///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Friday, July 24, 2015
Thursday, July 23, 2015
ಹಾಸನದ ವೇದಭಾರತಿಯ ವಿನೂತನ ಪ್ರಯೋಗ
ಹಾಸನದ ವೇದಭಾರತಿಯದು ಹಲವು ವಿನೂತನ ಪ್ರಯೋಗಗಳು. ನಿನ್ನೆ ಒಬ್ಬ ಸತ್ಸಂಗಿಯ ಮನೆಯಲ್ಲಿ ವೇದಭಾರತಿಯ ಎಲ್ಲಾ ಸದಸ್ಯರನ್ನೂ ಕರೆದಿದ್ದರು. ಅವರು ಪಾಲ್ಗೊಳ್ಳುವ ಮತ್ತೊಂದು ಸತ್ಸಂಗ-ಭವಾನಿ ಶಂಕರ ಭಜನ ಮಂಡಳಿಯ ಸದಸ್ಯೆಯರೂ ಬಂದಿದ್ದರು. ಒಟ್ಟು ಎಪ್ಪತ್ತು-ಎಂಬತ್ತು ಜನರು. ಸಂಜೆ 4.30 ರಿಂದ 6.00 ಗಂಟೆಯವರಗೆ ಮಂದಳಿಯ ಸದ್ಸ್ಯರಿಂದ ಸೊಗಸಾದ ಭಜನೆ. ನಂತರ ಅಗ್ನಿಹೋತ್ರ ಮತ್ತು ವೇದದ ಪರಿಚಯ 7.30 ರವರಗೆ. ಅಬ್ಭಾ! ಮೂರು ಗಂಟೆಗಳಿಗೂ ಹೆಚ್ಚು ಸಮಯ ಎಲ್ಲರೂ ಶಾಂತಚಿತ್ತರಾಗಿ ಪಾಲ್ಗೊಂಡಿದ್ದಾರೆ. ಅವರೆಲ್ಲಾ ಹೊಸಬರಾದ್ದರಿಂದ ಅವರಿಗೆ 4 ಸಂಗತಿಗಳನ್ನು ಸ್ಪಷ್ಟಪಡಿಸುವುದಿತ್ತು..
1. ಸ್ತ್ರೀಯರಿಗೆ ಉಪನಯನ ಮಾಡಬಹುದೇ?
2. ಸ್ತ್ರೀಯರು ಹವನ-ಹೋಮ ಮಾಡಬಹುದೇ?
3. ವೇದವನ್ನು ಎಲ್ಲಾ ವರ್ಗದವರೂ ಹೇಳ ಬಹುದೇ?
4.ಅಗ್ನಿಹೋತ್ರ ಯಾಕೆ ಮಾಡಬೇಕು? ಅದರ ಉಪಯೋಗವೇನು?
ಈ ವಿಚಾರಗಳನ್ನು ನಾನು ತಿಳಿಸಿದ ನಂತರ ಸಂಘಟಕರ ಮೆಚ್ಚುಗೆಯ ಮಾತುಗಳು ಮತ್ತು ಅವರ ಎಲ್ಲಾ ಸದಸ್ಯರಿಗೆ ನಾನು ತಿಳಿಸಿದ ವಿಚಾರದಲ್ಲಿ ಪ್ರತೀ ಮಾತುಗಳೂ ಅನುಸರಿಸಿದರೆ ಮಾತ್ರ ಉಪಯುಕ್ತವೆಂದು ಹೇಳಿದ್ದು ನನಗೂ ಸಾರ್ಥಕವೆನಿಸಿತು.
Thursday, July 9, 2015
ವೇದಭಾರತೀ ಸತ್ಸಂಗದಲ್ಲಿ ನಡೆಯುತ್ತಿರುವ ವೇದಪಾಠದ ಒಂದು ಕ್ಲಿಪ್
ಹಾಸನದ ವೇದಭಾರತಿಯು ನಡೆಸುವ ನಿತ್ಯ ಸತ್ಸಂಗವು ಹಲವರನ್ನು ಹತ್ತಿರ ತಂದಿದೆ. ಅಂತವರಲ್ಲಿ ನಿನ್ನೆ ಬಂದು ತಮ್ಮ ಮೆಚ್ಚುಗೆ ವ್ಯಕ್ತಪಟಿಸಿದ ನಿವೃತ್ತ ಅಧೀಕ್ಷಕ ಇಂಜಿನಿಯರ್ [KUWSS] ಶ್ರೀ ರಂಗಸ್ವಾಮಿಯವರು. ಅವರು ಬೆಳಗಾಮ್ ನಿಂದ ತಮ್ಮ ತಂಗಿಮನೆಗೆ ಬಂದಿದ್ದರು. ನಮ್ಮ ಚಟುವಟಿಗೆ ಅವರಿಗೆ ಎಷ್ಟು ಇಷ್ಟವಾಯಿತೆಂದರೆ ನಮ್ಮನ್ನು ಬೆಳಗಾಮ್ ಗೆ ಆಹ್ವಾನಿಸಿದ್ದಾರೆ. ಅಲ್ಲೊಂದು ಅಗ್ನಿಹೋತ್ರ ಶಿಬಿರ ನಡೆಯಲಿದೆ. ಅಷ್ಟಕ್ಕೆ ಸುಮ್ಮನಾಗಲಿಲ್ಲ. ಅವರ ಮಿತ್ರರಾದ ಕೆ.ಆರ್.ನಗರದ ಡಾ|| ಶಿವಲಿಂಗಪ್ಪನವರಿಗೆ ಕರೆಮಾಡಿ ಅವರನ್ನು ಪರಿಚಯ ಮಾಡಿಸಿ ಕೆ.ಆರ್.ನಗರದಲ್ಲಿ ಅವರು ನಡೆಸುವ ಯೋಗ ತರಬೇತಿ ಶಿರದಲ್ಲಿ ಅಗ್ನಿಹೋತ್ರ ನಡೆಸಿಕೊಡಲು ಆಹ್ವಾನಿಸಿದ್ದಾರೆ. ಇಂದು ಅವರ ತಂಗಿಯಮನೆಯಲ್ಲೇ ಅಗ್ನಿಹೋತ್ರ ಏರ್ಪಡಿಸಿ ಸ್ವತಃ ಮಾಡಿ ಸಂತೋಷಪಟ್ಟರು.
ಹೌದು, ನಮ್ಮ ಸತ್ಸಂಗ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ನಮ್ಮ ಕೈಲಾದಷ್ಟು ಸ್ಥಳಗಳಿಗೆ ಈ ವಿಚಾರವನ್ನು ತಲುಪಿಸಿಸುವ ಕೆಲಸವನ್ನು ಮಾಡಲು ನಾವೂ ಕಟಿಬದ್ಧರಾಗಿದ್ದೇವೆ.
Subscribe to:
Posts (Atom)