Pages

Saturday, August 27, 2011

ನಿಮ್ಮೊಡನೆ

ಆತ್ಮೀಯ ವೇದಸುಧೆಯ ಓದುಗರೇ, ಅಭಿಮಾನಿಗಳೇ, ವೇದಸುಧೆ ಬಳಗದ ನನ್ನ ಸಹವರ್ತಿಗಳೇ, ನಿಮಗೆ ಹೀಗೆ ಅಪರೂಪಕ್ಕೊಮ್ಮೆ ವಂದನೆ ಸಲ್ಲಿಸುವ ಮನಸ್ಸಾಯ್ತು, ಅದಕ್ಕೇ ಬರೆಯುತ್ತಿದ್ದೇನೆ.

ಆರಂಭದಲ್ಲಿ ಎಲ್ಲರಿಗೂ ಕ್ಷೇಮವನ್ನು ಬಯಸಿ ಹಾರೈಸುತ್ತೇನೆ.

ಪುಣ್ಯದ ಶ್ರಾವಣ ನೋಡುತ್ತಿದ್ದಂತೆಯೇ ಕಳೆದುಹೋಯ್ತು, ಶುಭದ ಭಾದ್ರಪದ ಬರುತ್ತಿದೆ, ಹಬ್ಬದ ಸಾಲು ಆರಂಭವಾಗಿ ತಿಂಗಳೇ ಕಳೆಯಿತು. ಎಲ್ಲರಿಗೂ ವೇದಸುಧೆಯ ಪರವಾಗಿ ಹಾರ್ದಿಕ ಶಭಾಶಯಗಳು.

ಇಲ್ಲೊಂದು ಆಚಾರ್ಯರುಗಳಿಂದ, ಪ್ರಾಜ್ಞರಿಂದ ರಚಿತವಾದ ಅಷ್ಟಕಗಳೂ ಶತಕಗಳೂ ಮತ್ತು ಸ್ತೋತ್ರಗಳೂ ಇರುವ ಬ್ಲಾಗ್ ಕೊಂಡಿ ಕೊಡುತ್ತಿದ್ದೇನೆ, ದಯವಿಟ್ಟು ಆದಾಗ ಓದಿಕೊಳ್ಳಿ.

http://samskarasaurabha.blogspot.com/

ಮತ್ತು ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡಲು ಪಾಲಕರಿಗೆ ಪೂರಕ ಮಾಹಿತಿಗಳಿಲ್ಲ, ಹಿರಿಯರಿಲ್ಲದ ಎಷ್ಟೋ ಮನೆಗಳಲ್ಲಿ ಇತಿಹಾಸ ಪುರಾಣಗಳ ಸಾಹಸಗಾಥೆಗಳು ಮತ್ತು ಕಥೆಗಳ ಪರಿಚಯ ಇರುವುದಿಲ್ಲ. ಇವನ್ನೆಲ್ಲಾ ಗಮನದಲ್ಲಿಟ್ಟು ಧರ್ಮರಕ್ಷಣ ಸಂಸ್ಥಾನದವರು ಒಂದು ಹೊಸ ವೆಬ್‍ಸೈಟ್ ಮೊನ್ನೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದಾರೆ. ಅದನ್ನೂ ಕೂಡ ತಮ್ಮೆಲ್ಲರ ಆವಗಾಹನೆಗೆ ತರುತ್ತಿದ್ದೇನೆ :

http://www.balsanskar.com/kannada

ಸದ್ಯ ಹಿಂದಿ, ಕನ್ನಡ, ಮರಾಠಿ, ಆಂಗ್ಲ ಭಾಷೆಗಳಲ್ಲಿ ಲಭ್ಯವಿರುವ ವಿವರಣೆಗಳು ಮುಂಬರುವ ದಿನಗಳಲ್ಲಿ ಭಾರತೀಯ ಹಲವು ಭಾಷೆಗಳಲ್ಲಿ ಕೊಡಮಾಡಲ್ಪಡುತ್ತವೆ.

ನಿಸ್ಪೃಹ ವೇದಿಕೆಯೊಂದು ಜನಸೇವೆಗೆ ನಡೆಸುವ ಇಂತಹ ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ಈ ಕೊಂಡಿಗಳನ್ನು ತಮ್ಮ ಬಂಧು-ಮಿತ್ರ-ಹಿತೈಷಿ-ಸಜ್ಜನರೆಲ್ಲರಿಗೂ ಮಿಂಚಂಚೆಯ ಮೂಲಕ ತಲ್ಪಿಸುವರೇ ತಮ್ಮೆಲ್ಲರಲ್ಲಿ ಇದನ್ನು ಅಪೇಕ್ಷಿಸಲಾಗಿದೆ.

ಕಾಲಕಾಲಕ್ಕೆ ವೇದಸುಧೆಯ ಮಧುರಸುಧಾರಸವನ್ನು ಪಾನಮಾಡುತ್ತಿದ್ದೀರಿ, ಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಕೃತಿಗಳು, ವಿವರಗಳು ಎಲ್ಲರಿಗೂ ದೊರೆಯಲಿ ಮತ್ತು ಪರಸ್ಪರ ಎಲ್ಲರೂ ಜ್ಞಾತರಾಗಿ, ಇಂತಹ ವಿಷಯಗಳಲ್ಲಿ ಸ್ನಾತಕರಾಗಿ ಭೂಯಃ ಶ್ರೇಯೋಭಾಜನರಾಗಬೇಕೆಂಬುದು ನಮ್ಮೆಲ್ಲರ ಮನದಾಳದ ಅನಿಸಿಕೆಯಾಗಿದೆ. ಈ ದಿಸೆಯಲ್ಲಿ ನಮ್ಮ ಸಂಪಾದಕರಾದ ಶ್ರೀ ಹರಿಹರಪುರ ಶ್ರೀಧರ್ ರವರು ಬಹಳ ಮುತುವರ್ಜಿಯಿಂದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ನಾವೆಲ್ಲಾ ಆಗಾಗ ಬರಹೋಗುವವರಾದರೂ ನಿರಂತರ ವೇದಸುಧೆಯ ಉಸ್ತುವಾರಿ ಹೊತ್ತ ಅವರಿಗೆ ಪ್ರತ್ಯೇಕವಾಗಿ ಆಭಾರಿಯಾಗಿದ್ದೇನೆ. ಸಾಧ್ಯವಾದರೆ ಈ ಎರಡು ಕೊಂಡಿಗಳನ್ನು ವೇದಸುಧೆ ಬಳಸುವ ಬ್ಲಾಗ್ ಮಾಲಿಕೆಗಳ ಪಟ್ಟಿಯಲ್ಲಿ ಜೋಡಿಸಿ ಓದುಗರಿಗೆ ದಾರಿ ಕಲ್ಪಿಸಲು ಶ್ರೀಧರರಲ್ಲಿ ವಿನಂತಿಸುತ್ತಿದ್ದೇನೆ. ಬಳಗದ ಹಿರಿಯ ಸದಸ್ಯರಾದ ಶ್ರೀ ಸುಧಾಕರ ಶರ್ಮರು ಶೀಘ್ರ ಗುಣಮುಖರಾಗಿ ನಮ್ಮೆಲ್ಲರನ್ನೂ ಸೇರಿಕೊಳ್ಳಲಿ ಎಂಬ ಮಹದಾಸೆ ಇದ್ದರೂ ನಿಧಾನಗತಿಯಲ್ಲಿ ಸುಧಾರಿಸಿಕೊಳ್ಳುತ್ತಿರುವ ಅವರ ಆರೋಗ್ಯದಿಂದ ಕೆಲವು ತಿಂಗಳಲ್ಲಿ ಅವರು ಮರಳಿ ನಮ್ಮೆಲ್ಲರಿಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸಲಿದ್ದಾರೆ. ’ ವೇದಸುಧೆ ’ ಯಲ್ಲಿ ಮಿಂದ ಎಲ್ಲರಿಗೂ ಭಗವಂತ ಸುಖ, ಶಾಂತಿ, ಸಮೃದ್ಧಿ ದೊರಕಿಸಲಿ, ಎಲ್ಲರೂ ನೆಮ್ಮದಿಯ ಜೀವನ ಸಾಗಿಸುವಂತಾಗಲಿ ಎಂದು ಮತ್ತೊಮ್ಮೆ ಜಗನ್ನಿಯಾಮಕ ಶಕ್ತಿಯಲ್ಲಿ ಪ್ರಾರ್ಥಿಸಿ ಹಾರೈಸಿ ನಿಮ್ಮಿಂದ ಸದ್ಯಕ್ಕೆ ಬೀಳ್ಕೊಳ್ಳುತ್ತಿದ್ದೇನೆ, ನಮಸ್ಕಾರಗಳು.

---ವಿ.ಆರ್.ಭಟ್

3 comments:

  1. ಸಂಸ್ಕಾರ ಸೌರಭವನ್ನು ಬಹುಷ: ಅಮೇರಿಕದಲ್ಲಿರುವ ಆರ್.ಎಸ್.ಎಸ್. ಕಾರ್ಯಕರ್ತರೊಬ್ಬರು ನಡೆಸುತ್ತಿರಬಹುದು. ಪ್ರಚಾರಬಯಸದ ಅವರು ಎಲ್ಲೂ ಅವರ ಹೆಸರು ಹೇಳಿಲ್ಲ.ಬ್ಲಾಗನ್ನು ಒಮ್ಮೆ ಕಣ್ಣಾಡಿಸಿದೆ. ಚೆನ್ನಾಗಿದೆ. ಅದರಲ್ಲೂ ಯುವ ದಂಪತಿಗಳು ಒಂದು ಮಗುವಿಗೆ ಜನ್ಮ ನೀಡಿದಾಗ ಮಗು ಬೆಳೆಯುತ್ತಾ ಹೋದಂತೆ ಮಗುವಿಗೆ ಸಂಸ್ಕಾರ ಕೊಡಲು ಚಡಪಡಿಸುತ್ತಾರೆ. ಅಂತವರಿಗೆ ಸರಳವಾದ ಶ್ಲೋಕಗಳು ಇಲ್ಲಿವೆ. ಅದರ ಉಪಯೋಗ ಎಲ್ಲರೂ ಪಡೆಯಲೇ ಬೇಕು. http://www.balsanskar.com ಕೂಡ ಚೆನ್ನಾಗಿದೆ.ಮಾಹಿತಿ ನೀಡಿದ ನಿಮಗೆ ಶರಣು

    ReplyDelete
  2. ಶ್ರೀಭಟ್ ಅವರಿಗೆ,
    My Humble Pranams with Gratitude to you for all the WONDERFUL inputs & articles you are churning out day-after-day !!!...Looking forward to your continued good efforts ..... Thank You !!!

    ReplyDelete
  3. ತಮ್ಮೆಲ್ಲರ ಶರಣು,ಪ್ರಣಾಮಗಳು ನಾರಾಯಣ ಸ್ಮರಣಪೂರ್ವಕ ಆತನಿಗೆ ವರ್ಗಾಯಿಸಲ್ಪಟ್ಟಿವೆ, ವೇದಸುಧೆಯನ್ನು ಮೆಚ್ಚಿ ಬರೆದ ತಮಗೆ ಮತ್ತೊಮ್ಮೆ ವಂದನೆಗಳು.

    ReplyDelete