ಗ್ರಾಮ
ವಿಕಾಸಕ್ಕಾಗಿ ಕಾಲ್ನಡಿಗೆ:
ಕನ್ನಡ
ನೆಲದಲ್ಲಿ ಭಾರತ ಪರಿಕ್ರಮ ಯಾತ್ರೆ ,ವೃದ್ಧಾಶ್ರಮಗಳ ಅಗತ್ಯವಿರುವ
ಹಳ್ಳಿಗಳರಕ್ಷಣೆ, ಕಾಡು ನಾಶದಿಂದ ಬರಡಾಗುತ್ತಿರುವ ಗ್ರಾಮಗಳ ಉಳಿವು,
ಅತಿಯಾದ ರಾಸಾಯನಿಕ ಉಪಯೋಗದಿಂದ
ಸತ್ವ ಕಳೆದುಕೊಂಡಿರುವ ಭೂಮಿಯ ಪೋಷಣೆ,
ಅಧುನಿಕ ತಂತ್ರಜ್ಞಾನದ ಅತಿಯಾದ
ಅವಲಂಬಿಕೆಯಿಂದಾಗಿ ಕಳೆದು ಹೋಗುತ್ತಿರುವ
ಗ್ರಾಮ ಪರಂಪರೆಗಳ ಸಂರಕ್ಷಣೆ,
ಕ್ಷೀಣಿಸುತ್ತಿರುವ
ಗೋಸಂಪತ್ತಿನ ಸಂವರ್ಧನೆ, ಜೀವ ಸಂಕುಲಕ್ಕೆ
ಅಗತ್ಯವಾದ ಜಲ ಸ್ರೋತಗಳ ಕಾಯಕಲ್ಪ- ಈ ಪ್ರಮುಖ ಆಶಯಗಳನ್ನು ಕೇಂದ್ರೀಕರಿಸಿ
ಭಾರತ ಪರಿಕ್ರಮ ಪಾದಯಾತ್ರೆಯನ್ನು ಸೀತಾರಾಮ
ಕೆದಿಲಾಯರು ಕೈಗೊಂಡಿದ್ದಾರೆ.
ವಿಶ್ವಮಂಗಳ
ಗೋಗ್ರಾಮ ಯಾತ್ರೆಯ ಅನುವರ್ತೀಪ ಕ್ರಿಯೆಯಾಗಿ
ಗ್ರಾಮ ಜಾಗೃತಿಯ ಈ ಮಹತ್ವದ ಪಾದಯಾತ್ರೆಯನ್ನು ಕೆದಿಲಾಯರು
ಕೈಗೊಂಡಿದ್ದಾರೆ
ಅಕ್ಟೋಬರ್
೧೦ : ಕಾಸರಗೋಡು ಜಿಲ್ಲೆಯ ನೀಲೇಶ್ವರ
ಅಕ್ಟೋಬರ್
೧೧ :
ಕಾಂಞ್ಞಂಗಾಡು ಬಳಿಯ ಮೂಕಾಂಬಿಕ ದೇಗುಲ
ಅಕ್ಟೋಬರ್
೧೨ : ಪಳ್ಳಿಕ್ಕರ
ಅಕ್ಟೋಬರ್
೧೩ : ಪರವನಡ್ಕಂ
ಅಕ್ಟೋಬರ್
೧೪ : ಬೆಳಗ್ಗೆ ೭ ಗಂಟೆಗೆ ಕಾಸರಗೋಡಿಗೆ ಆಗಮನ
ಸಂಜೆ
ಮಾಯಿಪ್ಪಾಡಿ ಬಳಿ ವಾಸ್ತವ್ಯ
ಅಕ್ಟೋಬರ್
೧೫ : ಪುತ್ತಿಗೆ
ಅಕ್ಟೋಬರ್
೧೬ : ಧರ್ಮತ್ತಡ್ಕ
ಅಕ್ಟೋಬರ್
೧೭ : ಪೆರೋಡಿ, ಬಾಯಾರು ಬಳಿಯ ನೀರ್ಮುಡಿಗದ್ದೆ
ಅಕ್ಟೋಬರ್
೧೮ : ಬೇಡಗುಡ್ಡ
ಅಕ್ಟೋಬರ್
೧೯ : ಬಾಕ್ರೆಬೈಲು
ಅಕ್ಟೋಬರ್
೨೦ : ಕೋಣಾಜೆ
ಅಕ್ಟೋಬರ್
೨೧ : ಕುತ್ತಾರು ಪದವು
ಅಕ್ಟೋಬರ್
೨೨ : ಕಡೆಕ್ಕಾರು, ನೇತ್ರಾವತಿ ಸೇತುವೆಬಳಿ
ಅಕ್ಟೋಬರ್
೨೩ : ಕೋಡಿಕಲ್
ಅಕ್ಟೋಬರ್
೨೪ : ತಂಡಂಬೈಲು, ಸುರತ್ಕಲ್‌ಬಳಿ
ಅಕ್ಟೋಬರ್
೨೫ : ಸಸಿಹಿತ್ಲು
ಅಕ್ಟೋಬರ್
೨೬ : ಹೆಜಮಾಡಿ, ಉಡುಪಿ ಜಿಲ್ಲೆ
ನಂತರ ರಾಷ್ಟ್ರೀಯ
ಹೆದ್ದಾರಿ ಮೂಲಕ ಉತ್ತರ ಕನ್ನಡ ಜಿಲ್ಲೆಯನ್ನು
ಪ್ರವೇಶಿಸಿ
ನಂತರ ಗೋವಾಕ್ಕೆ ಯಾತ್ರೆ ಮುಂದುವರಿಯಲಿದೆ
ಭಾರತ
ಪರಿಕ್ರಮ ಯಾತ್ರೆ :
- ಗೋಪಾಲ್
ಚೆಟ್ಟಿಯಾರ್, ಕ್ಷೇತ್ರೀಯ ಸೇವಾ ಪ್ರಮುಖ್,
ಆರೆಸ್ಸೆಸ್
(ಕರ್ನಾಟಕ ಮತ್ತು ಆಂಧ್ರ )
ಯಾತ್ರೆ
ಸಾಗುವ ಬಗೆ
ಮೂಲತಃ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಸೀತಾರಾಮ ಕೆದಿಲಾಯರು, ಆರೆಸ್ಸೆಸ್‌ನ ಅಖಿಲ ಭಾರತೀಯ ಸೇವಾ
ಪ್ರಮುಖರಾಗಿ ಈ ಹಿಂದೆ
ಜವಾಬ್ದಾರಿಯಲ್ಲಿದ್ದವರು. ಕಳೆದ ಮಾರ್ಚ್‌ನಲ್ಲಿ ನಾಗಪುರದಲ್ಲಿ ನಡೆದ ಆರೆಸ್ಸೆಸ್‌ನ ಅಖಿಲ ಭಾರತೀಯ
ಪ್ರತಿನಿಧಿ ಸಭಾ ಬೈಠಕ್ ಬಳಿಕ ಭಾರತ ಪರಿಕ್ರಮ
ಯಾತ್ರೆಯ ಸಂಕಲ್ಪ ಕೈಗೊಂಡರು. ಸುಮಾರು ೫ ವರ್ಷಗಳಲ್ಲಿ ೧೫೦೦೦ ಕಿಲೋ ಮೀಟರ್‌ನಷ್ಟು ದೂರ ವಿವಿಧ ಹಳ್ಳಿಗಳಲ್ಲಿ
ಪಾದಯಾತ್ರೆಯ ಮೂಲಕ
ಸಂಚರಿಸಿ ಗ್ರಾಮಗಳಲ್ಲಿ ರಾಷ್ಟ್ರೀಯ ಜಾಗೃತಿ ಮೂಡಿಸುವ ಯೋಜನೆ ಅವರದ್ದು. ಅದಕ್ಕಾಗಿ ಸರಳವಾದ ದಿನಚರಿ
ಹೊಂದಿದ್ದಾರೆ. ಬೆಳಗ್ಗೆ
೬.೧೫ಕ್ಕೆ ಗೋ ಪೂಜೆಯಿಂದ ಮೊದಲ್ಗೊಂಡು ರಾತ್ರಿವರೆಗೆ ವಿವಿಧ ಚಟುವಟಿಕೆಗಳಲ್ಲಿ ಗ್ರಾಮಸ್ಥರೊಂದಿಗೆ
ಬೆರೆಯುತ್ತಾರೆ ಕೆದಿಲಾಯರು.
ಬೆಳಗ್ಗೆ
೬.೩೦ಕ್ಕೆ ತಾನಿದ್ದ ಹಳ್ಳಿಯಿಂದ ಪಾದಯಾತ್ರೆ ಆರಂಭಿಸುತ್ತಾರೆ. ೩ ತಾಸಿನ ನಡಿಗೆಯ ಬಳಿಕ ಅಂದರೆ ಸುಮಾರು ೯.೩೦ಕ್ಕೆ ಇನ್ನೊಂದು ಹಳ್ಳಿಯನ್ನು ಪ್ರವೇಶಿಸುತ್ತಾರೆ.
೯.೩೦ಕ್ಕೆ ಆ ಊರಿನ ದೇಗುಲ ಭೇಟಿ. ಅಲ್ಲೇ ಪರಿಸರದಲ್ಲಿ ಸಸಿಯೊಂದನ್ನು ನೆಡುತ್ತಾರೆ. ೧೨.೩೦ಕ್ಕೆ ಆ
ಊರಿನ ಮನೆಯೊಂದರಲ್ಲಿ ಭೋಜನ.
ವಿಶೇಷವೆಂದರೆ ಕಳೆದ ಹತ್ತಾರು ವರ್ಷಗಳಿಂದ ಕೆದಿಲಾಯರು ದಿನಕ್ಕೆ ಒಮ್ಮೆ ಮಾತ್ರ ಆಹಾರ ಸೇವಿಸುತ್ತಾರೆ.
ಮಧ್ಯಾಹ್ನದ ಊಟ ಬಿಟ್ಟರೆ ಬೇರೆ
ಯಾವ ಆಹಾರವನ್ನೂ ಅವರು ತೆಗೆದುಕೊಳ್ಳುವುದಿಲ್ಲ .ಯಾವುದೇ
ಜಾತಿಯ ಮನೆಯಿರಲಿ, ಆ ಮನೆಯಲ್ಲಿ ಊಟ, ಒಂದಷ್ಟು ಕುಶಲೋಪರಿ,
ವಿಶ್ರಾಂತಿ. ಸಂಜೆ ೩.೩೦ರಿಂದ ಗ್ರಾಮ ಸಂಪರ್ಕ. ೫.೩೦ಕ್ಕೆ ಗ್ರಾಮ
ಸಂಕೀರ್ತನೆ. ನಂತರ ಭಜನೆ ಸತ್ಸಂಗ. ನೆರೆದ ಗ್ರಾಮವಾಸಿಗಳಿಗೆ ಭಾರತದ ಬಗ್ಗೆ ಉಪನ್ಯಾಸ. ೯ ವಿಷಯಗಳ
ಬಗ್ಗೆ ಸರಳ ಭಾಷೆಯಲ್ಲಿ ಭಾಷಣ. ಅವೆಂದರೆ
ಭೂ ಸಂರಕ್ಷಣೆ , ಗೋ ಸಂರಕ್ಷಣೆ, ವೃಕ್ಷ ಸಂರಕ್ಷಣೆ , ಜೈವಿಕ ಸಂರಕ್ಷಣೆ , ಜನ ಸಂರಕ್ಷಣೆ , ಜಲ ಸಂರಕ್ಷಣೆ
, ಗ್ರಾಮ ಸಂಸ್ಕೃತಿ, ಗ್ರಾಮೋದ್ಯೋಗ
ಮತ್ತು ಗ್ರಾಮ ವೈದ್ಯ. ರಾತ್ರಿ ಅದೇ ಹಳ್ಳಿಯಲ್ಲಿ ವಾಸ್ತವ್ಯ. ಬೆಳಗ್ಗೆ ಇನ್ನೊಂದು ಹಳ್ಳಿಗೆ ಪಯಣ.
ಯಾತ್ರೆಗೆ ಬೇಕಾದ ವ್ಯವಸ್ಥೆಗಳನ್ನು ಸ್ಥಾನೀಯ
ಆರೆಸ್ಸೆಸ್ ಕಾರ್ಯಕರ್ತರು ಪೂರೈಸುತ್ತಾರೆ.
'Know Bharath, Be Bharth Make Bharath Vishwaguru' ಎನ್ನುವುದು ಯಾತ್ರೆಯ ಧ್ಯೇಯ
ವಾಕ್ಯ.
ಕಣ್ಣೂರಿನಲ್ಲಿ
ಚರ್ಚ್‌ಗೆ ಭೇಟಿ ನೀಡಿದ ಕೆದಿಲಾಯರು ನಂತರ ಊರಿನ ಮುಸ್ಲಿಂ
ಮುಖಂಡರೊಂದಿಗೆ ಮಾತುಕತೆ, ರಾಷ್ಟ್ರೀಯ ವಿಚಾರಗಳ ವಿನಿಮಯ ಗ್ರಾಮವಾಸಿಗಳಿಗೆ
ಭಾರತದ ಬಗ್ಗೆ ಉಪನ್ಯಾಸ ಯಾತ್ರೆಗೆ
ಗ್ರಾಮಸ್ಥರಿಂದ ಸಂಭ್ರಮದ ಸ್ವಾಗತ
ಪ್ರತೀ
ಗ್ರಾಮದಲ್ಲೂ ವೃಕ್ಷಾರೋಪಣ ಗ್ರಾಮ
ವಿಕಾಸಕ್ಕಾಗಿ ಕಾಲ್ನಡಿಗೆಯಲ್ಲೇ ಭಾರತದಾದ್ಯಂತ ಹಳ್ಳಿಗಳಲ್ಲಿ ಸಂಚರಿಸುವ ಭಾರತ ಪರಿಕ್ರಮ ಯಾತ್ರೆಗೆ ಕಮ್ಯುನಿಷ್ಟರ
ನೆಲೆವೀಡು ಎಂದೇ ಒಂದೊಮ್ಮೆ ಖ್ಯಾತವಾಗಿದ್ದ ಕೇರಳದ ಕಣ್ಣೂರಿನಲ್ಲಿ ಭರ್ಜರಿ ಸ್ವಾಗತ ದೊರೆತಿದೆ. ಹಿರಿಯ
ಆರೆಸ್ಸೆಸ್ ಪ್ರಚಾರಕರಾದ ಸೀತಾರಾಮ ಕೆದಿಲಾಯರ ನೇತೃತ್ವದ
ಭಾರತ ಪರಿಕ್ರಮ ಯಾತ್ರೆಯನ್ನು ಆರೆಸ್ಸೆಸ್ ಕಣ್ಣೂರು
ವಿಭಾಗ ಸಂಘಚಾಲಕ ಸಿ. ಚಂದ್ರಶೇಖರ್ ಬರಮಾಡಿಕೊಂಡರು. ಅಗಸ್ಟ್ ೯ರಂದು ಕನ್ಯಾಕುಮಾರಿಯಿಂದ
ಪ್ರಾರಂಭಗೊಂಡ
ಯಾತ್ರೆಯು ಇದೀಗ ಸುಮಾರು ೭೫೦ ಕಿ.ಮೀ. ಹಾದಿಯನ್ನು ಕ್ರಮಿಸಿದೆ. ಅಕ್ಟೋಬರ್
೨ರಂದು ಕಣ್ಣೂರಿನ ಓಡತ್ತಿಲ್ ಮಸೀದಿಗೆ ಭೇಟಿಯಿತ್ತ
ಕೆದಿಲಾಯರು ಅಲ್ಲಿನ ದಾರುಲ್ ಇಸ್ಲಾಂನ ಯತೀಂಖಾನದ ಅಧ್ಯಕ್ಷ
ಮೌಲಾನ ಮೊಹಮ್ಮದ್ ಹಾಜಿಯವರ
ಜೊತೆಗೆ ಮಾತುಕತೆ ನಡೆಸಿದರು.
ತಲಶ್ಶೇರಿ ಸಮೀಪದಲ್ಲೇ ಗಾಂಧೀ ಪುತ್ಥಳಿಯೊಂದಕ್ಕೆ ಹಾರಾರ್ಪಣೆ
ಮಾಡುವ ಮೂಲಕ ಗ್ರಾಮಸ್ಥರೊಂದಿಗೆ ಗಾಂಧೀ ಜಯಂತಿಯನ್ನು
ಆಚರಿಸಿದರು. ಸಂಜೆ ಊರಿನ ವಿವಿಧ ಜಾತಿ ಮುಖಂಡರೊಂದಿಗೆ ಸಾಮಾಜಿಕ ಸಾಮರಸ್ಯದ ಕುರಿತು ಮಾತುಕತೆ
ನಡೆಸಿ, ಗ್ರಾಮಾಭಿವೃದ್ಧಿಗೆ ಸಾಮರಸ್ಯದ ಅಗತ್ಯವನ್ನು
ಮನವರಿಕೆ ಮಾಡಿದರು. ಅಕ್ಟೋಬರ್ ೧೪ರಂದು ಬೆಳಗ್ಗೆ ೭ ಗಂಟೆಗೆ ಭಾರತ ಪರಿಕ್ರಮ ಯಾತ್ರೆಯು
ಕಾಸರಗೋಡು ನಗರವನ್ನು
ತಲುಪಲಿದ್ದು,
ಅಕ್ಟೋಬರ್ ೩ನೇ ವಾರದಲ್ಲಿ ಕರ್ನಾಟಕ ಪ್ರವೇಶಿಸಲಿದೆ. ಯಾತ್ರೆಗೆ ಇದುವರೆಗೆ ಸಿಕ್ಕ ಪ್ರತಿಕ್ರಿಯೆ
ಅದ್ಭುತ.
ಕೇರಳದ ನೂರಾರು
ಹಳ್ಳಿಗಳಲ್ಲಿ ಓಡಾಡಿದ ಕೆದಿಲಾಯರು
ಪ್ರತಿ ಹಳ್ಳಿಯಲ್ಲೂ ಗ್ರಾಮ ಜಾಗೃತಿಯ ಕುರಿತು
ಮಾತನಾಡಿದಾಗ,
ಗ್ರಾಮಸ್ಥರು ವ್ಯಸನಗಳನ್ನು ತ್ಯಜಿಸಿ, ತಮ್ಮ ಗ್ರಾಮವನ್ನು ಸ್ವಾವಲಂಬೀ ಗ್ರಾಮವನ್ನಾಗಿ ಮಾಡುವ
ಮನಸ್ಸು
ಮಾಡಿದ್ದಾರೆ
No comments:
Post a Comment