Pages

Monday, October 10, 2016

" ಶ್ರೀಧರ್ ಸ್ವಾಮಿಗಳೇ , ಭಾನುವಾರ ನಮ್ಮೂರಿಗೆ ಐದು ಜನ ಮುತ್ತೈದೆಯರನ್ನು ಕರೆದುಕೊಂಡು ಬರಬೇಕು. ಅವರಿಗೆ ನಾವು ಬಾಗನ ಕೊಡಬೇಕು" ಹೀಗೆ ಕರೆಮಾಡಿದವರು ಬೇಲೂರು ಸಮೀಪದ ಆಂದಲೆ ಗ್ರಾಮದ ಕೃಷ್ಣಮೂರ್ತಿಯವರು. ಶನಿದೇವರ ದೇವಾಲಯದ ದಲಿತ ಅರ್ಚಕರು. ಊರಲ್ಲೆಲ್ಲಾ ಬಹುಪಾಲು ದಲಿತ ಬಂಧುಗಳೇ. ದುರ್ಗಾಶ್ಟಮಿ ದಿನ ಎಲ್ಲರ ಮನೆಯಲ್ಲೂ ಹಬ್ಬದಾಚರಣೆ ಮಾಡುತ್ತಾರೆ. ಐದು ಜನರನ್ನು ಒಪ್ಪಿಸುವುದು ಹೇಗೆ? ಹೋಗದಿದ್ದರೆ ಕೃಷ್ಣಮೂರ್ತಿಗಳಿಗೆ ಬೇಸರವಾಗಬಹುದು. ಹೇಗಾದರೂ ಆಗಲಿ " ಸಂಜೆ ಸತ್ಸಂಗದಲ್ಲಿ ಮಾತನಾಡಿ ಕರೆಮಾಡುತ್ತೇನೆಂದೆ. ಮೂರು ಜನ ಭಗಿನಿಯರು ಒಪ್ಪಿದರು. ಬರುತ್ತೇವೆಂದು ಹೇಳಿದೆ. ಅಗ್ನಿಹೋತ್ರವನ್ನೂ ಮಾಡುತ್ತೇವೆಂದೆ. ಅವರಿಗೆ ಆದ ಸಂತಸ ಅಷ್ಟಿಷ್ಟಲ್ಲ. ಇಂದು ನಾವು ಗ್ರಾಮವನ್ನು ತಲುಪಿದಾಗ ಊರ ಮುಂದಿನ ಶನಿದೇವರ ದೇವಾಲಯದ ಎದುರು ತಮಟೆ ಸದ್ದು ಜೋರಾಗಿತ್ತು. ಬಹಳಷ್ಟು ಜನ ಭಕ್ತರು ಸೇರಿದ್ದರು. ವೇದ ಮಂತ್ರ ಪಠಣ ಶುರುವಾಗುವುದಕ್ಕೆ ಮುಂಚೆ ಎಲ್ಲರೂ ಧೀರ್ಘವಾಗಿ ನಮ್ಮೊಡನೆ ಓಂಕಾರ ಪಠಿಸಬೇಕೆಂದು ಹೇಳಿದ್ದೆ. ಓಂಕಾರಧ್ವನಿಯು ಕಾರ್ಯಕ್ರಮದಕ್ಕೆ ನಾಂದಿಯಾಯ್ತು. ಓದು ಬಲ್ಲವರಿಗೆಲ್ಲಾ ಅಗ್ನಿಹೋತ್ರದ ಪುಸ್ತಕವನ್ನು ಕೊಟ್ಟು ನೋಡಿಕೊಳ್ಳಲು ತಿಳಿಸಿದೆ. ಅಗ್ನಿಹೋತ್ರ ಮಾಡಲು ಊರಿನ ಒಬ್ಬ ಹೆಣ್ಣುಮಗಳನ್ನೂ ಮತ್ತು ಕೃಷ್ಣ ಮೂರ್ತಿಗಳನ್ನೂ ನಮ್ಮೊಟ್ಟಿಗೆ ಕೂರಿಸಿಕೊಂಡೆ.
 ಹೌದು ಅದೊಂದು ದಲಿತ ಸಮುದಾಯದ ಪವಿತ್ರ ಕ್ಷೇತ್ರ. ಬೇಲೂರು ಸಮೀಪ ಆಂದಲೆ ಗ್ರಾಮ. ವೇದಭಾರತಿಯ ಆರು ಜನ ಕಾರ್ಯಕರ್ತರಿಗೆ ಅಲ್ಲೇ ದುರ್ಗಾಷ್ಟಮಿ ಹಬ್ಬ. ಎಲ್ಲರೊಡಗೂಡಿ ಅಗ್ನಿಹೋತ್ರ ಮಾಡಿದಾಗ ಎಲ್ಲರ ಮುಖದಲ್ಲಿ ಅದೆಂತಾ ಹರ್ಷ! ವೇದಭಾರತಿಯು ಸಾಮಜಿಕ ಸಾಮರಸ್ಯದ ಬಗ್ಗೆ ಭಾಷಣ ಮಾಡುತ್ತಾ ಕುಳಿತುಕೊಳ್ಳುವುದಿಲ್ಲ. ಬದಲಿಗೆ ಅವಕಾಶ ಸಿಕ್ಕಿದ ಕಡೆಯೆಲ್ಲಾ ವೇದದ ಪ್ರಸಾರವನ್ನು ಮಾಡಲು ಹಿಂದೆ ಬೀಳುವುದಿಲ್ಲ. ಇಂದು ಜೊತೆಗಿದ್ದ ಸತೀಶ್,ರಾಜಶೇಖರ್,ಶ್ರೀಮತಿಯರಾದ ಪಾರ್ವತಿ,ಶುಭ ಮತ್ತು ಪ್ರೇಮ ಇವರ ಉತ್ಸಾಹ ಹೆಚ್ಚಿದ್ದನ್ನು ಅವರ ಮುಖಗಳೇ ಹೇಳುತ್ತಿದ್ದವು.ಸತೀಶ್ ತಮ್ಮ ಸಂತೋಶ ವ್ಯಕ್ತ ಪಡಿಸಿದ್ದು ಹೀಗೆ " ಸರ್ ಈ ಜನರ ಸಂತೋಷ ನೋಡಿ ಮೂಕನಾದೆ"















Nagraj Nadig ಸಮರಸತೆಯ ಸಂಗಮ
Kavi Nagaraj ಬಹಳ ಸಂತೋಷವಾಯಿತು. ಭಾಗವಹಿಸಿದವರಿಗೆಲ್ಲಾ ಅಭಿನಂದನೆಗಳು.
Manjunatha Gowda Holenarasipura ಅನುಕರಣೀಯ ಕಾರ್ಯ ಶ್ರೀಧರಣ್ಣ . 
M V Ramesh Jois ಮಾತಿಗಿಂತ ಕೃತಿ ಮೇಲೆಂಬ ಸತ್ಯವನ್ನು ಸಾರಿ, ಸಾಧಿಸಿ ತೋರಿದ್ದೀರಿ. ಬಳಗದ ತಮ್ಮೆಲ್ಲ ಸಹಕಾರಿಗಳಿಗೆ ಅನಂತಾನಂತ ವಂದನೆಗಳು. "ವೇದಭಾರತಿ"ಯು ತಮಗೆಲ್ಲಾ ದೀರ್ಘಾಯಷ್ಯವನ್ನು ಕೊಟ್ಟು ತನ್ನ ಕಾರ್ಯ ನೆರವೇರಿಸಿಕೊಳ್ಳಲಿ ಎಂದು ಹಾರೈಸುವೆ. ತಮ್ಮ ಸಂತತಿ ಸಾವಿರವಾಗಲಿ. ಅಭಿನಂದನೆಗಳು.
Adishesha S Sathyanarayana This promotes unity among Hindus,great work
Veeresh Hogarnal Sir, Congratulations. This kind of gesture is most important. You encourage more such activities among the backward communities. This will bring them into mainstream and helpful for the unity of Hinduism. Just look at today's event at Udupi, these people wants to divide Hindus and they receive funds from Arabs and Vatican's for this purpose.
LikeReply22 hrs
Hariharapura Sridhar ಸ್ನೇಹಿತರೇ, ನನ್ನ ಮನದೊಳಗೊಂದು ವಿಚಾರ ಯಾವಾಗಲೂ ಕಾಡುತ್ತಲೇ ಇರುತ್ತದೆ . ಹಿಂದು ಸಮಾಜದ ಒಂದು ಭಾಗ ಈಗಲೂ ಮುಖ್ಯವಾಹಿನಿಯನ್ನು ಸಂದೇಹ ಪಡುತ್ತಲೇ ಇದೆ. ಅದಕ್ಕೆ ಕಾರಣವೂ ಇದೆ. ಒಂದು ಕಾಲದಲ್ಲಿ ಅನುಭವಿಸಿರುವ ನೋವಿನ ನೆನಪು ಅಷ್ಟು ಸುಲಭವಾಗಿ ಮರೆಯುವುದಿಲ್ಲ. ಅಲ್ಲದೇ ಆ ಒಂದು ಕಾರಣದ ದುರ್ಲಾಭ ಪಡೆಯುವ ರಣ ಹದ್ದುಗಳು ಹೊಂಚುಹಾಕುತ್ತಿವೆ. ವೇದ ಭಾರತಿಯು ಅದರ ಆರಂಭದ ದಿನದಿಂದ ಸಾಮಾಜಿಕ ಸಾಮರಸ್ಯಕ್ಕಾಗಿ ಕಟಿಬದ್ಧವಾಗಿದೆ. ಸಮಾಜದಲ್ಲಿ ಯಾವುದೇ ವರ್ಗವನ್ನು ಅದರ ಜಾತಿಯಿಂದ ಗುರುತಿಸಬಾರದೆಂಬುದು ವೇದಭಾರತಿಯ ನಿಲುವು. ತಾಯಿ ಭಾರತಿಯ ಮಕ್ಕಳು ನಾವೆಲ್ಲ ಒಂದೇ .ಅಷ್ಟೇ ಅಲ್ಲ ಮನುಕುಲವೆಲ್ಲಾ ಒಂದೇ ಎಂಬುದೇ ನಮ್ಮ ನೀತಿ. ಆದರೆ ವೇದದ ಸರಿಯಾದ ಮಾರ್ಗ ಹಿಂದುಗಳಲ್ಲಿ ಅನುಷ್ಠಾನವಾದರೆ ಇಡೀ ವಿಶ್ವವು ವೇದಮಾರ್ಗವನ್ನೇ ಆಯ್ಕೆ ಮಾಡಿಕೊಳ್ಲುವುದರಲ್ಲಿ ಅನುಮಾನವೇ ಇಲ್ಲ. ಕಾರಣ ವೇದವು ಅಷ್ಟು ಉದಾರ ನೀತಿ ಹೊಂದಿದೆ. ಜಗತ್ತೆಲ್ಲಾ ಸುಖವಾಗಿ ಆನಂದವಾಗಿರಲೆಂಬುದೇ ವೇದದ ಆಶಯ. ಅಗ್ನಿಹೋತ್ರವು ನಮ್ಮೊಳಗಿನ ವೈತನ್ಯದ ಜಾಗೃತಿಗೆ ಒಂದು ಟೂಲ್. ಅಗ್ನಿಹೋತ್ರವನ್ನು ಅರ್ಥಪೂರ್ಣವಾಗಿ ಮಾಡುತ್ತಾ ಒಂದಿಷ್ಟು ಸಾಮಾಜಿಕ ಸಾಮರಸ್ಯವನ್ನು ಮಾದಲು ಹೊರಟಿರುವ ವೇದಭಾರತಿಗೆ ಸಹೃದಯರ ಸಹಕಾರ ಇನ್ನೂ ಹೆಚ್ಚು ಬೇಕಾಗಿದೆ. ಕಾರಣ ವೇದಭಾರತಿಯು ಯಾವುದೇ ಒಂದು ಜಾತಿಗೆ ಅಂಟಿಕೊಳ್ಳದೆ "ಎಲ್ಲರಿಗಾಗಿ ವೇದ" ಎಂಬ ಘೋಷಣೆಯಡಿ ಜನಸಾಮಾನ್ಯರಿಗೆ ವೇದದ ಅರಿವು ಮೂಡಿಸಲು ಹೊರಟಿದೆ. ಸ್ಪಂಧಿಸಿದ ಎಲ್ಲರಿಗೂ ನಮನಗಳು.
LikeReply515 hrs
Rajeeva Lochana ಸಾರ್ ಗುರೂಜಿ ಹೇಳಿದ ಕೆಲಸ ಮಾಡುತ್ತಿದ್ದಿರಾಅಭಿನಂದನೆಗಳು
UnlikeReply19 hrs
Geethacharya Narayana Sharma ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ.
LikeReply5 hrs
Geethacharya Narayana Sharma ಅಭಿನಂದನೆಗಳು. ಸಮಾಜದ ಎಲ್ಲವರ್ಗದವರನ್ನೂ ಜೊತೆತಲ್ಲಿ ಕರೆದೊಯ್ಯುತ್ತಿರುವ ನಿಮ್ಮ ಉದ್ದೇಶ ಯಶಸ್ವಿಯಾಗಲಿ.
LikeReply15 hrs
Lakshmi Ganapati Joshi ಅಲ್ಲೆಲ್ಲೂ ಚಲೋ ಅಂತ ಉಡುಪಿ ಕಡೆ ಹೋದವರು ನಿಮ್ ಕಡೆ ಚಲೋ ಹಾಸನ ಅಂತ ಬಂದ್ ಬಿಡ್ಬೋದು ಸಾರ್.. ದಲಿತರ ಉದ್ಧಾರದ ಗುತ್ತಿಗೆ ಪಡೆದವರು ನಾವ್ ಇರಬೇಕಾದ್ರೇ ನೀವ್ ಯಾರ್ರೀ ಉದ್ಧಾರ ಮಾಡೋರು, ಲೈಸೆನ್ಸ್ ಏನಾರ ತಗಂಡಿದೀರಾ ನಮ್ ಹತ್ತಿರ. . ನಾವ್ ಮಾತ್ರ ಮಾಡೋ ಕೆಲಸ ಅಂತ.. 
ಯಾವುದಕ್ಕೂ ಹುಷಾರು ಸಾರ್..
LikeReply4 hrs
M V Ramesh Jois ಯಾವುದೇ ಸಮಯದಲ್ಲಿ ಮನೆ ಮುಂದೆ ತಮಟೆ ಚಳುವಳಿ ನಡೆಯಬಹುದು ಅಂತೀರಾ?
LikeReply4 hrs
Lakshmi Ganapati Joshi ಈ ಸರ್ಕಾರದ ಅಡಿಯಲ್ಲಿ ಏನು ಬೇಕಾದರೂ ಆಗಬಹುದು
LikeReply2 hrs
Hariharapura Sridhar
Write a reply...
Murulidharan HV ಸಾಮರಸ್ಯವೇ ಹಿಂದುತ್ವ, ಹಿಂದುತ್ವವೇ ಸಾಮರಸ್ಯ
LikeReply2 hrs
Satya Prasad ಶ್ರೀದರಜೀ ನೀವು ಆಂದಲೆ ಗ್ರಾಮದಲ್ಲಿ ಇಂತಹ ಒಳ್ಳೆಯ ಕಾರ್ಯಕ್ರಮ ಮಾಡಿರುವುದು ತಿಳಿದು ತುಂಬಾ ಸಂತೋಷವಾಯಿತು.ಈ ಗ್ರಾಮ ಮತಾಂತರರದ ಹಾವಳಿಗೆ ತುತ್ತಾಗಿರುವ ಗ್ರಾಮ(ನನಗೆ ತಿಳಿದ ಹಾಗೆ).ದೇವರು ನಿಮಗೆ ಇಂತಹ ಕೆಲಸ ಮಾಡಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ.

No comments:

Post a Comment