ಅಲ್ಪ ಶಕ್ತ ಜೀವಾತ್ಮನಿಗೆ ಯಾವುದೇ ಕ್ರಿಯೆ ಮಾಡಲು ಶರೀರವೆಂಬ ಮಾಧ್ಯಮದ ಅಗತ್ಯವಿದೆ, ಅದು ಮಾಧ್ಯಮದ ಸಹಾಯವಿಲ್ಲದೆ ತಾನೇ ತಾನಾಗಿ ಏನೂ ಮಾಡಲಾರದು ಎಂದು ತಿಳಿದವರು ಹೇಳುತ್ತಾರೆ. ಹಿಂದೂಗಳು ಪುನರ್ಜನ್ಮದಲ್ಲಿ ನಂಬಿಕೆಯಿರುವವರು. ಹಿಂದಿನ ಜನ್ಮದ ಮಾತಾ-ಪಿತರೇ ಇನ್ನೊಂದು ಜನ್ಮದ ಮಾತಾ-ಪಿತೃಗಳಾಗಲಾರರು. ತಂದೆ-ತಾಯಿಯರ ಗುಣ ವಿಶೇಷಗಳೇ ಮಕ್ಕಳಿಗೆ ಇರದಿರುವುದು, ಎಲ್ಲಾ ಮಕ್ಕಳೂ ಒಂದೇ ಸ್ವಭಾವದವರಾಗದಿರುವುದು, ಕುಟುಂಬದ ಸದಸ್ಯರುಗಳಲ್ಲಿ ಹೊಂದಾಣಿಕೆಯ ಕೊರತೆ ಕಾಣುವುದು, ಇತ್ಯಾದಿ ಅಂಶಗಳು ಪುನರ್ಜನ್ಮದ ನಂಬಿಕೆಗೆ ಪೂರಕವಾಗಿವೆ. ಹಿಂದಿನ ಜನ್ಮದಲ್ಲಿ ಸಂಬಂಧಿಗಳಾಗಿದ್ದವರು ಈ ಜನ್ಮದಲ್ಲೂ ಸಂಬಂಧಿಗಳಾಗಿದ್ದರೆ ಪರಸ್ಪರರಲ್ಲಿ ಮಧುರ ಸಂಬಂಧವಿರುತ್ತದೆ ಎಂದು ಹೇಳುತ್ತಾರೆ. ಇದೇನೇ ಇದ್ದರೂ ಕೆಲವು ಗುಣಗಳು ಅನುವಂಶಿಕವಾಗಿ ಬರುವುದನ್ನೂ ಕಾಣುತ್ತೇವೆ. ಸಂಬಂಧಗಳು, ಅದರಲ್ಲೂ ರಕ್ತ ಸಂಬಂಧಿಗಳ ನಡುವಣ ಸಂಬಂಧಗಳು ಚೆನ್ನಾಗಿರುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಈ ಹಿನ್ನೆಲೆಯಲ್ಲಿ ರಕ್ತ ಸಂಬಂಧಗಳು ಮತ್ತು ಜೀವಾತ್ಮರ ಸಂಬಂಧದ ಕುರಿತು ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರನ್ನು ವಿಚಾರಿಸಿದಾಗ ಅವರು ಕೊಟ್ಟ ಉತ್ತರ ಈ ಆಡಿಯೋ ತುಣುಕಿನಲ್ಲಿದೆ:
No comments:
Post a Comment