Pages

Friday, June 22, 2012

ಪರಮಾತ್ಮನನ್ನು ಪೂಜಿಸುವ ಅಗತ್ಯವಿದೆಯೇ?

ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರು ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರನ್ನು ಅವರ ನಿವಾಸದಲ್ಲಿ ಭೇಟಿಮಾಡಿ  ಕೆಲವು ವಿಚಾರಗಳನ್ನು ವೀಡಿಯೋ ರೆಕಾರ್ಡ್ ಮಾಡಿಕೊಂಡು ಬಂದು ನಮಗೆ ನೀಡಿದ್ದಾರೆ.
---------------------------------------------------------------------------
 ದಿನಾಂಕ 13-06-2012ರಂದು ವೇದಾಧ್ಯಾಯಿ ಶ್ರೀ ಸುಧಾಕರಶರ್ಮರವರನ್ನು  ಕೆಲವು ಸಂಶಯಗಳಿಗೆ ಉತ್ತರ ಪಡೆಯುವ ಸಲುವಾಗಿ ಭೇಟಿ ಮಾಡಿದ್ದ ಸಂದರ್ಭದಲ್ಲಿ ನಾಗರಾಜರು ಕೇಳಿದ್ದ ಒಂದು ಪ್ರಶ್ನೆ ಇದು:
 "ಶರ್ಮಾಜಿ, ಜೀವಾತ್ಮ, ಪರಮಾತ್ಮ ಮತ್ತು ಜಡ ಪ್ರಕೃತಿ - ಈ ಮೂರೂ ಸಂಗತಿಗಳು ಅನಾದಿ, ಅನಂತ ಮತ್ತು ಶಾಶ್ವತವಾದವುಗಳು ಎಂದು ಹೇಳುತ್ತಾರೆ. ಜೀವಾತ್ಮ ಸ್ವತಃ ಅನಾದಿ, ಅನಂತ ಮತ್ತು ಶಾಶ್ವತವಾಗಿರುವಾಗ ಪರಮಾತ್ಮನನ್ನು ಏಕೆ ಪೂಜಿಸಬೇಕು? ಆ ಪರಮಾತ್ಮನಿಗೆ ಜೀವಾತ್ಮರ ಮೇಲೆ ಯಾವ ರೀತಿಯ ಅಧಿಕಾರವಿದೆ? ಈ ವಿಚಾರದಲ್ಲಿ ಬೆಳಕು ಚೆಲ್ಲುವಿರಾ?"
 ಶರ್ಮರವರು ನೀಡಿದ ಉತ್ತರವನ್ನು ಅವರ ಧ್ವನಿಯಲ್ಲೇ ಕೇಳಿ:

2 comments:

  1. ಪ್ರಿಯ ಶ್ರೀಧರ್, ಶ್ರಿ ಸಮೀರ್ ಖಾನ್ ಅನ್ನುವವರು 'ವೇದಜೀವನ'ದಲ್ಲಿ ಪಂಡಿತರ ವಿಚಾರಧಾರೆಯ ಲೇಖನ ಓದಿ ಕೇಳಿದ್ದ ಪ್ರಶ್ನೆಯಿದು. ನಾನು ವೇದೋಕ್ತ ಜೀವನ ಪಥದ ಲೇಖನದ ಲಿಂಕ್ ಕೊಟ್ಟು ಉತ್ತರಿಸಿದ್ದೆ. ಸಂಕ್ಷಿಪ್ತವಾದರೂ ಶರ್ಮರವರ ಉತ್ತರ ಸಮಾಧಾನ ಕೊಡುತ್ತದೆ.

    ReplyDelete
  2. ನಾನು ವೇದಶಾಸ್ತ್ರಗಳನ್ನು ಓದಿದವನಲ್ಲ.ನನಗೆ ತಿಳಿದಿರುವುದು ಇಷ್ಟು.ಜೀವಾತ್ಮನಲ್ಲಿ ಪರಮಾತ್ಮನ ಒಂದು ಅಂಶವಿದೆ.ಆ ಅಂಶಕ್ಕೆ ಉಪಾಧಿಗಳು ಸೇರಿಕೊಂಡು ಅದು ಜೀವಾತ್ಮವಾಗಿದೆ.ಪರಮಾತ್ಮನೆಂದರೆ ಉಪಾಧಿಗಳಿಲ್ಲದ ಪರಿಶುದ್ಧ ಆತ್ಮ,ಅದೇ ಪರಮ ಆತ್ಮ.ಪರಮಾತ್ಮನನ್ನು ಪೂಜಿಸುವುದು ಎಂದರೆ ಆ ಪರಿಶುದ್ಧ ಆತ್ಮವನ್ನು ಆರಾಧಿಸುವುದು ಎಂದಾಗುತ್ತದೆ.ಜೀವಾತ್ಮನ ಉದ್ದಿಶ್ಯವೇ ಉಪಾಧಿಗಳನ್ನು ಕಳೆದುಕೊಂಡು ಅವನಲ್ಲಿ ಲೀನವಾಗುವುದು.ಆದ್ದರಿಂದ ಪೂಜಿಸುವುದು ಎಂದರೆ ಆ ಪವಿತ್ರ ಆತ್ಮ(ಪರಮ ಆತ್ಮ)ವನ್ನು ಸ್ಮರಿಸಿಕೊಳ್ಳುವುದು.ಸದಾ ಯಾವುದರ ಸ್ಮರಣೆಯಲ್ಲಿ ಇರುತ್ತೇವೆಯೋ ನಾವು ಅದರಲ್ಲಿ ಒಂದಾಗುತ್ತೇವೆ.ತಿಳಿದವರು ಇದು ಸರಿಯೇ ಎಂದು ಹೇಳಬೇಕು.

    ReplyDelete