Pages

Tuesday, December 29, 2015

Saturday, December 26, 2015

K.R.ನಗರ ತಾಲ್ಲೂಕು ಹಂಪಾಪುರದ ಶ್ರೀ ಸುಭಾಷ್.ಎಂ.ರಾವ್ ಚಾರಿಟಬಲ್ ಟ್ರಸ್ಟ್ ಒಂದು ಅನುಕರಣೀಯ ಸಾಮಾಜಿಕ ಸಂಸ್ಥೆ

ನಿನ್ನೆ ಹಂಪಾಪುರದಲ್ಲಿ ಸುಭಾಷ್ ಎಂ ರಾವ್ ಟ್ರಸ್ಟ್ ನಲ್ಲಿ ನಡೆದ ಸುಭಾಷ್ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುವ ಸಂದರ್ಭದಲ್ಲಿ ಭಾಷಣವನ್ನು ಮನಸ್ಸಿಟ್ಟು ಕೇಳಿದ ತಾಯಿ ಯೊಬ್ಬರು ನನಗೆ ಆನಂತರ ಹೇಳಿದ್ದು "ಸಾರ್ ನೀವು ಇಷ್ಟು ನಿಷ್ಟೂರವಾಗಿ ಮಾತಾಡ್ತೀರಲ್ಲಾ! ವಿಚಾರದಲ್ಲಿ ಸತ್ಯವಿದೆ!! ಆದರೆ ಜನರು ನೂರಾರು ವರ್ಷಗಳಿಂದ ಅದು ಸರಿಯೋ ತಪ್ಪೋ ನಡೆಸಿಕೊಂಡು ಬಂದುಬಿಟ್ಟಿದ್ದಾರೆ ! ಅವರ ನಂಬಿಕೆಗೆ ಪೆಟ್ಟು ಕೊಡುವುದು ಸರಿಯೇ? "
ನಿಜವಾಗಿ ಆತಾಯಿಗೆ ನನ್ನ ಮೇಲೆ ಬಲು ವಾತ್ಸಲ್ಯ. ಇಷ್ಟು ಚೆನ್ನಾಗಿ ಮಾತಾಡ್ತಾರೆ. ಕೆಲವರಿಗೆ ಮನಸ್ಸಿಗೆ ಕಿರಿಕಿರಿ ಆಗುತ್ತೆ-ಎಂಬುದನ್ನು ಲೆಕ್ಕಿಸದೆ ಮಾತಾಡ್ತಾರಲ್ಲಾ! ಎಂಬ ಚಿಂತೆ ಅವರಿಗೆ. ಆಗ ನನಗೆ ನೆನಪಾದವರು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು. ಅವರೊಡನೆ ಸಾಕಷ್ಟು ಜಗಳವಾಡಿದ್ದೇನೆ. " " ಲಕ್ಷ ಲಕ್ಷ ಜನ ವಿದ್ವಾಂಸರು ಮತ್ತು ಈ ಸಮಾಜಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡವರು ನಡೆಸಿಕೊಂಡು ಬಂದಿರುವುದೆಲ್ಲಾ ತಪ್ಪು ಅಂತೀರಾ? ಎಂದಾಗ ವೇದಕ್ಕೆ ವಿರುದ್ಧವಾಗಿ ಯಾರು ಮಾಡಿದರೂ ಅದು ಅವೈದಿಕವೇ!! ತಪ್ಪೇ!! ಎಂದು ಶಾಂತವಾಗಿ ಅವ್ರು ಹೇಳಿದರೆ ನಾನು "ನಿಮ್ಮದು ಹುಚ್ಚುತನ " ಎಂದಿದ್ದೇನೆ.
ಆದರೆ ಶರ್ಮರ ಸಹವಾಸದಲ್ಲಿ ಎಂಟುಹತ್ತು ವರ್ಷಗಳು ಕಳೆದ ಮೇಲೆ " ನನ್ನನ್ನೂ ಹುಚ್ಚರ ಪಟ್ಟಿಗೆ " ಆ ತಾಯಿ ಸೇರಿಸಿದ್ದರು.

ನಾನು ಮಾಡಿದ ತಪ್ಪು ಇಷ್ಟೆ" ಕೋಟಿ ರೂಪಾಯಿ ಖರ್ಚು ಮಾಡಿ ದೇವರಿಗೆ ಕಿರೀಟವನ್ನು ತೊಡಿಸುವ ಬದಲು ಹಸಿದ ಮಕ್ಕಳಿಗೆ ತುತ್ತು ಅನ್ನ ಹಾಕುವ, ಅಳಿದುಹೋಗುತ್ತಿರುವ ಗೋಮಾತೆಯನ್ನು ರಕ್ಷಿಸುವ " ಕೆಲಸಗಳಿಗೆ ನಮ್ಮ ಗಳಿಕೆಯನ್ನು ಖರ್ಚು ಮಾಡಿದರೆ ದೇವರು ಮೆಚ್ಚುತ್ತಾನೆಂದೆ" ಅಷ್ಟೆ

ಹತ್ತಾರು ದೇವಾಲಯಗಳಿಗಾಗಿ ಲಕ್ಷಾಂತರ ರೂಪಾಯಿ ಸೇವೆ ಮಾಡಿಸುವ, ಮಠಾಧಿಪತಿಗಳ ಪಾದ ಪೂಜೆಯನ್ನು ರೆಗ್ಯುಲರ್ ಆಗಿ ಪ್ರತೀ ವರ್ಷ ಮಾಡಿ ಸಮಾಧಾನ ಪಡುವ ಈ ಶ್ರೀಮಂತ ತಾಯಿಗೆ ಯಾಕೋ ಕಸಿವಿಸಿ ಯಾಯ್ತು. ಆದರೂ ಅವರ ಬಾಯಿಂಬ ಬಂತು " ಹೌದು ಸಾರ್ ಇಂತಾ ಜೀವಂತ ದೇವರುಗಳಿಗಾಗಿ ಏನಾದರೂ ಮಾಡಬೇಕೂ ಸಾರ್" ಎಂದರು. ಅವರ ಕಣ್ಣು ತೇವವಾಗಿದ್ದನ್ನು ಗಮನಿಸಿದೆ.

ಸ್ವಾಮಿ ಚಿದ್ರೂಪಾನಂದರು ಕರ್ನಾಟಕದ ಹತ್ತಾರು ಕಡೆ ಛಾತ್ರಾಲಯಗಳನ್ನು ನಡೆಸುತ್ತಿದ್ದು ಅದರಲ್ಲಿ ಸಾವಿರಾರು ಕೊಳಚೆ ಪ್ರದೇಶಗಳಿಂದ ಕರೆದುಕೊಂಡು ಬಂದಿರುವ ಮಕ್ಕಳಿಗೆ ಊಟ ವಸತಿ ಕೊಟ್ಟು ಶಾಲೆಯ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕಾರವನ್ನು ಕೊಡುತ್ತಿದ್ದಾರೆ. ಪ್ರತೀ ದಿನ ಲಕ್ಷಾಂತರ ರೂಪಾಯಿ ಖರ್ಚು ಬರುತ್ತೆ. ಒಬ್ಬ ಸಂನ್ಯಾಸಿಯಾದವರು ನಿತ್ಯವೂ " ಈ ಮಕ್ಕಳನ್ನು ಸಾಕುವ ವಿಚಾರದಲ್ಲಿ ತಲೆ ಕೆಡಸಿ ಕೊಂಡು ಭಿಕ್ಷಾಪಾತ್ರೆಯನ್ನು ಹಿಡಿದು ರಾಜ್ಯದ ಮೂಲೆ ಮೂಲೆಯನ್ನೂ ಸುತ್ತುತ್ತಾರೆ.

ಈಗ ಹೇಳಿ ಭಗವಂತನು ಯಾವ ಸೇವೆಯನ್ನು ಮೆಚ್ಚುತ್ತಾನೆ? ಜೀವಂತ ದೇವರುಗಳ ಸೇವೆಯನ್ನೋ? ಅಥವಾ ದೇವಾಲಯಗಳ ವಿಗ್ರಹಗಳಿಗೆ ತೊಡಿಸುವ ಚಿನ್ನದ ಕವಚ ಅಥವಾ ವಜ್ರದ ಕಿರೀಟ ಸೇವೆಯನ್ನೋ?
ವೇದದ ನಿಜ ಅರಿವು ಮೂಡಿದಾಗ ಇಂತಾ ಮಾನವೀಯ ಚಿಂತನೆಗಳು ಗಟ್ಟಿಯಾಗುತ್ತವೆ. ನಿಷ್ಟುರ ಮಾತುಗಳು ನಮ್ಮ ಅರಿವಿಲ್ಲದೆ ಹೊರಬಂದಿರುತ್ತದೆ. ನಿಜವಾಗಿ ಅದಕ್ಕಾಗಿ ನನಗೆ ಪಶ್ಚಾತ್ತಾಪವಿಲ್ಲ.
-ಹರಿಹರಪುರಶ್ರೀಧರ್
ಹಾಸನ ವೇದಭಾರತಿಯ ವೇದ ಗುರುಗಳಾದ ವೇದಾಧ್ಯಾಯೀ ಶ್ರೀ ನವೀನ್ ಅವರಿಗೆ ಸನ್ಮಾನ ಹಂಪಾಪುರದಲ್ಲಿ


ಟ್ರಸ್ಟ್ ವತಿಯಿಂದ ಸಮ್ಸ್ಕಾರ ಪಡೆಯುತ್ತಿರುವ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದಾಗ


ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ





ಹಂಪಾಪುರದ ನದಿ ತೀರದಲ್ಲಿ ಶ್ರೀ ನವೀನ್ ಅವರಿಂದ ವೇದಮಂತ್ರಪಠಣ.

Tuesday, December 22, 2015

ಹಾಸನ ವೇದಭಾರತಿಯ ಐದನೇ ಸತ್ಸಂಗ ಆರಂಭ

ಗರ್ಭ ಗುಡಿಯಲ್ಲಿ ಶ್ರೀರಾಮನ ಪರಿವಾರ , ದೇವಾಲಯದ ಸುತ್ತ ಪ್ರಕೃತಿಯ ಸೊಬಗು-  ಇಂತಹ  ಸುಂದರವಾತಾವರಣದಲ್ಲಿರುವ ಹಾಸನದ  PWD ಕಾಲೊನಿ ಶ್ರೀ ರಾಮಮಂದಿರದಲ್ಲಿ ಇಂದು ವೇದಭಾರತಿಯ ಐದನೇ ಸತ್ಸಂಗವು ಆರಂಭವಾಯ್ತು. ಪ್ರತೀ ಮಂಗಳವಾರ ಸಂಜೆ 6.00 ರಿಂದ 7.00 ರವರಗೆ ಇನ್ನು ಮುಂದೆ ಶ್ರೀರಾಮ ಮಂದಿರದಲ್ಲಿ  ಅಗ್ನಿಹೋತ್ರ, ವೈದಿಕ ಭಜನೆ, ವೈದಿಕ ಚಿಂತನೆ ನಡೆಯಲಿದೆ.