Pages

Friday, April 27, 2018

ಸ್ವಾಸ್ಥ್ಯಪೂರ್ಣ ಬದುಕು ಭಾಗ-1


ಮುಂಬೈ ನಗರದಲ್ಲಿ ಅರ್ಚನಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಆಚಾರ್ಯ ಬಾಲಕೃಷ್ಣರು ಮಾಡಿದ ಹಿಂದಿ ಉಪನ್ಯಾಸದ ಕನ್ನಡ ಅನುವಾದ.
-----------------------------------

ಸ್ವಾಸ್ಥ್ಯಪೂರ್ಣ ಬದುಕು ಭಾಗ-1

ಬದುಕನ್ನು ಸ್ವಸ್ಥವಾಗಿರಿಸುವಲ್ಲಿ ಸೇವೆಯೂಒಂದು ಪರಮ ಸಾಧನವಾಗಿದೆ.ಇದರ ಉದಾಹರಣೆಯಾಗಿ ಇಲ್ಲಿ ಕುಳಿತಿರುವ ಈ ತಾಯಿಯನ್ನು ನೋಡಿ.ಅವರಿಗೀಗತೊಂಭತ್ತು.ಅವರು ನೂರನ್ನುತಲುಪುವಲ್ಲಿ ಸಂದೇಹವಿಲ್ಲ. ನನಗನಿಸುತ್ತದೆ ನಿಮೆಲ್ಲರಿಗಿಂತ ಇವರು ಭಾಗ್ಯಶಾಲಿಗಳಾಗಿದ್ದಾರೆ. ನಾವು ನಮ್ಮ ಬದುಕನ್ನು ಸಮಗ್ರವಾಗಿ ಅರಿಯದೆ ಹೋದಲ್ಲಿ ನಮಗೆ ನಮ್ಮ ಬದುಕನ್ನು ನಿರ್ವಹಿಸುವ ರಹಸ್ಯವನ್ನು ತಿಳಿಯಲು ಸಾಧ್ಯವಿಲ್ಲ. ಇವತ್ತಿನ ಸಮಾಜ, ನಮ್ಮಕೌಟುಂಬಿಕ ಸ್ವರೂಪ, ರಾಷ್ಟ್ರೀಯ ವಿಚಾರಗಳು, ಜಾಗತೀಕರಣ, ನಮ್ಮಕಣ್ಣ ಮುಂದಿರುವ ಪ್ರಾಪಂಚಿಕ ಸ್ಥಿತಿಗತಿಗಳನ್ನು ಕಾಣುವಾಗ ಇಲ್ಲೆಲ್ಲ ಸರ್ವಾಂಗೀಣತೆಯ ಕೊರತೆ ಎದ್ದುಕಾಣುತ್ತಿದೆ. ಇಂದು ಒಂಟಿತನ ನಮ್ಮನ್ನುಕಾಡುತ್ತಿದೆ. ನಾವು ಏಕಪಕ್ಷೀಯವಾದಂತಹ ಬದುಕನ್ನು ಬಾಳುತ್ತಿದ್ದೇವೆ. ಒಂದೆಡೆ ಎಲ್ಲೋ ಸಾಧನೆಯ ಉತ್ತುಂಗಕ್ಕೇರಿದರೂ ಬದುಕಿನ ಉಳಿದೆಡೆ ನಮ್ಮ ಸಾಧನೆ ಶೂನ್ಯವಾಗಿದೆ.ಇಂತಹ ಒಂದು ಸ್ಥಿತಿಯನ್ನು ಹೋಗಲಾಡಿಸಿ ಬದುಕಿನಲ್ಲಿ ಸಮತೋಲನವನ್ನು ಹೊಂದುವುದರ ಮೂಲಕ ಸ್ವಸ್ಥಜೀವನದ ಪರಿಕಲ್ಪನೆಯನ್ನು ನಾವು ಸಾಕಾರಗೊಳಿಸಬಹುದಾಗಿದೆ ಮತ್ತು ಅದು ಇಂದು ತೀವ್ರ ಅವಶ್ಯವಾದ ವಿಚಾರವಾಗಿದೆ.
ಆಯುರ್ವೇದದಲ್ಲಿ ಹೇಳಲಾದ “ ಸಮದೋಷಃ ಸಮ ಅಗ್ನಿಶ್ಚ ಸಮಧಾತು ಮಲಪ್ರಿಯಃ ಪ್ರಸನ್ನಾತ್ಮಇಂದ್ರಿಯ ಮನಃ ಸ್ವಸ್ಥಇತ್ಯೇಭಿದೀಯತೆ’ ಇದರ ಪರಿಕಲ್ಪನೆಯನ್ನು ಅರ್ಥೈಸಿಕೊಂಡಾಗ ನಮಗೆ ಸ್ವಸ್ಥಜೀವನದ ಪರಿಕಲ್ಪನೆಯ ಅರಿವಾಗುತ್ತದೆ. ಸ್ವಾಸ್ಥ್ಯವೆಂದರೇನು?ಅದರ ಸ್ವರೂಪವೇನು?ಇವೆರಡರ ಸ್ವರೂಪವನ್ನು ತಿಳಿದುಕೊಳ್ಳುವುದು ಹೇಗೆ ಎಂಬ ಎರಡು ಪ್ರಶ್ನೆಗಳಿಗೂ ಒಂದೇ ಉತ್ತರವಿದೆ, ಅದು ಸಮದೋಷ. ಆಯುರ್ವೇದದ ಪ್ರಕಾರ ನಮ್ಮ ಶರೀರದಲ್ಲಿರುವ ವಾತ, ಪಿತ್ತ, ಕಫಗಳನ್ನು ದೋಷವೆಂದುಕರೆಯಲಾಗಿದೆ. ’ತುತೀದುಗುಣಾತ್ದೋಷಃ’ ಇವುಗಳು ಉಲ್ಭಣಿಸಿದಾಗ ಶರೀರದಲ್ಲಿ ವಿಕೃತಿಗಳು ಕಂಡು ಬರುತ್ತವೆ. ಹೀಗಾಗಿ ಶರೀರಧಾರಣೆಯಲ್ಲಿ ವಾತ, ಪಿತ್ತ, ಕಫಗಳನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಧಾರಣಾದ್ಧಾತವಃ’ನಮ್ಮ ಶರೀರದಲ್ಲಿ ವಾತ ಪಿತ್ತ ಕಫಗಳು ಇಲ್ಲದೆ ಹೋದಲ್ಲಿ ಶರೀರದ ಅಸ್ಥಿತ್ವವೇಇರುವುದಿಲ್ಲ. ಆದರೆ ಶರೀರವನ್ನು ಸ್ವಸ್ಥವಾಗಿಡುವುದರಲ್ಲಿ ಈ ಮೂರು ಸಮತೋಲನದಿಂದಿರಬೇಕಾಗುತ್ತದೆ.ಕಫ ಅತಿಯಾದಾಗ ಕೆಮ್ಮು, ನೆಗಡಿಯುಂಟಾಗಬಹುದು.ವಾಯು ಅಧಿಕವಾದಾಗ ದೇಹ ಸ್ಥೂಲವಾಗಬಹುದು, ಅರ್ತ್ರೈಟೀಸ್ ಬರಬಹುದು, ಮೆದುಳಿನ ಕಾಯಿಲೆಗಳು, ಅನುವಂಶಿಯ ರೋಗಗಳು ಮರುಕಳಿಸಬಹುದು, ಪಿತ್ತದ ಅಸಮತೋಲವಾದಾಗ ಚರ್ಮ ರೋಗಗಳು. ಹೀಗೆ ವಾತ ಪಿತ್ತ ಕಫಗಳ ಇರುವಿಕೆಯಲ್ಲಿ ಅಸಮತೋಲನವಾದಾಗ ರೋಗಗಳು ಕಾಣಿಸಿಕೊಳ್ಳುತ್ತವೆ.
ನಾವೆಲ್ಲ ಮಾಯಾನಗರಿಗಳಲ್ಲಿದ್ದೇವೆ. ಮಾಯಾ ನಗರಿ ಎಂಬ ಶಬ್ದಕ್ಕೆ ಎರಡು ಅರ್ಥಗಳಿವೆ. ಒಂದು ಮಾಯೆಯೆಂದರೆಅರ್ಥ ಸಂಗ್ರಹ, ಇನ್ನೊಂದು, ಮಾಯೆಯೆಂದರೆ ಭ್ರಮೆ-ವಿಭ್ರಮೆಗಳು.ಇಂದು ನಾವೆಲ್ಲರೂ ಅರ್ಥದ ಸಂಪಾದನೆಯಲ್ಲಿನಿರತರಾಗಿದ್ದೇವೆ. ಆಯುರ್ವೇದಚಿಕಿತ್ಸಾ ಪದ್ಧತಿಯೂರೋಗ ತಪಾಸಣೆಯ ವಿಚಾರದಲ್ಲಿ ನಮ್ಮನ್ನು ಭಯ ಭೀತಗೊಳಿಸುವುದಿಲ್ಲ. ಆಯುರ್ವೇದಚಿಕಿತ್ಸೆ ಪ್ರಾರಂಭಗೊಂಡಾಗ ನಮ್ಮೊಳಗಿರುವ ಭೀತಿ ನಿವಾರಣೆಯಾಗುತ್ತದೆ.ಆದರೆಅಲೋಪತಿಯಲ್ಲಿಚಿಕಿತ್ಸೆ ಪ್ರಾರಂಭಗೊಂಡಾಗ ಭೀತಿಪ್ರಾರಂಭವಾಗುತ್ತದೆ.ನೀವು ನಿಮ್ಮ ಶರೀರ ಪರೀಕ್ಷೆಗಳನ್ನು ಮಾಡಿಸಿ ಒಬ್ಬಉತ್ತಮ ವೈದ್ಯರಲ್ಲಿ ಹೋಗುತ್ತೀರಿ.ಅಲ್ಲಿ ಅದರ ಫಲಿತಾಂಶದ ಮೇಲೆ ರೋಗ ನಿರ್ಧಾರ ಮಾಡಲಾಗುತ್ತದೆ.ಆಯುರ್ವೇದವು ಲಕ್ಷಣಗಳ ಆಧಾರದ ಮೇಲೆ ರೋಗವನ್ನು ಪತ್ತೆ ಹಚ್ಚುವುದಿಲ್ಲ. ನಮ್ಮಲ್ಲಿ ವಾತ ಕಫ ಪಿತ್ತಗಳ ಆಧಾರದಲ್ಲಿ ನಾಡಿ ಪರೀಕ್ಷೆಯ ಮೂಲಕ ಚಿಕಿತ್ಸೆಯಿದೆ. ಹೀಗಾಗಿ ಅಲೋಪತಿಯು ಲಕ್ಷಣಗಳ ಮೂಲಕ ಅಂಗವಿಶೇಷ ಚಿಕಿತ್ಸೆಯನ್ನುಗೈದುರೋಗ ನಿರ್ಧಾರಗೈದರೆ, ಆಯುರ್ವೇದವು ಶರೀರವನ್ನೇ ಸಮಗ್ರ ಅಂಗವಾಗಿಸಿ ರೋಗಕ್ಕೆ ಕಾರಣಗಳನ್ನು ಕಂಡು ಹುಡುಕುತ್ತದೆ. ಈ ವಿಚಾರದಲ್ಲಿಆಧುನಿಕ ವೈದ್ಯ ವಿಜ್ಞಾನದ ಶ್ರೇಷ್ಠ ವೈದ್ಯರುಕೂಡ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆಅನ್ನುವುದೆ ನಾನು ಖುಷಿ ಪಡುವ ವಿಚಾರವಾಗಿದೆ.

ಇಂದುದೇಶ ವಿದೇಶಗಳಲ್ಲಿ ಆಧುನಿಕ ವೈದ್ಯ ವಿಜ್ಞಾನದಲ್ಲಾಗುತ್ತಿರುವ ಸಂಶೋಧನೆಗಳ ಬಗ್ಗೆ ಚರ್ಚೆಗಳಾಗುತ್ತಿವೆ. ಚರಕ ಸಂಹಿತೆಯಲ್ಲೂದೇಹವನ್ನೇಒಂದು ಸಮಗ್ರ ಅಂಗವಾಗಿಸಿ ಚಿಕಿತ್ಸೆಗಳನ್ನು ನೀಡಲಾಗುತ್ತದೆ.ಆದರೆಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಪ್ರತಿಯೊಂದು ಅಂಗವನ್ನು ವಿಶೇಷ ಘಟಕವೆಂದು ಪರಿಗಣಿಸಿ ಅವುಗಳ ಚಿಕಿತ್ಸೆಯ ಬಗ್ಗೆ ವಿಶೇಷ ಶಿಕ್ಷಣ ನೀಡಲಾಗುತ್ತದೆ.ಆದರೆಅಮೇರಿಕದಂತಹ ಮುಂದುವರಿದದೇಶದಲ್ಲಿ ನಮ್ಮ ಜ್ಞಾನಿಗಳಾದ ಋಷಿ ಮುನಿಗಳು ಕಂಡು ಹುಡುಕಿದ ಯಾವುದೇ ದೋಷಗಳಿರದ, ಬಹು ದೂರದೃಷ್ಟಿಯ ನಮ್ಮ ಪ್ರಾಚೀನ ಪದ್ಧತಿಯ ವೈದ್ಯಕೀಯಶಿಕ್ಷಣದ ಬಗ್ಗೆ ಆಸಕ್ತಿ ಮೂಡಿರುವುದು ನಮಗೆ ಕಂಡು ಬರುತ್ತಿದೆ.
ಆಯುರ್ವೇದದಲ್ಲಿ ವಾತ ಪಿತ್ತ ಕಫಗಳ ಸ್ಥಿತಿಗಳನ್ನು ಆಧಾರವಾಗಿಟ್ಟುಕೊಂಡು ಬಹಳ ಸರಳವಾದ ರೀತಿಲ್ಲಿ ತಿಳಿಯಪಡಿಸಿ ಪರಿಣಾಮಕಾರಿಚಿಕಿತ್ಸೆಯನ್ನು ನೀಡಲಾಗುತ್ತಿದೆ. ಹೀಗಾಗಿ ಆಯರ್ವೇದಚಿಕಿತ್ಸಾ ಪದ್ಧತಿರೋಗಿಯನ್ನು ಭಯ ಭೀತಗೊಳಿಸುವುದಿಲ್ಲ. ಆದರೆಇಂದುಆಲೋಪತಿಯಲ್ಲಿವಿಧ ವಿಧದ ಪರೀಕ್ಷೆಗಳಿಗೊಳಗಾದಷ್ಟು ಉತ್ತಮ ಫಲಿತಾಂಶವೆನ್ನುವ ಮಾನಸಿಕ ಸ್ಥಿತಿಯನ್ನು ಜನರಲ್ಲಿ ಹುಟ್ಟುಹಾಕಲಾಗಿದೆ. ರಕ್ತದ ವಿವಿಧ ಪರೀಕ್ಷೆಗಳು, ದೇಹದ ಭಾಗಗಳ ವಿವಿಧ ಸ್ಕ್ಯಾನಿಂಗ್ಗಳಿಂದ ನಾವು ನಿಜವಾಗಿಯೂಗುಣಮುಖರಾಗುತ್ತೆವೇನು?
ಯಾಕೆರೋಗ ಪತ್ತೆಯನ್ನು ಮಾಡುವುದುಅವಶ್ಯಕವಲ್ಲವೇ ಎಂಬ ನಿಮ್ಮ ಪ್ರಶ್ನೆಯನ್ನು ನಾನು ಒಪ್ಪುವೆನಾದರೂಅದು ಸರಳವಾಗಿರಬೇಕು ಎಂಬುದು ಸೂಕ್ತವಲ್ಲವೇ?ಭೀತಿ ಹುಟ್ಟಿಸುವಂತಿರಬಾರದು ಎಂಬುದು ಅಷ್ಟೇ ಮುಖ್ಯ ವಿಚಾರವಾಗಿದೆ.ಅಲೋಪತಿಯಲ್ಲಿ ಪರೀಕ್ಷಾ ವಿಧಾನವು ಎಕ್ಸ್ರೇ,ಅಲ್ಲಿಂದ ಮುಂದೆಅಲ್ಟ್ರಾಸೌಂಡ್, ಸಿಟಿಸ್ಕ್ಯಾನ್, ಹಿಮೊಟಾಲಜಿ, ಬಯೋಟೆಸ್ಟ್ಸ್ನಂತರ ಎಂ.ಆರ್.ಐ, ಹೀಗೆ ರೋಗ ಪತ್ತೆಯ ವಿಚಾರದಲ್ಲಿ ತರತರದ ಪರೀಕ್ಷೆಗಳನ್ನು ಮಾಡಿಸಿ ಮನುಶ್ಯನನ್ನು ರೋಗಿ ಎಂದು ಶೃತಪಡಿಸಿ ನಾನು ಗುಣಮುಖನಾಗುತ್ತೇನೆ ಎಂಬ ನಂಬಿಕೆಯನ್ನುತರಲಾಗುತ್ತದೆ. ಆದರೆ ಆಯರ್ವೇದವು ಇವೆಲ್ಲವುಗಳನ್ನು ಬಿಟ್ಟುರೋಗ ಮೂಲದ ಅನ್ವೇಷಣೆಯನ್ನು ಮಾಡುತ್ತದೆ.
ನಿಮಗೆ ತಲೆ ನೋವೆಂದು ವೈದ್ಯರ ಬಳಿ ಹೋಗುತ್ತೀರಿ.ಅದು ಅವನಿಗೂ ತಿಳಿದಿರುತ್ತದೆ.ಇವೆಲ್ಲವುಗಳನ್ನು ತಿಳಿದುಕೊಂಡೂ ನಾವು ವೈದ್ಯರ ಬಳಿ ಹೋಗುತ್ತಿದ್ದೇವೆಂಬುದೇ ಅಚ್ಚರಿಯ ವಿಚಾರ. ಇದು ಮಾಯಾ ನಗರಿ.ಇಲ್ಲಿ ನಡೆಯುವುದೆಲ್ಲ ಅಚ್ಚರಿ ಪಡುವ ವಿಚಾರ.ನೀವಿಲ್ಲಿ ಅರ್ಚನಟ್ರಸ್ಟ್ ಬಗೆಗಿನ ವಿಚಾರ ಮಾತನಾಡುತ್ತಿದ್ದರೆ ಅದು ಖುಷಿ ಪಡುವ ವಿಚಾರ.ಆದರೆಇಲ್ಲಿ ಉದಾಹರಣೆಗೆ ನಿಮಗೆ ತಲೆ ನೋವಿತ್ತು.ನೀವು ಯಾವ ವೈದ್ಯರ ಬಳಿಗೆ ಹೋದಿರಿ ಎಂಬ ಪ್ರಶ್ನೆಎದುರಾದಾಗ ನೀವು ಸಹಜವಾಗಿಯೇ ನಗರದ ಶ್ರೇಷ್ಠ ದುಬಾರಿ ವೈದ್ಯರ ಹೆಸರು ಹೇಳಬೇಕಾಗುತ್ತದೆ, ಹೇಳುತ್ತೀರಿ.ಸಣ್ಣಪುಟ್ಟ ವೈದ್ಯರ ಬಗೆಗಿನ ಮಾತೇಇಲ್ಲ. ಅವರ ಬಳಿ ಹೋದಿರಿ, ಏನೇನಾಯಿತು?ಯಾವ ವೈದ್ಯರು?ಆಸ್ಪತ್ರೆಯ ಬಿಲ್ ಎಷ್ಟಾಯಿತು?ನೀವು ನೀಡುವ ಬಿಲ್ ಮೊತ್ತ ಮತ್ತು ಸ್ವಾಸ್ಥ್ಯಕ್ಕೇನಾದರೂ ಸಂಬಂಧವಿದೆಯೆ?ಈ ಎಲ್ಲ ಮಾತುಗಳಲ್ಲಿ ನಿಮ್ಮರೋಗ ನಿವಾರಣೆಯ ಪ್ರಸ್ತಾಪವೇಇಲ್ಲ.ಇಲ್ಲಿ ನಮ್ಮೊಳಗಿನ ಅಂಧಕಾರವೆಂಬ ಹೊಸದೊಂದುರೋಗ ಪ್ರಕಟವಾಯ್ತು.ಸೇವೆಯೂಕೂಡ ಜೀವನದಲ್ಲಿ ಸ್ವಸ್ಥತೆಯನ್ನು ನೀಡುವ ಸಾಧನವಾಗಬೇಕು.
ಇಂತಹ ವ್ಯವಸ್ಥೆಯನ್ನು ಸರಿ ಪಡಿಸುವ ಬದಲು ನಾವು ಅದರ ಸುತ್ತ ಸುತ್ತುತ್ತಲೇಇದ್ದೇವೆ. ರೋಗದ ಮೂಲ ವಾತ ಪಿತ್ತಕಫವೆಂದು ತಿಳಿದು ನಾವು ಸೂಕ್ತ ಚಿಕಿತ್ಸಾವಿಧಾನವನ್ನು ಪಡೆಯಲಿಲ್ಲ. ಪರಿಣಾಮ ಈ ತ್ರಿವಿಧ ದೋಷಗಳ ನಮ್ಮ ಮಸ್ತಿಷ್ಕವನ್ನು ಆಳಲು ಪ್ರಾರಂಭಿಸಿದವು.ಪರಿಣಾಮ ನಾವು ಸಹಜಚಿಕಿತ್ಸಾ ವಿಧಾನವನ್ನೇ ಮರೆತೆವು.ಒಂದು ಸೀನು ಬಂತೆಂದರೂ ನನಗೇನಾದರೂ ಡೆಂಗ್ಯೂ ಬಂದಿರಬಹುದೆ?ನೋಡಿಡಾಕ್ಟರ್ ನನಗೇನಾದರೂಕಾಯಿಲೆಯಿದೆಯೇ?ಯಾಕೆ ಈ ಪರಿಯ ಭೀತಿ?ನಾವಿಷ್ಟು ಅಂಜುಬುರುಕರೇಕೆ?ನಾವು ಅಸುರಕ್ಷಿತರು ಎಂಬ ಭಾವ ನಮ್ಮನ್ನೇಕೆಕಾಡುತ್ತಿದೆ? ನಾನೊಂದು ವಿಚಾರವನ್ನು ಹೇಳಲು ಇಷ್ಟ ಪಡುತ್ತೇನೆ. ವಿದೇಶಗಳಲ್ಲಿ ನಮ್ಮಲ್ಲಿರುವಂತೆ ಭೀತಗೊಳಿಸುವ ಚಿಕಿತ್ಸಾ ಪದ್ಧತಿಯಿಲ್ಲ. ನೀವು ಎದೆ ನೋವೆಂದು ಹೋದರುಅವರು ಮೊದಲು ಪರೀಕ್ಷೆ ಮಾಡುತ್ತಾರೆ ಅವಶ್ಯವೆನಿಸಿದರೆ ಆಂಜಿಯೋಗ್ರಫಿಯನ್ನುಹತ್ತು ದಿನಗಳ ಬಳಿಕ ಮಾಡುತ್ತಾರೆ. ಅವಶ್ಯವೆನಿಸಿದಲ್ಲಿ ಮಾತ್ರ ನಿಮ್ಮನ್ನು ಒಳರೋಗಿಯಾಗಿ ದಾಖಲು ಮಾಡುತ್ತಾರೆ.
ನಮ್ಮಲ್ಲಿ ಚಿಕಿತ್ಸೆಯಎಲ್ಲ ಪ್ರಕ್ರಿಯೆಗಳು ಭೀತಿ ಹುಟ್ಟಿಸುವಂತಿವೆ. ಮಗುವಿಗೆ ಸೀನು ಬಂತೆಂದರೆ ನಗರದಲ್ಲಿ ವಾಸಿಸುವ ತಾಯಿ ಗಾಬರಿಯಾಗುತ್ತಾಳೆ.ಭೂಮಿ ಆಕಾಶಗಳನ್ನು ಒಂದು ಮಾಡುತ್ತಾಳೆ.ಆದರೆಗ್ರಾಮೀಣ ಪ್ರದೇಶದತಾಯಿ ಬಂದಿರೋದು ಸೀನು ತಾನೆ? ಏನೂ ಆಗೊಲ್ಲ ಬಾ.., ಬಿಸಿ ಬಿಸಿ ಕಷಾಯಕುಡಿಎಲ್ಲ ಸರಿಹೋಗತ್ತೆ ಅನ್ನುತ್ತಾಳೆ.ಈ ವಿಚಾರ ನಮ್ಮಅಜ್ಜಿ ಮುತ್ತಜ್ಜಿಯರ ಕಾಲದಿಂದಲೇ ಬಂದಿದೆ.ಅವರೇಕುಟುಂಬದಅತ್ಯುತ್ತಮದಾದಿಯರು. ಅವರಚಿಕಿತ್ಸಾ ವಿಧಾನವೂಕೂಡ ವಾತ ಪಿತ್ತಕಫ ಈ ಮೂರು ತತ್ವಗಳಿಗನುಸಾರವಾಗಿರುವ ಆಯುರ್ವೇದದಿಂದ ಪ್ರೇರಿತವಾಗಿದೆ.
( ಇನ್ನೂ ಇದೆ)

ಅನುವಾದ : ದಿವಾಕರ ಡೋಂಗ್ರೆ

No comments:

Post a Comment