ಶ್ರೀ ಸುರೇಶ್ ಕುಲಕರ್ಣಿಯವರು ಸ್ವರ್ಗೀಯ ದ.ರಾ.ಬೇಂದ್ರೆಯವರೊಡನಾಡಿದವರು. ಬೇಂದ್ರೆಯವರ ಸಾಹಿತ್ಯವನ್ನು ಚೆನ್ನಾಗಿ ಅಧ್ಯಯನ ಮಾಡಿದವರು. ಬೇಂದ್ರೆಯವರ ಆಧ್ಯಾತ್ಮಿಕ ದೃಷ್ಟಿಯನ್ನು ಬೇಂದ್ರೆಯವರ ಮಾತುಗಳಲ್ಲೇ ಕೇಳಲು ಚೆಂದ. ಕುಲಕರ್ಣಿಯವರು ಬೇಂದ್ರೆಯವರ ಮಾತುಗಳನ್ನು ಯಥಾವತ್ತಾಗಿ ಹೇಳಬಲ್ಲರು. ಅವರ ಧ್ವನಿಯಲ್ಲಿ ಬೇಂದ್ರೆಯವರ ವಿಚಾರವನ್ನು ಇಲ್ಲಿ ಕೇಳಿ.
[ನನಗೆ ಒಂದು ಅನುಮಾನ. ಧ್ವನಿ ನಾನು ಪೇರಿಸಿದ್ದು, ಸಹಜವಾಗಿ ನನ್ನ ಕಿವಿಗೆ ಕೇಳುತ್ತಿದೆ. ಧ್ವನಿ ಕೇಳದೆಹೋದರೆ ದಯಮಾಡಿ ತಿಳಿಸಿ
-ಶ್ರೀಧರ್, ಸಂಪಾದಕ]
[ನನಗೆ ಒಂದು ಅನುಮಾನ. ಧ್ವನಿ ನಾನು ಪೇರಿಸಿದ್ದು, ಸಹಜವಾಗಿ ನನ್ನ ಕಿವಿಗೆ ಕೇಳುತ್ತಿದೆ. ಧ್ವನಿ ಕೇಳದೆಹೋದರೆ ದಯಮಾಡಿ ತಿಳಿಸಿ
-ಶ್ರೀಧರ್, ಸಂಪಾದಕ]
ಬೇ೦ದ್ರೀನ ಕ೦ಡ೦ಗಾತು ನೋಡ್ರೆಪ. ಆಧ್ಯಾತ್ಮದ ತುತ್ತತುದಿಯನ್ನ ಮುಟ್ಟಿದವರು ಬೇ೦ದ್ರೆ ಎನಿಸುತ್ತದೆ.
ReplyDeleteಸುತ್ತೆಲ್ಲ ಕತ್ತಲಾ ಒಳಗ ಬೆಳಗತದ ದೀsಪಾs
ಬಾ ಸಮೀಪಾ||
ಇದು ಯಾವ ಸೀಮೆಯ ಚಮರು|
ನಿ೦ತಿ ನನ್ನೆದುರು|
ಬಿಟ್ಟಿನಿನದರೂ ಬಿಟ್ಟನಿನನದರು|
ಇಡು ಬೆಳಕ ಕಾಣಿಕಿ ತ೦ದ| ಇಟ್ಟು ನನ ಮು೦ದ| ಚೆ೦ದ ಬಿಸವ೦ದ
ಮಾಡಿಸೋ ಮು೦ದೋ೦ ಸಚ್ಚಿದಾನ೦ದ|
ಸುತ್ತೆಲ್ಲ ಕತ್ತಲಾ ಒಳಗ ಬೆಳಗತದ ದೀ ಪಾ
ಬಾ ಸಮೀಪಾ
ಇದು ನಮ್ಮೊಳಗೆ ಬೇಕಾದದ್ದು
ಹರೀಶ್, ಬೇಂದ್ರೆ ಕವನದ ಮೂಲಕವೇ ಪ್ರತಿಕ್ರಿಯಿಸಿದ್ದೀರಿ. ಧನ್ಯವಾದಗಳು. ಬೇಂದ್ರೆಯವರ ಸಾಹಿತ್ಯದಲ್ಲಿ ಅಧ್ಯಾತ್ಮ ತುಂಬಿತುಳುಕುತ್ತಿದೆ. ಅದರ ಪರಿಚಯ ನೀವು ಮಾಡಬಲ್ಲಿರಿ. ದಯಮಾಡಿ ವಾರಕ್ಕೊಂದಾದರೂ ಬೇಂದ್ರೆ ಕವನವನ್ನು ಇಲ್ಲಿ ಪ್ರಕಟಿಸುವ ಕೃಪೆಮಾಡಿ. ಅಂತೆಯೇ ಧಾರವಾಡ ಶೈಲಿಯಲ್ಲಿ ಹಾಡಿ ಧ್ವನಿಯನ್ನು ಕಳಿಸಿಕೊಟ್ಟರಂತೂ ಇನ್ನೂ ಚೆನ್ನಾಗಿರುತ್ತದೆ.
ReplyDelete