ನನ್ನ ಆತ್ಮೀಯ ಗೆಳೆಯರೇ,
ಹಾಸನದ ವೇದಭಾರತಿವತಿಯು ಈಗಾಗಲೇ ಎರಡು-ಮೂರು ವರ್ಷಗಳಿಂದ " ಎಲ್ಲರಿಗಾಗಿ ವೇದ" ಎಂಬ ಉದ್ದೇಶವನ್ನಿಟ್ಟುಕೊಂಡು ನಿತ್ಯ ಸತ್ಸಂಗ ನಡೆಸುತ್ತಿದೆ. ಸತ್ಸಂಗದಲ್ಲಿ ಜಾತಿಭೇದ ಬಿಟ್ಟು ಎಲ್ಲರೂ ಸೇರಿ ಅಗ್ನಿಹೋತ್ರ ,ವೇದಪಠಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತೀ ಬುಧವಾರ ವಿಶೇಷ ಸತ್ಸಂಗ ನಡೆಯುತ್ತಿದೆ. ಅದರಲ್ಲಿ ಯಾರದಾದರೂ ವೇದ ಪಂಡಿತರ ಉಪನ್ಯಾಸ ಇರುತ್ತದೆ.
ನಮಗೆಲ್ಲಾ ಪ್ರೇರಕರು ಬೆಂಗಳೂರಿನ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು. ಅವರು ಇನ್ನು ಕೆಲವು ದಿನ ಹೊರ ಪ್ರವಾಸ ಮಾಡುವಂತಿಲ್ಲ. ಆದರೆ ನಾವು ಅವರನ್ನು ಬಿಡುವಂತಿಲ್ಲ. ಅವರ ಮಾರ್ಗದರ್ಶನದಲ್ಲಿ ಸಾಗಬೇಕೆಂದು ಅಂತರ್ಜಾಲದ ಮೂಲಕ ಅವರ ಉಪನ್ಯಾಸ ಕೇಳುವ ಮತ್ತು ಅವರೊಡನೆ ಮಾತನಾಡಿ ನಮ್ಮ ಸಮಸ್ಯೆಗಳಿಗೆ ಉತ್ತರ ಪಡೆಯುವ ದಿಕ್ಕಿನಲ್ಲಿ ಆಲೋಚನೆ ನಡೆಸಿದ್ದೇವೆ. ವಾರದಲ್ಲಿ ಎರಡು ದಿನ ಆನ್ ಲೈನ್ ಪಾಠಮಾಡಲು ಅವರು ಒಪ್ಪಿದ್ದಾರೆ. ಅಲ್ಲದೆ ಜಗತ್ತಿನಲ್ಲಿ ಅಲ್ಲಲ್ಲಿ ಚದುರಿಹೋಗಿರುವ ಉಪನ್ಯಾಸಕರಿಂದಲೂ ಉಪನ್ಯಾಸ ಕೇಳಬೇಕೆಂಬ ಆಸೆಯೂ ಇದೆ. ಸ್ಕೈಪ್ ಅಥವಾ ಗೂಗಲ್ ಮೂಲಕ ಯೋಜನೆ ರೂಪಿಸಬೇಕೆಂದು ಕೊಂಡಿದ್ದೇವೆ.
ಈಗಾಗಲೇ ಅಂತರ್ಜಾಲದ ಸಹಿತ ಕಂಪ್ಯೂಟರ್ ಸಿದ್ಧವಿದೆ. ನಮಗೀಗ ನಾವು ಸುಮಾರು ನಲವತ್ತು ಐವತ್ತು ಜನರು ನೋಡುವಂತೆ ಪ್ರೊಜೆಕ್ಟರ್ ಕೊಂಡು ಅದನ್ನು ಕಂಪ್ಯೂಟರ್ ಗೆ ಕನೆಕ್ಟ್ ಮಾಡಬೇಕಾಗಿದೆ.
ಈ ಬಗ್ಗೆ ಹೆಚ್ಚು ಮಾಹಿತಿ ಇದ್ದವರು vedasudhe@gmail.com ಗೆ ಮೇಲ್ ಮಾಡಿ ಸಲಹೆ ಕೊಡುವಿರಾ? ಮುಂದಿನ ದಿನಗಳಲ್ಲಿ ಹೊರಗಿರುವ ಸ್ನೇಹಿತರೂ ಸ್ಕೈಪ್/ಗೂಗಲ್ ಮೂಲಕ ಕೂಡ ಪಾಠ ಕೇಳುವ ವ್ಯವಸ್ಥೆ ಮಾಡಿಕೊಳ್ಳಬಹುದೆಂದು ಭಾವಿಸುವೆ. ಸರಿಯಾದ ಯೋಜನೆ ರೂಪಿಸಬೇಕಾಗಿದೆ. ಸಾಮಾನ್ಯವಾಗಿ ಆಗುವ ಖರ್ಚು ಮತ್ತು ಅಗತ್ಯ ಸಲಕರಣೆಗಳ ಬಗ್ಗೆ ದಯಮಾಡಿ ಸಲಹೆ ಕೊಟ್ಟು ಉಪಕರಿಸಿ.
ಅಂತೆಯೇ ಒಂದು ಸದ್ವಿಚಾರದ ಪ್ರಚಾರಕ್ಕಾಗಿ ಇರುವ vedasudhe.com ನಿರ್ವಹಣೆ ಮಾಡಲು ಯಾರಾದರೂ ಮುಂದೆ ಬಂದರೆ ಬಹಳ ಸಹಾಯವಾಗುತ್ತೆ. ತಾಂತ್ರಿಕ ಅರಿವಿನ ಕೊರತೆಯಿಂದ ಅದನ್ನು ಪೂರ್ಣ ಬಳಸಲು ಸಾಧ್ಯವಾಗಿಲ್ಲ.
ಅಂತೆಯೇ ಒಂದು ಸದ್ವಿಚಾರದ ಪ್ರಚಾರಕ್ಕಾಗಿ ಇರುವ vedasudhe.com ನಿರ್ವಹಣೆ ಮಾಡಲು ಯಾರಾದರೂ ಮುಂದೆ ಬಂದರೆ ಬಹಳ ಸಹಾಯವಾಗುತ್ತೆ. ತಾಂತ್ರಿಕ ಅರಿವಿನ ಕೊರತೆಯಿಂದ ಅದನ್ನು ಪೂರ್ಣ ಬಳಸಲು ಸಾಧ್ಯವಾಗಿಲ್ಲ.
ಅಂತೆಯೇ ಅಂತರ್ಜಾಲದಲ್ಲಿ ಉಪನ್ಯಾಸ ಮಾಡಲು ಆಸಕ್ತಿ ಇರುವ ಪಂಡಿತರ ಬಗ್ಗೆ ನಮಗೆ ವಿವವರ ಕೊಡಿ
-ಹರಿಹರಪುರಶ್ರೀಧರ್
ಸಂಯೋಜಕ
ವೇದಭಾರತೀ, ಹಾಸನ
No comments:
Post a Comment