Pages

Monday, July 30, 2012

ದೇವಾಲಯಗಳ ಹಿನ್ನೆಲೆ

ನಮ್ಮ ದೇಶದಲ್ಲಿ ರಾಜ ಮಹಾರಾಜರ ಕಾಲದಿಂದಲೂ ದೇವಾಲಯಗಳನ್ನು ಕಟ್ಟುವುದು, ಕೆರೆ ಕಟ್ಟೆಗಳನ್ನು ನಿರ್ಮಿಸುವುದು, ಕೊಳಗಳನ್ನು ನಿರ್ಮಿಸುವುದು, ಅರಳೀಕಟ್ಟೆಗಳ ನಿರ್ಮಾಣ, ತೋಪು ಬೆಳೆಸುವುದು,ಗೋಮಾಳಗಳನ್ನು ಬಿಡುವುದು, ಸಾಲು ಮರಗಳನ್ನು ನೆಡುವುದು,ಛತ್ರಗಳನ್ನು ಸ್ಥಾಪಿಸುವುದು, ಮಠ ಮಂದಿರಗಳಿಗೆ ಪ್ರೋತ್ಸಾಹಿಸುವುದು...ಮುಂತಾದ ಹಲವು ಸತ್ಕಾರ್ಯಗಳನ್ನು ನಮ್ಮ ಪೂರ್ವಜರು ಮಾಡಿದ್ದಾರೆ. ನನ್ನ ಸ್ವಂತ ಊರಾದ ಹರಿಹರಪುರವನ್ನು ಎರಡನೇ ಹರಿಹರಮಹಾರಾಜನು ಮಾಧವಾಧ್ವರಿ ಎಂಬ ವೇದ ವಿದ್ವಾಂಸನಿಗೆ ಅವನ ವೇದಜ್ಞಾನಕ್ಕೆ ಮನ್ನಣೆ ಕೊಟ್ಟು ದಾನವಾಗಿ ನೀಡಿದ್ದನು, ಎಂಬ ಶಾಸನ ಇದೆ.ಮಾಧವಾಧ್ವರಿ ಎಂಬ ವೇದವಿದ್ವಾಂಸನಿದ್ದ ಊರಿನಲ್ಲಿ ನಾನು ಜನಿಸಿದ್ದೇನೆ, ಎಂಬುದರಿಂದಲೇ ನನಗೆ ಸಂತೋಷವಿದೆ. ಆದರೆ ಮಾಧವಾಧ್ವರಿಯ ನಂತರ ನಮ್ಮೂರಿನಲ್ಲಿ ವೇದಜ್ಞಾನ ಯಾವ ಕಾರಣಕ್ಕೆ ಹಿನ್ನಡೆ ಪಡೆಯಿತು, ಎಂಬಬಗ್ಗೆ ಅರಿವಿಲ್ಲ, ಆದರೆ ನಿಜವಾದ ವೇದಜ್ಞಾನ ಮರೆಯಾಗುತ್ತಾ,ಪುರಾಣದ ಮೇಲುಗೈಯ್ಯಾದಂತೆ ತೋರುವುದು ಸತ್ಯ.ಏನೇ ಇರಲಿ, ದೇವಾಲಯಗಳ ಸ್ಥಾಪನೆಯ ಹಿಂದಿನ ಉದ್ಧೇಶವನ್ನು ಶ್ರೀ ಸುಧಾಕರಶರ್ಮರ ಮಾತುಗಲ್ಲಿ ಕೇಳೋಣ. ಅವರ ಮಾತುಗಳು ನಿಷ್ಟುರವಾಗಿರುತ್ತವೆ. ಕಹಿಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವಾದರೂ ನಿಜವನ್ನು ಅರಿತುಕೊಳ್ಳಲೇ ಬೇಕು.

1 comment:

  1. ಶರ್ಮರವರು ತಿಳಿಸಿರುವ ವಿಷಯ ಅತಿ ಸ್ಪಷ್ಟವಾಗಿದೆ. ದೇವಸ್ಥಾನ ವೆಂದರೆ,ಈಗ ಪರಮಾತ್ಮನು ನೆಲಸಿರುವ ಸ್ಥಾನ ವೆಂದಾಗಿದೆ. ಫರಮಾತ್ಮನು ಸರ್ವವ್ಯಾಪಿಯಾರಗಿರುವಾಗ ಅವನು ಈಗ ಪ್ರಸ್ಥಾಪಿಸಲ್ಪಡುತ್ತಿರುವ ದೇವಸ್ಥಾನದಲ್ಲೂ ಇದ್ದಾನೆ. ಆದರೆ ದೇವ ಸ್ಥಾನದ ಮೂಲ ಅರ್ಥ ದೇವರುಗಳ ಸ್ಥಾನ ಎಂದು. ಇಲ್ಲಿ "ದೇವ" ಎಂದರೆ, ವಿದ್ವಾಂಸ ಎಂದರ್ಥ. ದೇವಸ್ಥಾನಗಳು ವಿದ್ವಾಂಸರು ಇರುವ ಸ್ಥಾನ ವಾಗಿದ್ದು ಅವರು ಈ ಸಮುದಾಯಗಳ ಭವನಗಳ ಮೂಲಕ ಹಿಂದೆ ಜನತೆಗೆ ಮಾರ್ಗದರ್ಶನ ಮಾಡುತ್ತಿದ್ದರು. ಆದರೆ, ಈ ಭಾವಾರ್ಥ ಈಗ ಲುಪ್ತವಾಗಿರುವುದು ತುಂಬಾ ದುಃಖತರುವ ಸಂಗತಿ. ಅದರ ಬದಲಾಗಿ ಅಲ್ಲಿ ಎಲ್ಲ ಮೌಢ್ಯಗಳ ವಾಸಸ್ಥಾನವಾಗಿದೆ. ಉದಾಹರಣೆ ತಿರುಪತಿಯಲ್ಲಿ ನಡೆಯುತ್ತಿರುವ ಜಾತ್ರೆಯಾದರೆ ಕನ್ನಡದ ನಾಡಿನಲ್ಲಿ ನಡೆಯುತ್ತಿರುವ "ಮಡೆಸ್ನಾನ."
    ಈ ಸಂದರ್ಭದಲ್ಲಿ ಸುಮಾರು 1960 ರ ದಶಕದಲ್ಲಿ ನಡೆದ ಒಂದು ಘಟನೆ ಜ್ಞಾಪಕಕ್ಕೆ ಬರುತ್ತದೆ. ಪುರಿಯಲ್ಲಿ ಭಾರತೀಯ ಜನಸಂಘ ಪಕ್ಷದ ಒಂದು ಸಭೆಯಲ್ಲಿ ಅದರ ಅಖಿಲ ಭಾರತ ಕಾರ್ಯದರ್ಶಿಯಾಗಿದ್ದ ದೀನ ದಯಾಳು ಉಪಾಧ್ಯಾಯರು ಭಾಗವಹಿಸಿದ್ದರು. ಕಾರ್ಯಕರ್ತರ ಒತ್ತಾಯದ ಮೇಲೆ ಪುರಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ದೇವಸ್ಥಾನದಿಂದ ಹೊರಬಂದ ಮೇಲೆ ಪತ್ರಕರ್ತರು ಅವರನ್ನು ದೇವಸ್ಥಾನದಲ್ಲಿ ತಮ್ಮ ಅನುಭವ ಹೇಗಿತ್ತೆಂದು ಪ್ರಶ್ನಿಸಿದರು. ಉಪಾದ್ಯಾಯರು ತುಸು ಹೊತ್ತು ಯೋಚಿಸಿ ಮಾರ್ಮಿಕವಾಗಿ ಹೇಳಿದರು " ದೇವಸ್ಥಾನಕ್ಕೆ ಹೋಗುವ ಮುನ್ನ ನಾನು ಒಬ್ಬ ಸಂಪ್ರದಾಯವಾದೀ ಸನಾತನೀ ಹಿಂದು ವಾಗಿದ್ದೆ, ದೇವಸ್ಥಾನವನ್ನು ಸಂದರ್ಶಿಸಿ ಬಂದ ಮೇಲೆ ನಾನು ಈಗ ಪೂರಾ ಆರ್ಯ ಸಮಾಜೀಯಾಗಿದ್ದೇನೆ ಎಂದರು' ನಮ್ಮ ದೇವಸ್ಥಾನಗಳು ಅದರ ಮೂಲ ಉದ್ದೇಶ್ಯವನ್ನು ಮರೆತು ಅನೇಕ ಶತಮಾನಗಳೇ ಕಳೆದಿವೆ. ಅವು ಜ್ಞಾನವನ್ನು ಪ್ರಸಾರ ಮಾಡುವುದನ್ನು ಮರೆತು ಹೋಟಲ್ ಕೆಲಸ ಮಾಡುತ್ತಿವೆ. ಅದು ಸಂಘಟನೆಯ ಕೇಂದ್ರವಾಗಿಲ್ಲದೆ ಸಮಾಜವನ್ನು ಒಡೆಯುವ ಕಾರ್ಯದಲ್ಲಿ ನಿರತವಾಗಿದೆ. ಇಂದು ಅನೇಕ ಕಡೆ ದಲಿತರಿಗೆ ಪ್ರವೇಶ ನೀಡದಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಶೋಷಣೆಯ ಮಹಾ ಕೇಂದ್ರವಾಗಿ ಈಗ ಹಳೆಯ ಮತ್ತು ನವ ನವೀನ ದೇವಸ್ಥಾನಗಳು ಹೊರಹೊಮ್ಮಿವೆ.
    ಇಂತಹ ವಾತಾವರಣದಲ್ಲಿ ಶರ್ಮರವರು ಮಾತುಗಳು ಬರಗಾಲದಲ್ಲಿ ಒಮ್ಮೆಲೆ ಮಳೆ ಬಂದಂತೆ ಭಾಸವಾಗಿ ನಮಗೆ ಸಂತೋಷವನ್ನು ತರುತ್ತದೆ.

    ReplyDelete