-“ಇವರನ್ನು ಯಾಕೆ ಅರೆಸ್ಟ್ ಮಾಡಿದ್ದೀರಿ?”
- “ಇವರು ಕೇಂದ್ರ ಸರ್ಕಾರದ ವಿರುದ್ಧವಾಗಿ ದೇಶದ್ರೋಹದ ಕೆಲಸಮಾಡ್ತಾ ಇದಾರೆ ಸ್ವಾಮಿ”
-“ಇವರು ದೇಶದ್ರೋಹದ ಕೆಲಸ ಮಾಡ್ತಾ ಇದಾರೆ ಅನ್ನೋದಕ್ಕೆ ಸಾಕ್ಷಿ ಇದೆಯಾ?”
-“ಸಾಕ್ಷಿ ಇದೆ ಸ್ವಾಮಿ”
-“ಏನು ಸಾಕ್ಷಿ?”
-“ಇವರ ಮನೆಯಲ್ಲಿ ಮಹಾತ್ಮಗಾಂಧಿಜಿಯ ಫೋಟೋ ಇರುವ ಕರಪತ್ರಗಳು ಸಿಕ್ಕಿವೆ.
-“ಹಾಸನದಲ್ಲಿ ಎಷ್ಟು ಮನೆಗಳಿವೆ?”
-ಗೊತ್ತಿಲ್ಲ.
- ಅಂದಾಜಾಗಿ ಹೇಳಿ ಪರವಾಗಿಲ್ಲ.ಇಪ್ಪತ್ತು
ಸಾವಿರ ಮನೆಗಳು ಇರಬಹುದಾ? ಅದರಲ್ಲಿ ಎಷ್ಟು ಮನೆಗಳಲ್ಲಿ ಮಹಾತ್ಮಗಾಂಧಿಜಿಯ ಫೋಟೋ ಇರಬಹುದು? ಒಂದು
ಐದು ನೂರು ಮನೆಗಳಲ್ಲಿ? ಹೋಗಲೀ ಒಂದು ಇನ್ನೂರು ಮನೆಗಳಲ್ಲಿ?”
“ಇರಬಹುದು.”
“ಹಾಗಾದರೆ ಅವರನ್ನೆಲ್ಲಾ ಯಾಕೆ ಅರೆಸ್ಟ್ ಮಾಡಲಿಲ್ಲ? ಇವರನ್ನೇಯಾಕೆ ಮಾಡಿದ್ರೀ?”
“ಫೋಟೋ ಮಾತ್ರಾ ಆಗಿದ್ರೆ ಅವರನ್ನು ಅರೆಸ್ಟ್ ಮಾಡ್ತಿರಲಿಲ್ಲ. ಫೋಟೋದ ಮೆಲೆ ರಾಷ್ಟ್ರದ್ರೋಹದ ಬರಹ ಇತ್ತು!”
“ಏ£ÀÄ ಬರಹ ಇತ್ತು?”
-“ಅಸತ್ಯ,ಅಧರ್ಮ,ದಬ್ಬಾಳಿಕೆಗೆ ತಲೆಬಾಗುವುದು ಹೇಡಿತನ ಅಂತಾ ಬರೆದಿತ್ತು.”
“ಅದು ಗಾಂಧೀಜಿ ನೇ ಹೇಳಿದ್ದಲ್ವಾ?
-ಇರಬಹುದು
-ಆ ಮಾತು ರಾಷ್ಟ್ರದ್ರೋಹ ಅನ್ನೋದಾದ್ರೆ , ಇದು ಗಾಂಧೀಜಿ ಹೇಳಿದ ಮಾತು ಅನ್ನೋದು ನಿಮ್ಮ
ನೆನಪಿನಲ್ಲಿರಲಿ. ಹೋಗಲೀ ಅದು ಹೇಗೆ ರಾಷ್ಟ್ರದ್ರೋಹ
ಆಗುತ್ತೆ? ಅನ್ನೋದನ್ನು ವಿವರಿಸುತ್ತೀರಾ?.........
ಇದು ಯಾವುದೋ ಸಿನೆಮಾ
ಡೈಲಾಗ್ ಅಲ್ಲ. 1975 ನೇ ಇಸವಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಾಸನದಲ್ಲೂ ಕೂಡ ತುರ್ತು
ಪರಿಸ್ಥಿತಿ ವಿರುದ್ಧ ನಡೆದ ಹೋರಾಟ ಸಂದರ್ಭದಲ್ಲಿ ಅಂದು ಭಾರತ ರಕ್ಷಣಾ ನಿಯಮ [DIR] ಮತ್ತು ಆಂತರಿಕ ಭದ್ರತಾ ಕಾಯದೆಯನ್ವಯ [MISA] ನೂರಾರು ಜನ ದೇಶ ಭಕ್ತರನ್ನು ಜೈಲಿಗೆ ಕಳಿಸಲಾಗಿತ್ತು. ಅದರಲ್ಲಿ DUÀ ಫುಡ್ ಇನ್ಸ್ಪೆಕ್ಟರ್ ಆಗಿ ಕಾರ್ಯ
ನಿರ್ವಹಿಸುತ್ತಿದ್ದ ಶ್ರೀ ಕೆ.ವಿ.ನಾಗರಾಜ್ ರನ್ನು ಅರೆಸ್ಟ್ ಮಾಡಲಾಗಿತ್ತು. ನಾಗರಾಜರ ಕೇಸ್ ನಡೆಸುತ್ತಿದ್ದ ಶ್ರೀ ಬಿ.ಎಸ್.ವೆಂಕಟೇಶ ಮೂರ್ತಿಯವರು ನ್ಯಾಯಾಲಯದಲ್ಲಿ
ಪಾಟೀಸವಾಲು ಮಾಡುವಾಗ ಪೋಲೀಸರಿಗೆ ಹಾಕಿದ
ಪ್ರಶ್ನೆಗಳಿವು.
ಶ್ರೀ ಕೆ.ವಿ.ನಾಗರಾಜರು ತುರ್ತುಪರಿಸ್ಥಿಯ ತಮ್ಮ ಹೋರಾಟದ ಘಟನೆಗಳನ್ನು ಮುಂದಿನ ಪೀಳಿಗೆಗೆ ಮರೆಯ ಬಾರದೆಂಬ ಕಾರಣಕ್ಕಾಗಿ ದಾಖಲಿಸಿ
ರುವ” ಆದರ್ಶದ ಬೆನ್ನು ಹತ್ತಿ…..”
ಪುಸ್ತಕವು
ಇದೇ 29.11.2012 ಗುರುವಾರ ಲೋಕಾರ್ಪಣೆಯಾಗಲಿದೆ. ತುರ್ತುಪರಿಸ್ಥಿತಿಯ ಹೋರಾಟಗಳ ನೆನಪು
ಒಂದು ಭಾಗವಾದರೆ ರಾಜ್ಯ ಸರ್ಕಾರೀ ಅಧಿಕಾರಿ/ನೌಕರನಾಗಿ ಸೇವೆ ಮಾಡುವಾಗಿನ ತಮ್ಮ ಅನುಭವಗಳನ್ನು ಇನ್ನೊಂದು
ಭಾಗದಲ್ಲಿ ಹಂಚಿಕೊಂಡಿದ್ದಾರೆ. ಬ್ರಷ್ಟಾಚಾರ ಎಂಬುದು ಚರ್ಚಾರ್ಹ ವಿಷಯವೇ ಅಲ್ಲ,ಅದೊಂದು ಸರ್ವೇ ಸಾಮಾನ್ಯ
ಎಂಬ ಮಾನಸಿಕತೆಗೆ ಬಂದು ನಿಂತಿರುವ ಈ ದಿನಗಳಲ್ಲಿ
ಶ್ರೀ ನಾಗರಾಜರು ತಮ್ಮ ಸೇವಾ ಅವಧಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸುವಾಗ
ಎದುರಾದ ಸಮಸ್ಯೆಗಳು, ಅದನ್ನೆಲ್ಲಾ ದಿಟ್ಟವಾಗಿ ಎದುರಿಸಿದ ರೀತಿ, ಎಲ್ಲವನ್ನೂ ಮನಮುಟ್ಟುವಂತೆ ದಾಖಲಿಸಿದ್ದಾರೆ.
ಕೃತಿಯನ್ನು ಓದಲು ಆರಂಭಿಸಿದರೆ ಎಲ್ಲವನ್ನೂ ಮರೆತು ತನ್ನೆಡೆಗೆ ಹಿಡಿದಿಟ್ಟುಕೊಳ್ಳುವ ಅವರ ಬರವಣಿಗೆ
ಶೈಲಿ ಓದುಗರನ್ನು ಬೆರಗುಗೊಳಿಸದೆ ಇರದು.
1970 ರ ನಂತರ ಜನ್ಮ ತಾಳಿರುವ ಇಂದಿನ ಪೀಳಿಗೆಗೆ “ತುರ್ತು
ಪರಿಸ್ಥಿತಿಯ ಹೋರಾಟ ಎಂದರೇನೆಂಬುದು UÉÆvÉÛà E®è. ಅಂದು ಹೋರಾಟದಲ್ಲಿ ಪಾಲ್ಗೊಂಡಿದ್ದ
ಹಲವಾರು ಜನರು ಇಂದು ನಮ್ಮೊಂದಿಗಿಲ್ಲ. ಅಂದು ಎಲ್ಲಾ ಪತ್ರಿಕೆಗಳ ಬಾಯಿ ಮುಚ್ಚಿಸಲಾಗಿತ್ತು. ಯಾವ ನಾಗರೀಕನೂ ಸರ್ಕಾರದ ವಿರುದ್ಧವಾಗಿ ಮಾತನಾಡು ವಂತಿರಲಿಲ್ಲ.
ಅಂತಹ ವಿಷಮ ಸಂದರ್ಭದಲ್ಲೂ ತುರ್ತುಪರಿಸ್ಥಿತಿಯ ವಿರುದ್ಧವಾಗಿ
ಪೋಲೀಸರ ಹದ್ದುಗಣ್ಣನ್ನು ಮರೆಮಾಚಿಸಿ ಪ್ರಕಟವಾಗುತ್ತಿದ್ದ “ಕಹಳೆ” ಪತ್ರಿಕೆಯು
ಎಲ್ಲಿ ಮುದ್ರಣವಾಗುತ್ತೆ? ಯಾರು ಪ್ರಸಾರ ಮಾಡುತ್ತಾರೆಂಬುದು ಪೋಲೀಸರಿಗೆ ದೊಡ್ದ ಪ್ರಶ್ನೆಯಾಗಿತ್ತು.
ಅನುಮಾನ ಬಂದವರನ್ನು ಸ್ಟೇಶನ್ ಗೆ ಎಳೆದೊಯ್ದು “ಏರೋಪ್ಲೇನ್” ಎತ್ತುತ್ತಿದ್ದ ಕಾಲ. ಇಂದು ಏರೋಪ್ಲೇನ್
ಶಿಕ್ಷೆ ಎಂದರೇನೆಂಬುದು ನಮ್ಮ ಯುಕರಿಗೆ ಗೊತ್ತಿಲ್ಲ. ಆದರೆ ಅಂದು ಹಲವಾರು ದೇಶಭಕ್ತರೂ ಕೂಡ ಪೋಲೀಸರ
ಅಮಾನುಷ ಶಿಕ್ಷೆಗೆ ಒಳಗಾಗಿದ್ದ ಕೆಟ್ಟದಿನಗಳು. ಆರೆಸ್ಸೆಸ್ ಸೇರಿದಂತೆ ೫೦-೬೦ ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಗಿತ್ತು. ಆರೆಸ್ಸೆಸ್
ಮುಂಚೂಣಿಯಲ್ಲಿ ನಿಂತು ಜಯಪ್ರಕಾಶ ನಾರಾಯಣರ ನಾಯಕತ್ವದಲ್ಲಿ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ತುರ್ತು
ಪರಿಸ್ಥಿತಿ ವಿರುದ್ಧ ನಡೆದ ಅಭೂತಪೂರ್ವ ಆಂದೋಲನ ದೇಶದಲ್ಲಿ ಪ್ರಜಾಸತ್ತೆ ಉಳಿಯಲು ಕಾರಣವಾಯಿತು. ಲಕ್ಷಾಂತರ
ತರುಣರು ಇದರಲ್ಲಿ ಭಾಗವಹಿಸಿ ಅನೇಕ ಕಷ್ಟ-ನಷ್ಟಗಳನ್ನು ಎದುರಿಸಿದರು. ನೂರಾರು ಜನರು ತಮ್ಮ ಜೀವವನ್ನೇ
ತೆತ್ತರು. ಕರ್ನಾಟಕದಲ್ಲೂ ಸಹ ಆಂದೋಲನ ಜನ ಜಾಗೃತಿಗೊಳಿಸುವಲ್ಲಿ, ಸರ್ವಾಧಿಕಾರಿಗಳನ್ನು ಬೆಚ್ಚಿ ಬೀಳಿಸುವಲ್ಲಿ
ಯಶಸ್ವಿಯಾಯಿತು. ಹಾಸನ ಜಿಲ್ಲೆಯಲ್ಲೂ ಸಾವಿರಾರು ತರುಣರು ಪ್ರತಿಭಟನೆಯಲ್ಲಿ ಪಾಲುಗೊಂಡದ್ದು ಇತಿಹಾಸ.
೧೩ ಜನರನ್ನು ಯಾವುದೇ ವಿಚಾರಣೆಗೊಳಪಡದೆ 2 ವರ್ಷಗಳ ಕಾಲ ಬಂಧಿಸಿಡಬಹುದಾದ ಮೀಸಾ ಕಾಯದೆಯನ್ವಯ ಬಂಧಿಸಲಾಗಿತ್ತು.
ಸುಮಾರು 300 ಜನರನ್ನು ಭಾರತ ರಕ್ಷಣಾ ಕಾಯದೆಯನ್ವಯ ಬಂಧಿಸಿದ್ದರು. ಸಾವಿರಾರು ತರುಣರ ಮೇಲೆ ದಂಡ ಪ್ರಕ್ರಿಯಾ
ಸಂಹಿತೆಯ ವಿವಿಧ ಕಲಮುಗಳ ಪ್ರಕಾರ ಮೊಕದ್ದಮೆಗಳನ್ನು ಹೂಡಲಾಗಿತ್ತು. ಕೊನೆಕೊನೆಗೆ ಜೈಲಿನಲ್ಲಿ ಸ್ಥಳವಿರದ
ಕಾರಣ ಬಂಧಿಸಿ, ಮುಚ್ಚಳಿಕೆ ಬರೆಯಿಸಿಕೊಂಡು, ಹೊಡೆದು ಬಡಿದು ಬಿಟ್ಟದ್ದೂ ಉಂಟು. ಆ ಸಂದರ್ಭದಲ್ಲಿ
ಅನುಭವಿಸಿದ ಕಿರುಕುಳ, ಹಿಂಸೆಗಳಿಂದಾಗಿ ಆಗ ಹಾಸನ ಜಿಲ್ಲೆಯ ಆರೆಸ್ಸೆಸ್ ಪ್ರಚಾರಕರಾಗಿದ್ದ ಶ್ರೀ ಪ್ರಭಾಕರ
ಕೆರೆಕೈಯವರು ತಮ್ಮ 30-32 ಕಿರಿಯ ವಯಸ್ಸಿನಲ್ಲೇ ಮತಿವಿಕಲ್ಪತೆಗೆ
ಒಳಗಾಗಿ ಕೊನೆಯುಸಿರೆಳೆದದ್ದು ದುರಂತ.
ಶ್ರೀ ನಾಗರಾಜರು ಬರೆದಿರುವುದು ಹೋರಾಟಕಾಲದ ಸಮಗ್ರ ಚಿತ್ರಣವಲ್ಲ. ಒಬ್ಬ ಹೋರಾಟಗಾರನಾಗಿ
ಅವರ ಅನುಭವಗಳನ್ನು ದಾಖಲಿಸಿದ್ದಾರೆ. ತುರ್ತು ಪರಿಸ್ಥಿಯ ದಿನಗಳನ್ನು ನೆನೆದುಕೊಂಡರೆ ಕಣ್ಣುಗಳು ತೇವ ವಾಗುತ್ತವೆ. ಹೀಗೂ ಇತ್ತಾ! ಎಂದು ಅಂದಿನ ದಿನಗಳನ್ನು
ಕಣ್ಣಾರೆ ಕಂಡ,ಹೋರಾಟದಲ್ಲಿ ನೇರವಾಗಿ ಅಥವಾ ಗುಪ್ತವಾಗಿ ಹೋರಾಡಿದ ನಮ್ಮಂತವರಿಗೇ ಅಚ್ಚರಿಯಾಗುತ್ತದೆ.
ಸ್ವಾತಂತ್ರ್ಯ ಆಂಧೋಳನದಲ್ಲಿದ್ದ 99% ಜನರು ಇಂದು ನಮ್ಮೆದಿರು ಇಲ್ಲ. ಎರಡನೆಯ ಸ್ವಾತಂತ್ರ್ಯಹೋರಾಟವೆಂದೇ
ಹೇಳಬಹುದಾದ 1975-77 ರ ಹೋರಾಟದಲ್ಲಿ ಪಾಲ್ಗೊಂಡವರಲ್ಲಿ ಕೆಲವರನ್ನಾದರೂ ನೋಡಬೇಕೆ?
ಹಾಗಾದರೆ ಬನ್ನಿ…..
ಸ್ಥಳ: ಶ್ರೀ ರಾಮಕೃಷ್ಣ ವಿದ್ಯಾಲಯ
ಸಭಾಂಗಣ
ದಿನಾಂಕ: 29.11.2012 ಗುರುವಾರ ಸಂಜೆ 6.00 ಕ್ಕೆ.
No comments:
Post a Comment