Pages

Monday, June 6, 2011

ಹಾಸನದ ಶ್ರೀಶಂಕರಮಠದಲ್ಲಿ ವೇದಾಂತ ಸಪ್ತಾಹ

ಹಾಸನದ ಶ್ರೀಶಂಕರಮಠದಲ್ಲಿ ಕಳೆದ ಒಂದುವಾರ ಕಾಲ ವೇದಾಂತ ಸಪ್ತಾಹವು ನಡೆಯಿತು.ಕೇವಲ ನಾಲ್ಕು ದಿನಗಳು ನಾನು ಈ ಪ್ರವಚನಗಳಲ್ಲಿ ಪಾಲ್ಗೊಳ ಲು ಸಾಧ್ಯ ಸಾಧ್ಯವಾಗಿದ್ದು ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ಒಂಬತ್ತನೇ ಶ್ಲೋಕದ ಬಗ್ಗೆ ಹೊಳೇನರಸೀಪುರ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಪೂಜ್ಯ ಶ್ರೀ ಅದ್ವಯಾನಂದೇಂದ್ರಸರಸ್ವತೀ ಸ್ವಾಮೀಜಿಯವರು ಮಾಡಿದ ಪ್ರವಚನದ ಧ್ವನಿಯನ್ನು ಹಾಗೂ ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.








1 comment:

  1. ಈ ಆಡಿಯೋ ಪ್ರಕಟವಾದ ಒಂದು ಗಂಟೆಯಲ್ಲಿ ಮಿತ್ರರೊಬ್ಬರು ನನಗೆ ದೂರವಾಣಿ ಕರೆಮಾಡಿ " ನೀವು ಪ್ರಕಟಿಸುತ್ತಿದ್ದ ವೇದಾಧ್ಯಾಯೀ ಸುಧಾಕರಶರ್ಮರ ವಿಚಾರಗಳಿಗೂ ಈಗ ಪ್ರಕಟವಾಗಿರುವ ವಿಚಾರಕ್ಕೂ ವಿರೋಧಾಭಾಸ ಕಾಣುತ್ತಿದೆಯಲ್ಲಾ! ಎಂದು ಪ್ರಶ್ನೆ ಮಾಡಿದರು. ಅವರಿಗೂ ನಿಮಗೂ ನನ್ನ ವಿನಂತಿ ಇಷ್ಟೆ- ನಿಮಗೆ ಯಾವ ವಿಚಾರ ವಿರೋಧಾಭಾಸವಾಗಿ ಕಾಣುತ್ತಿದೆ? ವೇದದ ವಿಚಾರಕ್ಕೆ ವಿರೋಧವಾಗಿ ಕಂಡ ವಿಷಯವನ್ನು ತಿಳಿಸಿದರೆ ಆ ಬಗ್ಗೆ ಸ್ವಾಮೀಜಿಯವರೊಡನೆ ಚರ್ಚಿಸಿ ಅವರ ಸಮಝಾಯಿಶಿಯನ್ನು ಪ್ರಕಟಿಸಲಾಗುವುದು. ವೇದಾಧ್ಯಾಯೀ ಸುಧಾಕರಶರ್ಮರು ಚರ್ಚೆಯಲ್ಲಿ ಪಾಲ್ಗೊಂಡರೆ ವೇದಸುಧೆಯ ಅಭಿಮಾನಿಗಳಿಗೆ ಒಂದಿಷ್ಟು ಹೆಚ್ಚಿನ ಅರಿವು ಮೂಡಲು ಸಾಧ್ಯವಾಗುತ್ತದೆ.ಸುಧಾಕರ ಶರ್ಮರ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಅವರು ವೇದಸುಧೆಯನ್ನು ನೋಡುತ್ತಾರೋ ಇಲ್ಲವೋ ತಿಳಿಯದು. ಅಂತೂ ಜಿಜ್ಞಾಸೆಯಿಂದ ನಮ್ಮ ಜ್ಞಾನವು ಹೆಚ್ಚುವುದರಲ್ಲಿ ಸಂಶಯವಿಲ್ಲ. ವೇದಸುಧೆಯು ಇಂತಹ ತತ್ವಜಿಜ್ಞಾಸೆಗೆ ವೇದಿಕೆಯಾಗಲೆಂಬುದು ಅಪೇಕ್ಷೆ. ಆದರೆ ಚರ್ಚೆಯನ್ನು ಮಾಡುವಾಗ ಯಾವುದೂ ಅತಿರೇಕಕ್ಕೆ ಹೋಗಿ ಯಾರ ಮನಸ್ಸಿಗೂ ಕಿರಿಕಿರಿಯಾಗದಿರಲೆಂದು ವಿನಂತಿಸುವೆ
    -ಹರಿಹರಪುರಶ್ರೀಧರ್
    ಸಂಪಾದಕ

    ReplyDelete