ಪುಸ್ತಕದಿ ದೊರೆತರಿವು - ವೇದಸುಧೆ » Vedasudhe
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ|
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ
ಶಾಸ್ತ್ರಿತನದಿಂದಲ್ಲ -ಮಂಕುತಿಮ್ಮ||
ಪುಸ್ತಕದಿಂದ ದೊರೆತ ಜ್ಞಾನವು ತಲೆಯ ಮೇಲಿರುವ ಮಣಿಯಂತೆ [ಮಣಿಯು ಸದಾಕಾಲವೂ ತಲೆಯ
ಮೇಲಿರಲು ಸಾಧ್ಯವಿಲ್ಲ, ಅದು ಬೀಳಲೇ ಬೇಕು, ಅಥವಾ ಕಿರೀಟದಲ್ಲಿರುವ ಮಣಿಯಾದರೆ ಮಲಗುವಾಗಲಾದರೂ ತೆಗೆದಿದಲೇ
ಬೇಕು]
ಆದರೆ ಮನಸ್ಸಿನಲ್ಲಿ ಬೆಳೆದ ಅರಿವು ಗಿಡದಲ್ಲಿ ಅರಳಿದ ಹೂವಿನಂತೆ. ಗಿಡದಲ್ಲಿ ಹೂ ಅರಳಬೇಕಾದರೆ
ಅದು ಗಿಡದ ಸಾರ ಸರ್ವಸ್ವವನ್ನು ಹೀರಿ ಅರಳಿರುತ್ತದೆ. ಹಾಗೆಯೇ ಮನಸ್ಸಿನಲ್ಲಿ ಅರಿವು ಮೂಡಬೇಕಾದರೆ
ಜೀವನದ ಅನುಭವ ಆಗಿ ಮನದಲ್ಲಿ ಅರಿವು ಮೂಡಿರುತ್ತದೆ. ವಸ್ತು ಸಾಕ್ಷಾತ್ಕಾರವಾಗುವುದು ಒಳಮುಖದ ಚಿಂತನೆಯಿಂದ
ಹೊರತು ಪಾಂಡಿತ್ಯದಿಂದ ಅಲ್ಲ.
No comments:
Post a Comment