ಆತ್ಮೋದ್ಧಾರಂ ವಿನಾ ಲೋಕೇ ಪರೋದ್ಧಾರಃ ಸುದುಷ್ಕರಃ
ತಾನು ಮೇಲೇರದೇ ಪರರನ್ನು ಮೇಲೆತ್ತಲಾಗದು.
ಮಿತ್ರ ಗುರುಪ್ರಸಾದ್ ಆಚಾರ್ಯರು, ಇಂದು ಈ ಸೂಕ್ತವನ್ನು ನೀಡಿದ್ದಾರೆ. ಎಷ್ಟು ಸೊಗಸಾಗಿದೆ, ಅಲ್ವಾ? ಮನುಷ್ಯನು ತಾನು ಸರಿದಾರಿಯಲ್ಲಿ ನಡೆದು, ತನ್ನ ಆತ್ಮೋಧ್ದಾರ ಮಾಡಿಕೊಳ್ಳುತ್ತಾ, ಜೊತೆಜೊತೆಗೇ ಇತರರನ್ನೂ ತನ್ನ ಮಾರ್ಗದಲ್ಲಿ[ಸನ್ಮಾರ್ಗದಲ್ಲಿ] ತೆಗೆದುಕೊಂದು ಹೋಗುವುದರಲ್ಲಿ ಅರ್ಥವಿದೆ.ಹಾಗಾಗದೇ ತಾನು ಮನಸ್ಸೊಯೇಚ್ಛೆ ನಡೆದು ಇತರರು ಹೀಗೆ ನಡೆಯಬೇಕೆಂದು ಭಾಷಣ ಮಾಡಿದರೆ ಕೇಳುವವರಾರು? ಅಲ್ಲವೇ?ನಿಜ. ನಮ್ಮ ಪ್ರತಿ ನಡೆಯಮೇಲೆ ನಮ್ಮ ನಿಗ ಇರಬೇಕು. ಆತ್ಮಾವಲೋಕನ ಮಾಡಿಕೊಳ್ಳುತ್ತಿರಬೇಕು.ಆ ದಾರಿಯಲ್ಲಿ ನಡೆಯೋಣ.
No comments:
Post a Comment