿದ ಹುಳಿ ಅಥವಾ ಸಾಂಬಾರು, ಪಲ್ಯ ಇತ್ಯಾದಿ) ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುವುದರಿಂದ ಆಗುವ ಪರಿಣಾಮವನ್ನು ವಿವರಿಸಿರಿ.

    ಚಿತ್ರ

    ReplyDelete
  3. ಆತ್ಮೀಯರಾದ ಚಿತ್ರ,
    ನಮಸ್ತೆ,
    ಸುಧಾಕರಶರ್ಮರು ಅವರ ಕೆಲಸಗಳಒತ್ತಡದ ಮಧ್ಯೆ ವಾರಕ್ಕೊಮ್ಮೆ ವೇದಸುಧೆಗೆ ಗಮನಹರಿಸುತ್ತಾರೆ. ಆದ್ದರಿಂದ ಉತ್ತರ ಸ್ವಲ್ಪತಡವಾದರೂ ಲಭ್ಯ.ಶರ್ಮರ ಪುಟವನ್ನು ಚಿಟುಕಿಸಿ ಹಿಂದಿನ ಭಾಗ ತೆರೆಯಬಹುದು.

    ReplyDelete
  4. ಹೇಗೆ ಸೇವಿಸಬೇಕು?
    ಮೊದಲನೆಯ ಸುವರ್ಣ ಸೂತ್ರ - ಚೆನ್ನಾಗಿ ಅಗಿದು ಸೇವಿಸಬೇಕು.
    ತಿನ್ನುವ ಪದಾರ್ಥ ಮೆತ್ತಗಿದ್ದರೂ ಅಗಿಯಲೇಬೇಕು. ಮೆತ್ತಗೆ/ನುಣ್ಣಗೆ ಮಾಡುವುದು ಅಷ್ಟು ಮುಖ್ಯವಾದ ಉದ್ದೇಶವಲ್ಲ! ತಿನ್ನುವ ಆಹಾರದೊಂದಿಗೆ ಸಾಕಷ್ಟು ಜೊಲ್ಲು ಸೇರಿಸಬೇಕೆಂಬುದು ಮುಖ್ಯ ಉದ್ದೇಶ. ಸಸ್ಯಾಹಾರಿಗಳಲ್ಲಿ, ಮಾನವನೂ ಶಾರೀರಿಕವಾಗಿ ಸಸ್ಯಾಹಾರಿಯೇ ಆದ್ದರಿಂದ, ಜೀರ್ಣಕ್ರಿಯೆ ಪ್ರಾರಂಭವಾಗುವುದು ಬಾಯಿಯಲ್ಲಿ! ಸರಿಸುಮಾರು 30ರಿಂದ 40-50 ಸಲ ಜಗಿಯಬೇಕು. Eat the Liquids and Drink the Solids ಎಂಬುದು ಒಂದು ವಿಚಿತ್ರವಾದ ಸೂತ್ರ! ದ್ರವಗಳನ್ನು ಗಟ್ಟಿಪದಾರ್ಥವೆಂಬಂತೆ ಬಾಯಲ್ಲಿ ಆಡಿಸಬೇಕು. ಗಟ್ಟಿ ಪದಾರ್ಥಗಳನ್ನು ನೀರಾಗುವವರೆಗೂ ಬಾಯಲ್ಲಿಯೇ ಆಡಿಸಿ ಕುಡಿಯಬೇಕು!
    ಜೊಲ್ಲು ಒಂದು ಅದ್ಭುತ ರಚನೆ. ಬಾಯಿಯಿಂದ ಹಿಡಿದು ಗುದದ್ವಾರದವರೆಗೆ Gastro intestinal trackನಲ್ಲಿ ಯಾವುದೇ ತೊಂದರೆ, ಹುಣ್ಣುಗಳಿದ್ದರೆ ಅದಕ್ಕೆ ಪ್ರಕೃತಿ ನೀಡಿರುವ ಪರಿಣಾಮಕಾರಿಯಾದ ಹಾಗೂ ಉಚಿತವಾದ ಔಷಧಿಯೇ ಈ ಜೊಲ್ಲು!
    ಇನ್ನು ಆಹಾರಗಳ ಮಿಶ್ರಣ. ನಾಮಾನ್ಯವಾಗಿ ಹಣ್ಣು - ತರಕಾರಿಗಳನ್ನು ಮಿಶ್ರ ಮಾಡುವುದಿಲ್ಲ. ತಿಂದರೆ ಬರೀ ಹಸಿ ತರಕಾರಿ, ಅಥವಾ ಬರೀ ಹಣ್ಣು. ಅದರಲ್ಲೂ Melon alone ಎಂದೂ ಹೇಳುತ್ತಾರೆ. ಒಣಹಣ್ಣುಗಳನ್ನು ಪ್ರತ್ಯೇಕವಾಗಿ ತಿನ್ನುವುದೇ ಸರಿಯೆನಿಸುತ್ತದೆ.
    ಇದರ ಹಿಂದಿನ ವಿಜ್ಞಾನ ಅರಿಯಲು ಕಷ್ಟವೇನಿಲ್ಲ. ಒಂದೊಂದು ಆಹಾರಪದಾರ್ಥವೂ ಜೀರ್ಣವಾಗಲು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ. ಸುಮಾರು ಒಂದೇ ಸಮಯವನ್ನು ತೆಗೆದುಕೊಳ್ಳುವ ಆಹಾರಗಳನ್ನು ಮಿಶ್ರ ಮಾಡಿದರೆ ಸಮಸ್ಯೆಯಿಲ್ಲ. ವಿಭಿನ್ನ ಸಮಯ ತೆಗೆದುಕೊಳ್ಳುವ ಆಹಾರಗಳನ್ನು ಬೆರೆಸಿದರೆ ಭಾಗಶಃ ಅರಗುತ್ತದೆ, ಭಾಗಶಃ ಅರಗಿರುವುದಿಲ್ಲ. ಎಲ್ಲಿ ತಿನ್ನಬೇಕು?
    (ಮುಂದುವರೆಯುತ್ತದೆ)
    ವಿ.ಸೂ. ಆಹಾರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿರಿ "ಮನುಜ! ಏನು ನಿನ್ನ ಆಹಾರ?" - ಲೇಖಕರು: ಶ್ರೀ ಜಿ.ವಿ.ವಿ.ಶಾಸ್ತ್ರಿ, ನಿಸರ್ಗ ಯೋಗ ಧಾಮ, 11ನೇ ಕ್ರಾಸ್, ಎಸ್.ಎಸ್.ಪುರಂ, ತುಮಕೂರು - 572102. ಫೋನ್: 0816-2278499.

    ReplyDelete
  5. ಬರೀ ಹಣ್ಣು ಹಂಪಲು ತಿನ್ನಬೇಕೆಂದವರು ಹಾಲನ್ನು ಯಾಕೆ ಸೇರಿಸಿದ್ದೀರೋ ತಿಳಿಯಲಿಲ್ಲ! ಹಾಲು ಸಸ್ತನಿಗಳು ಶೈಶವಾವಸ್ಥೆಯಲ್ಲಿರುವಾಗ ಮಾತ್ರ ಸೇವಿಸಬೇಕಾದ ಆಹಾರ. ಇದನ್ನು ವೈಜ್ಞಾನಿಕವಾಗಿ ಹೇಗೆ ಸಮರ್ಥಿಸುತ್ತೀರಿ? ಹಾಲನ್ನು ಕಾಯಿಸಿ ಕುಡಿಯಬೇಕೆ ಅಥವಾ ಹಸಿ ಹಾಲೇ ಉತ್ತಮವೇ?

    ReplyDelete
  6. ನಿಮ್ಮ ಪ್ರಶ್ನೆಯನ್ನು ಶರ್ಮರಿಗೆ ಕಳುಹಿಸಲಾಗಿದೆ.ಸದಾ ಕೆಲಸಗಳ ಒತ್ತಡದಲ್ಲಿರುವ ಶರ್ಮರು ಮೇಲ್ ನೋಡಲು ಒಂದೆರಡು ದಿನಗಳಾಗಬಹುದು. ಅಥವಾ ಇಂದೇ ನೋಡಿದರೂ ನೋಡಬಹುದು.ತಾಳ್ಮೆ ಇರಲಿ.

    ReplyDelete
  7. ಹಾಲಿನ ಬಗ್ಗೆ ತಾವು ಎತ್ತಿರುವ ಪ್ರಶ್ನೆಗಳು ಸಮಂಜಸವಾಗಿವೆ.
    ಮೊದಲನೆಯ ದರ್ಜೆಯ ಆಹಾರ ಹಣ್ಣುಗಳೇ ಆಗಿವೆ ಎಂಬುದರಲ್ಲಿ ಏನೇನೂ ಸಂಶಯವಿಲ್ಲ.
    ಎರಡನೆಯ ದರ್ಜೆಯ ಆಹಾರದಲ್ಲಿ ರೂಢಿಯಲ್ಲಿರುವ ಹಾಲಿನ ಬಳಕೆಯ ಬಗ್ಗೆ ಬರೆದಿರುತ್ತೇನೆ.
    ನೀವೆಂದಂತೆ ಹಾಲಿನ ಮೇಲೆ ಮೊದಲ ಅಧಿಕಾರ ಆಯಾ ಪ್ರಾಣಿಯ ಕರುವಿಗೆ! ಇದೇ ಸರಿ ಮತ್ತು ಪ್ರಾಕೃತಿಕ.
    ಕರುವನ್ನು ದೂರದೂಡಿ ಹಿಂಡುವ ಹಾಲು ಅಥವಾ ಕರುವೇ ಇಲ್ಲದೆ ಹೀರುಯಂತ್ರದ ಸಹಾಯದಿಂದ ಪಡೆದ ಹಾಲು (ಸಾಮಾನ್ಯವಾಗಿ ಇಂದು ನಮಗೆ ದೊರೆಯುತ್ತಿರುವ ಶೇಕಡಾ 99 ಹಾಲೆಲ್ಲಾ ಈ ರೀತಿಯದೇ) ಹಿಂಸಾತ್ನಕ ಹಾಲೆಂಬುದರಲ್ಲಿ ಎರಡು ಮಾತಿಲ್ಲ. ಹಾಲಿಗಾಗಿ ಹಸುಗಳನ್ನು ಯಂತ್ರಗಳಂತೆ ಸಾಕಿ ಬೆಳೆಸಿ ಕೃತಕ ಗರ್ಭಧಾರಣೆ ಮಾಡಿಸಿ ಪಡೆಯುವ(ಹೈನುಗಾರಿಕೆ ಎಂಬ ಉದ್ಯಮ)ಹಾಲು ಹಾಲಲ್ಲ!
    ನೀವೆಂದಂತೆ ಶೈಶವಾವಸ್ಥೆ ದಾಟಿದ ಮೇಲೆ ಹಾಲಿನ ಬಳಕೆ ಕಡ್ಡಾಯವಾಗಿ ಮಾಡಬೇಕೆಂದು ಹೇಳಲು ವೈಜ್ಞಾನಿಕವಾದ ಕಾರಣ ನನಗಂತೂ ತಿಳಿದಿಲ್ಲ.
    ಕರುವು ಸಾಕಷ್ಟು ಕುಡಿದು ಮುಗಿಸಿದ ಮೇಲೆಯೂ ಹಸುವಿನ ಕೆಚ್ಚಲಲ್ಲಿ ಇನ್ನೂ ಹಾಲಿದ್ದಲ್ಲಿ ಅದನ್ನು ಅನಿವಾರ್ಯವಾಗಿ ಹಿಂಡಿ ತೆಗೆಯಲೇಬೇಕಾಗುತ್ತದೆ. ಇಲ್ಲದಿದ್ದರೆ ಹಸುವಿಗೆ ಕೆಚ್ಚಲು ಬಾವು ಬರುತ್ತದೆ. ಹಾಗೆ ದೊರಕಿದ ಅಹಿಂಸಾತ್ಮಕ ಹಾಲನ್ನು ಬಳಸಬಹುದು. ಅದರಲ್ಲಿ ಅನೇಕ ಔಷಧೀಯ ಗುಣಗಳಿವೆ. ಅದರಿಂದ ಮೊಸರು, ತುಪ್ಪ, ಮಜ್ಜಿಗೆಗಳನ್ನು ಮಾಡಿಕೊಂಡು ಬಳಸಬಹುದು. ವಾಯುಶುದ್ಧಿಗಾಗಿ ಮಾಡುವ ಯಜ್ಞದಲ್ಲಿ ತುಪ್ಪ ಒಂದು ಘಟಕ. ಮಜ್ಜಿಗೆ ಜೀರ್ಣಕಾರಿ. ತುಪ್ಪ ಮಿಡುಳಿನ ಕಾರ್ಯದ ಸಕ್ಷಮತೆಗೆ ಸಹಕಾರಿ. ಹಳೆಯ ತುಪ್ಪ ಗಾಯಗಳಿಗೆ ಪರಿಣಾಮಕಾರಿ ಔಷಧಿ. ಇತ್ಯಾದಿ ಇತ್ಯಾದಿ.
    ಏನೇ ಆದರೂ ಮೊದಲ ಸ್ಥಾನ ಹಣ್ಣುಗಳಿಗೇ ಎಂಬುದು ಈಗಲೂ ಉಳಿಯುತ್ತದೆ.
    ನಂತರದಲ್ಲಿ "ಅಹಿಂಸಾತ್ಮಕ ಹಾಲು".
    (ಆಗ ತಾನೇ ಕರೆದ ಹಾಲು ಹಿತವಾಗಿ ಬೆಚ್ಚಗಿರುತ್ತದೆ. ಹಾಗೇ ಕುಡಿಯಬಹುದು. ಉಳಿದಂತೆ ಬಿಸಿ ಮಾಡಿ ಕುಡಿಯುವುದು ರೂಢಿಯಲ್ಲಿದೆ.)
    ಉಬ್ಬಸ ರೋಗಿಗಳಿಗೆ, ಜಠರಾಗ್ನಿ ಮಂದವಾಗಿರುವವರಿಗೆ ಹಾಲು ಒಳ್ಲಯದಲ್ಲ.
    [ವೈಯಕ್ತಿಕವಾಗಿ ಹೇಳುವುದಾದರೆ ಮೇಲೆ ನಾನು ಹೇಳಿದ ವಿಧಾನಕ್ಕೆ ನನ್ನ ಹಾಲು ಕುಡಿಯುವ ಅಭ್ಯಾಸವನ್ನು ಹೊಂದಿಸಿಕೊಳ್ಳುತ್ತಿದ್ದೇನೆ.]

    ReplyDelete
  8. ಶ್ರೀ ಶರ್ಮಾ ರವರೇ,

    ಹಾಲಿನ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ವಂದನೆಗಳು. ಹಾಗೆಯೇ ಶೈಶವಾವಸ್ಥೆ ದಾಟಿದ ನಂತರ ಹಾಲನ್ನು ಸೇವೆಸಬೇಕೆ ಅಥವ ಬೇಡವೇ ಎಂಬುದನ್ನು ತಿಳಿಸಿಕೊಡಿ.

    ReplyDelete