Pages

Friday, August 3, 2012

ಚನ್ನರಾಯಪಟ್ಟಣದಲ್ಲಿ ಉಪಾಕರ್ಮದ ವಿಶೇಷ ಅಗ್ನಿಹೋತ್ರ

ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಚನ್ನರಾಯಪಟ್ಟಣದ ಚೈತನ್ಯ ಶಾಲೆಯ ಆವರಣದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ವೇದಪಾಠ ಮಾಡುತ್ತಿದ್ದು ಇವರ ವಿದ್ಯಾರ್ಥಿಗಳಿಗಾಗಿ ಶ್ರಾವಣ ಪೂರ್ಣಿಮೆಯ ಸಂಜೆ ವಿಶೇಷ ಅಗ್ನಿಹೋತ್ರವನ್ನು ನೆರವೇರಿಸಿದರು. ಹೋಮದ ಅಂತ್ಯದಲ್ಲಿ ಉಪಾಕರ್ಮದ ವಿಶೇಷವನ್ನು ಶ್ರೀ ಶರ್ಮರು ತಿಳಿಸಿದರು. ಅದರ ಫೋಟೊ ಮತ್ತು ಆಡಿಯೋ ಕ್ಲಿಪ್ ನ್ನು ವೇದಸುಧೆಯ ವಾಚಕರಿಗಾಗಿ ಪ್ರಕಟಿಸಲಾಗಿದೆ.

1 comment:

  1. ಮಹಾಭಾರತದ ಶ್ರೀಕೃಷ್ಣ ಒಬ್ಬ ಆದರ್ಶ.ಅರ್ಯಶಿರೋಮಣಿ. ಪರಾಕ್ರಮಿ, ಸೌಜ ನ್ಯಶೀಲ. ವೇದ ಭಕ್ತ ಮತ್ತು ಅನ್ಯಾಯದ ವಿರುದ್ದ ಸತತ ಹೋರಾಟ ನಡೆಸಿದ ವಿಜಯಿ ಹೀಗೆ ಅವನು ಅನೇಕ ಸದ್ಗುಣಗಳ ಭಂಡಾ ರವಾಗಿದ್ದ. ಆದರೆ ಇಂತಹ ಅರ್ಯಶಿರೋಮ ಣಿ ಯನ್ನು ನಮ್ಮ ಪುರಾಣಗಳು ಅತ್ಯಂತ ತುಚ್ಚ್ಹ ವಾಗಿ ಅವನ ಚಾರಿತ್ರ್ಯ ವನ್ನು ಹನನ ಮಾಡಿದೆ. ಇದನ್ನು ಪ್ರತಿಭಟಿಸಿ ಮಹಾಭಾರತದ ಕೃಷ್ಣನೇ ನಮ್ಮ ಆದರ್ಶ ವೆಂದು ಸಾರಿದವರಲ್ಲಿ ಸ್ವಾಮೀ ದಯನಂದರು ಮೊದಲಿಗರು. ಇಂತಹ ವ್ಯಕ್ತಿಯ ಸರ್ವಾಂಗಿಣ ಚಿತ್ರಣ ವನ್ನು ಈ ಕೆಳಕಂಡ ಕೊಂಡಿಯಲ್ಲಿ ಓದಿ ಲಾಭಾನ್ವಿತರಾಗಿರಿ
    http://aryasamajvvpuram.org/wp-content/uploads/2012/06/Bhagavan-Krishna-_1_.pdf

    ReplyDelete