Pages

Thursday, July 23, 2015

ಹಾಸನದ ವೇದಭಾರತಿಯ ವಿನೂತನ ಪ್ರಯೋಗ

ಹಾಸನದ ವೇದಭಾರತಿಯದು ಹಲವು ವಿನೂತನ ಪ್ರಯೋಗಗಳು. ನಿನ್ನೆ ಒಬ್ಬ ಸತ್ಸಂಗಿಯ ಮನೆಯಲ್ಲಿ ವೇದಭಾರತಿಯ ಎಲ್ಲಾ ಸದಸ್ಯರನ್ನೂ ಕರೆದಿದ್ದರು. ಅವರು ಪಾಲ್ಗೊಳ್ಳುವ ಮತ್ತೊಂದು ಸತ್ಸಂಗ-ಭವಾನಿ ಶಂಕರ ಭಜನ ಮಂಡಳಿಯ ಸದಸ್ಯೆಯರೂ ಬಂದಿದ್ದರು. ಒಟ್ಟು ಎಪ್ಪತ್ತು-ಎಂಬತ್ತು ಜನರು. ಸಂಜೆ 4.30 ರಿಂದ 6.00 ಗಂಟೆಯವರಗೆ ಮಂದಳಿಯ ಸದ್ಸ್ಯರಿಂದ ಸೊಗಸಾದ ಭಜನೆ. ನಂತರ ಅಗ್ನಿಹೋತ್ರ ಮತ್ತು ವೇದದ ಪರಿಚಯ 7.30 ರವರಗೆ. ಅಬ್ಭಾ! ಮೂರು ಗಂಟೆಗಳಿಗೂ ಹೆಚ್ಚು ಸಮಯ ಎಲ್ಲರೂ ಶಾಂತಚಿತ್ತರಾಗಿ ಪಾಲ್ಗೊಂಡಿದ್ದಾರೆ. ಅವರೆಲ್ಲಾ ಹೊಸಬರಾದ್ದರಿಂದ ಅವರಿಗೆ 4 ಸಂಗತಿಗಳನ್ನು ಸ್ಪಷ್ಟಪಡಿಸುವುದಿತ್ತು.. 1. ಸ್ತ್ರೀಯರಿಗೆ ಉಪನಯನ ಮಾಡಬಹುದೇ? 2. ಸ್ತ್ರೀಯರು ಹವನ-ಹೋಮ ಮಾಡಬಹುದೇ? 3. ವೇದವನ್ನು ಎಲ್ಲಾ ವರ್ಗದವರೂ ಹೇಳ ಬಹುದೇ? 4.ಅಗ್ನಿಹೋತ್ರ ಯಾಕೆ ಮಾಡಬೇಕು? ಅದರ ಉಪಯೋಗವೇನು? ಈ ವಿಚಾರಗಳನ್ನು ನಾನು ತಿಳಿಸಿದ ನಂತರ ಸಂಘಟಕರ ಮೆಚ್ಚುಗೆಯ ಮಾತುಗಳು ಮತ್ತು ಅವರ ಎಲ್ಲಾ ಸದಸ್ಯರಿಗೆ ನಾನು ತಿಳಿಸಿದ ವಿಚಾರದಲ್ಲಿ ಪ್ರತೀ ಮಾತುಗಳೂ ಅನುಸರಿಸಿದರೆ ಮಾತ್ರ ಉಪಯುಕ್ತವೆಂದು ಹೇಳಿದ್ದು ನನಗೂ ಸಾರ್ಥಕವೆನಿಸಿತು.





















No comments:

Post a Comment